ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 25 ಸ್ಟಾಫ್ ನರ್ಸ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ಓದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇವು ಗುತ್ತಿಗೆ ಆಧರಿತ ಹುದ್ದೆಗಳಾಗಿವೆ.
ಹುದ್ದೆಗಳ ವಿವರ
ಸ್ಟಾಫ್ ನರ್ಸ್ (ಬಿಎಸ್ಸಿ ನರ್ಸಿಂಗ್) 25 ಹುದ್ದೆಗಳಿವೆ. ಮಾಸಿಕ ವೇತನ 22 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಈ ಹುದ್ದೆಗಳಲ್ಲಿ ಕೆಟಗರಿ 1 ಅಭ್ಯರ್ಥಿಗಳಿಗೆ 1, 2ಎ ಅಭ್ಯರ್ಥಿಗಳಿಗೆ 4, 2ಬಿ ಅಭ್ಯರ್ಥಿಗಳಿಗೆ 1, 3ಎ ಅಭ್ಯರ್ಥಿಗಳಿಗೆ 1, 3ಬಿ ಅಭ್ಯರ್ಥಿಗಳಿಗೆ 2, ಎಸ್‌ಸಿ ಅಭ್ಯರ್ಥಿಗಳಿಗೆ 4, ಎಸ್‌ಟಿ ಅಭ್ಯರ್ಥಿಗಳಿಗೆ 1 ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 11 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ವಿದ್ಯಾರ್ಹತೆ
ಬಿಎಸ್ಸಿ ನರ್ಸಿಂಗ್ ಓದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ನರ್ಸಿಂಗ್ ಮಾರ್ಕ್ ಕಾರ್ಡ್‌ಗಳು (ಎಲ್ಲಾ ವರ್ಷಗಳು) ಮತ್ತು ನರ್ಸಿಂಗ್ ನೋಂದಣಿ ಸರ್ಟಿಫಿಕೇಟ್‌ಗಳ ಪ್ರತಿಯನ್ನು ಅರ್ಜಿ ಜತೆಗೆ ಸಲ್ಲಿಸಬೇಕು. ಇವುಗಳ ಜೆರಾಕ್ಸ್ ಪ್ರತಿಗಳನ್ನು ಅಟೆಸ್ಟೆ ಮಾಡಿ ಸಲ್ಲಿಸಬೇಕು.
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 1 ಸಾವಿರ ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಉಳಿದ ಎಲ್ಲಾ ಕೆಟಗರಿಯ ಅಭ್ಯರ್ಥಿಗಳಿಗೆ 2 ಸಾವಿರ ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇಂಡಿಯನ್ ಪೋಸ್ಟಲ್ ಆರ್ಡರ್ ಅಥವಾ ಡಿಡಿ ಮೂಲಕ ದಿ ಡೈರೆಕ್ಟರ್, ಶ್ರೀ ಜಯದೇವ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕ್ಯುಲರ್ ಸೈನ್ಸಸ್ ಆಂಡ್ ರಿಸರ್ಚ್, ಬೆಂಗಳೂರು-69ಕ್ಕೆ ಪಾವತಿಸಬೇಕು.
ಇಷ್ಟೊಂದು ದುಬಾರಿ ಶುಲ್ಕ ಅಗತ್ಯವಿದೆಯೇ?
ಈ ಗುತ್ತಿಗೆ ಆಧರಿತ ಹುದ್ದೆಗಳಿಗೆ ನೂರಾರು (ಸಾವಿರಾರು!) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾಯಂ ಹುದ್ದೆ ಅಲ್ಲದೆ ಇದ್ದರೂ ಇಷ್ಟು ಅರ್ಜಿ ಶುಲ್ಕ ನಿಗದಿಪಡಿಸಿರುವುದು ಅಭ್ಯರ್ಥಿಗಳಿಗೆ ಹೊರೆ ಎನ್ನಬಹುದು.
ಅರ್ಜಿ ನಮೂನೆಯು ಜಯದೇವ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅರ್ಜಿಯನ್ನು ನೇರವಾಗಿ ಅಥವಾ ಖುದ್ದಾಗಿ ಬಂದು ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಕಂ ರೋಸ್ಟರ್ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ: jayadevacardiology.com


















Got a Questions?
Find us on Socials or Contact Us and we’ll get back to you as soon as possible.