ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ : ಮುತ್ತಪ್ಪ ರೈ ಪುತ್ರನ ವಿರುದ್ಧ ದೂರು ದಾಖಲು

ಉದ್ಯಮಿ ಶ್ರೀನಿವಾಸ ನಾಯ್ಡು ಅವರ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತೊಂದು ತಿರುವು ದೊರಕಿದೆ.

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಮಗ ರಿಕ್ಕಿ ರೈ ವಿರುದ್ಧ ವಂಚನೆ ಹಾಗೂ ಪ್ರಾಣಬೆದರಿಕೆ ದೂರನ್ನು ಶ್ರೀನಿವಾಸ ನಾಯ್ಡು ನೀಡಿದ್ದಾರೆ.

ಈಗಾಗಲೇ ಶ್ರೀನಿವಾಸ ನಾಯ್ಡು ನೀಡಿದ ದೂರಿನ ಮೇರೆಗೆ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜಯ ಕರ್ನಾಟಕ ಸಂಘಟನೆ ಕಾನೂನು ಘಟಕದ ಮುಖ್ಯಸ್ಥ ನಾರಾಯಣಸ್ವಾಮಿಯ ಐವರು ಕಿರಿಯ ವಕೀಲರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಸ್ವಾಮಿ ತಲೆಮರೆಸಿಕೊಂಡಿದ್ದಾರೆ

ಇದರ ಮಧ್ಯೆ, ಕೆಲ‌ ದಿನಗಳ ಹಿಂದಷ್ಟೇ ವಿದೇಶದಿಂದ ಬೆಂಗಳೂರಿಗೆ ಆಗಮಿಸಿರುವ ರಿಕ್ಕಿ ರೈ ನಾರಾಯಣ ಸ್ವಾಮಿ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಅಪರಿಚಿತ ನಂಬರ್ ಗಳಿಂದ ಕರೆ ಮಾಡಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ರಿಕ್ಕಿ ರೈ ಅವರ ಕೈವಾಡ ಇದೆ ಎಂದು ನಾಯ್ಡು ಆರೋಪಿಸಿದ್ದಾರೆ.

error: Content is protected !!