SEO GEO AEO: ಎಸ್‌ಇಒ ಗೊತ್ತು, ಜಿಇಒ, ಎಇಒ ಬಗ್ಗೆ ಗೊತ್ತೆ? ಎಐ ಸರ್ಚ್‌ ಆಪ್ಟಿಮೈಜೇಷನ್‌ ಇಂದಿನ ಅವಶ್ಯಕತೆ

SEO GEO AEO: ಇಲ್ಲಿಯವರೆಗೆ ಎಸ್‌ಇಒ ತಜ್ಞರು ಸರ್ಚ್‌ ಎಂಜಿನ್‌ ಆಪ್ಟಿಮೈಜೇಷನ್‌ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಸರ್ಚ್‌ ಎಂಜಿನ್‌ನಲ್ಲಿ ಈಗ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಬಳಕೆ ಹೆಚ್ಚುತ್ತಿದೆ. ಇಂತಹ ಕಾಲದಲ್ಲಿ ಎಸ್‌ಇಒ ಜತೆಗೆ ಎಐಒ ಮತ್ತು ಎಇಒ ಮತ್ತು ಜಿಇಒ ಎಂಬ ಹೊಸ ಟರ್ಮ್‌ಗಳು ಹುಟ್ಟಿಕೊಂಡಿವೆ. ಇದು ಇಂದಿನ “ಎಸ್‌ಇಒ”ದ ಅಗತ್ಯವೂ ಹೌದು. ಕಂಟೆಂಟ್‌ನ ಸರ್ಚ್‌ ಎಂಜಿನ್‌ ಆಪ್ಟಿಮೈಜೇಷನ್‌ ಮಾಡಿದರೆ ಸಾಲದು. ಇದರ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಪ್ಟಿಮೈಜೇಷನ್‌, ಜನರೇಟಿವ್‌ ಎಂಜಿನ್‌ ಆಪ್ಟಿಮೈಜೇಷನ್‌ ಕೂಡ ಮಾಡಬೇಕಾದ ಅಗತ್ಯವಿರುತ್ತದೆ ಎಂದು ಎಸ್‌ಇಒ ತಜ್ಞರು ಚರ್ಚಿಸುತ್ತಿದ್ದಾರೆ.

ಎಸ್‌ಇಒ ಎಂದರೇನು?

ವೆಬ್‌ಪುಟಗಳು ಹಣ ನೀಡದೆ ಸರ್ಚ್‌ ಫಲಿತಾಂಶದ ಮೂಲಕ ಬಳಕೆದಾರರನ್ನು ಪಡೆಯಲು ಎಸ್‌ಇಒ ಅನಾದಿಕಾಲದಿಂದ ನೆರವಾಗುತ್ತಿದೆ. ಬಳಕೆದಾರರು ಏನು ಹುಡುಕುವರೋ ಅದಕ್ಕೆ ತಕ್ಕಂತೆ ಕಂಟೆಂಟ್‌ ಮತ್ತು ಎಸ್‌ಇಒ ಇದ್ದರೆ ಆ ವೆಬ್‌ಪುಟ ಕಾಣಿಸುತ್ತದೆ. ಇದಕ್ಕಾಗಿ ಕೀವರ್ಡ್‌ ರಿಸರ್ಚ್‌, ಆನ್‌ ಪೇಜ್‌ ಆಪ್ಟಿಮೈಜೇಷನ್‌, ಲಿಂಕ್‌ ಬಿಲ್ಡಿಂಗ್‌, ಪೇಜ್‌ ಸ್ಪೀಡ್‌ ಹೆಚ್ಚಿಸುವುದು ಇತ್ಯಾದಿ ಕಸರತ್ತು ಮಾಡಬೇಕಾಗುತ್ತದೆ. ಎಸ್‌ಇಒ ಬಗ್ಗೆ ವಿಸ್ತೃತವಾಗಿ ಈಗಾಗಲೇ ಕರ್ನಾಟಕ ಬೆಸ್ಟ್‌ನಲ್ಲಿ ಹಲವು ಲೇಖನಗಳನ್ನು ಬರೆಯಲಾಗಿದೆ.

ಎಐಒ ಎಂದರೇನು?

