ಡಿಜಿಟಲ್‌ ಮಾರ್ಕೆಟಿಂಗ್‌ ಮತ್ತು ಸಾಂಪ್ರದಾಯಿಕ ಮಾರ್ಕೆಟಿಂಗ್‌ನಲ್ಲಿ ಯಾವುದು ಉತ್ತಮ? ಇವೆರಡರ ನಡುವಿನ ವ್ಯತ್ಯಾಸ ತಿಳಿಯಿರಿ

digital marketing services in karnataka
digital marketing services in karnataka

ಕರ್ನಾಟಕ ಬೆಸ್ಟ್‌ ಡಿಜಿಟಲ್‌ ಮಾರ್ಕೆಟಿಂಗ್‌: ಬಿಸ್ನೆಸ್‌ ಪ್ರಚಾರಕ್ಕೆ ಸಾಂಪ್ರದಾಯಿಕ ಮಾರ್ಕೆಟಿಂಗ್‌ ಉತ್ತಮವೇ? ಡಿಜಿಟಲ್‌ ಮಾರ್ಕೆಟಿಂಗ್‌ ಉತ್ತಮವೇ? ಎಂಬ ಗೊಂದಲ ನಿಮ್ಮಲ್ಲಿ ಇರಬಹುದು. ಇವೆರಡರ ನಡುವಿನ ವ್ಯತ್ಯಾಸ ಏನೆಂದು ತಿಳಿದುಕೊಳ್ಳೋಣ ಬನ್ನಿ


ಕರ್ನಾಟಕ ಬೆಸ್ಟ್‌ ಡಿಜಿಟಲ್‌ ಮಾರ್ಕೆಟಿಂಗ್‌: ಎಲ್ಲಾ ಬಿಸ್ನೆಸ್‌ಗಳ ಪ್ರಮುಖ ಉದ್ದೇಶ ಜನರನ್ನು ತಲುಪುವುದು. ಜನರನ್ನು ತಲುಪಲು ಹಲವು ದಾರಿಗಳು ಇವೆ. ಹೆಚ್ಚಾಗಿ ವ್ಯವಹಾರಗಳು ಈಗ ಆನ್‌ಲೈನ್‌ ಅಥವಾ ಆಫ್‌ಲೈನ್‌ ಮಾರ್ಕೆಟಿಂಗ್‌ ಮೂಲಕ ಹೆಚ್ಚು ಜನರನ್ನು ತಲುಪುತ್ತವೆ. ತಮ್ಮ ಉತ್ಪನ್ನಗಳ ಕುರಿತು ಟಿವಿಯಲ್ಲಿ, ಸುದ್ದಿಪತ್ರಿಕೆಯಲ್ಲಿ ಜಾಹೀರಾತು ನೀಡಿದರೆ ಮುಗಿಯಿತು. ಹಲವು ದಶಕಗಳಿಂದ ಸಾಂಪ್ರದಾಯಿಕ ಮಾಧ್ಯಮಗಳು ಉತ್ಪನ್ನಗಳ ಪ್ರಚಾರಕ್ಕೆ ದೊಡ್ಡಮಟ್ಟದ ಕೊಡುಗೆ ನೀಡಿವೆ. ಈಗಲೂ ಈ ಸಾಂಪ್ರದಾಯಿಕ ಮಾಧ್ಯಮಗಳು ನಂಬಿಕೆ ಉಳಿಸಿಕೊಂಡಿವೆ. ಆದರೆ, ಇದೇ ಸಮಯದಲ್ಲಿ ಡಿಜಿಟಲ್‌ ಮಾಧ್ಯಮವೂ ಈಗ ಬಿಸ್ನೆಸ್‌ಗಳ ಪ್ರಮುಖ ಆದ್ಯತೆಯಾಗುತ್ತಿದೆ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ, ಲಿಂಕ್ಡ್‌ಇನ್‌, ವಾಟ್ಸಪ್‌… ಹೀಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಚಾರ ಮಾಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇದರೊಂದಿಗೆ ವೆಬ್‌ಸೈಟ್‌, ಗೂಗಲ್‌ ಸರ್ಚ್‌, ಆನ್‌ಲೈನ್‌ ವಿಡಿಯೋ ಮೂಲಕವೂ ಪ್ರಚಾರ ನೀಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಗೂಗಲ್‌ ಆಡ್‌ವರ್ಡ್ಸ್‌, ಫೇಸ್‌ಬುಕ್‌ ಬೂಸ್ಟ್‌ ಸೇರಿದಂತೆ ಆನ್‌ಲೈನ್‌ ಮಾರುಕಟ್ಟೆಯಲ್ಲಿ ತಮಗೆ ಬೇಕಾದ ಗ್ರಾಹಕ ವಲಯವನ್ನು ತಲುಪಲು ಸಾಕಷ್ಟು ಅವಕಾಶಗಳು ಇವೆ.

