ಕ್ರಿಜಾಕ್ ಐಪಿಒಗೆ ಚಂದಾದಾರಿಕೆ ನಿಧಾನವಾಗಿ ಏರಿಕೆ ಕಾಣುತ್ತಿದೆ. ಇದೇ ಸಮಯದಲ್ಲಿ ಶೇಕಡ 8ರ ಆಸುಪಾಸಿನಲ್ಲಿದ್ದ ಈ ಐಪಿಒನ ಜಿಎಂಪಿಯೂ ಎರಡು ಪಟ್ಟು ಹೆಚ್ಚಾಗಿದೆ. ಈ ಐಪಿಒ ವಿತರಣೆಯಾದರೆ ಶೇಕಡ 15ರಷ್ಟು ಲಾಭವಾಗಬಹುದೆಂಬ ನಿರೀಕ್ಷೆಯಲ್ಲಿ ಐಪಿಒ ಚಂದಾದಾರರಿದ್ದಾರೆ. ಕ್ರಿಜಾಕ್ ಐಪಿಒ ಜುಲೈ 2ರಂದು ಆರಂಭವಾಗಿದ್ದು, ಜುಲೈ 4ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಜುಲೈ 7ರಂದು ಅಲೋಟ್‌ಮೆಂಟ್ ಆಗುವ ಸೂಚನೆಯಿದೆ. ಡಿಮ್ಯಾಟ್ ಖಾತೆಗೆ ಜುಲೈ 8ರಂದು ಮತ್ತು ಷೇರುಪೇಟೆಯಲ್ಲಿ ಜುಲೈ 9ರಂದು ಲಿಸ್ಟ್ ಆಗಲಿದೆ.
ಕ್ರಿಜಾಕ್ ಐಪಿಒ ಜಿಎಂಪಿ ಎಷ್ಟಿದೆ?
ಕ್ರಿಜಾಕ್ ಐಪಿಒದ ಇತ್ತೀಚಿನ ಜಿಎಂಪಿ 39 ರೂಪಾಯಿ ಇದೆ. ಅಂದರೆ, ಜುಲೈ 3ರ ಬೆಳಗ್ಗಿನ ಹೊತ್ತು ಇದರ ಜಿಎಂಪಿ ಶೇಕಡ 15.92ಕ್ಕೆ ತಲುಪಿದೆ. ಇದರ ಲಿಸ್ಟಿಂಗ್ ಪ್ರೈಸ್ 245 ರೂಪಾಯಿ ಇದೆ. ಇದೇ ಜಿಎಂಪಿ ರೀತಿ ದರ ಹೆಚ್ಚಾದರೆ ಈ ಷೇರಿನ ದರ 284 ರೂಪಾಯಿಗೆ ತಲುಪಲಿದೆ. ಇಷ್ಟು ದರಕ್ಕೆ ಲಿಸ್ಟ್ ಆದರೆ ಚಂದಾದಾರಿಕೆ ಪಡೆದವರಿಗೆ ಶೇಕಡ 15ರಷ್ಟು ಲಾಭವಾಗಲಿದೆ. ಜಿಎಂಪಿ ಇನ್ನಷ್ಟು ಏರಿಕೆ ಕಾಣುವ ಸೂಚನೆಯಿದೆ. (ಐಪಿಒ ಸುದ್ದಿಗಳು)
| ದಿನಾಂಕ | ಶೇರುದರ (ರೂ) | ಗ್ರೇ ಮಾರುಕಟ್ಟೆ ಪ್ರಿಮಿಯಂ – ಇಂದಿನ ಚಲನೆ | ದ್ವಿತೀಯ ಶೇರುಪೇಟೆ ದರ | ಅಂದಾಜು ಪ್ರಾರಂಭಿಕ ದರ | ಅಂದಾಜು ಲಾಭ (ರೂ) | ಕೊನೆಯ ನವೀಕರಣ |
|---|---|---|---|---|---|---|
| 03-ಜುಲೈ-2025 | 245.00 | 39 – ಬದಲಾವಣೆ ಇಲ್ಲ | 1800 / 25200 | 284 (15.92%) | 2379 | 03-ಜುಲೈ-2025, 06:29 |
| 02-ಜುಲೈ-2025 (ಆರಂಭ) | 245.00 | 39 – ಏರಿಕೆ | 1800 / 25200 | 284 (15.92%) | 2379 | 02-ಜುಲೈ-2025, 23:33 |
| 01-ಜುಲೈ-2025 | 245.00 | 21 – ಏರಿಕೆ | 1000 / 14000 | 266 (8.57%) | 1281 | 01-ಜುಲೈ-2025, 23:34 |
ಕ್ರಿಜಾಕ್ ಐಪಿಒ ಚಂದಾದಾರಿಕೆ ಎಷ್ಟಿದೆ?
| ಹೂಡಿಕೆದಾರ ವರ್ಗ | ಸಬ್ಸ್ಕ್ರಿಪ್ಷನ್ ಪ್ರಮಾಣ | ಹಂಚಿಕೆಗೆ ಶೇರುಗಳು | ಸಲ್ಲಿಸಿದ ಅರ್ಜಿಗಳು | ಒಟ್ಟು ಮೊತ್ತ (ರೂ ಕೋಟಿಗಳಲ್ಲಿ) |
|---|
| ಆಂಕರ್ ಹೂಡಿಕೆದಾರರು | 1.00 ಪಟ್ಟು | 1,05,30,612 | 1,05,30,612 | ರೂ 258.00 |
| ಮಾರುಕಟ್ಟೆ ಮಾಕರ್ | 1.00 ಪಟ್ಟು | 0 | 0 | ರೂ 0.00 |
| ಅರ್ಹ ಸಂಸ್ಥೆಗಳು (QIB) | 0.09 ಪಟ್ಟು | 70,20,407 | 6,47,271 | ರೂ 15.86 |
| ಸಂಸ್ಥೆ ಬಾಹ್ಯ ಹೂಡಿಕೆದಾರರು (NII) | 0.65 ಪಟ್ಟು | 52,65,306 | 34,35,215 | ರೂ 84.16 |
| ➤ ರೂ 10 ಲಕ್ಷಕ್ಕಿಂತ ಮೇಲ್ಪಟ್ಟವರು (bNII) | 0.59 ಪಟ್ಟು | 35,10,204 | 20,79,307 | ರೂ 50.94 |
| ➤ ರೂ 10 ಲಕ್ಷಕ್ಕಿಂತ ಕಡಿಮೆಯವರು (sNII) | 0.77 ಪಟ್ಟು | 17,55,102 | 13,55,908 | ರೂ 33.22 |
| ಚಿಲ್ಲರೆ ಹೂಡಿಕೆದಾರರು | 0.63 ಪಟ್ಟು | 1,22,85,714 | 77,00,152 | ರೂ 188.65 |
| ಒಟ್ಟು | 0.48 ಪಟ್ಟು | 2,45,71,427 | 1,17,82,638 | ರೂ 288.67 |
ಇದನ್ನೂ ಓದಿ: ಐಪಿಒ ಅಲರ್ಟ್: ಈ ವಾರ 7 ಐಪಿಒಗಳಿಗೆ ಬಿಡ್ ಮಾಡಬಹುದು; 2 ಮೇನ್‌ಬೋರ್ಡ್, 5 ಎಸ್‌ಎಂಇ ಸಾರ್ವಜನಿಕ ಷೇರು ಬಿಡುಗಡೆ















Got a Questions?
Find us on Socials or Contact Us and we’ll get back to you as soon as possible.