ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಮಠದ ಕುರಿಬರಹಟ್ಟಿ ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕರನ್ನು ಮಾಸಿಕ ಗೌರವ ಧನ ರೂ.12,000/- ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಕೆಳಕಾಣಿಸಿದ ಷರತ್ತುಗಳನ್ನು ಪೂರೈಸುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ದಾಖಲಾತಿಗಳೊಂದಿಗೆ ನಿಗದಿತ ದಿನಾಂಕ 10-11-2021 ರೊಳಗೆ ಪಿಡಿಒ / ಪಂಚಾಯ್ತಿ ಕಾರ್ಯದರ್ಶಿಗಳಿಗೆ ಸಲ್ಲಿಸತಕ್ಕದ್ದು.
ಈ ಮೇಲ್ವಿಚಾರಕ ಸ್ಥಾನವು ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿರುತ್ತದೆ.
ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರಬೇಕು.
ನಿಗದಿಪಡಿಸಿದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿ ಅಂಕಪಟ್ಟಿ, ಟಿಸಿ, ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ವಾಸಿ, ದೃಢೀಕರಣ ಪತ್ರ, ಅಂಗವಿಕಲತೆ ( ಇದ್ದಲ್ಲಿ ದೃಢೀಕರಣ ಪತ್ರ)
ವಯಸ್ಕರ ಶಿಕ್ಷಣದಡಿ ನಡೆಯುತ್ತಿರುವ ಕಲಿಕಾ ಕೇಂದ್ರಗಳ ಪ್ರೇರಕ/ ಉಪಪ್ರೇರಕರು ಸಹ ಅರ್ಜಿ ಸಲ್ಲಿಸಬಹುದು. ಮೇಲ್ವಿಚಾರಕರಾಗಿ ನೇಮಕಗೊಂಡ ನಂತರ ಪ್ರೇರಕ / ಉಪಪ್ರೇರಕರ ಹುದ್ದೆಗೆ ರಾಜೀನಾಮೆ ನೀಡತಕ್ಕದ್ದು. ಹಾಗೂ ಬಿಡುಗಡೆ ಪತ್ರವನ್ನು ಸಂಬಂಧಿಸಿದ ಇಲಾಖೆಯಿಂದ ಪಡೆದು ಈ ಕಚೇರಿಗೆ ಸಲ್ಲಿಸತಕ್ಕದ್ದು. ಪ್ರೇರಕ/ ಉಪಪ್ರೇರಕರಿಗೆ ಮೀಸಲಾತಿ ಅನ್ವಯಿಸುತ್ತದೆ.
ವಯೋಮಿತಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ 40 ವರ್ಷ.
ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಸಂಪರ್ಕಿಸಬಹುದು.
ನೋಟಿಫಿಕೇಶನ್









Got a Questions?
Find us on Socials or Contact Us and we’ll get back to you as soon as possible.