ಮಂಗಳೂರು:
ನಗರದ ಮಿಲಾಗ್ರಿಸ್ ಕಾಲೇಜಿನಲ್ಲಿ ಅಕ್ಟೋಬರ್ 18ರಂದು ಬೆಳಗ್ಗೆ 9ರಿಂದ ಸಂಜೆ 3.30ರವರೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಸ್ಪೆಕ್ಟ್ರಂ ಇಂಡಸ್ಟ್ರಿಯ ಮುಖ್ಯ ವ್ಯವಸ್ಥಾಪಕ ಹಾಗೂ ಕಾನ್ಪೇಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಜೀವನ್ ಸಲ್ದಾನ ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು, ಬೆಂಗಳೂರು, ಮುಂಬೈ, ಗೋವಾ ಹಾಗೂ ಕೇರಳದ ಐಟಿ, ಬಿಪಿಒ, ಇನ್ಸೂರೆನ್ಸ್ ಬ್ಯಾಂಕಿಂಗ್, ಆರೋಗ್ಯ, ಹೊಟೇಲ್, ಆಟೊಮೊಬೈಲ್, ಕ್ರೂಸ್, ಶಿಕ್ಷಣ, ಟೆಲಿಕಮ್ಯುನಿಕೇಷನ್, ಸೇಲ್ಸ್ ಮತ್ತು ರಿಟೈಲ್ ಸೇರಿದಂತೆ 60 ಕಂಪೆನಿಗಳು ಭಾಗವಹಿಸಲಿವೆ. ಸುಮಾರು 2500 ಉದ್ಯೋಗವಕಾಶಗಳು ಲಭ್ಯವಿದೆ ಎಂದು ಕಾಲೇಜಿನ ಪ್ರಮುಖರು ತಿಳಿಸಿದ್ದಾರೆ.
ಯಾವುದೇ ನೋಂದಣಿ ಶುಲ್ಕವಿಲ್ಲದೆ ಭಾಗವಹಿಸಲು ಅವಕಾಶವಿದೆ. ಅಭ್ಯರ್ಥಿಗಳು ಸ್ವವಿವರದ ಅನೇಕ ಪ್ರತಿಗಳು ಮತ್ತು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಬಹುದು.









Got a Questions?
Find us on Socials or Contact Us and we’ll get back to you as soon as possible.