ತಂಪು ಪ್ರದೇಶದಲ್ಲಿರುವ ಸರೋವರಗಳು ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತವೆ. ಈ ರೀತಿಯಾದಾಗ ಅದರೊಳಗೆ ವಾಸಿಸುವ ಮೀನು ಮತ್ತು ಇತರ ಜಲಚರ ಜೀವಿಗಳು ಏನಾಗುತ್ತವೆ?

shallow focus photo of pink and brown jellyfish
Photo by Pawel Kalisinski on Pexels.com

ವಾತಾವರಣದಲ್ಲಿ ಉಷ್ಣತೆ ಅತ್ಯಂತ ಕಡಿಮೆಯಾದಾಗ ಸರೋವರಗಳು ಹೆಪ್ಪುಗಟ್ಟುತ್ತವೆ. ಆದರೆ ಅದೃಷ್ಟವಶಾತ್‌ ಅದು ಮೇಲ್ಮೆಯಲ್ಲಿ ಮಾತ್ರ ಹೆಪ್ಪುಗಟ್ಟುತ್ತದೆ. ಇದು ಮೀನು ಮತ್ತು ಇತರ ಜಲಚರ ಜೀವಿಗಳಿಗೆ ವರವಾಗಿ ಪರಿಣಮಿಸಿದೆ. ಮೇಲ್ಮೆಯಿಂದ ಕೆಳಗಿರುವ ನೀರು ಹೆಪ್ಪುಗಟ್ಟದೆ ಹಾಗೆಯೇ ಇರುತ್ತದೆ. ಇದು ನೀರಿನ ವಿಚಿತ್ರ ಗುಣವೊಂದರಿಂದ ಉಂಟಾಗುತ್ತದೆ. ಅಂದರೆ, ಇತರ ವಸ್ತುಗಳಂತೆ ನೀರು ಕೂಡಾ ಕುಗ್ಗುತ್ತದೆ ಮತ್ತು ಅದು ತಣ್ಣಗಾದಂತೆ ಅದರ ಸಾಂದ್ರತೆ ಹೆಚ್ಚುತ್ತದೆ. ಆದರೆ ಇದು ಒಮ್ಮೆ 4 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಾದ ನಂತರ ಅದರ ಗುಣ ಬದಲಾಗುತ್ತದೆ. 4 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿರುವ ನೀರು ಹಗುರವಾಗಲು ಆರಂಭವಾಗುತ್ತದೆ. ಶೂನ್ಯ ಡಿಗ್ರಿ ಸೆಲ್ಸಿಯಸ್‌ನಲ್ಲಿ ನೀರು ಮಂಜುಗಡ್ಡೆಯಾಗುತ್ತದೆ. ಮಂಜುಗಡ್ಡೆ ನೀರಿಗಿಂತ ಹಗುರವಾಗಿರುವ ಕಾರಣ ಅದು ನೀರಿನಲ್ಲಿ ತೇಲುತ್ತದೆ. ಮಂಜುಗಡ್ಡೆಯ ಪದರವು ಕೆಳಗಿನ ನೀರು ಮತ್ತು ಮೇಲಿನ ಗಾಳಿಯನ್ನು ಪ್ರತ್ಯೆಕಿಸುತ್ತದೆ. ಇದರಿಂದಾಗಿ ಸರೋವರದ ಮೇಲ್ಮೆಗಿಂತ ಕೆಳಗಿರುವ ನೀರು ಬೆಚ್ಚಗೆ ಮತ್ತು ದ್ರವ ರೂಪದಲ್ಲಿರುತ್ತದೆ. (ಸಂಗ್ರಹ)

error: Content is protected !!