ಅಮೆಜಾನ್ ನಿಂದ 35 ನಗರಗಳಲ್ಲಿ 8 ಸಾವಿರ ಜನರ ನೇಮಕ

ಮುಂಬೈ : ಬೆಂಗಳೂರು ಸೇರಿದಂತೆ ದೇಶದ 35 ನಗರಗಳಲ್ಲಿ ಒಟ್ಟು ಎಂಟು ಸಾವಿರ ಜನರನ್ನು ‌ನೇಮಕ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಚೆನ್ನೈ, ಹೈದರಾಬಾದ್, ಅಹಮದಾಬಾದ್, ಅಮೃತ್, ಕೋಲ್ಕತ್ತಾ, ಮುಂಬೈ, ಗುರುಗ್ರಾಮ, ನೊಯಿಡಾ, ಅಮೃತಸರ, ಕೊಯಮತ್ತೂರು, ಕಾನ್ಪುರ, ಜೈಪುರ, ಲೂಧಿಯಾನಾ ಸೇರಿದಂತೆ ಒಟ್ಟು 35 ನಗರಗಳಲ್ಲಿ ಈ ನೇಮಕಾತಿ ನಡೆಯಲಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ದೀಪ್ತಿ ವರ್ಮಾ ತಿಳಿಸಿದ್ದಾರೆ.

ಅಮೆಜಾನ್ ಕಂಪನಿಯು ದೇಶದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈಗಾಗಲೇ 10 ಲಕ್ಷ ಉದ್ಯೋಗ ಸೃಷ್ಟಿಸಿದೆ. 2025 ರ ವೇಳೆಗೆ ನೇರವಾಗಿ ಹಾಗೂ ಪರೋಕ್ಷವಾಗಿ ಒಟ್ಟು 20 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಕೋವಿಡ್ ಸಾಂಕ್ರಾಮಿಜದ ಅವಧಿಯಲ್ಲಿಯೂ ಕಂಪನಿಯು ಒಟ್ಟು ಮೂರು ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಿದೆ ಎಂದು ಅವರು ವಿವರಿಸಿದ್ದಾರೆ.

error: Content is protected !!