ನಿಮ್ಮ ರೆಸ್ಯೂಂನಲ್ಲೇನೋ ಪ್ರಾಬ್ಲಂ ಇದೆ!

person in white long sleeve shirt holding a clipboard with resume
Photo by cottonbro studio on Pexels.com

ಎಷ್ಟು ಕಂಪನಿಗಳಿಗೆ ರೆಸ್ಯೂಂ ಕಳುಹಿಸಿದರೂ ಮಾರುತ್ತರ ಬರುತ್ತಿಲ್ಲವೇ? ನಿಮ್ಮ ರೆಸ್ಯೂಂ ಎನ್ನುವುದು ಅಂತರಿಕ್ಷದ ಕಪ್ಪುಕುಳಿಗೆ ಬಿದ್ದಂತೆ ಮಾಯವಾಗಿ ಹೋಗುತ್ತಿರುವುದೇ? ಬಹುಶಃ ನಿಮ್ಮ ರೆಸ್ಯೂಂನಲ್ಲಿ ಪ್ರಾಬ್ಲಂ ಇದೆ ಎನ್ನುತ್ತಾರೆ ಉದ್ಯೋಗ ಕ್ಷೇತ್ರದ ತಜ್ಞರು.

ಈ ಜಗತ್ತಿನಲ್ಲಿ ಸರಳವಾಗಿರುವುದು ತುಂಬಾ ಕಷ್ಟ’ ಎಂದು ಫ್ರೆಂಚ್‌ ಕಾದಂಬರಿಗಾರ ಜಾರ್ಜ್‌ ಸ್ಯಾಂಡ್‌ ಹೇಳಿರುವ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. ರೆಸ್ಯೂಂಗೂ ಅನ್ವಯಿಸುತ್ತದೆ.
ಟೆಕಿಗಳು ಈ ವಿಷಯದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಕಾಲೇಜಿನಲ್ಲಿ ಮಾಡಿರುವ ಸಣ್ಣ ಪ್ರಾಜೆಕ್ಟ್ನ ಕುರಿತು ತುಂಬಾ ಹೇಳಲು ತುಂಬಾ ಇರುತ್ತದೆ. ರೆಸ್ಯೂಂನಲ್ಲಿ ಅದನ್ನೆಲ್ಲ ಬರೆದು ಬಿಡುವವರು ಇದ್ದಾರೆ. ಏನೂ ಬರೆಯಬಾರದೋ ಅದನ್ನೆಲ್ಲ ರೆಸ್ಯೂಂನಲ್ಲಿ ಬರೆಯುತ್ತಾರೆ. ಇದೇ ಕಾರಣಕ್ಕೆ ನಿಮ್ಮ ರೆಸ್ಯೂಂ ಕಪ್ಪುಕುಳಿಯಲ್ಲಿ ಮಾಯವಾಗಿ ಬಿಡುತ್ತದೆ. ಪ್ರತಿದಿನ ಸಾವಿರಾರು ರೆಸ್ಯೂಂಗಳು ಕಪ್ಪುಕುಳಿಯೊಳಗೆ ಬೀಳುತ್ತವೆ. ಮತ್ತೆ ಇವು ಕಾಣಲು ದೊರಕುವುದಿಲ್ಲ.
ಉದ್ಯೋಗದಾತರು ಕೆಲವು ಸೆಕೆಂಡ್‌ ಮಾತ್ರ ರೆಸ್ಯೂಂ ಮೇಲೆ ಕಣ್ಣಾಡಿಸುತ್ತಾರೆ. ಈ ಕೆಲವೇ ಸೆಕೆಂಡಿನಲ್ಲಿ ನಿಮ್ಮ ರೆಸ್ಯೂಂ ಅವರ ಗಮನ ಸೆಳೆಯಬೇಕು. ಈ ರೀತಿ ನಿಮ್ಮ ರೆಸ್ಯೂಂ ನೋಡುವವರು ಮನುಷ್ಯರಾಗಿರಬಹುದು ಅಥವಾ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಾಫ್ಟ್‌ವೇರ್‌ ಆಗಿರಬಹುದು.
