ಬುರುಗು ಅಥವಾ ನೊರೆ ಎಂಬುದು ಸಾಬೂನಿನ ಸಣ್ಣ ಸಣ್ಣ ಗುಳ್ಳೆಗಳ ಸಂಗ್ರಹವಾಗಿದ್ದು, ಇದು ಗಾಳಿಯಲ್ಲಿ ಸಿಲುಕಿ ರೂಪುಗೊಳ್ಳುತ್ತದೆ. ಸಾಬೂನಿನ ದ್ರಾವಣದ ಮೇಲೆ ಗಾಳಿಯು ಸ್ಪರ್ಶಿಸದಿದ್ದರೆ ನೊರೆ ರೂಪುಗೊಳ್ಳುವುದಿಲ್ಲ. ಕೂದಲಿನಲ್ಲಿ ಸಾಕಷ್ಟು ಗಾಳಿ ಸಿಲುಕಿಕೊಂಡಿರುತ್ತದೆ. ಇದರಲ್ಲಿ ಶ್ಯಾಂಪುವನ್ನು ಉಜ್ಜಿದಾಗ ಆ ಗಾಳಿಯು ಆ ದ್ರಾವಣದಲ್ಲಿ ಗುಳ್ಳೆಗಳನ್ನು ಉತ್ಪತ್ತಿ ಮಾಡುತ್ತದೆ. ಈ ಗುಳ್ಳೆಗಳ ಸಂಗ್ರಹವೇ ನೊರೆ. ಬೋಳು ತಲೆಯ ಮೇಲೆ ಶ್ಯಾಂಪು ಉಜ್ಜಿದರೆ ನೊರೆ ಉತ್ಪತ್ತಿಯಾಗುವುದಿಲ್ಲ.
ಚರ್ಮ ಕೂಡಾ ಗಾಳಿಗೆ ಸೋಕುತ್ತದೆ. ಆದರೆ ಚರ್ಮಕ್ಕೆ ಶ್ಯಾಂಪು ಉಜ್ಜಿದಾಗ ಹೆಚ್ಚಿನ ಪ್ರಮಾಣದ ಗಾಳಿ ಶ್ಯಾಂಪುವಿನೊಂದಿಗೆ ಸಿಲುಕಿಕೊಳ್ಳುವುದಿಲ್ಲ. ಶೇವಿಂಗ್ ಪ್ರಕ್ರಿಯೆಯಲ್ಲೂ ಹೀಗೆಯೇ ಆಗುತ್ತದೆ. ಗಡ್ಡದಲಿರುವ ಗಾಳಿಯು ಶೇವಿಂಗ್ ಬ್ರಷ್‌ನಲ್ಲಿರುವ ಕ್ರಿಮ್‌ನೊಂದಿಗೆ ಸಿಲುಕಿ ನೊರೆಯಾಗಿ ರೂಪುಗೊಳ್ಳುತ್ತದೆ.
ಶ್ಯಾಂಪುವನ್ನು ಕೂದಲಿಗೆ ಹಚ್ಚಿ ಉಜ್ಜಿದಾಗ ತುಂಬಾ ನೊರೆ ಬರುತ್ತದೆ. ಆದರೆ ಅದೇ ಶ್ಯಾಂಪುವನ್ನು ಚರ್ಮದ ಮೇಲೆ ಉಜ್ಜಿದಾಗ ನೊರೆ ಬರುವುದಿಲ್ಲ. ಇದಕ್ಕೆ ಕಾರಣವೇನು?


















Got a Questions?
Find us on Socials or Contact Us and we’ll get back to you as soon as possible.