ಯಾವುದೇ ಬಿಸ್ನೆಸ್, ಸರ್ವೀಸ್ ಪ್ರೊವೈಡರ್ ಅಥವಾ ವ್ಯಕ್ತಿಗೆ ಇ-ಕಾಲದಲ್ಲಿ ವೆಬ್ ಅಸ್ತಿತ್ವ ಅಗತ್ಯ. ಅದು ಸ್ವಂತ ವೆಬ್‌ಸೈಟ್ ಆಗಿರಬಹುದು, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್, ಲಿಂಕ್ಡ್‌ಇನ್, ಯೂಟ್ಯೂಬ್ ಚಾನೆಲ್, ಮೊಬೈಲ್ ಅಪ್ಲಿಕೇಷನ್‌ಗಳು.. ಇತ್ಯಾದಿಗಳಲ್ಲಿ ಆಗಿರಬಹುದು. ಈ ಆನ್‌ಲೈನ್ ವಿಳಾಸ ಇಲ್ಲದೆ ಇದ್ದರೆ ಹೆಚ್ಚಿನ ಜನರಿಗೆ ಕಷ್ಟವಾಗಬಹುದು. ವಾಸ್ತವವಾಗಿ ಒಂದಿಷ್ಟು ಜನರು ಇಂಟರ್‌ನೆಟ್ ಜಗತ್ತಿನ ಹಂಗಿಲ್ಲದೆ ಸುಖವಾಗಿ ಬದುಕುತ್ತಿರಬಹುದು. ಆದರೆ, ಜಗತ್ತಿನೊಂದಿಗೆ ಕನೆಕ್ಟ್ ಆಗಲು ಬಯಸುವವರಿಗೆ ಈಗ ವೆಬ್ ಪ್ರೆಸೆನ್ಸ್ ಅತ್ಯಗತ್ಯ. ಅಂದಹಾಗೆ ಕರ್ನಾಟಕ ಬೆಸ್ಟ್ ಡಿಜಿಟಲ್ ಮಾರ್ಕೆಟಿಂಗ್ ಉಚಿತ ಕೋರ್ಸ್‌ನಲ್ಲಿ ಈಗಾಗಲೇ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸಾಂಪ್ರದಾಯಿಕ ಮಾರ್ಕೆಟಿಂಗ್‌ಗೆ ಇರುವ ವ್ಯತ್ಯಾಸವನ್ನು ತಿಳಿದುಕೊಂಡಿದ್ದೀರಿ. ಈ ಲೇಖನದಲ್ಲಿ ಬಿಸ್ನೆಸ್‌ಗಳಿಗೆ ವೆಬ್ ಅಸ್ತಿತ್ವ ಏಕೆ ಅಗತ್ಯ ಮತ್ತು ಡಿಜಿಟಲ್ ಪ್ರೆಸೆನ್ಸ್‌ನ ವಿಧಗಳ ಕುರಿತು ತಿಳಿಯೋಣ.
ವೆಬ್ ಅಸ್ತಿತ್ವ ಎಂದರೇನು?
www ಅಥವಾ ವರ್ಲ್ಡ್ ವೈಡ್ ವೆಬ್ ಲೋಕದಲ್ಲಿ ಬಿಸ್ನೆಸ್ ಅಥವಾ ವ್ಯಕ್ತಿಗಳಿಗೆ ಇರುವ ಅಸ್ತಿತ್ವವನ್ನು ವೆಬ್ ಪ್ರೆಸೆನ್ಸ್ ಎನ್ನಬಹುದು. ಇದೇ ಕಾರಣಕ್ಕೆ ಬಿಸ್ನೆಸ್‌ಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಅತ್ಯಂತ ಅಗತ್ಯ. ವೆಬ್ ಅಸ್ತಿತ್ವ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಜತೆಜತೆಯಾಗಿ ಸಾಗುವ ಗೆಳೆಯರು (ಅಥವಾ ಗೆಳತಿಯರು). ಒಂದು ಅಂಗಡಿ ಅಥವಾ ಬಿಸ್ನೆಸ್ ಮತ್ತು ಅದರ ಸುತ್ತಲಿನ ಗ್ರಾಹಕರಷ್ಟೇ ನಿಮಗೆ ಸಾಕು ಎಂದರೆ ವೆಬ್ ಪ್ರೆಸೆನ್ಸ್ ಅಗತ್ಯವಿಲ್ಲ.
