ಜುಲೈ ತಿಂಗಳ ಆರಂಭದಲ್ಲಿಯೇ ಮೇನ್ಬೋರ್ಡ್ ಐಪಿಒವೊಂದು ಐಪಿಒ ಪ್ರಿಯರನ್ನು ಕಾಯುತ್ತಿದೆ. ಕ್ರಿಜಾಕ್ ಐಪಿಒ 860.00 ಕೋಟಿ ರೂಪಾಯಿಗಳ ಬುಕ್ಬಿಲ್ಡಿಂಗ್ ಆಗಿದೆ. ಈ ಇಶ್ಯೂ ಸಂಪೂರ್ಣವಾಗಿ 3.51 ಕೋಟಿ ಷೇರುಗಳ ಮಾರಾಟದ ಕೊಡುಗೆಯಾಗಿದೆ. ಕ್ರಿಜಾಕ್ ಐಪಿಒ ಜುಲೈ 2, 2025 ರಂದು ಚಂದಾದಾರಿಕೆಗೆ ತೆರೆಯುತ್ತದೆ. ಜುಲೈ 4, 2025ರವರೆಗೆ ಚಂದಾದಾರಿಕೆಗೆ ಬಿಡ್ ಮಾಡಲು ಅವಕಾಶ ಇರುತ್ತದೆ. ಕ್ರೈಜಾಕ್ ಐಪಿಒ ಹಂಚಿಕೆಯನ್ನು ಸೋಮವಾರ, ಜುಲೈ 7, 2025 ರಂದು ಅಂತಿಮಗೊಳಿಸುವ ನಿರೀಕ್ಷೆಯಿದೆ. ಕ್ರೈಜಾಕ್ ಐಪಿಒ ಬಿಎಸ್ಇ, ಎನ್ಎಸ್ಇಯಲ್ಲಿ ಪಟ್ಟಿ ಮಾಡಲಾಗುತ್ತದೆ. ಜುಲೈ 9, 2025 ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸುವ ಸೂಚನೆ ದೊರಕಿದೆ.
| ವಿವರ | ಮಾಹಿತಿ |
|---|---|
| ಐಪಿಒ ದಿನಾಂಕ | ಜುಲೈ 2ರಿಂದ ಜುಲೈ 4 |
| ಫೇಸ್ ವ್ಯಾಲ್ಯೂ | ಪ್ರತಿ ಷೇರಿಗೆ 2 ರೂಪಾಯಿ |
| ಇಶ್ಯೂ ದರ | ಪ್ರತಿಷೇರಿಗೆ 233 ರೂನಿಂದ 245 ರೂಪಾಯಿ |
| ಲಾಟ್ ಗಾತ್ರ | 61 ಷೇರುಗಳು |
| ಷೇರಿನ ಬಗೆ | ಆಫರ್ ಫಾರ್ ಸೇಲ್ |
| ಒಟ್ಟು ಇಶ್ಯು ಗಾತ್ರ | 3,51,02,040 ಷೇರುಗಳು |
| ಇಶ್ಯೂ ಟೈಪ್ | ಬುಕ್ಬಿಲ್ಡಿಂಗ್ ಐಪಿಒ |
| ಎಲ್ಲಿ ಲಿಸ್ಟ್ ಮಾಡಲಾಗುತ್ತದೆ? | ಬಿಎಸ್ಇ, ಎನ್ಎಸ್ಇ |
ಐಪಿಒ ಬೆಲೆ ಬ್ಯಾಂಡ್ ಅನ್ನು ಪ್ರತಿ ಷೇರಿಗೆ 233 ರೂನಿಂದ 245 ರೂಗೆ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ ಲಾಟ್ ಗಾತ್ರ 61 ಆಗಿದೆ. ಚಿಲ್ಲರೆ ಹೂಡಿಕೆದಾರರಿಗೆ ಅಗತ್ಯವಿರುವ ಕನಿಷ್ಠ ಹೂಡಿಕೆ ಮೊತ್ತ 14,213 ರೂಪಾಯಿ. ಅಂದರೆ, ಇಷ್ಟು ಹಣವಿದ್ದರೆ ಈ ಐಪಿಒಗೆ ಆಸಕ್ತರು ಬಿಡ್ಮಾಡಬಹುದು. ಆದರೆ ಹೂಡಿಕೆದಾರರಿಗೆ ಸುಮಾರು 14,945 ರೂಪಾಯಿಯಷ್ಟು ಇರುವ ಓವರ್ಸಬ್ಸ್ಕ್ರಿಪ್ಷನ್ ಸೆನೆರಿಯೊವನ್ನು ತಪ್ಪಿಸಲು ಕಟ್ಆಫ್ ಬೆಲೆಯಲ್ಲಿ ಬಿಡ್ ಮಾಡಲು ಸೂಚಿಸಲಾಗುತ್ತದೆ. ಕ್ರೈಜಾಕ್ IPO ಒಂದು ದೊಡ್ಡ ಪ್ರಮಾಣದ Offer for Sale ಆಗಿದ್ದು, ಕಂಪನಿಯ ಶೇರುಗಳನ್ನು ಈಗಿನ ಷೇರುದಾರರು ಮಾರಾಟ ಮಾಡುತ್ತಿದ್ದಾರೆ. IPO ಮೂಲಕ ಹೊಸ ಶೇರುಗಳು ಹೊರಬರದೆ, ಹಳೆಯ ಷೇರುಗಳೇ ಮಾರಾಟವಾಗುತ್ತವೆ ಎಂಬುದು ಗಮನಿಸಬೇಕಾದ ವಿಷಯ. ಹೂಡಿಕೆದಾರರು ಈ ಐಪಿಒಗೆ ಕಟ್ಆಫ್ ಬೆಲೆಯಲ್ಲಿ ಬಿಡ್ ಮಾಡಿದರೆ ಹಂಚಿಕೆ ಸಾಧ್ಯತೆ ಹೆಚ್ಚು ಇರುತ್ತದೆ. IPO over-subscribed ಆಗುವ ಸಾಧ್ಯತೆಗಳಿರುವುದರಿಂದ ಹೂಡಿಕೆ ಮೊತ್ತವನ್ನು ಅಗತ್ಯದಷ್ಟು ಹೊಂದಿರಬೇಕು.