‘ಸಣ್ಣ ಮತ್ತು ಸರಳ ರೆಸ್ಯೂಂ ಯಾವಾಗಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಹೇಳುತ್ತಾರೆ ಸುರೇಶ್‌ ಬೆಥವಂಡು. ಅವರು ಕಾಗ್ನಿಜೆಂಟ್‌ನ ಟ್ಯಾಲೆಂಟ್‌ ಅಕ್ವಿಸಿಷನ್‌ ವಿಭಾಗದ ಜಾಗತಿಕ ಮುಖ್ಯಸ್ಥರು. ‘ಒಂದು ಪುಟದ ರೆಸ್ಯೂಂ ಹೆಚ್ಚು ವೀಕ್ಷಣೆ ಪಡೆಯುತ್ತದೆ. ಒಂದು ಪುಟದ ರೆಸ್ಯೂಂ ಅನ್ನು ಸರಳವಾಗಿ ಹ್ಯಾಂಡಲ್‌ ಮಾಡಬಹುದು ಎಂದಲ್ಲ. ಅಭ್ಯರ್ಥಿಯು ತನ್ನೆಲ್ಲ ಸಾಧನೆಗಳನ್ನು ಒಂದೇ ಪುಟದಲ್ಲಿ ಸ್ಪಷ್ಟವಾಗಿ ನಮೂದಿಸುವ ಸಾಮರ್ಥ್ಯ‌ ಹೊಂದಿದ್ದಾನೆ ಎನ್ನುವುದನ್ನು ಉದ್ಯೋಗದಾತರು ಅರ್ಥಮಾಡಿಕೊಳ್ಳುತ್ತಾರೆ’ ಎಂದು ಅವರು ಹೇಳುತ್ತಾರೆ.
‘ನಿಮ್ಮ ರೆಸ್ಯೂಂನಲ್ಲಿ ಕೌಶಲಗಳು ಮತ್ತು ಅನುಭವಗಳನ್ನು ಬರೆಯಲು ಹೆಚ್ಚು ಆದ್ಯತೆ ನೀಡಿ ಮತ್ತು ಸಾಮಾನ್ಯ ಹೇಳಿಕೆಗಳನ್ನು ಕಡಿಮೆ ಮಾಡಿ’ ಎಂದು ಪ್ರತಿಮಾ ಅಚ್ಚಯ್ಯ ಹೇಳುತ್ತಾರೆ. ಇವರು ನೆಟ್‌ಆ್ಯಪ್‌ ಇಂಡಿಯಾ ಮತ್ತು ಎಪಿಎಸಿಯ ಸ್ಟಾಫಿಂಗ್‌ ಮತ್ತು ಪೀಪಲ್‌ ಆಪರೇಷನ್‌ ವಿಭಾಗದ ನಿರ್ದೇಶಕಿ.
ಜಾಗತಿಕವಾಗಿ ಶೇಕಡ 75ರಷ್ಟು ನೇಮಕಾತಿ ಮ್ಯಾನೇಜರ್‌ಗಳು ಅಪ್ಲಿಕೇಷನ್‌ ಟ್ರ್ಯಾಕಿಂಗ್‌ ಸಿಸ್ಟಮ್ಸ್‌ (ಎಟಿಎಸ್‌) ಅನ್ನು ಬಳಸುತ್ತಾರೆ. ಹೀಗಾಗಿ, ಶೇಕಡ 50ರಷ್ಟು ರೆಸ್ಯೂಂಗಳು ಮನುಷ್ಯರ ಕಣ್ಣಿಗೆ ಬೀಳದೆ ಕಪ್ಪುಕುಳಿಗೆ ಬೀಳುತ್ತವೆ. ಇದೇ ಕಾರಣಕ್ಕೆ ಅಭ್ಯರ್ಥಿಗಳು ಎಸ್‌ಇಒ (ಸರ್ಚ್‌ ಎಂಜಿನ್‌ ಆಪ್ಟಿಮೈಜೇಷನ್‌) ಮತ್ತು ಕೀವರ್ಡ್‌ ಬಳಕೆಯ ಕುರಿತು ಗಮನ ನೀಡಬೇಕು ಎಂದು ಟೀಮ್‌ಲೀಸ್‌ ಸವೀರ್‍ಸಸ್‌ನ ನೇಮಕಾತಿ ವಿಭಾಗದ ಉಪಾಧ್ಯಕ್ಷರಾದ ಅಜಯ್‌ ಶಾ ಹೇಳುತ್ತಾರೆ.
