ಗೂಗಲ್ ಸರ್ಚ್ ಎಂಜಿನ್ ಆಪ್ಟಿಮೈಜೇಷನ್‌ಗೆ ಸಂಬಂಧಪಟ್ಟಂತೆ ಹೊಸದೊಂದು ಬದಲಾವಣೆ ಕುರಿತು ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸ್‌ನಲ್ಲಿ ತಿಳಿಯಿರಿ. ಗೂಗಲ್ ಎಸ್‌ಇಒ ಈಗ ಮತ್ತಷ್ಟು ಅಪ್‌ಡೇಟ್ ಆಗಿದೆ. ಏಳು ಬಗೆಯ ಸ್ಟ್ರಕ್ಚರ್ಡ್ ಡೇಟಾ ಮಾರ್ಕ್‌ಅಪ್‌ಗಳಿಗೆ ಬೆಂಬಲವನ್ನು ಗೂಗಲ್ ಕೈಬಿಟ್ಟಿದೆ. ಗೂಗಲ್ ಸರ್ಚ್ ಪುಟಗಳಲ್ಲಿ ಸ್ನಿಪ್ಪೆಟ್ ಅಥವಾ ಹೆಚ್ಚು ವಿವರವಾದ ಮಾಹಿತಿಯನ್ನು ಪಡೆಯಲು ಈ ಸ್ಟ್ರಕ್ಚರ್ಡ್ ಡೇಟಾ ಮಾರ್ಕ್‌ಅಪ್‌ಗಳು ನೆರವಾಗುತ್ತಿದ್ದವು. ಆದರೆ, ಗೂಗಲ್ ತನ್ನ ಡೇಟಾ ಮಾರ್ಕಪ್ ಅನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಏಳು ಎಲಿಮೆಂಟ್‌ಗಳನ್ನು ಕೈಬಿಟ್ಟಿದೆ.
ಏನಿದು ಸ್ಟ್ರಕ್ಚರ್ಡ್ ಡೇಟಾ ಮಾರ್ಕ್‌ಅಪ್?
ಕರ್ನಾಟಕ ಬೆಸ್ಟ್.ಕಾಂನ ಮೂಲ ಉದ್ದೇಶ ತಂತ್ರಜ್ಞಾನ ಮತ್ತು ಡಿಜಿಟಲ್ ಜಗತ್ತಿನ ಕುರಿತು ಕನ್ನಡಿಗರನ್ನು ಸುಶಿಕ್ಷಿತರನ್ನಾಗಿ ಮಾಡುವುದು. ಈ ಹಿನ್ನೆಲೆಯಲ್ಲಿ ಮೊದಲಿಗೆ ಸ್ಟ್ರಕ್ಚರ್ಡ್ ಡೇಟಾ ಮಾರ್ಕ್‌ಅಪ್ ಎಂದರೆ ಏನೆಂದು ತಿಳಿಯೋಣ. ಗೂಗಲ್ ತನ್ನ ಸರ್ಚ್ ಪುಟಗಳಲ್ಲಿ ಫಲಿತಾಂಶಗಳನ್ನು ತೋರಿಸುವಾಗ ಕೆಲವೊಂದು ನಿರ್ದಿಷ್ಟ ಫಾರ್ಮ್ಯಾಟ್‌ಗಳಲ್ಲಿ ತೋರಿಸುತ್ತದೆ. ಆಯಾ ಕಂಟೆಂಟ್‌ನ ವಿಧಕ್ಕೆ ತಕ್ಕಂತೆ ಫಲಿತಾಂಶವನ್ನು ತೋರಿಸಲು ಇದರಿಂದ ಸಾಧ್ಯವಾಗುತ್ತದೆ. ಸ್ಟ್ರಕ್ಚರ್ಡ್ ಡೇಟಾ ಮಾರ್ಕ್‌ಅಪ್ ಎನ್ನುವುದು ವೆಬ್‌ಪುಟದಲ್ಲಿರುವ ವಿಷಯವು ಯಾವುದರ ಬಗ್ಗೆ ಎಂದು ಸರ್ಚ್ ಇಂಜಿನ್‌ಗಳಿಗೆ ತಿಳಿಸುವ ಒಂದು ಮಾರ್ಗವಾಗಿದೆ. ಈ ಮಾರ್ಕ್ಅಪ್ ನಿಮ್ಮ ಪುಟದಲ್ಲಿನ ಅಂಶಗಳನ್ನು ವಿವರಿಸಲು Schema.org ನಂತಹ ನಿರ್ದಿಷ್ಟ ಶಬ್ದಕೋಶವನ್ನು ಬಳಸುತ್ತದೆ. ಇದು ಸರ್ಚ್ ಇಂಜಿನ್‌ಗಳು ಉತ್ಕೃಷ್ಟ, ಹೆಚ್ಚು ಮಾಹಿತಿಯುಕ್ತ ಹುಡುಕಾಟ ತುಣುಕುಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.
