Category Archives: Blogger

ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ?

By | 08/01/2019

ಆಕರ್ಷಕ ವಿನ್ಯಾಸವಿದ್ದರೆ ನಿಮ್ಮ ಬ್ಲಾಗ್ ಹೆಚ್ಚು ಜನರನ್ನು ಸೆಳೆಯುತ್ತದೆ. ಜೊತೆಗೆ ಬರೆದ ಲೇಖನಗಳು, ಚಿತ್ರಗಳನ್ನು ನೀಟಾಗಿ ಜೋಡಿಸಿದ್ದರೆ ಹೆಚ್ಚು ಕ್ಲಿಕ್ ಪಡೆಯಬಹುದು. ನಿಮ್ಮ ಬ್ಲಾಗ್ ನ್ಯೂಸ್ ವೆಬ್ ಸೈಟಿನಂತೆ ಇದ್ದರೆ ಒಂದೇ ಪುಟದಲ್ಲಿ ಸಾಕಷ್ಟು ಲೇಖನಗಳನ್ನು, ಚಿತ್ರಗಳನ್ನು ಜೋಡಿಸಿಡಲು ಸಾಧ್ಯ. ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಸ್ಪಾಟ್ ನಲ್ಲಿ ಬ್ಲಾಗ್ ರಚಿಸುವುದು ಹೇಗೆ ಎಂಬ ವಿಷಯದ ಕುರಿತು ಸರಳವಾಗಿ ಮಾಹಿತಿ ನೀಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಬ್ಲಾಗರ್ ಬ್ಲಾಗ್ ಗೆ ಕಸ್ಟಮ್ ಟೆಂಪ್ಲೆಟ್ ಗಳನ್ನು ಅಳವಡಿಸುವ ಕುರಿತು ಚರ್ಚಿಸೋಣ. ಹಿಂದಿನ ಸಂಚಿಕೆಯಲ್ಲಿ ನೀವು… Read More »

ಬ್ಲಾಗರ್ ಗೈಡ್: ಉಚಿತ ಬ್ಲಾಗ್ ರಚಿಸುವುದು ಹೇಗೆ?

By | 08/01/2019

ಕರ್ನಾಟಕ ಬೆಸ್ಟ್ ವೆಬ್ ಸೈಟ್ ಗೈಡ್ ಮೂಲಕ ಈಗಾಗಲೇ ವರ್ಡ್ ಪ್ರೆಸ್ ಯಾಕೆ ಬೆಸ್ಟ್? ಸೇರಿದಂತೆ ಕೆಲವು ಲೇಖನ ಓದಿದ್ದೀರಿ. ಈಗ ಬ್ಲಾಗರ್ ಮೂಲಕ ಬ್ಲಾಗ್ ರಚಿಸುವ ಕಲೆಯನ್ನು ಕಲಿಯೋಣ. ಇದನ್ನು ಕಲಿತರೆ ಮುಂದೆ ವೆಬ್ ಸೈಟ್ ರಚಿಸುವುದು ನಿಮಗೆ ಸುಲಭವಾಗಲಿದೆ. ಫೇಸ್ಬುಕ್ ಇತ್ಯಾದಿಗಳ ನಂತರ ಬ್ಲಾಗರ್ ಬಳಸುವವರು ಕಡಿಮೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬ್ಲಾಗರ್ ಅನ್ನೇ ಸ್ವಂತ ವೆಬ್ ಸೈಟ್ ಆಗಿ ರೂಪಿಸಿ ಬಹುತೇಕರು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಹತ್ತು ಸಾವಿರಗಳನ್ನು ನೀಡಲು ಸಾಧ್ಯವಿಲ್ಲದೆ… Read More »

Blogging Guide: ಬ್ಲಾಗ್ ಲೇಖನ ರಚನೆ ಹೇಗೆ?

