ಕ್ರಾಫ್ಟ್ ಕಾರ್ನರ್: ಹಳೆ ಟೀ-ಶರ್ಟ್ ಪಿಲ್ಲೋ ಕವರ್

By | December 1, 2019

-ಶ್ರೀಲಕ್ಷ್ಮಿ ಹೊಸ್ಕೊಪ್ಪ

ಮನೆಯ ಸೋಪಾದ ಮೇಲಿರುವ, ಕಾರಿನಲ್ಲಿರುವ ಪುಟ್ಟ ಪುಟ್ಟ ದಿಂಬುಗಳಿಗೆ (ಪಿಲ್ಲೋ) ಚೆಂದದ ಹೊದಿಕೆ ಇದ್ದರೆ ಅದು ಇನ್ನಷ್ಟು ಅಂದವಾಗಿ ಕಾಣುತ್ತದೆ. ಅದಕ್ಕಾಗಿ ದುಬಾರಿ ಹಣ ಕೊಟ್ಟು ಕೊಂಡುಕೊಳ್ಳುವ ಬದಲು, ನಿಮ್ಮ ಹಳೆ ಟೀ-ಶರ್ಟ್‍ನ್ನು ಬಳಸಿ ಚೆಂದದ ಕವರ್‍ಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿ: ಹಳೆ ಟೀ-ಶರ್ಟ್, ಕತ್ತರಿ

ಮಾಡುವ ವಿಧಾನ:

  • ಮೊದಲಿಗೆ ಹಳೆಯ ಟೀ-ಶರ್ಟ್‍ನ ಮಧ್ಯಭಾಗದಲ್ಲಿ ದಿಂಬನ್ನಿಟ್ಟು ಅಳತೆ ನೋಡಿ.
  • ನಂತರ ದಿಂಬಿಗಿಂತ ದೊಡ್ಡದಾಗಿ (ನಾಲ್ಕು ಬದಿಯಲ್ಲೂ ಹೆಚ್ಚಿನ ಅಳತೆಯಲ್ಲಿ) ಟೀ-ಶರ್ಟ್‍ನ್ನು ಕತ್ತರಿಸಿ.
  • ಕತ್ತರಿಸಿ ಟೀ-ಶರ್ಟ್ ಭಾಗದ ಮೇಲೆ ದಿಂಬನ್ನು ಇಟ್ಟುಕೊಂಡು, ದಿಂಬಿನ ಅಳತೆಗೆ ಟೀ-ಶರ್ಟ್ ಭಾಗದ ನಾಲ್ಕು ಅಂಚುಗಳನ್ನು ಪಟ್ಟಿ (ಸ್ಟ್ರೈಪ್) ರೀತಿಯಲ್ಲಿ ಕತ್ತರಿಸಿ.
  • ತದನಂತರ ಮಧ್ಯದಲ್ಲಿ ದಿಂಬನ್ನಿಟ್ಟು ಟೀ-ಶರ್ಟ್‍ನ ಮೇಲಿನ ಹಾಗೂ ಕೆಳಗಿನ ಭಾಗದ ಅಂಚುಗಳನ್ನು ಒಂದನ್ನೊಂದು ಸೇರಿಸಿ ಕಟ್ಟಿ.

ಈಗ ಚೆಂದದ ಹೊದಿಕೆಯ ದಿಂಬು ತಯಾರಾಗುತ್ತದೆ. ಟೀ-ಶರ್ಟ್ ತುಂಬ ಸಿಂಪಲ್ ಆಗಿದೆ ಎನಿಸಿದರೆ ಮೊದಲೇ ಬೇರೆ ಬೇರೆ ಬಣ್ಣದ ದಾರದಲ್ಲಿ ಕಸೂತಿ ಮಾಡಿ ನಂತರ ಪಿಲ್ಲೋ ಕವರ್ ಮಾಡಿದರೂ ಚೆನ್ನಾಗಿಯೇ ಕಾಣುತ್ತದೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.