ಜಾವಾ, ಪೈಥಾನ್‌ ಮತ್ತು ಹಡೂಪ್‌ಗಳು ಕೆಲವು ಕೀವರ್ಡ್‌ಗಳಿಗೆ ಉದಾಹರಣೆಗಳು. ನಿಮ್ಮ ಉದ್ಯೋಗದ ಡಿಸ್ಕ್ರಪ್ಷನ್‌ಗೆ ಈ ಕೀವರ್ಡ್‌ಗಳು ಹೋಲಿಕೆಯಾಗುತ್ತದೆಯೇ ಎಂದು ಗಮನಿಸಿ ಇಂತಹ ಕೀವರ್ಡ್‌ಗಳನ್ನು ಬಳಸಬೇಕು. ಹಾಗಂತ, ನಿಮ್ಮ ರೆಸ್ಯೂಂನಲ್ಲಿ ಕೇವಲ ಕೀವರ್ಡ್‌ಗಳೇ ಇದ್ದರೆ ದೀರ್ಘಾವಧಿಗೆ ಒಳ್ಳೆಯದಲ್ಲ. ‘ಇಂತಹ ರೆಸ್ಯೂಂಗಳನ್ನು ಮುಖಾಮುಖಿ ಸಂದರ್ಶನದ ಸಮಯದಲ್ಲಿ ಫಿಲ್ಟರ್‌ ಮಾಡಲಾಗುತ್ತದೆ. ನೀವು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅನ್ನು ದಾಟಲು ಬಳಸಿದ ಕೀವರ್ಡ್‌ ರೆಸ್ಯೂಂ ಅನ್ನು ಮುಂದೆ ನೇಮಕ ಮಾಡುವ ಮ್ಯಾನೇಜರ್‌ಗಳು ಕಸದಬುಟ್ಟಿಗೆ ಹಾಕಬಹುದು’ ಎಂದು ಚೈತನ್ಯ ಪಿಡ್ಡಿ ಹೇಳುತ್ತಾರೆ. ಅವರು ರೆಸ್ಯೂಂ ವಿಶ್ಲೇಷಣೆ ಮಾಡುವ ಮೆಷಿನ್‌ ಲರ್ನಿಂಗ್‌ ಕಂಪನಿಯಾದ ಡಾರ್ವಿನ್‌ಬಾಕ್ಸ್‌ ಕಂಪನಿಯ ಸಹ ಸ್ಥಾಪಕರು.
‘ಹಳೆಯ ಕಾಲದ ರೆಸ್ಯೂಂ ಮಾದರಿಗಳು ಈಗಿನ ಎಐ-ಚಾಲಿತ ಎಟಿಎಸ್‌ಗೆ ಸೂಕ್ತವಾಗಿಲ್ಲ. ಅಂದಿನ ಆಬ್ಜೆಕ್ಟೀವ್‌, ವಿಷನ್‌ ಇತ್ಯಾದಿಗಳ ಅಗತ್ಯ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗೆ ಇರುವುದಿಲ್ಲ’ ಎಂದು ಬೃಹತ್‌ ಬ್ರೂಹತ್‌ ಇನ್‌ಸೈಟ್ಸ್‌ ಎಂಬ ಎಚ್‌ಆರ್‌ ಟೆಕ್‌ ಕಂಪನಿಯ ಸಿಒಒ ಉಮಾಶಂಕರ್‌ ಕೆ ಹೇಳುತ್ತಾರೆ.
‘ನಿಮಗೆ ತಿಳಿದಿರುವ ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌ಗಳನ್ನು ಸ್ಪಷ್ಟವಾಗಿ ಬರೆಯುವುದು, ನೀವು ಓದಿರುವ ಕಾಲೇಜಿನ ವಿವರ, ನೀವು ಹಿಂದೆ ಕೆಲಸ ಮಾಡಿರುವ ಕಂಪನಿಗಳ ಹೆಸರು ಅತ್ಯಂತ ಪ್ರಮುಖವಾಗಿ ನಮೂದಿಸಬೇಕಾದ ವಿಷಯಗಳು. ಯಾಕೆಂದರೆ, ಎಐ ಟೂಲ್‌ಗಳು ಇಂತಹ ವಿಷಯಗಳನ್ನು ಬಯಸುತ್ತವೆ ಎಂದು ಪಿಡ್ಡಿ ಹೇಳುತ್ತಾರೆ.