ಮೂರು ವಿಧಗಳು ನೆನಪಿರಲಿ
ವೆಬ್ ಅಸಿತ್ವ ಎಂದಾಗ ಹಲವು ವಿಚಾರಗಳು ನೆನಪಿಗೆ ಬರಬಹುದು. ವಿಶೇಷವಾಗಿ ವೆಬ್ ಪ್ರೆಸೆನ್ಸ್‌ನಲ್ಲಿ ಮೂರು ವಿಧಗಳಿವೆ.
- ಬ್ಲಾಗ್ ಅಥವಾ ವೆಬ್‌ಸೈಟ್
ಮೊದಲನೆಯದು, ಬ್ಲಾಗ್ ಅಥವಾ ವೆಬ್‌ಸೈಟ್. ನಿಮ್ಮ ಯಾವುದೇ ಬಿಸ್ನೆಸ್ ಆಗಿರಲಿ, ಈ ಇಂಟರ್‌ನೆಟ್ ಕಾಲದಲ್ಲಿ ಒಂದು ವೆಬ್‌ಸೈಟ್ ಇರಬೇಕು. ಅದು ಕಥೆ ಕವನ ಅಥವಾ ನಿಮ್ಮ ಆಸಕ್ತಿಯ ವಿಚಾರಗಳನ್ನು ಹಂಚಿಕೊಳ್ಳುವ ಬ್ಲಾಗ್ ಆಗಿರಬಹುದು. ಅದೇ ಬ್ಲಾಗ್ ಅನ್ನು ನಿಮ್ಮ ಬಿಸ್ನೆಸ್ ವಿಷಯ ಹಂಚಿಕೊಳ್ಳುವ ವೇದಿಕೆಯಾಗಿಯೂ ಬಳಸಬಹುದು. ನಿಮ್ಮ ಬಿಸ್ನೆಸ್‌ಗೆ ಸಂಬಂಧಪಟ್ಟಂತೆ ವೆಬ್‌ಸೈಟ್ ರಚಿಸಿಕೊಳ್ಳುವುದು ಇನ್ನೊಂದು ಆಯ್ಕೆ. ಇದು ಅತ್ಯಂತ ಉತ್ತಮ ವಿಧಾನ. ನಿಮ್ಮ ಬಿಸ್ನೆಸ್ ವೆಬ್‌ಸೈಟ್‌ನಲ್ಲಿಯೇ ಬ್ಲಾಗ್ ಆಯ್ಕೆಯನ್ನೂ ನೀಡಬಹುದು. ಬಿಸ್ನೆಸ್ ವಿಚಾರಗಳನ್ನು ಜನರಿಗೆ ತಿಳಿಸುವುದರ ಜತೆಗೆ ಬಿಡುವು ಇದ್ದಾಗ ಬ್ಲಾಗ್‌ಗಳಿಗೂ ಲೇಖನ ಬರೆಯುತ್ತ ಇರಬಹುದು ಅಥವಾ ಕನ್ನಡದಲ್ಲಿ ಬ್ಲಾಗಿಂಗ್ ಸೇವೆ ನೀಡುವ ಕರ್ನಾಟಕ ಬೆಸ್ಟ್ ಅನ್ನೂ ಸಂಪರ್ಕಿಸಬಹುದು. ವೃತ್ತಿಪರ ಬ್ಲಾಗಿಂಗ್ ಸೇವೆ ಪಡೆಯುವುದರಿಂದ ಅನೇಕ ಲಾಭಗಳಿವೆ. ನಿಮ್ಮ ಬಿಸ್ನೆಸ್ ಅನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಲೇಖನ ಬರೆಯಲಾಗುತ್ತದೆ. ಜತೆಗೆ, ಅದಕ್ಕೆ ತಕ್ಕಂತೆ ಎಸ್‌ಇಒ ಅಂದರೆ ಸರ್ಚ್ ಎಂಜಿನ್ ಆಪ್ಟಿಮೈಜೇಷನ್ ಮಾಡಿ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ವೆಬ್‌ಸೈಟ್ ಡಿಸೈನ್ ಈಗ ದುಬಾರಿಯಲ್ಲ. ಹಾಗಂತ, ತುಂಬಾ ಅಗ್ಗವೂ ಅಲ್ಲ. ನಾಲ್ಕೈದು ಸಾವಿರ ರೂಪಾಯಿಗೆ ರಚಿಸಿಕೊಂಡ ವೆಬ್‌ಸೈಟ್‌ನ ಹೊರಗಿನ ಅಂದಕ್ಕೆ ಮೋಸ ಹೋಗಬೇಡಿ. ವೆಬ್‌ಸೈಟ್‌ನ ಹೊರಗಿನ ಅಂದದ ಜತೆಗೆ ಒಳಗಿನ ಟೆಕ್ನಿಕಲ್ ವಿಷಯಗಳೂ ತುಂಬಾ ಮಹತ್ವದ್ದು. ಬಿಸ್ನೆಸ್ ವೆಬ್‌ಸೈಟ್ ರಚಿಸಿಕೊಳ್ಳುವ ಮುನ್ನ ಕರ್ನಾಟಕ ಬೆಸ್ಟ್ ಜತೆಗೆ ಸಮಲೋಚನೆ ಮಾಡಿಕೊಳ್ಳಲು ಹಣ ನೀಡಬೇಕಿಲ್ಲ.
