ksou mysore 2025-26 admission: ಮೈಸೂರಿನ ಮುಕ್ತಗಂಗೋತ್ರಿಯಲ್ಲಿ ದೂರಶಿಕ್ಷಣ (ಮುಕ್ತಶಿಕ್ಷಣ) ಪಡೆಯಲು ಬಯಸುವವರಿಗೆ ಸಿಹಿಸುದ್ದಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2025ರ ಸಾಲಿನ ದಾಖಲಾತಿ ಆರಂಭಿಸಿದೆ. ಯುಜಿಸಿ ಮಾನ್ಯತೆ ಹೊಂದಿದ ಶಿಕ್ಷಣ ಕ್ರಮಗಳಿಗೆ 2025-26ರ ಜುಲೈ ಆವೃತ್ತಿಗೆ ನೇರ ಪ್ರವೇಶಾತಿಯನ್ನು ಒಳಗೊಂಡಂತೆ ಪ್ರಥಮ ವರ್ಷದ ಒಡಿಎಲ್ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು NAAC A+ ಮಾನ್ಯತೆ ಪಡೆದಿದೆ. ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಏಕೈಕ ಸಾರ್ವಜನಿಕ ವಿಶ್ವವಿದ್ಯಾಲಯವಾಗಿದ್ದು, ಉನ್ನತ ಶಿಕ್ಷಣ ಕಾರ್ಯಕ್ರಮವನ್ನು ದೂರ ಶಿಕ್ಷಣ (ಒಡಿಎಲ್) ಪದ್ಧತಿಯಲ್ಲಿ ನೀಡುತ್ತಿದೆ.
ಸ್ನಾತಕ (ಯುಜಿ) ಕೋರ್ಸ್‌ಗಳ ವಿವರ
- ಬಿಎ
- ಬಿಕಾಂ
- ಬಿಬಿಎ
- ಬಿಎಸ್‌ಡಬ್ಲ್ಯು
- ಬಿಎಸ್ಸಿ- ಜನರಲ್ ಸಂಯೋಜನೆ (ಪಿಸಿಎಂ * ಪಿಎಂಸಿಎಸ್ * ಬಿಸಿಬಿಝಡ್)
- ಸಿಬಿಝಡ್
- ಬಿಸಿಬಿಎಂಐ
- ಬಿಸಿಎಂಐಎಫ್‌ಎಸ್
- ಬಿಸಿಎಂಐಇಎಸ್
- ಬಿಸಿಬಿಬಿಇಎಸ್
- ಸಿಬಿಇಎಸ್
- ಸಿಎಂಐಇಎಸ್
- ಪಿ- ಫಿಸಿಕ್ಸ್
- ಸಿ ಕೆಮಿಸ್ಟ್ರಿ
- ಎಂ ಮ್ಯಾಥಮೆಟಿಕ್ಸ್)
- ಸಿಎಸ್- ಕಂಪ್ಯೂಟರ್ ಸೈನ್ಸ್,
- ಬಿ- ಬಾಟನಿ
- ಎಂಐ- ಮೈಕ್ರೊಬಯೋಲಜಿ
- ಬಿಸಿ- ಬಯೋ ಕೆಮಿಸ್ಟ್ರಿ
- ಝಡ್- ಝೊಹೊಲಾಜಿ
- ಇಎಸ್- ಎನ್‌ವಯರ್ನ್‌ಮೆಂಟಲ್ ಸೈನ್ಸ್
- ಎಫ್‌ಎಸ್- ಫುಡ್ ಸೈನ್ಸ್ ಆಂಡ್ ನ್ಯೂಟ್ರಿಷಿಯನ್
ಸ್ನಾತಕೋತ್ತರ ಕೋರ್ಸ್‌ಗಳ ವಿವರ
- ಎಂಎ ಪದವಿ: ಕನ್ನಡ, ಇಂಗ್ಲಿಷ್, ಸಂಸ್ಕೃತ, ಉರ್ದು, ಹಿಂದಿ, ತೆಲುಗು, ಶಿಕ್ಷಣ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ.
- ಎಂಎಸ್‌ಡಬ್ಲ್ಯು
- ಎಂಬಿಎ- ಆನ್‌ಲೈನ್ ಪ್ರವೇಶ ಪರೀಕ್ಷೆ ಮೂಲಕ (ಸ್ಪೆಷಲೈಜೇಷನ್: ಫೈನಾನ್ಸ್, ಮಾರ್ಕೆಟಿಂಗ್, ಎಚ್‌ಆರ್, ಆಪರೇಷನ್ಸ್, ಟೂರಿಸಂ, ಕಾರ್ಪೊರೇಟ್‌ಲಾ, ಇನ್‌ಫಾರ್ಮೆಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತು ಆರೋಗ್ಯ ರಕ್ಷಣೆ ನಿರ್ವಹಣೆ.