ಸಾಂಪ್ರದಾಯಿಕ ಮಾರುಕಟ್ಟೆಗೂ ಡಿಜಿಟಲ್‌ ಮಾರುಕಟ್ಟೆಗೂ ಏನು ವ್ಯತ್ಯಾಸವಿದೆ?

ಬೇಕಾಗುವ ಸಂಪನ್ಮೂಲ: ಮೊದಲನೆಯ ಪ್ರಮುಖ ವ್ಯತ್ಯಾಸ “ಸಂಪನ್ಮೂಲ”ಕ್ಕೆ ಸಂಬಂಧಪಟ್ಟಿರುವುದು. ಉದಾಹರಣೆಗೆ ನೀವೊಂದು ಟಿವಿ ಜಾಹೀರಾತು ನೀಡಬೇಕು ಎಂದುಕೊಂಡಿದ್ದೀರಿ. ನೀವು ಜಾಹೀರಾತು ಬರೆಯಬೇಕು, ಅದನ್ನು ಶೂಟಿಂಗ್‌ ಮಾಡಬೇಕು, ಎಡಿಟಿಂಗ್‌ ಮಾಡಬೇಕು, ಅದಕ್ಕೆಲ್ಲ ಪ್ರತ್ಯೇಕ ಟೀಮ್‌ ಬೇಕು. ಆಮೇಲೆ ಟಿವಿಯಲ್ಲಿ ನಿರ್ದಿಷ್ಟ ಸ್ಲಾಟ್‌ನಲ್ಲಿ ಅದನ್ನು ಪ್ರಸಾರ ಮಾಡಲು ಸಾಕಷ್ಟು (ತುಂಬಾ ಅಂದ್ರೆ ತುಂಬಾ) ಹಣ ನೀಡಬೇಕು. ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಒಂದು ಕ್ರಿಯೆಟಿವ್‌ ಮತ್ತು ಸಾಕಷ್ಟು ಹಣ ಬೇಕು. ಆದರೆ, ಡಿಜಿಟಲ್‌ ಮಾರುಕಟ್ಟೆಯಲ್ಲಿ ಜಾಹೀರಾತು ನೀಡಲು ಅಷ್ಟು ಖರ್ಚು ಮಾಡಬೇಕಿಲ್ಲ, ಅಷ್ಟೊಂದು ಸಂಪನ್ಮೂಲ ಬೇಕಿಲ್ಲ. ಸಾಂಪ್ರದಾಯಿಕ ಮಾಧ್ಯಮಗಳು ಲಕ್ಷಾಂತರ ರೂಪಾಯಿ ಬಯಸಿದರೆ, ಡಿಜಿಟಲ್‌ ಮಾಧ್ಯಮಗಳು ಕೆಲವು ಸಾವಿರ ರೂ ಖರ್ಚು ಬಯಸುತ್ತವೆ.

