ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗದಲ್ಲಿ ವಿವಿಧ ಬೊಧನಾ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರದಲ್ಲಿನ ವಿವಿಧ ಸ್ನಾತಕೋತ್ತರ ವಿಭಾಗಗಳ ಹಾಗೂ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜು ಚಿಕ್ಕಬಳ್ಳಾಪುರ ಇಲ್ಲಿನ‌ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ 2021-22 ನೇ ಸಾಲಿಗೆ ಯುಜಿಸಿ ನಿಯಮಾನುಸಾರ ಪೂರ್ಣಕಾಲಿಕ/ಅರೆಕಾಲಿಕ‌ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಈ ಕೆಳಕಂಡ ಬೋಧನಾ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕಲಾ ವಿಭಾಗ : ಎಂಎ , ಕನ್ನಡ, ಆಂಗ್ಲ ಭಾಷೆ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ, ಸಮೂಹ ಸಂವಹನ, ಸಮಾಜ ಕಾರ್ಯ( ಎಂಎಸ್ ಡಬ್ಲ್ಯೂ)

ವಾಣಿಜ್ಯ ವಿಭಾಗ : ಎಂಕಾಂ

ವಿಜ್ಞಾನ ವಿಭಾಗ : ಎಂಎಸ್ಸಿ, ಗಣಕಶಾಸ್ತ್ರ, ಸಸ್ಯ ವಿಜ್ಞಾನ, ಭೌತಶಾಸ್ತ್ರ, ಗಣಿತ ಶಾಸ್ತ್ರ, ಗ್ರಂಥಾಲಯ, ಮಾಹಿತಿ ವಿಜ್ಞಾನ

ಶಿಕ್ಷಣ : ಬಿ.ಎಡ್

ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಪಿಹೆಚ್‌ಡಿ/ಎಂಫಿಲ್/ಎನ್. ಇ.ಟಿ/ಎಸ್.ಎಲ್.ಇ‌.ಟಿ ಹೊಂದಿದ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವೆಬ್ಸೈಟ್ ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಅಭ್ಯರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸೇವಾನುಭ ಪತ್ರ, ಪಿ.ಹೆಚ್.ಡಿ/ಎಂ.ಫಿಲ್/ ಎನ್.ಇ.ಟಿ/ಎಸ್.ಎಲ್.ಇ‌.ಟಿ ಸಂಶೋಧನಾ ಪತ್ರಿಕೆಗಳು( ದ್ವಿಪತ್ರಿಗಳಲ್ಲಿ) ಇತ್ಯಾದಿ ಅಗತ್ಯ ದಾಖಲಾತಿ ಪ್ರತಿಗಳೊಂದಿಗೆ ಕುಲಸಚಿವರು, ವಿಶ್ವವಿದ್ಯಾಲಯದ ಆಡಳಿತ ಕಛೇರಿ, ಶ್ರೀ ದೇವರಾಜು ಅರಸು ಬಡಾವಣೆ,ಟಮಕ, ಕೋಲಾರ- 563103 ಇಲ್ಲಿಗೆ ದಿನಾಂಕ 08-09-2021 ಸಂಜೆ 5.00 ಗಂಟೆಗೆ ಸಲ್ಲಿಸತಕ್ಕದ್ದು.

ಅತಿಥಿ ಉಪನ್ಯಾಸಕರ ಹುದ್ದೆಯು ಸಂಪೂರ್ಣ ತಾತ್ಕಾಲಿಕವಾಗಿರುತ್ತದೆ.

ಆಯ್ಕೆಯಾದ ಅತಿಥಿ ಉಪನ್ಯಾಸಕರ ವಿಶ್ವವಿದ್ಯಾಲಯದ ನಿಯಮಾನುಸಾರ ಸೂಕ್ತ ಸಂಭಾವನೆಯನ್ನು ನೀಡಲಾಗುತ್ತದೆ. ವಿವಿಧ ವಿಷಯಗಳ ಕಾರ್ಯಬಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸರಕಾರದ ಮೀಸಲಾತಿಯನ್ನು ಅನುಸರಿಸಿ ಮಾಡಲಾಗುವುದು.

ಅಭ್ಯರ್ಥಿಗಳು ಸಂದರ್ಶನದ ದಿನಾಂಕ ಮತ್ತು ಇತರೆ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ ನಿಂದ ಪಡೆಯುವುದು.

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದು : 08152-243152/53

ಅಪ್ಲಿಕೇಶನ್ ಫಾರಂ

error: Content is protected !!