ಭಾರತ ಮೂಲದ ಸಬಿಹ್‌ ಖಾನ್‌ ಆಪಲ್‌ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (COO)ಯಾಗಿ ನೇಮಕ

ಜಗತ್ತಿನ ಟೆಕ್‌ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿ ಭಾರತೀಯ ಮೂಲದವರ ಪಾರುಪತ್ಯ ಮುಂದುವರೆದಿದೆ. ಇದೀಗ ಆಪಲ್‌ ಕಂಪನಿಯು ತನ್ನ ಮುಂದಿನ ಸಿಇಒ ಆಗಿ ಭಾರತೀಯ ಮೂಲದ ಸಬಿಹ್‌ ಖಾನ್‌ ಅವರ ಹೆಸರನ್ನು ನೇಮಕ ಮಾಡಿರುವುದಾಗಿ ಘೋಷಿಸಿದೆ. ಅಂದಹಾಗೆ ಇವರು ಇದೇ ಕಂಪನಿಯ ಪ್ರಮುಖ ಹುದ್ದೆಯಲ್ಲಿದ್ದರು. ಇದೀಗ ಇವರಿಗೆ ಸಿಒಒ ಹುದ್ದೆ ದೊರಕಿದೆ. ಮೂರು ದಶಕಗಳಿಂದ ಐಫೋನ್ ತಯಾರಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಖಾನ್, ಈ ತಿಂಗಳ ಕೊನೆಯಲ್ಲಿ ಹುದ್ದೆಯಿಂದ ಕೆಳಗಿಳಿದು ಈ ವರ್ಷದ ಕೊನೆಯಲ್ಲಿ ನಿವೃತ್ತರಾಗಲಿರುವ ಜೆಫ್ ವಿಲಿಯಮ್ಸ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇದು ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಸಿಕ್ಕಿರುವ ಅತ್ಯಂತ ಪ್ರಭಾವಿ ಹುದ್ದೆಗಳಲ್ಲಿ ಒಂದಾಗಿದೆ.

ಐಫೋನ್ ಬೆಳವಣಿಗೆ ನಿಧಾನವಾಗುವುದು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ವಿಧಿಸಿರುವ ಸುಂಕಗಳು ಸೇರಿದಂತೆ ಆಪಲ್ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಖಾನ್ ಅವರ ಬಡ್ತಿ ದೊರಕಿದೆ. ಸಬಿಹ್ ಖಾನ್ ಮುಂದಿನ ತಿಂಗಳಿನಿಂದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈಗ ಇವರು ಆಪಲ್‌ ಕಂಪನಿಯ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾಗತಿಕ ಪೂರೈಕೆ ಸರಪಳಿ, ಪೂರೈಕೆದಾರ ಜವಾಬ್ದಾರಿ ಕಾರ್ಯಕ್ರಮಗಳು ಮತ್ತು ಕಾರ್ಯಾಚರಣೆ ತಂಡಗಳನ್ನು ನೋಡಿಕೊಳ್ಳುತ್ತಾರೆ.

ಸಬಿಹ್ ಖಾನ್ – ಹಿನ್ನಲೆ ಮತ್ತು ಸಾಧನೆ

ಸಬಿಹ್‌ ಖಾನ್‌ ಅವರು ಉತ್ತರ ಪ್ರದೇಶವರು. ಇವರು 1966ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದರು. ಓದುವ ಸಮಯದಲ್ಲಿಯೇ ಲಿ ಸಿಂಗಾಪುರಕ್ಕೆ ತೆರಳಿ ನಂತರ ಅಮೆರಿಕಕ್ಕೆ ತೆರಳಿದರು. ಅವರು ಟಫ್ಟ್ಸ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಂತರ ರೆನ್ಸೆಲೇರ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್ (RPI) ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

