Category Archives: Uncategorized

NTPC : ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

By | 16/04/2021

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷ್ ಲಿಮಿಟೆಡ್ (ಎನ್‌ಟಿಪಿಸಿ) ಖಾಲಿಯಿರುವ ಹದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು ಅರ್ಹ ಇಂಜಿನಿಯರ್ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಹುದ್ದೆ : ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ( ಮಹಿಳಾ) ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 16-04-2021ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-05-2021 ಹುದ್ದೆಗಳ ವಿವರ : ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿ.ಖಾಲಿ ಇರುವ 50 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಇರುವ ಹುದ್ದೆಗಳ ಪೈಕಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ –… Read More »

NEET PG ಪರೀಕ್ಷೆ ಮುಂದೂಡಿಕೆ

By | 16/04/2021

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್‌ ಫಾರ್‌ ಫೋಸ್ಟ್‌ ಗ್ರಾಜ್ಯುಯೆಟ್, ನೀಟ್ ಪಿಜಿ 2021 ಪರೀಕ್ಷೆಯನ್ನು ಕೇಂದ್ರ ಸರಕಾರವು ಮುಂದೂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನೀಟ್ ಪಿಜಿ ಪರೀಕ್ಷೆಯನ್ನು ಎಪ್ರಿಲ್ 18, 2021 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಈ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ. ನೀಟ್ ಪಿಜಿ 2021 ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನ್ಯಾಷಲನ್ ಬೋರ್ಡ್‌ ಆಫ್ ಎಕ್ಸಾಮಿನೇಷನ್‌ನ ಅಫೀಶಿಯಲ್ ವೆಬ್‌ಸೈಟ್‌ ಅಥವಾ ಅಫೀಶಿಯಲ್ ಟ್ವಿಟ್ಟರ್ ಹ್ಯಾಂಡಲ್ ಫಾಲೋ ಮಾಡಬಹುದಾಗಿದೆ.

ಬಾಗಲಕೋಟೆ ಸೆಂಟ್ರಲ್ ಲೈಬ್ರರಿಯಲ್ಲಿ ಉದ್ಯೋಗ

By | 16/04/2021

ಬಾಗಲಕೋಟೆ ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯ ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆ : ಮಹಿಳಾ ಆಯಾ ಕೆಲಸಗಾರರನ್ನು ಗೌರವ ಸಂಭಾವನೆ ಮೇರೆಗೆ ಭರ್ತಿ ಮಾಡಲು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏಳನೇ ತರಗತಿ ತೇರ್ಗಡೆ ಹೊಂದಿರಬೇಕು. ಹುದ್ದೆಗೆ ಸ್ಥಳೀಯರಿಗೆ ಮೊದಲನೆ ಆದ್ಯತೆ ನೀಡಲಾಗುವುದು. ಆಯ್ಕೆ ಪ್ರಕ್ರಿಯೆ : ವಿದ್ಯಾರ್ಹತೆ ಹಾಗೂ ಮೌಖಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಯು ತಾತ್ಕಾಲಿಕವಾಗಿದ್ದು,… Read More »

FSSAI : ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

By | 16/04/2021

ಎಫ್‌ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ) ನೇರ ನೇಮಕಾತಿ ಆಧಾರದ ಮೇಲೆ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವರ್ಗಾವಾರು ಖಾಲಿ ಹುದ್ದೆಗಳ ಸಂಖ್ಯೆ ಹಾಗೂ ಗರಿಷ್ಠ ವಯೋಮಿತಿಗಾಗಿ ವಿವರವಾದ ಜಾಹೀರಾನ್ನು ನೋಡಬಹುದು. ಹುದ್ದೆಗಳ ವಿವರ: ಪ್ರಧಾನ ವ್ಯವಸ್ಥಾಪಕ – 01ಜಂಟಿ ನಿರ್ದೇಶಕ – (ತಾಂತ್ರಿಕ) – 08ಜಂಟಿ ನಿರ್ದೇಶಕ ( ಆಡಳಿತ ಮತ್ತು ಹಣಕಾಸು ) -04ಹಿರಿಯ ವ್ಯವಸ್ಥಾಪಕ – ಪತ್ರಿಕೋದ್ಯಮ/ಸಮೂಹ ಸಂವಹನ ಅಥವಾ ಸಾರ್ವಜನಿಕ ಸಂಪರ್ಕ-01ಹಿರಿಯ ವ್ಯವಸ್ಥಾಪಕ (ಐಟಿ) – ಮಾಹಿತಿ… Read More »

ಬೆಂಗಳೂರು ಸಿಆರ್ ಪಿಎಫ್ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆ

By | 16/04/2021

ಬೆಂಗಳೂರಿನ ಸಿಆರ್ ಪಿಎಫ್ ನ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ‌ ಕೆಳಕಂಡ ವಿವರಗಳು ದಿನಾಂಕಗಳನ್ವಯ ನೇಮಕಾತಿ ಮಾಡಿಕೊಳ್ಳಲು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಸಂದರ್ಶನ ವೇಳೆ ಮತ್ತು ದಿನಾಂಕ : 22-04-2021 (9.00 ಗಂಟೆಗೆ)ಸ್ಥಳ ಸಂದರ್ಶನ ಕೇಂದ್ರ : ಬೆಂಗಳೂರಿನ ಸಿಆರ್ ಪಿಎಫ್ ನ ಕಾಂಪೊಸಿಟ್ ಆಸ್ಪತ್ರೆ, ಜಿಸಿವಯೋಮಿತಿ : ನೇರ ಸಂದರ್ಶನದ ದಿನಾಂಕದ ವೇಳೆಗೆ 70 ವರ್ಷ ಮೀರಿರಬಾರದು. ವೇತನ : ರೂ.85,000/- ವಿ.ವೈ.ಅಧಿಕಾರಿಗಳಿಗೆ ಹುದ್ದೆಗಳ ವಿವರ :… Read More »

KSET ಪರೀಕ್ಷಾ ದಿನಾಂಕ ನಿಗದಿ: ಅಧಿಕೃತ ಪ್ರಕಟಣೆ ಬಿಡುಗಡೆ

By | 15/04/2021

ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ) ಯನ್ನು ದಿನಾಂಕ : 11 ನೇ ಎಪ್ರಿಲ್ 2021 ರಂದು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದ್ದರಿಂದ ಸದರಿ ಕೆಸೆಟ್ 2021 ಪರೀಕ್ಷೆಯನ್ನು 25-04-2021 (ಭಾನುವಾರ) ನಡೆಸಲು ತೀರ್ಮಾನಿಸಲಾಗಿದೆ. ಕೆಸೆಟ್ 2021 ರ ಪರೀಕ್ಷೆಯನ್ನು ನಡೆಸಲು ಪತ್ರದ ಮುಖಾಂತರ ಈಗಾಗಲೇ ಕರ್ನಾಟಕ ಸರಕಾರದ ಗಮನಕ್ಕೆ ತರಲಾಗಿದೆ. ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಾರಿಗೆ… Read More »