ಗ್ರಾಹಕರನ್ನು ಟಾರ್ಗೆಟ್‌ ಮಾಡುವುದು: ಇನ್ನೊಂದು ಪ್ರಮುಖ ವ್ಯತ್ಯಾಸ “ನಿರ್ದಿಷ್ಟ ಗ್ರಾಹಕರನ್ನು ಟಾರ್ಗೆಟ್‌ ಮಾಡುವುದು”. ಪೇಪರ್‌ ಎಲ್ಲರೂ ಓದುತ್ತಾರೆ, ಎಲ್ಲರೂ ಟಿವಿ ನೋಡುತ್ತಾರೆ. ನಿಮ್ಮ ಜಾಹೀರಾತು ಯಾರಿಗೆ ತಲುಪಬೇಕೋ ಅವರಿಗೆ ಸರಿಯಾದ ರೀತಿ ತಲುಪುತ್ತದೆ ಎನ್ನುವ ಖಾತ್ರಿ ಇಲ್ಲ. ಆದರೆ, ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ನಿಮ್ಮ ಟಾರ್ಗೆಟ್‌ ಗ್ರಾಹಕರಿಗೆ ತಲುಪುವಂತೆ ಮಾರ್ಕೆಟಿಂಗ್‌ ಚಟುವಟಿಕೆಗಳನ್ನು ಮಾಡಬಹುದು. ನಿರ್ದಿಷ್ಟ ವಯೋಮಾನದವರಿಗೆ ತಲುಪುವಂತೆ, ನಿರ್ದಿಷ್ಟ ಪ್ರದೇಶ, ನಿರ್ದಿಷ್ಟ ಆಸಕ್ತಿಯವರಿಗೆ ಮಾತ್ರ ತಲುಪುವಂತೆ ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಜಾಹೀರಾತುಗಳನ್ನು ಪ್ರಚಾರ ಮಾಡಬಹುದು. ಕಡಿಮೆ ಖರ್ಚು, ಹೆಚ್ಚು ಪ್ರಯೋಜನ ಅಂದರೆ ಇದೇ ಅಲ್ಲವೇ?

ಫಲಿತಾಂಶದ ನಿರ್ಣಯ: ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದರೆ ಆ ಜಾಹೀರಾತು ನೀಡುವ ಫಲಿತಾಂಶವನ್ನು ಅಳೆಯುವುದು ಕಷ್ಟ. ನಿಮ್ಮ ಪ್ರಾಡಕ್ಟ್‌ಗಳು ಸೇಲ್‌ ಆಗಬಹುದು. ಆದರೆ, ಅದು ಟಿವಿ ಅಥವಾ ಇತರೆ ಸಾಂಪ್ರದಾಯಿಕ ಮಾಧ್ಯಮಗಳ ಪ್ರಚಾರದಿಂದ ಬಂದಿರುವುದೇ ಎನ್ನುವುದು ಖಚಿತವಾಗಿರುವುದಿಲ್ಲ. ಮಾರ್ಕೆಟಿಂಗ್‌ ಮಾಡಿದವರಿಗೆ ತಮ್ಮ ಮಾರ್ಕೆಟಿಂಗ್‌ ಯಶಸ್ವಿಯಾಗಿರುವುದೇ? ಪರಿಣಾಮಕಾರಿಯಾಗಿರುವುದೇ? ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಆದರೆ, ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಪ್ರತಿಯೊಂದು ಡಿಜಿಟಲ್‌ ಮಾರ್ಕೆಟಿಂಗ್‌ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳಬಹುದು, ಅಳತೆ ಮಾಡಬಹುದು, ಖಚಿತಪಡಿಸಿಕೊಳ್ಳಬಹುದು. ಏಕೆಂದರೆ, ಅಲ್ಲಿ ಗ್ರಾಹಕರ ಚಟುವಟಿಕೆಗಳು ರೆಕಾರ್ಡ್‌ ಆಗಿರುತ್ತದೆ. ಜಾಹೀರಾತು ಎಷ್ಟು ಜನರು ನೋಡಿದ್ದಾರೆ? ಎಷ್ಟು ಜನರು ಕ್ಲಿಕ್‌ ಮಾಡಿದ್ದಾರೆ? ಎಷ್ಟು ಹೊತ್ತು ಜಾಹೀರಾತು ನೋಡಿದ್ದಾರೆ? ಎಂದು ತಿಳಿಯಬಹುದು. ಅಷ್ಟು ಮಾತ್ರವಲ್ಲ ನಿಮ್ಮ ಡಿಜಿಟಲ್‌ ಜಾಹೀರಾತಿನ ಮೂಲಕವೇ ಗ್ರಾಹಕರು ಉತ್ಪನ್ನವನ್ನು ಅಥವಾ ಸೇವೆಯನ್ನು “ಖರೀದಿಸಲು” ಅವಕಾಶವಿದೆ. ಅಲ್ಲೇ ಡ್ರಾ, ಅಲ್ಲೇ ಬಹುಮಾನ!