ಸರ್ಚ್ ಇಂಜಿನ್‌ಗಳಿಗೆ ಸ್ಥಿರತೆ ಮತ್ತು ಸ್ಪಷ್ಟತೆಯನ್ನು ಖಚಿತಪಡಿಸಿಕೊಳ್ಳಲು ರಚನಾತ್ಮಕ ದತ್ತಾಂಶವು ಪೂರ್ವನಿರ್ಧರಿತ ಶಬ್ದಕೋಶವನ್ನು (Schema.org ನಂತಹ) ಬಳಸುತ್ತದೆ. ಸ್ಟ್ರಕ್ಚರ್ಡ್ ಡೇಟಾ ಮಾರ್ಕ್‌ಅಪ್ ಎನ್ನುವುದು ವೆಬ್‌ಪುಟದ HTML ಗೆ ಮಾಹಿತಿಯನ್ನು ನೇರವಾಗಿ ಕೋಡ್ ಮಾಡುವ ಒಂದು ಮಾರ್ಗವಾಗಿದ್ದು, ಸರ್ಚ್ ಇಂಜಿನ್ ಕ್ರಾಲರ್‌ಗಳಿಗೆ ಇದು ಅರ್ಥವಾಗುವಂತೆ ಮಾಡುತ್ತದೆ. ವೆಬ್‌ಸೈಟ್‌ನಲ್ಲಿ ಸ್ಟ್ರಕ್ಚರ್ಡ್ ಡೇಟಾವನ್ನು ಅನುಷ್ಠಾನಗೊಳಿಸುವ ಮೂಲಕ ವೆಬ್ ಮಾಹಿತಿಯನ್ನು “rich snippets, rich cards ಅಥವಾ ಇನ್ನಷ್ಟು ಸುಂದರವಾದ ವಿಧಾನಗಳ ಮೂಲಕ” ಗೂಗಲ್ ಸರ್ಚ್‌ನಲ್ಲಿ ಕಾಣಿಸುವಂತೆ ಮಾಡಬಹುದು.
ಹೊಸ ಬದಲಾವಣೆಗಳು ಏನು?
ಗೂಗಲ್ ಇದೀಗ 7 ಬಗೆಯ ಸ್ಟ್ರಕ್ಚರ್ಡ್ ಡೇಟಾ ಮಾರ್ಕ್‌ಅಪ್ ಕೈಬಿಟ್ಟಿದೆ. ಅದ್ಯಾವುದು ಎಂದು ನೋಡೋಣ.
ಬುಕ್ ಆಕ್ಷನ್: ಪುಸ್ತಕಗಳು ಮತ್ತು ಲೇಖಕರ ಬಗ್ಗೆ ಗೂಗಲ್ ಸರ್ಚ್‌ನಲ್ಲಿ ಮಾಹಿತಿ ನೀಡುವ ವ್ಯವಸ್ಥೆಯನ್ನು ಗೂಗಲ್ ಕೈಬಿಟ್ಟಿದೆ. ಈ ಮಾರ್ಕಾಪ್ ನೆರವಿನಿಂದ ಸರ್ಚ್ ಫಲಿತಾಂಶದಿಂದಲೇ ಪುಸ್ತಕವನ್ನು ಖರೀದಿಸುವುದು ಸಾಧ್ಯವಿತ್ತು. ಗೂಗಲ್ ಸರ್ಚ್‌ಗೆ ಬಂದ ಬಳಕೆದಾರರು ReadAction ಮೂಲಕ ಪುಸ್ತಕ ಖರೀದಿಸಬಹುದಿತ್ತು. BorrowAction ಮೂಲಕ ಬಳಕೆದಾರರು ಪುಸ್ತಕವನ್ನು ಎರವಲು ಪಡೆಯಲು ಸಾಧ್ಯವಿತ್ತು. ಇದರ ಬಳಕೆ ಕಡಿಮೆಯಾಗಿದೆ ಎಂದೆನಿಸಿ ಗೂಗಲ್ ಈ ಮಾರ್ಕ್‌ಅಪ್ ಅನ್ನು ಕೈಬಿಡುವ ನಿರ್ಧಾರಕ್ಕೆ ಬಂದಿದೆ.