‘ಫ್ರೆಷರ್‌ಗಳು ಪಡೆದಿರುವ ಸರ್ಟಿಫಿಕೇಷನ್‌ಗಳು ಸೇರಿದಂತೆ ತಮಗೆ ತಿಳಿದಿರುವ ವಿವಿಧ ಕೌಶಲಗಳನ್ನು ನಮೂದಿಸಬೇಕು. ತಾವು ಉದ್ಯಮದ ಕೆಲಸಕ್ಕೆ ಸಿದ್ಧವಾಗಿರುವುದನ್ನು ಸೂಚಿಸಬೇಕು’ ಎಂದು ಕೇಪ್‌ಜೆಮಿನಿ ಇಂಡಿಯಾದ ಟ್ಯಾಲೆಂಟ್‌ ಅಕ್ವಿಸಿಸನ್‌ನ ಮುಖ್ಯಸ್ಥರಾದ ಜೈದೀಪ್‌ ಚೌಹನ್‌ ಹೇಳುತ್ತಾರೆ. ‘ಟೆಕಿಗಳು ಪೆಗಾ, ಎಡಬ್ಲ್ಯುಎಸ್‌, ಸವೀರ್ಸ್‌ ನವ್‌, ಪಿಎಲ್‌ಎಂ ಇತ್ಯಾದಿ ತಾಂತ್ರಿಕ ಸರ್ಟಿಫಿಕೇಷನ್‌ಗಳನ್ನು ಪಡೆಯಬೇಕು. ಇವೆಲ್ಲ ಆನ್‌ಲೈನ್‌ನಲ್ಲಿ ಕಲಿಯಬಹುದಾದ ಕೌಶಲಗಳಾಗಿವೆ. ಇಂಟರ್ನ್‌ಶಿಪ್‌ ಅವಧಿಯಲ್ಲಿ ಮಾಡಿರುವ ಪ್ರಾಜೆಕ್ಟ್, ಈಗಿನ ಉದ್ಯೋಗ ಕ್ಷೇತ್ರಕ್ಕೆ ಹೇಗೆ ಸೂಕ್ತವಾಗಿದೆ ಎನ್ನುವುದನ್ನು ನಮೂದಿಸಬೇಕು’ ಎಂದು ಅವರು ಹೇಳುತ್ತಾರೆ.
ರೆಸ್ಯೂಂ ವಿನ್ಯಾಸವೂ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ‘ಬಹುತೇಕ ಉದ್ಯೋಗಾಕಾಂಕ್ಷಿಗಳು 10 ವರ್ಷಗಳಿಂದ ಒಂದೇ ಮಾದರಿಯ ರೆಸ್ಯೂಂ ಅನ್ನು ಬಳಸುತ್ತಾರೆ ಮತ್ತು ಅದನ್ನೇ ಅಪ್‌ಡೇಟ್‌ ಮಾಡುತ್ತಿರುತ್ತಾರೆ. ನಿಮ್ಮಲ್ಲಿ ಕನಿಷ್ಠ 10 ವಿವಿಧ ಬಗೆಯ ರೆಸ್ಯೂಂಗಳು ಇರಬೇಕು’ ಎಂದು ಉಮಾಶಂಕರ್‌ ಹೇಳುತ್ತಾರೆ.
‘ಮೊದಲ ಬಾರಿಗೆ ನನಗೆ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಉದ್ಯೋಗ ಪಡೆಯಲು ಸಾಕಷ್ಟು ಕಷ್ಟವಾಯಿತು. ಬಳಿಕ ನಾನು ಯಾವ ಬಗೆಯ ರೆಸ್ಯೂಂ ಸೂಕ್ತ ಎಂದು ಆಲೋಚಿಸಿದೆ. ಆ ನನ್ನ ವಿಭಿನ್ನ ರೆಸ್ಯೂಂ ಮೂಲಕ ಗೂಗಲ್‌, ಫೇಸ್‌ಬುಕ್‌, ಅಮೇಜಾನ್‌, ಮೈಕ್ರೊಸಾಫ್ಟ್‌ ಮತ್ತು ಆ್ಯಪಲ್‌ ಕಂಪನಿಗಳಿಂದ ಸಂದರ್ಶನಕ್ಕೆ ಆಹ್ವಾನ ಬಂತು ಎಂದು ಫ್ರೀಕೋಡ್‌ಕ್ಯಾಂಪ್‌.ಆರ್ಗ್‌ನಲ್ಲಿ ಕುವೊ ಎನ್ನುವವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೀಗೆ, ನಿಮ್ಮ ರೆಸ್ಯೂಂ ಎನ್ನುವುದು ಉದ್ಯೋಗದಾತರನ್ನು ಸೆಳೆಯುವ ಮೊದಲ ಟೂಲ್‌. ಅದನ್ನು ಸೂಕ್ತವಾಗಿ ಬರೆದು ಕಳುಹಿಸಿದರೆ ಮಾತ್ರ ನಿಮಗೆ ನಿಮ್ಮ ಕನಸಿನ ಉದ್ಯೋಗಕ್ಕೆ ಲ್ಯಾಂಡ್‌ ಆಗಲು ಸಾಧ್ಯ.