ಡಿಜಿಟಲ್‌ ಮಾರ್ಕೆಟಿಂಗ್‌ ಅನುಕೂಲ ತಿಳಿಯಲು ಈ ಮೂರು ಅಂಶಗಳು ಮಾತ್ರ ಕಾರಣವಲ್ಲ, ಇನ್ನೂ ಹಲವು ಕಾರಣಗಳು ಇವೆ. ಆದರೆ, ಡಿಜಿಟಲ್‌ ಮಾರ್ಕೆಟಿಂಗ್‌ ಮತ್ತು ಸಾಂಪ್ರದಾಯಿಕ ಮಾರುಕಟ್ಟೆಯ ನಡುವೆ ಇರುವ ವ್ಯತ್ಯಾಸ ತಿಳಿಯಲು ಈ ಲೇಖನ ನಿಮಗೆ ನೆರವಾಗಿರಬಹುದು. ಇದೇ ಸಮಯದಲ್ಲಿ ಮುದ್ರಣ ಮಾಧ್ಯಮ, ಟಿವಿ ಮಾಧ್ಯಮಗಳೂ ತಮ್ಮ ಬೇಡಿಕೆ ಕಳೆದುಕೊಂಡಿಲ್ಲ ಎನ್ನುವುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ, ಬೇಕಾಗುವ ಸಂಪನ್ಮೂಲ, ನಿರ್ದಿಷ್ಟ ಗ್ರಾಹಕರನ್ನು ಟಾರ್ಗೆಟ್‌ ಮಾಡುವುದು ಮತ್ತು ‌ಮಾರ್ಕೆಟಿಂಗ್‌ನ ಫಲಿತಾಂಶ ನಿರ್ಣಯ ಮಾಡುವ ವಿಚಾರಗಳಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಬೆಸ್ಟ್‌. “ಬುದ್ಧಿವಂತಿಕೆ” ” ಸೃಜನಶೀಲತೆ” ಮತ್ತು “ಕರ್ನಾಟಕ ಬೆಸ್ಟ್‌” (ಇವು ಮೂರು ಬೇರೆಬೇರೆ ಅಲ್ಲ, ಇವೆಲ್ಲವೂ ಒಂದೇ ಅಲ್ವೇ?) ಜತೆಗಿದ್ದರೆ ಡಿಜಟಿಲ್‌ ಮಾರ್ಕೆಟಿಂಗ್‌ ಹೆಚ್ಚು ಪರಿಣಾಮಕಾರಿ. ಡಿಜಿಟಲ್‌ ಮಾರ್ಕೆಟಿಂಗ್‌ಗಾಗಿ ಕರ್ನಾಟಕ ಬೆಸ್ಟ್‌ ಅನ್ನು ಸಂಪರ್ಕಿಸಿ:

error: Content is protected !!