ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒ 2025: ಅರ್ಜಿ ಸಲ್ಲಿಸಲು ಜುಲೈ 9 ಕೊನೆಯ ದಿನ, ಹೂಡಿಕೆ ಮಾಡಲು ಸೂಕ್ತವೆ?

Travel Food Services IPO Details
Travel Food Services IPO

ಟ್ರಾವೆಲ್ ಫುಡ್ ಸರ್ವೀಸಸ್ ಲಿಮಿಟೆಡ್ (Travel Food Services Ltd) ತನ್ನ IPO ಮೂಲಕ ಸಾರ್ವಜನಿಕ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಜುಲೈ 7ರಿಂದ ಜುಲೈ 9, 2025ರೊಳಗೆ ಈ ಬೃಹತ್ ಬುಕ್ಬಿಲ್ಡಿಂಗ್ ಐಪಿಒಗೆ ಬಿಡ್‌ ಸಲ್ಲಿಸಬಹುದು. ಈ ಐಪಿಒ ಬಿಎಸ್‌ಇ ಹಾಗೂ ಎನ್‌ಎಸ್‌ಇಗಳಲ್ಲಿ ಪಟ್ಟಿ ಆಗಲಿದೆ.


ಜುಲೈ ತಿಂಗಳ ಎರಡನೇ ಮೇನ್‌ಬೋರ್ಡ್‌ ಐಪಿಒ ಟ್ರಾವೆಲ್‌ ಫುಡ್‌ ಸರ್ವೀಸಸ್‌ ಲಿಮಿಟೆಡ್‌ಗೆ ಇಂದು ಅಂದರೆ ಜುಲೈ 7ರಿಂದ ಬಿಡ್‌ ಸಲ್ಲಿಸಬಹುದು. ಜುಲೈ 9ರವರೆಗೆ ಬಿಡ್‌ ಸಲ್ಲಿಸಲು ಅವಕಾಶವಿದೆ. ಇದು 2 ಕೋಟಿ ರೂಪಾಯಿಯ ಬುಕ್‌ ಬಿಲ್ಡಿಂಗ್‌ ಐಪಿಒ ಆಗಿದ್ದು, ಆಫರ್‌ ಫಾರ್‌ ಸೇಲ್‌ ಮೂಲಕ 1.89 ಕೋಟಿ ರೂ ಷೇರು ಐಪಿಒ ಮೂಲಕ ಲಭ್ಯವಿದೆ. ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒ ಹಂಚಿಕೆಯನ್ನು ಗುರುವಾರ, ಜುಲೈ 10, 2025 ರಂದು ಅಂತಿಮಗೊಳಿಸುವ ನಿರೀಕ್ಷೆಯಿದೆ. ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಪಟ್ಟಿ ಮಾಡಲಾಗುತ್ತದೆ. ತಾತ್ಕಾಲಿಕ ಪಟ್ಟಿ ದಿನಾಂಕವನ್ನು ಜುಲೈ 14, 2025 ಸೋಮವಾರ ಎಂದು ನಿಗದಿಪಡಿಸಲಾಗಿದೆ.

  • ಐಪಿಒ ದಿನಾಂಕಗಳು:
    • ಬಿಡ್ ಆರಂಭ: ಜುಲೈ 7, 2025
    • ಕೊನೆಯ ದಿನ: ಜುಲೈ 9, 2025
    • ಹಂಚಿಕೆ ದಿನಾಂಕ: ಜುಲೈ 10, 2025
    • ಪಟ್ಟಿ ದಿನಾಂಕ: ಜುಲೈ 14, 2025
  • ಐಪಿಒ ಬೆಲೆ ಶ್ರೇಣಿ: 1045 – ₹1100 ರೂಪಾಯಿ (ಪ್ರತಿ ಷೇರು)
  • ಲಾಟ್ ಗಾತ್ರ: 13 ಷೇರುಗಳು | ಕನಿಷ್ಟ ಹೂಡಿಕೆ 13,585 ರೂಪಾಯಿ
  • ಉದ್ಯೋಗಿಗಳಿಗೆ ರಿಯಾಯಿತಿ: 104 ರೂ ರಿಯಾಯಿತಿಗೆ 40,160 ಷೇರುಗಳು ಕಾಯ್ದಿರಿಸಲಾಗಿದೆ

ಒಂದು ಷೇರಿನ ದರ 1045-1100 ರೂ.

ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒ ಬೆಲೆ ಪಟ್ಟಿಯನ್ನು ಪ್ರತಿ ಷೇರಿಗೆ 1045 ರೂಪಾಯಿಯಿಂದ 1100 ರೂ. ನಿಗದಿಪಡಿಸಲಾಗಿದೆ. ಸದ್ಯ ಇದರ ಜಿಎಂಪಿ ಉತ್ತಮವಾಗಿರುವುದರಿಂದ ಹೆಚ್ಚಿನ ಮೊತ್ತಕ್ಕೆ ಲಿಸ್ಟ್‌ ಆಗುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ. ಒಂದು ಅರ್ಜಿಯ ಲಾಟ್ ಗಾತ್ರ 13. ಚಿಲ್ಲರೆ ವ್ಯಾಪಾರಕ್ಕೆ ಅಗತ್ಯವಿರುವ ಕನಿಷ್ಠ ಹೂಡಿಕೆ ಮೊತ್ತ 13,585 (13 ಷೇರುಗಳು) ರೂಪಾಯಿ. sNIIಗಾಗಿ ಲಾಟ್ ಗಾತ್ರದ ಹೂಡಿಕೆ 14 ಲಾಟ್‌ಗಳು (182 ಷೇರುಗಳು), 2,00,200 ರೂಪಾಯಿ ಬೇಕಿರುತ್ತದೆ. bNIIನಲ್ಲಿ 70 ಲಾಟ್‌ಗಳು (910 ಷೇರುಗಳು) ಲಭ್ಯವಿದೆ. ಈ ಷೇರು ಬಿಡುಗಡೆ ಬೆಲೆಗಿಂತ 104.00 ರೂಪಾಯಿ ರಿಯಾಯಿತಿಯಲ್ಲಿ ಉದ್ಯೋಗಿಗಳಿಗೆ 40,160 ಷೇರುಗಳ ಕಾಯ್ದಿರಿಸುವಿಕೆಯನ್ನು ಒಳಗೊಂಡಿದೆ. ಅಂದರೆ, ಟ್ರಾವೆಲ್‌ ಫುಡ್‌ ಸರವೀಸ್‌ ಲಿಮಿಟೆಡ್‌ನ ಉದ್ಯೋಗಿಗಳಿಗೆ ಈ ಕಡಿಮೆ ದರದಲ್ಲಿ ಐಪಿಒ ಲಭ್ಯವಿದೆ. ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್ ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒನ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್ ಆಗಿದ್ದರೆ, ಎಂಯುಎಫ್‌ಜಿ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಲಿಂಕ್ ಇಂಟೈಮ್) ಈ ಷೇರು ಬಿಡುಗಡೆಗೆ ರಿಜಿಸ್ಟ್ರಾರ್ ಆಗಿದೆ.

ಈ ಐಪಿಒಗೆ ಬಿಡ್‌ ಸಲ್ಲಿಸಬಹುದೇ?

