ರುಚಿಕರವಾದ ಪಾಸ್ತಾ ಸೂಪ್ ಮಾಡುವುದು ಹೇಗೆ?

Image Copy right: https://5.imimg.com/data5/GW/XE/MY-34188929/soap-noodle-250x250.jpg

ಈಗಿನ ಕಾಲದವರು ಭಾರತದ ರೆಸಿಪಿಗಳಿಗಿಂತ ಹೆಚ್ಚಾಗಿ ವಿದೇಶಿ ಅಡುಗೆಗಳನ್ನು ತುಂಬಾ ಇಷ್ಟಪಡುತ್ತಾರೆ. ಪಾಸ್ತಾ, ನೂಡಲ್ಸ್ ಮುಂತಾದ ವಿದೇಶಿ ಆಹಾರಗಳನ್ನು ದೊಡ್ಡವರಿಗೆ ಮಾತ್ರವಲ್ಲ ಚಿಕ್ಕ ಮಕ್ಕಳು ಕೂಡ ಇಷ್ಟಪಟ್ಟು ತಿನ್ನತ್ತಾರೆ. ಇವುಗಳು ತುಂಬಾ ಬೇಗ ರೆಡಿಯಾಗುವಂತಹ ರುಚಿಕರವಾದ ಆಹಾರಗಳು.
ಪಾಸ್ತಾದಿಂದ ಹಲವು ಬಗೆಯ ಅಡುಗೆಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಬಹಳ ರುಚಿಕರವಾದ ರೆಸಿಪಿ ಎಂದರೆ ಪಾಸ್ತಾ ಸೂಪ್. ಇದನ್ನು ಒಮ್ಮೆ ಮಾಡಿ ಸವಿದು ನೋಡಿ.

ಪಾಸ್ತಾ ಸೂಪ್ ಮಾಡಲು ಬೇಕಾಗುವ ಸಾಮಾಗ್ರಿಗಳು 

ಪಾಸ್ತಾ ½ ಕಪ್, ಪಾಸ್ತಾ ಸಾಸ್ 1 ಕಪ್, ಟೊಮೆಟೊ ಸಾಸ್ 1 ಕಪ್, ಚೆನ್ನಾ( ದೊಡ್ಡ ಕಡಲೆ) 3 ಚಮಚ, ತರಕಾರಿ(ಕ್ಯಾರೆಟ್, ಬೀನ್ಸ್) ¼ ಕಪ್, ಸ್ವಲ್ಪ ದೊಡ್ಡ ಪತ್ರೆ, ಜೋಳದ ಹಿಟ್ಟು 1 ಚಮಚ, ಚಿಕ್ಕದಾದ ಈರುಳ್ಳಿ 1, ಬೆಳ್ಳುಳ್ಳಿ ಎಸಳು 4, ಎಣ್ಣೆ 2 ಚಮಚ, ನೀರು ¼ ಕಪ್, ರುಚಿಗೆ ತಕಷ್ಟು ಉಪ್ಪು.

ಪಾಸ್ತಾ ಸೂಪ್ ತಯಾರಿಸುವ ವಿಧಾನ 

ಮೊದಲಿಗೆ ಕಡಲೆಯನ್ನು 4-5 ಗಂಟೆಗಳ ಕಾಲ ನೆನೆಸಿಟ್ಟು, ನಂತರ ಅದನ್ನು ತರಕಾರಿಗಳ ಜೊತೆಗೆ ಬೇಯಿಸಬೇಕು. ಆಮೇಲೆ ಅದನ್ನು ಒಂದು ಪಾತ್ರೆಯಲ್ಲಿ ತೆಗೆದಿಡಿ. ಆಮೇಲೆ ಪಾಸ್ತಾವನ್ನು ಬೇಯಿಸಿಕೊಳ್ಳಬೇಕು. ಅದಕ್ಕಾಗಿ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಅದು ಕುದಿದ ನಂತರ ಅದಕ್ಕೆ ಪಾಸ್ತಾವನ್ನು ಹಾಕಬೇಕು. ಪಾಸ್ತಾ ಬೆಂದ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.

ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಬೇಯಿಸಿಟ್ಟುಕೊಂಡ ತರಕಾರಿ ಹಾಗೂ ಕಡಲೆಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಪಾಸ್ತಾ ಸಾಸ್, ಟೊಮೆಟೊ ಸಾಸ್ ಹಾಗೂ ದೊಡ್ಡ ಪತ್ರೆ ಹಾಕಿ ಕಡಿಮೆ ಉರಿಯಲ್ಲಿ ಸೌಟ್ ನಿಂದ ಆಡಿಸುತ್ತಾ 2 ನಿಮಿಷ ಬೇಯಿಸಿ. ಆಮೇಲೆ ಅದಕ್ಕೆ ನೀರು ಹಾಗೂ ಬೇಯಿಸಿದ ಪಾಸ್ತಾ ಹಾಕಿ, ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ, ನಂತರ ಅದಕ್ಕೆ ಜೋಳದ ಹಿಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ 3-4 ನಿಮಿಷ ಬೇಯಿಸಿದರೆ ಪಾಸ್ತಾ ಸೂಪ್ ರೆಡಿ.

ಇದನ್ನೂ ಓದಿ  ಬೆಸ್ಟ್ ರೆಸಿಪಿ: ಗರಿಗರಿಯಾಗಿ ಮಾಡಿ ಅವಲಕ್ಕಿ ಚೂಡಾ