ಕೋರ್ಸ್ ಇನ್ಫೋ
ನಿಮ್ಮ ವೆಬ್‌ಸೈಟ್‌ನಲ್ಲಿರುವ ಕೋರ್ಸ್‌ಗಳ ವಿವರವನ್ನು ಇಲ್ಲಿಯವರೆಗೆ ಕೋರ್ಸ್ ಇನ್ಫೋ ಸ್ಟ್ರಕ್ಚರ್ಡ್ ಡೇಟಾ ಮೂಲಕ ನೀಡಲು ಸಾಧ್ಯವಾಗಿತ್ತು. ಕೋರ್ಸ್ ವಿವರ, ಕೋರ್ಸ್ ವಿಮರ್ಶೆಯ ರೇಟಿಂಗ್, ದರ, ಕೋರ್ಸ್ ಇತ್ಯಾದಿ ವಿವರಗಳನ್ನು ಈ ಮೂಲಕ ನೀಡಿದಾಗ ಗೂಗಲ್ ತನ್ನ ಸರ್ಚ್‌ನಲ್ಲಿ ಕೋರ್ಸ್‌ಗಳ ಕುರಿತು ರಿಚ್ ಫಲಿತಾಂಶ ತೋರಿಸುತ್ತಿತ್ತು. ಇದನ್ನು ಗೂಗಲ್ ಕೈಬಿಡಲು ಮುಂದಾಗಿದೆ.
ಕ್ಲೈಮ್ ರಿವ್ಯೂ
Fact check (ClaimReview) structured dataಗೂ ಗೂಗಲ್ ಬೆಂಬಲ ಹಿಂತೆಗೆದುಕೊಂಡಿದೆ. ಈ ಹಿಂದೆ ಗೂಗಲ್ ಸರ್ಚ್‌ನಲ್ಲಿ ಯಾವುದಾದರೂ ಫಲಿತಾಂಶ ನೋಡುವಾಗ “ಕ್ಲೈಮ್” ಕ್ಲೈಮ್ ಬೈ” ಇತ್ಯಾದಿ ವಿವರವೂ ಕಾಣಿಸುತ್ತಿತ್ತು.
ಅಂದಾಜು ವೇತನ
ಗೂಗಲ್ ಸರ್ಚ್ ರಿಸಲ್ಟ್‌ನಲ್ಲಿ ಯಾವುದಾದರೂ ಉದ್ಯೋಗದ ವೇತನದ ಕುರಿತು ಮಾಹಿತಿ ಪಡೆಯುವ ಸಂದರ್ಭದಲ್ಲಿ “ಎಸ್ಟಿಮೇಟೆಡ್ ಸ್ಯಾಲರಿ” ಎಂಬ ವಿಭಾಗವನ್ನು ನೀವು ನೋಡಿರುತ್ತೀರಿ. ವೆಬ್ ಪುಟದಲ್ಲಿ ಇದಕ್ಕಾಗಿ Occupation ಸ್ಟ್ರಕ್ಚರ್ಡ್ ಡೇಟಾವನ್ನು ಮಾಡಲು ಸಾಧ್ಯವಿತ್ತು. ಆದರೆ, ಇನ್ಮುಂದೆ ಗೂಗಲ್ ಇದಕ್ಕೆ ಬೆಂಬಲ ನೀಡುವುದಿಲ್ಲ.