- ಎಂಸಿಎ
- ಎಂ.ಲಿಬ್.ಐಎಸ್‌ಸಿ
- ಎಂಎಸ್‌ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಷನ್ ಆಂಡ್ ಡಯಬೆಟಿಕ್ಸ್, ಪರಿಸರ ವಿಜ್ಞಾನ, ಭೂಗೋಳಶಾಸ್ತ್ರ, ಮೈಕ್ರೊ ಬಯಾಲಜಿ, ಮನಃಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ಫುಡ್ ಆಂಡ್ ನ್ಯೂಟ್ರಿಷನ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಅರ್ಥ್ ಸೈನ್ಸ್ ಮತ್ತು ಜೀವ ವಿಜ್ಞಾನ ವಿಷಯಗಳಲ್ಲಿ ಎಂಎಸ್ಸಿ ಪದವಿ ಪಡೆಯಬಹುದು.
ಪಿಜಿ ಸರ್ಟಿಫಿಕೇಷನ್ ಕೋರ್ಸ್‌ಗಳು (ಪದವಿ ಆಧರಿತ, ಒಂದು ವರ್ಷ)
- ಇಂಗ್ಲಿಷ್
- ಕಮ್ಯುನಿಕೇಷನ್ ಇಂಗ್ಲಿಷ್
- ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
- ಕುವೆಂಪು ಸಾಹಿತ್ಯ
- ಹಣಕಾಸು ನಿರ್ವಹಣೆ
- ಮಾನವ ಸಂಪನ್ಮೂಲ ನಿರ್ವಹಣೆ
- ಬಿಸಿನೆಸ್ ಲಾ
- ಬಿಸಿನೆಸ್ ಅಡ್ಮಿಷನ್
- ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್
- ಅಂಬೆರ್ಕರ್ ಅಧ್ಯಯನಗಳು
- ನ್ಯೂಟ್ರಿಷನ್ ಆಂಡ್ ಡಯಬೆಟಿಕ್ಸ್
- ಮಾಹಿತಿ ತಂತ್ರಜ್ಞಾನ
- ಕಂಪ್ಯೂಟರ್ ಅಪ್ಲಿಕೇಷನ್ಸ್
- ಭಾಷಾ ವಿಜ್ಞಾನ
ಡಿಪ್ಲೊಮಾ ಶಿಕ್ಷಣ ಕಾರ್ಯಕ್ರಮಗಳು (10+2 ಆಧರಿತ), ಒಂದು ವರ್ಷ
- ಕನ್ನಡ
- ಪತ್ರಿಕೋದ್ಯಮ
- ನ್ಯೂಟ್ರಿಷನ್ ಆಂಡ್ ಹೆಲ್ತ್ ಎಜುಕೇಷನ್
- ಮಾಹಿತಿ ತಂತ್ರಜ್ಞಾನ
- ಕಂಪ್ಯೂಟರ್ ಅಪ್ಲಿಕೇಷನ್ಸ್
- ಅರ್ಲಿ ಜೈಲ್ಡ್‌ವುಡ್ ಕೇರ್ ಆಂಡ್ ಎಜುಕೇಷನ್
- ಭಾಷಾಂತರ ಅಧ್ಯಯನ
ಸರ್ಟಿಫಿಕೇಷನ್ ಕೋರ್ಸ್‌ಗಳು (ಆರು ತಿಂಗಳು)
- ಪಂಚಾಯತ್ ರಾಜ್
- ನ್ಯೂಟ್ರಿಷನ್
- ಫುಡ್
- ಮಾಹಿತಿ ಸಂವಹನ ತಂತ್ರಜ್ಞಾನ
- ಭಾಷಾಂತರ ಅಧ್ಯಯನ
ಆನ್‌ಲೈನ್ ಕೋರ್ಸ್‌ಗಳು
- ಬಿಎ
- ಬಿಕಾಂ
- ಎಂಎ
- ಕನ್ನಡ
- ಹಿಂದಿ
- ಸಂಸ್ಕೃತ
- ಅರ್ಥಶಾಸ್ತ್ರ
- ಇಂಗ್ಲಿಷ್
- ಎಂಕಾಂ
- ಎಂಬಿಎ
- ಎಂಎಸ್ಸಿ
- ಮ್ಯಾಥಮೆಟಿಕ್ಸ್