By | 26/11/2018

ಸೋಷಿಯಲ್ ಮೀಡಿಯಾ ಉತ್ತುಂಗದಲ್ಲಿರುವ ಈ ಕಾಲದಲ್ಲಿ ಬ್ಲಾಗಿಂಗ್ ಎಂದರೆ ಕೆಲವರು ಮೂಗು ಮುರಿಯುತ್ತಾರೆ.  ಆದರೆ, ನೀವು ಗಮನಿಸಿರಬಹುದು. ಈಗ ಬ್ಲಾಗಿಂಗ್ ಎನ್ನುವುದು ವೆಬ್ ಸೈಟ್ ಗಳ ರೂಪದಲ್ಲಿ ಹೊಸ ರೂಪ ಪಡೆದಿದೆ. ಡೊಮೈನ್ ಹೆಸರು ಖರೀದಿ, ಹೋಸ್ಟಿಂಗ್ ಖರೀದಿ ಮಾಡಿ ಸ್ವಂತ ಸರಳ ವೆಬ್ ಸೈಟ್ ರಚಿಸಲು ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ. ನೀವು ಸಹ ಬ್ಲಾಗ್ ಪೋಸ್ಟ್ ಬರೆಯಲು ಇಚ್ಚಿಸಿದ್ದರೆ ಒಂದಿಷ್ಟು ಮಾಹಿತಿ ಇಲ್ಲಿದೆ. ವೆಬ್ ಸೈಟ್ ರೂಪದಲ್ಲಿ ಬ್ಲಾಗ್ ಬರೆಯುವ ಮೊದಲು ನಿಮ್ಮಲ್ಲಿ ಒಂದು ಬ್ಲಾಗ್ ಇರಬೇಕು. ನೀವು ಇನ್ನೂ… Read More »

ಕನ್ನಡ ವೆಬ್ ಸೈಟ್ ಗಳಿಗೆ ಜಾಹೀರಾತು ಮೂಲಗಳು ಯಾವುದಿವೆ?

By | 30/06/2018

ಭಾರತದ ಕೆಲವು ಭಾಷೆಗಳಿಗೆ ಗೂಗಲ್ ಆ್ಯಡ್ ಸೆನ್ಸ್ ಇನ್ನೂ ಬೆಂಬಲ ನೀಡುತ್ತಿಲ್ಲ. ಗೂಗಲ್  ಆ್ಯಡ್ ಸೆನ್ಸ್ ನಲ್ಲಿ ಬೆಂಬಲಿತ ಭಾಷೆಗಳಲ್ಲಿ ಕನ್ನಡ ಭಾಷೆಯಿನ್ನೂ ಸೇರ್ಪಡೆಯಾಗಿಲ್ಲ (ಗೂಗಲ್ ನ್ಯೂಸ್ ನಲ್ಲಿಯೂ ಕನ್ನಡವಿನ್ನು ಬಂದಿಲ್ಲ). ಈ ವರ್ಷದ ಆರಂಭದಲ್ಲಿ ತಮಿಳು ಭಾಷೆಗೆ ಗೂಗಲ್ ಆ್ಯಡ್ ಸೆನ್ಸ್ ಬೆಂಬಲ ದೊರಕಿದೆ. ತಮಿಳು ವೆಬ್ ಸೈಟ್ ಗಳು, ಬ್ಲಾಗ್ ಗಳು ಆ್ಯಡ್ ಸೆನ್ಸ್ ಅಳವಡಿಸಿಕೊಂಡು ಹಣ ಸಂಪಾದಿಸಬಹುದು. ವಿಶೇಷವೆಂದರೆ ಕರ್ನಾಟಕದ ಇನ್ನೊಂದು ನೆರೆ ರಾಜ್ಯವಾದ ತೆಲುಗು ಭಾಷೆಗೂ ಈಗ ಆ್ಯಡ್ ಸೆನ್ಸ್ ಬೆಂಬಲ ದೊರಕುತ್ತದೆ. ಹಿಂದಿ ಭಾಷೆಗಂತೂ… Read More »