ಷೇರುಪೇಟೆಯ ವಿವಿಧ ತಜ್ಞರು ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒಗೆ ಬಿಡ್‌ ಸಲ್ಲಿಸಬಹುದು ಎಂದಿದ್ದಾರೆ. ಉದಾಹರಣೆಗೆ ಚಿತೋರ್‌ಗರ್‌ನ ದಿಲೀಪ್‌ ದಾವ್ಡಾ ಅವರು ಈ ಐಪಿಒಗೆ “Apply” ಎಂದು ಷರಾ ಬರೆದಿದ್ದಾರೆ. ಅವರ ಪ್ರಕಾರ, “ವಿಮಾನ ನಿಲ್ದಾಣಗಳು ಮತ್ತು ಹೆದ್ದಾರಿಗಳಲ್ಲಿ ಕ್ಯೂಎಸ್‌ಆರ್‌ ಸಂಬಂಧಿತ ಸೇವೆಗಳು ಮತ್ತು ಎಫ್‌ ಆಂಡ್‌ ಬಿ ಮಳಿಗೆಗಳಲ್ಲಿ ಟಿಎಫ್‌ಎಸ್‌ಎಲ್‌ ಮುಂಚೂಣಿಯಲ್ಲಿದೆ. ಇದು ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣದಲ್ಲಿನ ಹೆಚ್ಚಿನ ಖರ್ಚು ಮತ್ತು ಮೂಲಸೌಕರ್ಯ ಅಭಿವೃದ್ಧಿಗಳಿಗೆ ಅನುಗುಣವಾಗಿ ಅದನ್ನು ವಿಸ್ತರಿಸಲು ಯೋಜಿಸುತ್ತಿದೆ. ಕಂಪನಿಯು ತನ್ನ ಉನ್ನತ ಮತ್ತು ಕೆಳಮಟ್ಟದ ಸಾಲುಗಳಲ್ಲಿ ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸಿದೆ. ಇದು ವಿಭಾಗದಲ್ಲಿ ಸ್ಥಾಪಿತ ಸ್ಥಾನವನ್ನು ಹೊಂದಿರುವುದರಿಂದ ಮತ್ತು ಮೊದಲ ಸಾಗಣೆದಾರನಾಗಿರುವುದರಿಂದ, ಈ ಕೌಂಟರ್‌ಗಾಗಿ ಪೋಸ್ಟ್ ಲಿಸ್ಟಿಂಗ್ ಫ್ಯಾನ್ಸಿಯನ್ನು ತಳ್ಳಿಹಾಕಲಾಗುವುದಿಲ್ಲ. ಅದರ ಇತ್ತೀಚಿನ ಹಣಕಾಸು ಡೇಟಾವನ್ನು ಆಧರಿಸಿ, ಸಮಸ್ಯೆಯು ಸಂಪೂರ್ಣವಾಗಿ ಬೆಲೆಬಾಳುವಂತೆ ತೋರುತ್ತದೆ. ಹೂಡಿಕೆದಾರರು ಮಧ್ಯಮದಿಂದ ದೀರ್ಘಾವಧಿಗೆ ಹಣವನ್ನು ಇಡಬಹುದು” ಎಂದು ದಿಲೀಪ್‌ ದಾವ್ಡಾ ಅಭಿಪ್ರಾಯಪಟ್ಟಿದ್ದಾರೆ.

ಟ್ರಾವೆಲ್ ಫುಡ್ ಬ್ಯುಸಿನೆಸ್ ಲಿಮಿಟೆಡ್‌ ಐಪಿಒ ಜಿಎಂಪಿ ಎಷ್ಟಿದೆ?

ಜುಲೈ 2ರಂದು ಟ್ರಾವೆಲ್‌ ಫುಡ್‌ ಸರ್ವೀಸ್‌ ಐಪಿಒನ ಜಿಎಂಪಿ ಶೇಕಡ 8.36 ಇತ್ತು. ಅಂದರೆ, ಷೇರು ದರ 92 ರೂಪಾಯಿ ಹೆಚ್ಚಾಗುವ ನಿರೀಕ್ಷೆ ಇತ್ತು. ಇದು ಜುಲೈ 4ರಂದು ಶೇಕಡ 7.27ಕ್ಕೆ ಅಂದರೆ 80 ರೂಪಾಯಿ ಇಳಿಕೆ ಕಂಡಿತ್ತು. ಜುಲೈ 5ರಂದು ಶೇಕಡ 4.55ಕ್ಕೆ ಇಳಿಕೆ ಕಂಡಿದೆ. ಜುಲೈ 7ರಂದು ಶೇಕಡ 2.73ಕ್ಕೆ ತಲುಪಿದೆ. ಅಂದರೆ ಪ್ರತಿಷೇರಿಗೆ 30 ರೂಪಾಯಿ ಹೆಚ್ಚಾಗುವ ಸೂಚನೆ ಇದೆ. ಐಪಿಒ ಹಂಚಿಕೆಯಾಗಿ ಲಿಸ್ಟ್‌ ಆದ ತಕ್ಷಣ ಮಾರಾಟ ಮಾಡುವವರಿಗೆ ಇದು ಹೆಚ್ಚು ಲಾಭ ತಂದುಕೊಡುವ ನಿರೀಕ್ಷೆ ಇಲ್ಲ ಎಂದು ಗ್ರೇ ಮಾರುಕಟ್ಟೆ ಮೂಲಕ ತಿಳಿದುಕೊಳ್ಳಬಹುದು. ಆದರೆ, ಮಧ್ಯಮದಿಂದ ದೀರ್ಘಾವಧಿಯವರೆಗೆ ಈ ಷೇರು ಇಟ್ಟುಕೊಳ್ಳುವವರಿಗೆ ಸೂಕ್ತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟ್ರಾವೆಲ್ ಫುಡ್ ಸರ್ವೀಸಸ್ ಲಿಮಿಟೆಡ್ ಬಗ್ಗೆ

