ಕ್ಯೂಬಾದ ಆರೋಗ್ಯ ಮಂತ್ರಾಲಯದಿಂದ ಹವಾನ, ಕ್ಯೂಬಾದಲ್ಲಿ ಸ್ಥಾಪಿತವಾದ ಪಂಚಕರ್ಮ ಕೇಂದ್ರಕ್ಕೆ ಆಯುಷ್ ನಲ್ಲಿ ಅಂತರಾಷ್ಟ್ರೀಯ ಸಹಕಾರದ ಉತ್ತೇಜನಕ್ಕಾಗಿ ಸೆಂಟರ್ ಸೆಕ್ಟರ್ ಸ್ಕೀಮ್ ನ ಕಾಂಪೊನೆಂಟ್ 3 A (a) ಅಡಿಯಲ್ಲಿ ನಿಯೋಜನೆಗಾಗಿ ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾಯಚಿಕಿತ್ಸ/ಪಂಚಕರ್ಮದಲ್ಲಿ ಪೋಸ್ಟ್ ಗ್ರ್ಯಾಜ್ಯುಯೇಟ್ ಹೊಂದಿರುವ ಅರ್ಹ ಆಯುರ್ವೇದ ವೈದ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಯೋಜನೆಯ ಅವಧಿಯು ಕೇಂದ್ರದಲ್ಲಿ ಪಂಚಕರ್ಮ ಪರಿಣಿತರಾಗಿ ಅಧಿಕಾರ ಸ್ವೀಕರಿಸಿದ ದಿನಾಂಕದಿಂದ ಒಂದು ವರ್ಷವಾಗಿರುತ್ತದೆ.
ಅರ್ಜಿ ನಮೂನೆ ಮತ್ತು ನಿಯೋಜನೆಯ ವಿವರಗಳು ಮಂತ್ರಾಲಯದ ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ.
ವಿವರವಾದ ಸ್ವಯಂ ವಿವರದೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಈ ಪ್ರಕಟಣೆ ಪ್ರಕಟವಾದ 30 ದಿನದೊಳಗಾಗಿ ಸೂಕ್ತ ವಾಹಿನಿಯ ಮೂಲಜ ಅಧೀನ ಕಾರ್ಯದರ್ಶಿ ( ಅಂತರಾಷ್ಟ್ರೀಯ ಸಹಕಾರ), ಆಯುಷ್ ಮಂತ್ರಾಲಯ, ಭಾರತ ಸರಕಾರ ಇವರಿಗೆ ತಲುಪಿಸಬೇಕು.
ವಿಳಾಸ : ಆಯುಷ್ ಭವನ, ಬಿ-ಬ್ಲಾಕ್, ಜಿಪಿಓ ಕಾಂಪ್ಲೆಕ್ಸ್, ಐಎನ್ ಎ, ನವದೆಹಲಿ -110023 ( ಭಾರತ) ಅರ್ಜಿಗಳನ್ನು ಇ- ಮೇಲ್ ಐಡಿ cuba-panchakarma@gov.in ಮೂಲಕವೂ ಕಳುಹಿಸಬಹುದು. ಭಾರತೀಯ ಮೂಲದ ಅರ್ಹ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.









Got a Questions?
Find us on Socials or Contact Us and we’ll get back to you as soon as possible.