ನಾನು ಮರವಲ್ಲ

ನಾನು ಮರವಲ್ಲ
ನಾನು ಬಳ್ಳಿ
ನನ್ನ ಬೇರು ನನ್ನೂರು

ಮರದ ಕೊಂಬೆ
ರೆಂಬೆ ಎಲ್ಲೆಲ್ಲೂ
ವ್ಯಾಪಿಸಿ
ಮತ್ತೆ ಬೇರಿನೆಡೆಗೆ
ಮರಳುವುದಿಲ್ಲ

ಆದರೆ ಬಳ್ಳಿ ಹಾಗಲ್ಲ
ಒಮ್ಮೊಮ್ಮೆ
ಬೇರಿನೆಡೆಗೆ
ಮರಳುತ್ತದೆ

ನಾನು
ಮರವಗಲಾರೆ
ಬಳ್ಳಿಯಾಗಿ
ಎಲ್ಲೆಲ್ಲೊ ಸಾಗಿ
ಜಗದಗಲ ಹೋಗಿ
ಮರಳಿ ಬೇರಿನೆಡೆಗೆ ಬರುವೆ

error: Content is protected !!