  • ಸಬಿಹ್ ಖಾನ್ ಅವರು 1966ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದರು.
  • ಪ್ರಾಥಮಿಕ ಶಿಕ್ಷಣದ ನಂತರ ಅವರು ಸಿಂಗಾಪುರ ಹಾಗೂ ನಂತರ ಅಮೆರಿಕಕ್ಕೆ ತೆರಳಿ ಶಿಕ್ಷಣ ಪಡೆದು ಪ್ರಾರಂಭಿಕ ಉದ್ಯೋಗ ಬದುಕು ರೂಪಿಸಿಕೊಂಡರು.
  • ಅವರು ಟಫ್ಟ್ಸ್ ಯೂನಿವರ್ಸಿಟಿಯಿಂದ ಅರ್ಥಶಾಸ್ತ್ರ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
  • ನಂತರ RPI (Rensselaer Polytechnic Institute) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಟೆಕ್‌ ಕರಿಯರ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

ಆಪಲ್‌ನೊಂದಿಗೆ 30 ವರ್ಷಗಳ ನಂಟು

  • ಸಬಿಹ್ ಖಾನ್ ಕಳೆದ ಮೂರು ದಶಕಗಳಿಂದ ಆಪಲ್‌ನೊಂದಿಗೆ ಹಲವಾರು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
  • ಅವರು ಈಗಾಗಲೇ ಆಪಲ್‌ನ “Senior Vice President of Operations” ಆಗಿದ್ದು, ಜಾಗತಿಕ ಪೂರೈಕೆ ಸರಪಳಿ, ಪೂರೈಕೆದಾರ ಜವಾಬ್ದಾರಿ, ಮತ್ತು ಕಾರ್ಯಾಚರಣೆ ತಂಡಗಳನ್ನು ಮುನ್ನಡೆಸುತ್ತಿದ್ದಾರೆ.
  • 2025ರ ಕೊನೆ ವೇಳೆಗೆ ನಿವೃತ್ತಿಯಾಗುತ್ತಿರುವ ಜೆಫ್ ವಿಲಿಯಮ್ಸ್ ಅವರ ಸ್ಥಾನವನ್ನು ಖಾನ್ ಅಲಂಕರಿಸಲಿದ್ದಾರೆ.

ಜಗತ್ತಿನ ಪ್ರಮುಖ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಭಾರತೀಯರು

ಇದೊಂದು ಉದಾಹರಣೆ ಮಾತ್ರ. ಗೂಗಲ್‌ನ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, IBMನ ಆರವಿಂದ ಕೃಷ್ಣ ಹಾಗು ಈಗ ಆಪಲ್‌ನ ಸಬಿಹ್ ಖಾನ್ ಜಗತ್ತಿನ ಪ್ರಮುಖ ಕಂಪನಿಗಳ ಟಾಪ್‌ ಹುದ್ದೆಗಳಲ್ಲಿದ್ದಾರೆ.