ಲರ್ನಿಂಗ್ ವಿಡಿಯೋ
ಗೂಗಲ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನೆರವಾಗುವಂತೆ ಶೈಕ್ಷಣಿಕ ವಿಡಿಯೋಗಳನ್ನು ತೋರಿಸಲು ಈ ಮಾರ್ಕಪ್ ನೆರವಾಗುತ್ತಿತ್ತು. ಇನ್ಮುಂದೆ ಈ ಡೇಟಾ ಮಾರ್ಕಪ್ ಇರುವುದಿಲ್ಲ.
ಸ್ಪೆಷಲ್ ಅನೌನ್ಸ್‌ಮೆಂಟ್
ವಿವಿಧ ವೆಬ್‌ಸೈಟ್‌ಗಳು ಆಗಾಗ ಪ್ರಕಟಣೆ ಹೊರಡಿಸುತ್ತ ಇರುತ್ತವೆ. ಕೆಪಿಎಸ್‌ಸಿ, ಯುಪಿಸಿಎಸ್‌ಸಿ, ರೈಲ್ವೆ ವೆಬ್‌ಸೈಟ್‌ಗಳಲ್ಲಿ ಆಗಾಗ ಇಂತಹ ವಿಶೇಷ ಪ್ರಕಟಣೆಗಳನ್ನು, ನೋಟಿಸ್ ಅನ್ನು ನೀವು ನೋಡಿರಬಹುದು. ಇದಕ್ಕೆ ಸಂಬಂಧಪಟ್ಟ Special announcement (SpecialAnnouncement) structured data ಮಾರ್ಕ್‌ಅಪ್ ಅನ್ನು ಗೂಗಲ್ ಕೈಬಿಟ್ಟಿದೆ.
ವಾಹನ ಲಿಸ್ಟಿಂಗ್
ಗೂಗಲ್ ಲಿಸ್ಟ್‌ನಲ್ಲಿ ವೆಹಿಕಲ್ ಲಿಸ್ಟಿಂಗ್ ಮಾಹಿತಿಯೂ ಕಾಣಿಸುತ್ತಿದೆ. ಆದರೆ, ಇದು ಭಾರತಕ್ಕೆ ಇನ್ನು ಬಂದಿಲ್ಲ. ಅಮೆರಿಕ ಮತ್ತು ಕೆಲವು ದೇಶಗಳಲ್ಲಿ ಈ ವೆಹಿಕಲ್ ಲಿಸ್ಟಿಂಗ್ ಫಲಿತಾಂಶ ಕಾಣಿಸುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಗೂಗಲ್ ಎಸ್‌ಇಒನಲ್ಲಿ Vehicle listing (Car) structured data ಬಳಸಲಾಗುತ್ತಿತ್ತು. ಇದನ್ನೂ ಗೂಗಲ್ ಕೈಬಿಟ್ಟಿದೆ.
ತನ್ನ ಸ್ಟ್ರಕ್ಚರ್ಡ್ ಡೇಟಾ ಮಾರ್ಕ್‌ಅಪ್ ಅನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಗೂಗಲ್ ಈ ನಿರ್ಧಾರ ಕೈಗೊಂಡಿದೆ. ಅಂದಹಾಗೆ, ನಿಮ್ಮ ಬಿಸ್ನೆಸ್‌ಗೆ ವೆಬ್‌ಸೈಟ್, ಎಸ್‌ಇಒ ಸೇವೆಗಳು, ಕನ್ನಡ ಬ್ಲಾಗಿಂಗ್ ಕಂಟೆಂಟ್‌ಗಳು, ಸೋಷಿಯಲ್ ಮೀಡಿಯಾ ಸಪೋರ್ಟ್ ಸೇರಿದಂತೆ ಡಿಜಿಟಲ್ ಸೇವೆಗಳು ಬೇಕಿದ್ದರೆ ಕರ್ನಾಟಕ ಬೆಸ್ಟ್ ಅನ್ನು ಸಂಪರ್ಕಿಸಬಹುದು. ಡಿಜಿಟಲ್ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಅಪ್‌ಡೇಟ್ ಆಗಲು ಆಗಾಗ ಕರ್ನಾಟಕಬೆಸ್ಟ್.ಕಾಂಗೆ ಬರ್ತಾ ಇರಿ.














Got a Questions?
Find us on Socials or Contact Us and we’ll get back to you as soon as possible.