ಈ ಎಐ ಕಾಲದಲ್ಲಿ ಎಐಒ ಎಂಬ ಹೊಸ ಎಸ್‌ಇಒ ಹುಟ್ಟಿಕೊಂಡಿದೆ. ಎಐಒ ಎಂದರೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಪ್ಟಿಮೈಜೇಷನ್‌. ಎಐ ಚಾಟ್‌ಬಾಟ್‌ಗಳು, ಎಐ ವಿವರಣೆಗಳು, ಎಐ ವಾಯ್ಸ್‌ ಅಸಿಸ್ಟೆಂಟ್‌ಗಳಿಗೆ ಸುಲಭವಾಗಿ ಸಿಗುವಂತೆ ನಮ್ಮ ಕಂಟೆಂಟ್‌ ಅನ್ನು ಆಪ್ಟಿಮೈಜ್‌ ಮಾಡುವ ಪ್ರಕ್ರಿಯೆಗೆ ಬೇಡಿಕೆಯಿದೆ.

ಎಇಒ ಎಂದರೇನು?

ಆನ್ಸರ್‌ ಎಂಜಿನ್‌ ಆಪ್ಟಿಮೈಜೇಷನ್‌

ಜಿಇಒ ಎಂದರೇನು?

ಜನರೇಟಿವ್‌ ಎಂಜಿನ್‌ ಆಪ್ಟಿಮೈಜೇಷನ್‌

ಮೊದಲೆಲ್ಲ ಸರ್ಚ್‌ ಎಂಜಿನ್‌ಗೆ ನಮ್ಮ ಕಂಟೆಂಟ್‌ ದೊರಕುವಂತೆ ಮಾಡಬೇಖಿತ್ತು. ಈಗ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗೆ, ಜನರೇಟಿವ್‌ ಎಂಜಿನ್‌ಗೆ ಸಿಗುವಂತೆ ನಮ್ಮ ಕಂಟೆಂಟ್‌ ರಚಿಸಬೇಕು. ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ಎಂಬಂತೆ ಎಐ ಮಾಯಾ ಬಲೆಯಲ್ಲಿ ಡಿಜಿಟಲ್‌ ಜಗತ್ತು ಸಿಲುಕಿಕೊಳ್ಳುತ್ತಿದೆ.