ಜಾಗತಿಕ ಕಂಪನಿಗಳಲ್ಲಿ ಭಾರತೀಯ ಮೂಲದ CEOಗಳು / ಮುಖ್ಯಸ್ಥರು

ಹೆಸರುಹುದ್ದೆಕಂಪನಿ/ಸಂಸ್ಥೆವಲಯ
ಸತ್ಯ ನಾಡೆಲ್ಲಾಅಧ್ಯಕ್ಷ ಹಾಗೂ ಸಿಇಒಮೈಕ್ರೋಸಾಫ್ಟ್ (Microsoft)ತಂತ್ರಜ್ಞಾನ
ಸುಂದರ್ ಪಿಚೈಸಿಇಒಆಲ್ಫಾಬೆಟ್ ಮತ್ತು ಗೂಗಲ್ (Alphabet & Google)ತಂತ್ರಜ್ಞಾನ
ಲೀನಾ ನಾಯರ್ಗ್ಲೋಬಲ್ ಸಿಇಒಶಾನೆಲ್ (Chanel)ಫ್ಯಾಷನ್ / ಐಷಾರಾಮಿ
ಜಯಶ್ರೀ ಉಳ್ಳಾಲ್ಅಧ್ಯಕ್ಷೆ ಹಾಗೂ ಸಿಇಒಅರಿಸ್ಟಾ ನೆಟ್‌ವರ್ಕ್ಸ್ (Arista Networks)ಕಂಪ್ಯೂಟರ್ ನೆಟ್‌ವರ್ಕಿಂಗ್
ಆರವಿಂದ ಕೃಷ್ಣಅಧ್ಯಕ್ಷ ಹಾಗೂ ಸಿಇಒಐಬಿಎಮ್ (IBM)ತಂತ್ರಜ್ಞಾನ
ರೇವತಿ ಅದ್ವೈತಿಸಿಇಒಫ್ಲೆಕ್ಸ್ (Flex)ಎಲೆಕ್ಟ್ರಾನಿಕ್ಸ್ ಉತ್ಪಾದನೆ
ಗೀತಾ ಗೋಪಿನಾಥ್ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿಅಂತರಾಷ್ಟ್ರೀಯ ಹಣಕಾಸು ನಿಧಿ (IMF)ಆರ್ಥಿಕತೆ
ಶಾಂತನು ನಾರಾಯಣ್ಅಧ್ಯಕ್ಷ ಹಾಗೂ ಸಿಇಒಅಡೋಬ್ (Adobe)ತಂತ್ರಜ್ಞಾನ
ರೋಶನಿ ನಾಡಾರ್ ಮಲ್ಹೋತ್ರಾಅಧ್ಯಕ್ಷೆಎಚ್‌ಸಿಎಲ್ ಟೆಕ್ನಾಲಜೀಸ್ (HCL Technologies)ತಂತ್ರಜ್ಞಾನ
ವಸಂತ್ ನರಸಿಂಹನ್ಸಿಇಒನೋವಾರ್ಟಿಸ್ (Novartis)ಫಾರ್ಮಾಸ್ಯುಟಿಕಲ್ಸ್
ಕಿರಣ್ ಮಜುಂದಾರ್-ಶಾಕಾರ್ಯಕಾರಿ ಅಧ್ಯಕ್ಷೆಬಯೋಕಾನ್ (Biocon)ಬಯೋಟೆಕ್ನಾಲಜಿ
ಲಕ್ಷ್ಮಣ್ ನರಸಿಂಹನ್ಸಿಇಒಸ್ಟಾರ್‌ಬಕ್ಸ್ (Starbucks)ಚಿಲ್ಲರೆ ವ್ಯಾಪಾರ / ಆಹಾರ
ನಿಕೇಶ್ ಅರೋರಾಅಧ್ಯಕ್ಷ ಹಾಗೂ ಸಿಇಒಪಾಲೊ ಆಲ್ಟೊ ನೆಟ್‌ವರ್ಕ್ಸ್ (Palo Alto Networks)ಸೈಬರ್ ಸೆಕ್ಯುರಿಟಿ
ಸಂಜಯ್ ಮೆಹ್ರೋತ್ರಾಅಧ್ಯಕ್ಷ ಹಾಗೂ ಸಿಇಒಮೈಕ್ರಾನ್ ಟೆಕ್ನಾಲಜಿ (Micron Technology)ಸೆಮಿಕಂಡಕ್ಟರ್
ಅಂಜಲಿ ಸುದ್ಸಿಇಒಟ್ಯೂಬಿ (Tubi)ಮನರಂಜನೆ / ಸ್ಟ್ರೀಮಿಂಗ್
ರಾಜ್ ಸುಬ್ರಹ್ಮಣ್ಯಂಅಧ್ಯಕ್ಷ ಹಾಗೂ ಸಿಇಒಫೆಡೆಕ್ಸ್ (FedEx)ಲಾಜಿಸ್ಟಿಕ್ಸ್

error: Content is protected !!