ವಿಟಮಿನ್ ಡಿಯಲ್ಲಿ ಹಲವಾರು ವಿಧಗಳಿವೆ. ಈ ಪೈಕಿ ವಿಟಮಿನ್ ಡಿ3 ಮಾನವ ಸೇರಿದಂತೆ ಪ್ರಾಣಿಗಳಲ್ಲಿಯೂ ಕಂಡು ಬರುತ್ತದೆ. ಮಾನವನ ದೇಹವು ಚರ್ಮದ ಮೇಲ್ಮೆಯಲ್ಲಿ 7-ಡಿಹೈಡ್ರೊಕೊಲೆಸ್ಟ್ರಾಲ್ ಎಂಬ ವಸ್ತುವನ್ನು ಸ್ರವಿಸುತ್ತದೆ. ಸೂರ್ಯ ಕಿರಣಗಳ ಕೆಲವು ಪ್ರಕ್ರಿಯೆಗಳಿಂದ ಈ ವಸ್ತು ವಿಟಮಿನ್ ಡಿ3 ಆಗಿ ಬದಲಾಗುತ್ತದೆ. ಇದು ಮತ್ತೆ ಚರ್ಮದ ಮೂಲಕ ರಕ್ತನಾಳಕ್ಕೆ ಹೀರಲ್ಪಡುತ್ತದೆ.
ಸಸ್ಯಗಳಲ್ಲಿ ಎರ್ಗೊಸ್ಟೆರಾಲ್ ಎಂಬ ವಸ್ತು ಸೂರ್ಯನ ಅಲ್ಟ್ರಾವಯೊಲೆಟ್ ಕಿರಣಗಳಿಗೆ ತೆರೆದುಕೊಂಡಾಗ ವಿಟಮಿನ್ ಡಿ2 ಆಗಿ ಬದಲಾಗುತ್ತದೆ. ವಿಟಮಿನ್‌ಗಳಲ್ಲಿ ವಿಟಮಿನ್ ಡಿ ಅತ್ಯಂತ ವಿಶಿಷ್ಟವಾದದ್ದು. ಇದು ಕೇವಲ ವಿಟಮಿನ್ ಆಗಿ ಕೆಲಸ ಮಾಡುವುದು ಮಾತ್ರವಲ್ಲದೆ, ಒಂದು ಹಾಮೊರ್‍ೕನ್ ಆಗಿಯೂ ಕೆಲಸ ಮಾಡುತ್ತದೆ.
ಸೂರ್ಯ ಕಿರಣಗಳ ಕೆಲವು ಪ್ರಕ್ರಿಯೆಗಳಿಂದಾಗಿ ನಮ್ಮ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಸಸ್ಯಗಳಲ್ಲೂ ಇದೇ ರೀತಿಯಾಗಿ ವಿಟಮಿನ್ ಡಿ ಉತ್ಪತ್ತಿಯಾಗುವುದೇ?


















Got a Questions?
Find us on Socials or Contact Us and we’ll get back to you as soon as possible.