ಡಿಜಿಟಲ್‌ ಬರಹಗಾರರು ಗಮನಿಸಬೇಕಾದ ಅಂಶಗಳು

  • ಈಗಾಗಲೇ ಹಿಂದಿನ ಲೇಖನಗಳಲ್ಲಿ ಹೇಳಿದಂತೆ ಕೀವರ್ಡ್‌ಗಳು ಎಂದರೆ ತೋಚಿದಂತೆ ಹಾಕುವ ಇಂಗ್ಲಿಷ್‌ ಅಥವಾ ಕನ್ನಡ ಪದಗಳು ಅಲ್ಲ. ಅತ್ಯುತ್ತಮ ಮೌಲ್ಯಯುತವಾದ ಸೀಮಿತ ಕೀವರ್ಡ್‌ಗಳನ್ನು ನಿಮ್ಮ ಕಂಟೆಂಟ್‌ನಲ್ಲಿ ಬಳಸಬೇಕು. ಇದರೊಂದಿಗೆ ತಜ್ಞತೆಯಿಂದ ಕೂಡಿದ ಉತ್ತರಗಳನ್ನು ನಿಮ್ಮ ಕಂಟೆಂಟ್‌ ನೀಡಬೇಕು. ಇಂತಹ ಕಂಟೆಂಟ್‌ಗಳನ್ನು ಲ್ಯಾಂಗ್ವೇಜ್‌ ಮಾಡೆಲ್‌ಗಳು ಇಷ್ಟಪಡುತ್ತವೆ.
  • ವೆಬ್‌ಸೈಟ್‌ನ ಟೆಕ್ನಿಕಲ್‌ ವಿಷಯವೂ ಅತ್ಯಂತ ಅಗತ್ಯ. ಸ್ಕೀಮಾ ಆರ್ಗ್‌, ಎಫ್‌ಎಕ್ಯೂಗಳು, ಹೌಟು ಮಾರ್ಕಪ್‌ಗಳು ಎಐ ಸರ್ಚ್‌ ಪುಟಗಳಲ್ಲಿ ಸ್ನಿಪ್ಪೆಟ್‌ಗಳನ್ನು ರಚಿಸಲು ನೆರವಾಗುತ್ತವೆ.
  • ನಿನ್ನೆ ಬರೆದ ಎಸ್‌ಇಒ ಲೇಖನದಲ್ಲಿ ಲೇಖಕರ ಅಥಾರಿಟಿ ತುಂಬಾ ಮುಖ್ಯ ಎಂದು ಹೇಳಿದ್ದೆ. ಎಐಗಳು ತಾವು ನೀಡುವ ಕಂಟೆಂಟ್‌ ಹೆಚ್ಚು ವಿಶ್ವಾಸಾರ್ಹವಾಗಿರುವಂತೆ ನೋಡಿಕೊಳ್ಳಲು ಬಯಸುತ್ತವೆ. ಇಂತಹ ಸಮಯದಲ್ಲಿ ಅಥಾರಿಟಿ ಇರುವ ಬರಹಗಾರರ ಕಂಟೆಂಟ್‌ಗಳನ್ನು ಗಮನಿಸುತ್ತವೆ. ಇದರೊಂದಿಗೆ ನಿಮ್ಮ ಎಸ್‌ಇಒ ಅಥಾರಿಟಿ ಕೂಡ ಎಐಗೆ ಮುಖ್ಯವಾಗುತ್ತದೆ.
  • ಸ್ಪೀಡ್‌ ಮತ್ತು ಸ್ಕೇಲ್‌ ಕೂಡ ಎಐ ಆಪ್ಟಿಮೈಜೇಷನ್‌ಗೆ ಮುಖ್ಯವಾಗುತ್ತದೆ. ಎಐಒ ಟೂಲ್‌ಗಳು ಅತ್ಯಂತ ವೇಗವಾಗಿ ಮಾಹಿತಿ ಹೆಕ್ಕಿ ನೀಡುತ್ತವೆ. ಇಂತಹ ಸಮಯದಲ್ಲಿ ವೆಬ್‌ ಪುಟಗಳು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದರೆ ಅಂತಹ ವೆಬ್‌ಪುಟಗಳಿಗೆ ಪೆನಾಲ್ಟಿ ನೀಡಲು ಅವು ಹಿಂಜರಿಯುವುದಿಲ್ಲ. ಎಐ ಎಂದರೆ ಭ್ರಮೆ, ತಪ್ಪು ತಪ್ಪು ಉತ್ತರ ನೀಡುತ್ತವೆ ಎಂಬ ಆರೋಪಕ್ಕೆ ಈಡಾಗಲೂ ಅವು ರೆಡಿ ಇಲ್ಲ. ಹೀಗಾಗಿ, ಸಮರ್ಪಕ ಮಾಹಿತಿ ಮೂಲಗಳನ್ನೇ ಅವು ಹುಡುಕುತ್ತವೆ.

ಇದನ್ನೂ ಓದಿ: ಎಸ್‌ಇಒ ಮಾರ್ಗದರ್ಶಿ 2025: ಕೀವರ್ಡ್‌ಗಳು ಎಂದರೇನು? ಎಸ್‌ಇಒ-ಸ್ನೇಹಿ ಡಿಜಿಟಲ್‌ ನ್ಯೂಸ್‌ ಅಥವಾ ಕಂಟೆಂಟ್‌ ಬರೆಯಲು ಕಲಿಯಿರಿ

ಎಐ ಕಾಲದಲ್ಲಿ ಡಿಜಿಟಲ್‌ ಮಾಧ್ಯಮಗಳು ಹಳೆಯ ಎಸ್‌ಇಒ ಕಸರತ್ತನ್ನೇ ಈಗ ಮುಂದುವರೆಸುವುದರಲ್ಲಿ ಅರ್ಥವಿಲ್ಲ. ಹೊಸದಾಗಿ ಏನು ಅಪ್‌ಡೇಟ್‌ ಆಗಿದೆ ಎಂದು ತಿಳಿದುಕೊಂಡು ನಿಯಮಿತವಾಗಿ ಕಾರ್ಯತಂತ್ರ ಬದಲಾಯಿಸಿಕೊಂಡು ಆನ್‌ಲೈನ್‌ ಜಗತ್ತಿನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕು.

English Summary: SEO is evolving with AI. Learn about AIO (AI Optimization), AEO (Answer Engine Optimization), and GEO (Generative Engine Optimization) in Kannada. A complete guide for content creators and publishers.

error: Content is protected !!