ಮೇಲಿನ ಎಲ್ಲಾ ಓಡಿಎಲ್ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರ, ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ, ವಿದ್ಯಾರ್ಥಿಗಳು ಸಲ್ಲಿಸಬೇಕಿರುವ ಶೈಕ್ಷಣಿಕ ಮತ್ತು ಇತರೆ ದಾಖಲಾತಿಗಳು, ಹಾಗೂ ಶುಲ್ಕಗಳ ವಿವರಗಳು ಆಯಾ ಶಿಕ್ಷಣಕ್ರಮಗಳ ವಿವರಣಾ ಪುಸ್ತಕ (ಪ್ರಾಸ್‌ಪೆಕ್ಟಸ್) ಹಾಗೂ ಪ್ರೋಗ್ರಾಮ್ ಗೈಡ್‌ನಲ್ಲಿದ್ದು ಅವು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ ksoumysuru.ac.inನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ವಿವರಣಾ ಪುಸ್ತಕದಲ್ಲಿ ಸೂಚಿಸಿರುವ ನಿರ್ದೇಶನ ಗಳನ್ವಯ ಕರಾಮುವಿಯ ಕೇಂದ್ರ ಕಛೇರಿ, ಮೈಸೂರು ಅಥವಾ ರಾಜ್ಯಾದ್ಯಂತ ಸ್ಥಾಪಿಸಲ್ಪಟ್ಟಿರುವ ಹತ್ತಿರದ ಕರಾಮುವಿಯ ಅಧಿಕೃತ ಪ್ರಾದೇಶಿಕ ಕೇಂದ್ರ (Regional Centres ) ಗಳಲ್ಲಿ ಮಾತ್ರವೇ ಪ್ರವೇಶಾತಿ ಪಡೆಯುವುದು.
ಅಭ್ಯರ್ಥಿಯು ಇಚ್ಛೆಪಟ್ಟಲ್ಲಿ ಪ್ರವೇಶಾತಿ ಪೂರ್ವ ಸಮಾಲೋಚನೆಯನ್ನು (Pre Admission Counselling only) ಅನ್ನು ಮಾತ್ರ ನಿರ್ವಹಿಸಲು ksoumysuru ವೆಬ್‌ನಲ್ಲಿರುವ ಅಧಿಕೃತ ಕಲಿಕಾರ್ಥಿ ಸಹಾಯ ಕೇಂದ್ರಗಳಿಗೆ ವಿವಿಯು ಅವಕಾಶ ಕಲ್ಪಿಸಿರುತ್ತದೆ. ಈ ಕಲಿಕಾರ್ಥಿ ಕೇಂದ್ರಗಳಲ್ಲಿ ಪ್ರವೇಶ ಪ್ರಕ್ರಿಯೆಯನ್ನು ಮಾಡಲು ಬರುವುದಿಲ್ಲ.
ಆಯಾ ಶಿಕ್ಷಣಕ್ರಮಗಳಿಗೆ ವಿಶ್ವವಿದ್ಯಾನಿಲಯವು ಪ್ರವೇಶಾತಿ ಶುಲ್ಕವನ್ನು ನಿಗದಿಪಡಿಸಿದ್ದು, ವಿವರವನ್ನು ವಿವಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಮಾತ್ರ ಆನ್‌ಲೈನ್‌ನಲ್ಲಿ ಪಾವತಿಸಲು ಸೂಚಿಸಲಾಗಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ಯಾರಿಗೂ ಪಾವತಿಸುವಂತಿಲ್ಲ. ಆದಾಗ್ಯೂ ವಿದ್ಯಾರ್ಥಿಗಳು/ಪೋಷಕರು ಯಾವುದೇ ಹೆಚ್ಚುವರಿ ಶುಲ್ಕ ನೀಡಿದಲ್ಲಿ ವಿವಿ ನಿಲಯವು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ. ಮುಂದುವರೆದು ವಿವಿಯ ಕೇಂದ್ರ ಕಛೇರಿ, ಮೈಸೂರು ಹಾಗೂ ಅಧಿಕೃತ ಪ್ರಾದೇಶಿಕ ಕೇಂದ್ರಗಳಲ್ಲದೇ ವಿವಿ ಪರವಾಗಿ ಕಾರ್ಯ ನಿರ್ವಹಿಸಲು ಯಾವುದೇ ವ್ಯಕ್ತಿ/ಸಂಸ್ಥೆಗೆ ಅಧಿಕಾರ ನೀಡಿರುವುದಿಲ್ಲ.