ಎಸ್ಎನ್ಐಐ (sNII)ಗೆ ಕನಿಷ್ಠ ಲಾಟ್ ಗಾತ್ರದ ಹೂಡಿಕೆ 14 ಲಾಟ್ಗಳು (854 ಷೇರುಗಳು) ಇರುತ್ತವೆ. ಇದರ ಮೊತ್ತ 2,09,230 ರೂಪಾಯಿ ಆಗಿದೆ. ಬಿಎನ್ಐಐಗೆ 67 ಲಾಟ್ಗಳು (4,087 ಷೇರುಗಳು) ಇವೆ. ಇದರ ಮೊತ್ತ 10,01,315 ರೂಪಾಯಿ ಇರುತ್ತದೆ. ಈಕ್ವಿರಸ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕ್ರೈಜಾಕ್ ಐಪಿಒನ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್. ಎಂಯುಎಫ್ಝಿ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಲಿಂಕ್ ಇಂಟೈಮ್) ಈ ಇಶ್ಯೂಗೆ ರಿಜಿಸ್ಟ್ರಾರ್ ಆಗಿದೆ.
ಕ್ರೈಜಾಕ್ ಲಿಮಿಟೆಡ್ ಬಗ್ಗೆ ಹೆಚ್ಚಿನ ವಿವರ
ಕ್ರೈಜಾಕ್ ಲಿಮಿಟೆಡ್, 2011ರಲ್ಲಿ ಸ್ಥಾಪಿತವಾದ B2B ಶಿಕ್ಷಣ ಪ್ಲಾಟ್ಫಾರ್ಮ್ ಆಗಿದ್ದು, ಯುಕೆ, ಕೆನಡಾ, ಐರ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಂತಹ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿ ಪ್ರವೇಶ ಸೇವೆಗಳನ್ನು ಒದಗಿಸುತ್ತದೆ. 2022–2024 ಹಣಕಾಸು ವರ್ಷಗಳ ಹಾಗೂ 2024ರ ಸೆಪ್ಟೆಂಬರ್ 30ಕ್ಕೆ ಮುಕ್ತಾಯವಾದ 6 ತಿಂಗಳಲ್ಲಿ, Crizac ತನ್ನ ತಂತ್ರಜ್ಞಾನ ಪ್ಲಾಟ್ಫಾರ್ಮ್ ಮೂಲಕ 75ಕ್ಕೂ ಹೆಚ್ಚು ದೇಶಗಳಿಂದ ವಿದ್ಯಾರ್ಥಿ ಅರ್ಜಿಗಳನ್ನು ಸಂಗ್ರಹಿಸಿ, 135ಕ್ಕೂ ಹೆಚ್ಚು ಜಾಗತಿಕ ಶಿಕ್ಷಣ ಸಂಸ್ಥೆಗಳೊಂದಿಗೆ ಕೆಲಸ ಮಾಡಿದೆ.
ಈ ಅವಧಿಯಲ್ಲಿ, ಕಂಪನಿಯು 5.95 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಪ್ರೊಸೆಸ್ ಮಾಡಿದ್ದು, ಸುಮಾರು 7,900 ಏಜೆಂಟ್ಗಳು ಕಂಪನಿಯ ಪ್ಲಾಟ್ಫಾರ್ಮ್ನಲ್ಲಿ ನೊಂದಾಯಿತರಾಗಿದ್ದಾರೆ. ಇದರಲ್ಲಿ 2024ರ ಹಣಕಾಸು ವರ್ಷದಲ್ಲಿ 2,532 ಆಕ್ಟಿವ್ ಏಜೆಂಟ್ಗಳು ಇದ್ದರು – ಇವರಲ್ಲಿ 1,524 ಭಾರತದಲ್ಲೂ, 1,008 ಪಾಕಿಸ್ತಾನ, ನೇಪಾಳ, ನೈಜೀರಿಯಾ, ಘಾನಾ, ಕೆನಡಾ ಮುಂತಾದ 25ಕ್ಕೂ ಹೆಚ್ಚು ದೇಶಗಳಲ್ಲಿ ಇದ್ದರು.















Got a Questions?
Find us on Socials or Contact Us and we’ll get back to you as soon as possible.