ಚಿತ್ರದುರ್ಗದ ರುಡ್ ಸೆಟ್ ಸಂಸ್ಥೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ 11 ವಿವಿಧ ರೀತಿಯ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
45 ದಿನ, 30 ದಿನ, 13 ದಿನ ಹಾಗೂ 10 ದಿನದ ತರಬೇತಿ ನಡೆಯಲಿದೆ. ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿ, ಕಂಪ್ಯೂಟರ್ ಡಿಟಿಪಿ ತರಬೇತಿ ( 45 ದಿನ) , ಸಿಸಿ ಕ್ಯಾಮರಾ ಇನ್ ಸ್ಟಾಲೇಷನ್ ಮತ್ತು ಸರ್ವಿಸ್ ತರಬೇತಿ ( 13 ದಿನ), ಪಿಯು ಪಾಸ್ ಅಥವಾ ಪದವಿ ಶಿಕ್ಷಣ.
ಅಣಬೆ ಬೇಸಾಯ ತರಬೇತಿ ( 10 ದಿನ) , ಎಂಬ್ರಾಯಿಡರಿ ವರ್ಕ್ ತರಬೇತಿ( 30 ದಿನ), ಗೊಂಬೆ ತಯಾರಿಕೆ ತರಬೇತಿ ( 13 ದಿನ), ಕೋಳಿ ಸಾಕಾಣಿಕೆ ತರಬೇತಿ ( 10 ದಿನ), ಮಹಿಳೆಯರ ಟೈಲರಿಂಗ್ ತರಬೇತಿ ( 30 ದಿನ), ಮಹಿಳೆಯರ ಬ್ಯೂಟಿ ಪಾರ್ಲರ್ ತರಬೇತಿ ( 30 ದಿನ), ರೆಪ್ರಿಜರೇಷನ್ ಮತ್ತು ಎಸಿ ರಿಪೇರಿ ತರಬೇತಿ ( 30 ದಿನ), ಬ್ಯಾಗ್ ತಯಾರಿಕೆ ತರಬೇತಿ ( 10 ದಿನ);
ವಿದ್ಯಾರ್ಹತೆ : ಓದಲು ಬರೆಯಲು ಬರಬೇಕು.
ಅರ್ಹತೆ ಮತ್ತು ದಾಖಲಾತಿ : ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಗ್ರಾಮೀಣ ಬಿಪಿಎಲ್ ಕಾರ್ಡ್ ಅಥವಾ ಎನ್ ಆರ್ ಇ ಜಿ ಜಾಬ್ ಕಾರ್ಡ್ ನ ಜೆರಾಕ್ಸ್ ಪ್ರತಿ, 4 ಫೋಟೋ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಅಕ್ಟೋಬರ್ 10 ರೊಳಗೆ ಸಂಸ್ಥೆಗೆ ಬಂದು ಅರ್ಜಿ ಸಲ್ಲಿಸಬೇಕು.
ವಯೋಮಿತಿ : 18 ರಿಂದ 45 ವರ್ಷದೊಳಗಿರಬೇಕು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 8618282445, 8095472489, 9449732805, 08194-223505, 9448565766, 9964096406, 9019299901, 8660627785 ಸಂಪರ್ಕಿಸಲು ರುಡ್ ಸೆಟ್ ಪ್ರಕಟಣೆ ತಿಳಿಸಿದೆ.









Got a Questions?
Find us on Socials or Contact Us and we’ll get back to you as soon as possible.