  • ಸಿಂಧೂ ಹರಿಹರನ್‌ ಮತ್ತು ಸ್ವಾತಿ ರಾಥೋರ್‌, ಟೈಮ್ಸ್‌ ನ್ಯೂಸ್‌ ನೆಟ್‌ವರ್ಕ್‌


ಟೆಕ್‌ ಉದ್ಯೋಗ ಬಯಸುವ ಅಭ್ಯರ್ಥಿಗಳು ರೆಸ್ಯೂಂ ಅನ್ನು ತುಂಬಾ ಸಂಕೀರ್ಣ ಮಾಡಿರುತ್ತಾರೆ ಅಥವಾ ತಾವು ಬರೆದಿರುವುದನ್ನು ಪ್ರೂಫ್‌ ರೀಡಿಂಗ್‌ ಮಾಡಲು ಮರೆಯುತ್ತಾರೆ. ಶೇಕಡ 45ರಷ್ಟು ರೆಸ್ಯೂಂನಲ್ಲಿ ಕನಿಷ್ಠ ಒಂದಾದರೂ ಕಾಗುಣಿತ ಅಥವಾ ವ್ಯಾಕರಣ ದೋಷ ಇದ್ದೇ ಇರುತ್ತದೆ.
ಅಜಯ್‌ ಶಾ, ಉಪಾಧ್ಯಕ್ಷರು, ರಿಕ್ರೂಟ್‌ಮೆಂಟ್‌ ಸವೀರ್‍ಸಸ್‌, ಟೀಮ್‌ಲೀಸ್‌ ಸವೀರ್‍ಸಸ್‌

ಹಳೆಯ ಕಾಲದ ರೆಸ್ಯೂಂ ಮಾದರಿಯ ಆಬ್ಜೆಕ್ಟೀವ್‌, ವಿಷನ್‌ ಇತ್ಯಾದಿಗಳು ಈಗಿನ ಎಐ ಚಾಲಿತ ಎಟಿಎಸ್‌(ಅಪ್ಲಿಕೇಷನ್‌ ಟ್ರ್ಯಾಕಿಂಗ್‌ ಸಿಸ್ಟಮ್ಸ್‌)ಗೆ ಪೂರಕವಾಗಿಲ್ಲ. ಈಗಿನ ಟ್ರೆಂಡ್‌ ಗಮನದಲ್ಲಿಟ್ಟುಕೊಂಡು ಹೊಸದಾಗಿ ರೆಸ್ಯೂಂ ರಚಿಸಿ.
ಉಮಾಶಂಕರ್‌, ಸಿಒಒ, ಬ್ರೂಹತ್‌ ಇನ್‌ಸೈಟ್‌ ಗ್ಲೋಬಲ್‌

ಸ್ಪಷ್ಟವಾಗಿ ನಿಮಗೆ ತಿಳಿದಿರುವ ಪ್ರೋಗ್ರಾಮಿಂಗ್‌ ಭಾಷೆಗಳನ್ನು ಬರೆಯುವುದು, ನೀವು ಓದಿರುವ ಕಾಲೇಜಿನ ವಿವರ ನೀಡುವುದು, ನೀವು ಹಿಂದೆ ಕೆಲಸ ಮಾಡಿದ ಕಂಪನಿಯನ್ನು ನಮೂದಿಸುವುದು ಅತ್ಯಂತ ಪ್ರಮುಖವಾದದ್ದು. ಈಗಿನ ಎಐ ತಂತ್ರಜ್ಞಾನಗಳು ಮೊದಲು ಇವುಗಳನ್ನು ಅವಲೋಕಿಸುತ್ತವೆ.
ಚೈತನ್ಯ ಪೆಡ್ಡಿ, ಸಹ ಸ್ಥಾಪಕರು, ಡಾರ್ವಿನ್‌ಬಾಕ್ಸ್‌

ಅನುಭವಿ ವೃತ್ತಿಪರರು ಹೆಚ್ಚು ಕಾರ್ಯತಂತ್ರವನ್ನು ಬಳಸಿಕೊಂಡು ರೆಸ್ಯೂಂ ರಚಿಸಬೇಕು. ನೀವು ವೃತ್ತಿಪರರಾಗಿ ಹೇಗಿದ್ದೀರಿ ಎನ್ನುವುದನ್ನು ನಿಮ್ಮ ರೆಸ್ಯೂಂ ಸ್ಪಷ್ಟವಾಗಿ ತಿಳಿಸಬೇಕು.
ಜೈದೀಪ್‌ ಚೌಹನ್‌, ಟ್ಯಾಲೆಂಟ್‌ ಅಕ್ವಿಸಿಷನ್‌, ಕೇಪ್‌ಜೆಮಿನಿ ಇಂಡಿಯಾ

error: Content is protected !!