ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ಅಗತ್ಯವಿರುವ ವಿವಿಧ ವೃಂದಗಳ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಕರ್ನಾಟಕ ರಾಜ್ಯಪತ್ರ ಪ್ರಕಟವಾಗಿದೆ. ವಸತಿ ಶಾಲೆಗಳಲ್ಲಿ ಸುಮಾರು 8883 ಹುದ್ದೆಗಳನ್ನು ಪ್ರಸಕ್ತ ಸಾಲಿನಲ್ಲಿ ಭರ್ತಿ ಮಾಡುವ ಕುರಿತು ಸರಕಾರವು ರಾಜ್ಯಪತ್ರ ಹೊರಡಿಸಿದೆ. ಈ ಹುದ್ದೆಗಳಿಗೆ ಕರಡು ಅಧಿಸೂಚನೆ ಇದಾಗಿದ್ದು, ಕಾಲಕಾಲಕ್ಕೆ ನೇಮಕಾತಿ ಅಧಿಸೂಚನೆಗಳು ಪ್ರಕಟಗೊಳ್ಳಲಿದ್ದು, ಆ ಸಮಯದಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : FDA ಕಮ್ ಕಂಪ್ಯೂಟರ್ ಅಪರೇಟರ್ – 716
SDaA ಕಮ್ ಕಂಪ್ಯೂಟರ್ ಅಪರೇಟರ್ – 33
ಗ್ರಂಥಪಾಲಕರು ( ಲೈಬ್ರೇರಿಯನ್ ) – 14
ವಾರ್ಡನ್ ( ಮೇಲ್ವಿಚಾರಕರು) 712
ಅಡುಗೆಯವರು ( ಕುಕ್) 2039
ಸಹಾಯಕ ಅಡುಗೆಯವರು ( ಕುಕ್) 1512
ಸ್ವೀಪರ್ಸ್ – 1728
ವಾಚ್ ಮೆನ್ ಅಥವಾ ಫ್ಯೂನ್ 2098
ಶೀಘ್ರಲಿಪಿಗಾರರು – 1
ಪ್ರಯೋಗಾಲಯ ಸಹಾಯಕರು – 11
ಡ್ರೈವರ್ ( ಚಾಲಕ) 19
ಮೇಲಿನ ಹುದ್ದೆಗಳಲ್ಲಿ ಖಾಯಂ ಹುದ್ದೆಗಳು, ತಾತ್ಕಾಲಿಕ ಹುದ್ದೆಗಳು ಎರಡೂ ಇವೆ. ಪ್ರಸ್ತುತ ಕರಡು ಅಧಿಸೂಚನೆ ಪ್ರಕಟಗೊಂಡಿದ್ದು, ಈ ಹುದ್ದೆಗಳ ನೇಮಕಾತಿ ಬಗ್ಗೆ ಆಕ್ಷೇಪಣೆ ಏನಾದರೂ ಇದ್ದಲ್ಲಿ ಸಲ್ಲಿಸಲು ಸೂಚಿಸಲಾಗಿದೆ.
ಆಕ್ಷೇಪಣೆ ಸಲ್ಲಿಸಲು ವಿಳಾಸ ಈ ಕೆಳಗೆ ನೀಡಲಾಗಿದೆ :
Additional Chief Secretary to Government, Social Welfare Department, Vikasasoudha, 2nd Flore, Room No.232, Bangalore – 560001
ನೋಟಿಫಿಕೇಶನ್









Got a Questions?
Find us on Socials or Contact Us and we’ll get back to you as soon as possible.