ಬಿಸ್ನೆಸ್ ವಿಷಯ ಅತ್ಲಾಗಿರಲಿ. ವಿದ್ಯಾರ್ಥಿಗಳು, ಉದ್ಯೋಗಿಗಳು, ಮನೆಯಲ್ಲಿಯೇ ಕೆಲಸ ಮಾಡುವವರು ಸೇರಿದಂತೆ ಎಲ್ಲರೂ ವೆಬ್ ಪ್ರೆಸೆನ್ಸ್ ಹೊಂದಿರಬೇಕಾದದ್ದು ಅಗತ್ಯ. ಫೇಸ್‌ಬುಕ್ ಖಾತೆ, ಎಕ್ಸ್, ಲಿಂಕ್ಡ್‌ಇನ್, ಇನ್‌ಸ್ಟಾಗ್ರಾಂನಲ್ಲಿ ನಿಮ್ಮ ಖಾತೆ ಇರಲಿ. ಅಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಇರಿ. ಯಾವುದೇ ಉದ್ಯೋಗ ಪಡೆಯಲು ಅಥವಾ ಬಿಸ್ನೆಸ್ ಪಡೆಯಲು ನಿಮ್ಮ ವಿಶ್ವಾಸಾರ್ಹತೆಯನ್ನು ಈ ಸೋಷಿಯಲ್ ಮೀಡಿಯಾ ಖಾತೆಗಳು ಜಗತ್ತಿಗೆ ತಿಳಿಸುತ್ತವೆ. ಇದೇ ಸಂದರ್ಭದಲ್ಲಿ ವೈಯಕ್ತಿಕ ವೆಬ್‌ಸೈಟ್ ಕೂಡ ಮಾಡಿಕೊಳ್ಳಬಹುದು. ಉಚಿತ ಬ್ಲಾಗಿಂಗ್ ತಾಣಗಳ ಮೂಲಕವೂ ಬರೆಯುತ್ತ ಇರಬಹುದು.
ಕಂಪನಿ ಅಥವಾ ಬಿಸ್ನೆಸ್‌ಗೆ ಬ್ಲಾಗ್ ಅಥವಾ ವೆಬ್‌ಸೈಟ್ ಅತ್ಯಂತ ಅಗತ್ಯ. ಇದರೊಂದಿಗೆ ಈಗ ಸೋಷಿಯಲ್ ಮೀಡಿಯಾ ಖಾತೆಗಳು ಮತ್ತು ಪ್ರತಿನಿತ್ಯ ಸೋಷಿಯಲ್ ಮೀಡಿಯಾ ಚಟುವಟಿಕೆಗಳು ಅತ್ಯಂತ ಅಗತ್ಯ. - ಸೋಷಿಯಲ್ ಮೀಡಿಯಾ
ಈಗ ಪ್ರತಿಯೊಂದು ಕಂಪನಿಗಳು, ಬಿಸ್ನೆಸ್‌ಗಳು ಕೇವಲ ಒಂದು ವೆಬ್‌ಸೈಟ್‌ಗೆ ಸೀಮಿತರಾಗಿಲ್ಲ. ಸೋಷಿಯಲ್ ಮೀಡಿಯಾಗಳು ಕೂಡ ಇಂದಿನ ಅವಶ್ಯಕತೆ. ವೈಯಕ್ತಿಕವಾಗಿ ಬಹುತೇಕ ಎಲ್ಲರಲ್ಲಿಯೂ ಫೇಸ್‌ಬುಕ್, ಲಿಂಕ್ಡ್‌ಇನ್, ಇನ್‌ಸ್ಟಾಗ್ರಾಂ.. ಇತ್ಯಾದಿ ಖಾತೆಗಳು ಇರುತ್ತದೆ. ಬಿಸ್ನೆಸ್‌ಗಳೂ ಇಂತಹ ಖಾತೆಗಳನ್ನು ರಚಿಸಬಹುದು. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಇತ್ಯಾದಿಗಳಲ್ಲಿ ಬಿಸ್ನೆಸ್ ಖಾತೆಗಳೂ ಇರುವುದು ನಿಮಗೆ ಗೊತ್ತಿರಬಹುದು. ಫೇಸ್‌ಬುಕ್‌ನಲ್ಲಿ ಪೇಜ್ ಮಾಡಿಕೊಳ್ಳಬಹುದು. ಇಷ್ಟು ಮಾತ್ರವಲ್ಲದೆ ಫೇಸ್‌ಬುಕ್‌ನಲ್ಲಿ ಬಿಸ್ನೆಸ್‌ಗಳಿಗಾಗಿ ಪ್ರೊಫೆಷನಲ್ ಸೇವೆಗಳೂ ಇವೆ. ಇತರೆ ಸೋಷಿಯಲ್ ಮೀಡಿಯಾಗಳಲ್ಲಿಯೂ ಇವೆ. ಡೆವಲಪರ್‌ಗಳಿಗೆ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮಾಡುವವರಿಗೆ ಇಂತಹ ಸೋಷಿಯಲ್ ಮೀಡಿಯಾಗಳು ಅನೇಕ ಆಯ್ಕೆಗಳನ್ನು ನೀಡುತ್ತವೆ. ಇವನ್ನು ಬಳಸಿದರೆ ನಿಮ್ಮ ಬಿಸ್ನೆಸ್‌ನ ವೆಬ್ ಪ್ರೆಸೆನ್ಸ್ ಇನ್ನೊಂದು ಲೆವೆಲ್‌ಗೆ ಹೋಗಬಹುದು. - ಮೊಬೈಲ್ ಅಪ್ಲಿಕೇಷನ್
ಈಗ ನಿಮ್ಮ ಮೊಬೈಲ್‌ನಲ್ಲಿ ಹತ್ತು ಹಲವು ಆಪ್‌ಗಳು ಇವೆ. ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಆಪ್‌ಗಳ ಮೂಲಕವೇ ನೀವು ಆನ್‌ಲೈನ್ ಖರೀದಿ ಮಾಡುತ್ತಿರಬಹುದು. ನಿಮ್ಮ ಬಿಸ್ನೆಸ್‌ಗೂ ಇದೇ ರೀತಿಯ ಮೊಬೈಲ್ ಆಪ್ ಮಾಡಿಕೊಳ್ಳಬಹುದು.
ಒಟ್ಟಾರೆ ಹೇಳುವುದಾದರೆ ಈಗ ಎಲ್ಲರಿಗೂ ಆನ್‌ಲೈನ ಪ್ರಸೆನ್ಸ್ ಅಥವಾ ಆನ್‌ಲೈನ್ ಅಸ್ತಿತ್ವ ಅತ್ಯಂತ ಅಗತ್ಯ. ನಿಮ್ಮ ವೆಬ್ ಪ್ರೆಸೆನ್ಸ್ ಅನ್ನು ಉಚಿತವಾಗಿಯೂ ಮಾಡಬಹುದು, ವೃತ್ತಿಪರರ ನೆರವನ್ನೂ ಪಡೆದುಕೊಳ್ಳಬಹುದು. ಈಗ ಕಂಪನಿಗಳು ಆನ್‌ಲೈನ್ ಪ್ರೆಸೆನ್ಸ್‌ಗಾಗಿ ಡಿಜಿಟಲ್ ಮಾರ್ಕೆಟಿಂಗ್‌ಗಾಗಿ ಪ್ರತಿತಿಂಗಳು ಲಕ್ಷಾಂತರ ರೂಪಾಯಿ ವಿನಿಯೋಗಿಸುತ್ತವೆ. ಸಣ್ಣಪುಟ್ಟ ಬಿಸ್ನೆಸ್‌ಗಳೂ ಪ್ರತಿತಿಂಗಳು ಕೆಲವು ಸಾವಿರ ರೂಪಾಯಿಯನ್ನು ಆನ್‌ಲೈನ್ ಮಾರ್ಕೆಟಿಂಗ್‌ಗೆ ವಿನಿಯೋಗಿಸಲು ಹಿಂಜರಿಯುವುದಿಲ್ಲ.












Got a Questions?
Find us on Socials or Contact Us and we’ll get back to you as soon as possible.