ವಿವಿಧ ವೃಂದದ ಖಾಲಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ನವದೆಹಲಿಯ ಕರ್ನಾಟಕ ಭವನದ ವಿವಿಧ ವೃಂದದ ಖಾಲಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಾಯುವಿಕೆ ಎರಡನೇ ಪಟ್ಟಿ ಪ್ರಕಟಿಸಲಾಗಿದೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿಯಿರುವ 32 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದಕ್ಕೆ 2021 ರ ಫೆಬ್ರವರಿ, 20 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆಯನುಸಾರ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆಪಟ್ಟಿಯಂತೆ 2021 ರ ಆಗಸ್ಟ್, 24 ರಂದು ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ದಾಖಲೆ ಪರಿಶೀಲನೆ ಮತ್ತು ಅನ್ವಯಿಸುವ ಹುದ್ದೆಗಳಿಗೆ ಪ್ರಾವೀಣ್ಯತೆ ಪರೀಕ್ಷೆ ನಡೆಸಲಾಗಿದೆ.

ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ, ಕಾಯುವಿಕೆ ಪಟ್ಟಿ ಹಾಗೂ ಹೆಚ್ಚಿನ ಮಾಹಿತಿಯನ್ನು 2021 ರ ಆಗಸ್ಟ್, 27 ರಂದು ಪ್ರಕಟಿಸಲಾಗಿದ್ದು, ವಿವರದ ಮಾಹಿತಿಗೆ http://www.karnatakabhavan.karnataka.gov.in ನ್ನು ವೀಕ್ಷಿಸಬಹುದು. ಬಾಧಿತರಾಗಬಹುದಾದ ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಯನ್ನು ಸೆಪ್ಟೆಂಬರ್, 04 ರ ಸಂಜೆ 5-30 ರೊಳಗೆ ಲಿಖಿತವಾಗಿ ಅಥವಾ ಇಮೇಲ್ ಮೂಲಕ ಸಲ್ಲಿಸಬಹುದಾಗಿದೆ ಎಂದು ನೇರ ನೇಮಕಾತಿ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ನವದೆಹಲಿಯ ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತರಾದ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

error: Content is protected !!