ಈಗಾಗಲೇ ಪ್ರಥಮ/ದ್ವಿತೀಯ ಸಾಲಿನ ಯುಜಿ/ಪಿಜಿ ಶಿಕ್ಷಣಕ್ರಮವನ್ನು ಪೂರೈಸಿ, ನಾನಾ ಕಾರಣಗಳಿಗಾಗಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಂಡಿಲ್ಲದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ನಿಯಮಗಳನುಸಾರ ದ್ವಿತೀಯ/ತೃತೀಯ ಯುಜಿ / ಪಿಜಿ ಶಿಕ್ಷಣಗಳಿಗೆ ನೇರ ಪ್ರವೇಶಾತಿ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಕೆ ದಿನಾಂಕ
ಪ್ರವೇಶಾತಿಯು ದಿನಾಂಕ: 01.07.2025 ರಿಂದ ಆನ್‌ಲೈನ್ ಮೂಲಕ ಪ್ರಾರಂಭವಾಗಲಿದ್ದು, ಪ್ರವೇಶಾತಿಯ ಅಂತಿಮ ದಿನಾಂಕವನ್ನು ಯುಜಿಸಿ ಪ್ರಕಟಿಸಿದ ನಂತರ ತಿಳಿಸಲಾಗುವುದು.
ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಾಯ ಕೇಂದ್ರಗಳ ವಿವರ ಮತ್ತು ವಿಳಾಸ, ದೂರವಾಣಿ ಸಂಖ್ಯೆಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ ನಲ್ಲಿ ಲಭ್ಯವಿರುತ್ತದೆ.
ವೆಬ್ ವಿಳಾಸ ಮತ್ತು ಸಹಾಯವಾಣಿ
ಹೆಚ್ಚಿನ ವಿವರಗಳಿಗಾಗಿ, ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ ksoumysuru ಅನ್ನು ಅಥವಾ ಸಹಾಯವಾಣಿ ಸಂಖ್ಯೆ: 8690544544, ಅಥವಾ ಇ.ಮೇಲ್ techsupport @ksouportal.com ಅಥವಾ ಕೇಂದ್ರ ಕಚೇರಿ ಮೈಸೂರು : 0821-2500981, 0821-2519941/43/48/52 Extn: 592/590/351/2/3/5/6 ಅಥವಾ ಆಯಾ ಪ್ರಾದೇಶಿಕ ಕೇಂದ್ರಗಳನ್ನು ಸಂಪರ್ಕಿಸುವುದು / ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಪ್ರವೇಶಾತಿ ಪೂರ್ವ ಸಮಾಲೋಚನೆಗೆ ಮಾತ್ರ ಸಂಪರ್ಕಿಸುವುದು.
ಸಿದ್ದಪಾಠಗಳ ಸಾಫ್ಟ್ ಪ್ರತಿ / ಆಂತರಿಕ ನಿಬಂಧನೆ / ಇತರೆ ಶೈಕ್ಷಣಿಕ ಸೇವೆಗಳಿಗಾಗಿ ವಿವಿ ನಿಲಯವು ಹೊಸ ಆಪ್ (KSOU Digital Academic Platform App – LMS) ಅನ್ನು ಸಿದ್ದಪಡಿಸಿದ್ದು, ಅದನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿ ಕೊಂಡು, ತಮ್ಮ ನೊಂದಣಿ ಸಂಖ್ಯೆ / ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ರಿಜಿಸ್ಟರ್ ಮಾಡಿಕೊಂಡು ಆ ಆಪ್‌ನಲ್ಲಿ ಮಾಹಿತಿ ಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಸಹಾಯವಾಣಿ ಮೊಬೈಲ್ ಸಂಖ್ಯೆ: 9873037405/6360296451 ಅಥವಾ ಇ.ಮೇಲ್ ksouacademicplatform@gmail.com ಅನ್ನು ಸಂಪರ್ಕಿಸುವುದು.
ಪಜಾ/ಪಪ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ಶುಲ್ಕ ವಿನಾಯಿತಿ ಯೋಜನೆಯಡಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶಾತಿಯು ವಿವಿಯ ವಿದ್ಯಾರ್ಥಿ ವೇತನ ಘಟಕವು ವಿಧಿಸುವ ಷರತ್ತಿಗೊಳಪಟ್ಟಿರುತ್ತದೆ.
ಮೈಸೂರು ಮುಕ್ತ ವಿವಿಯ ಅಡ್ಮಿಷನ್ ಮಾಹಿತಿ ಪಿಡಿಎಫ್ ಇಲ್ಲಿದೆ
ವಿವಿಧ ಕೋರ್ಸ್‌ಗಳ ಶುಲ್ಕ ಮಾಹಿತಿ ಪಿಡಿಎಫ್ ಇಲ್ಲಿದೆ.


















Got a Questions?
Find us on Socials or Contact Us and we’ll get back to you as soon as possible.