ಯಾವುದೇ ಐಪಿಒಗೆ ಅರ್ಜಿ ಸಲ್ಲಿಸುವ ಮೊದಲು ಆ ಕಂಪನಿಯ ಕುರಿತು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಬನ್ನಿ ಟ್ರಾವೆಲ್‌ ಫುಡ್‌ ಸರ್ವೀಸಸ್‌ ಲಿಮಿಟೆಡ್‌ ಕುರಿತು ಕೊಂಚ ಮಾಹಿತಿ ತಿಳಿದುಕೊಳ್ಳೋಣ. ಇದು 2007ರಲ್ಲಿ ಆರಂಭವಾದ ಕಂಪನಿ. ಭಾರತೀಯ ವಿಮಾನ ನಿಲ್ದಾಣ ಪ್ರಯಾಣ ತ್ವರಿತ ಸೇವಾ ರೆಸ್ಟೋರೆಂಟ್ (“ಟ್ರಾವೆಲ್ ಕ್ಯೂಎಸ್ಆರ್”) ಮತ್ತು ಲೌಂಜ್ (“ಲೌಂಜ್”) ಆಗಿದೆ. 117 ಪಾಲುದಾರ ಮತ್ತು ಆಂತರಿಕ ಬ್ರ್ಯಾಂಡ್‌ಗಳನ್ನು ಒಳಗೊಂಡಿರುವ ಕಂಪನಿಯ ಎಫ್ & ಬಿ ಬ್ರಾಂಡ್ ಪೋರ್ಟ್‌ಫೋಲಿಯೊ, ಜೂನ್ 30, 2024 ರ ಹೊತ್ತಿಗೆ ಭಾರತ ಮತ್ತು ಮಲೇಷ್ಯಾದಾದ್ಯಂತ 397 ಟ್ರಾವೆಲ್ ಕ್ಯೂಎಸ್‌ಆರ್‌ಗಳ ಕಾರ್ಯಾಚರಣೆಯಲ್ಲಿದೆ. ಕ್ಯುರೇಟೆಡ್ ಆಹಾರ ಮತ್ತು ಪಾನೀಯ (“ಎಫ್ & ಬಿ”) ಪರಿಕಲ್ಪನೆಯ ಬಿಸ್ನೆಸ್‌ ಇದಾಗಿದೆ.

ಟ್ರಾವೆಲ್ ಫುಡ್ ಬ್ಯುಸಿನೆಸ್ ಲಿಮಿಟೆಡ್‌ನ ಲೌಂಜ್ ವ್ಯವಹಾರವು ವಿಮಾನ ನಿಲ್ದಾಣದ ಟರ್ಮಿನಲ್‌ಗಳ ಒಳಗೆ ನಿರ್ದಿಷ್ಟ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಜೂನ್ 30, 2024 ರ ಹೊತ್ತಿಗೆ, ಕಂಪನಿಯ ಟ್ರಾವೆಲ್ ಕ್ಯೂಎಸ್ಆರ್ ಮತ್ತು ಲೌಂಜ್ ವ್ಯವಹಾರಗಳು ಭಾರತದ 14 ವಿಮಾನ ನಿಲ್ದಾಣಗಳಲ್ಲಿ ಮತ್ತು ಮಲೇಷ್ಯಾದ ಮೂರು ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತಹ ವಿಮಾನ ನಿಲ್ದಾಣಗಳಲ್ಲಿ ದೆಹಲಿ ವಿಮಾನ ನಿಲ್ದಾಣ, ಮುಂಬೈ ವಿಮಾನ ನಿಲ್ದಾಣ, ಬೆಂಗಳೂರು ವಿಮಾನ ನಿಲ್ದಾಣ, ಹೈದರಾಬಾದ್ ವಿಮಾನ ನಿಲ್ದಾಣ, ಕೋಲ್ಕತ್ತಾ ವಿಮಾನ ನಿಲ್ದಾಣ ಮತ್ತು ಚೆನ್ನೈ ವಿಮಾನ ನಿಲ್ದಾಣಗಳು ಸೇರಿವೆ. ಜೂನ್ 30, 2024 ರ ಹೊತ್ತಿಗೆ, ಟ್ರಾವೆಲ್ ಫುಡ್ ಸರ್ವೀಸಸ್ ದೆಹಲಿ ವಿಮಾನ ನಿಲ್ದಾಣದಲ್ಲಿ 14 ವರ್ಷಗಳ ಕಾಲ, ಮುಂಬೈ ವಿಮಾನ ನಿಲ್ದಾಣ 15 ವರ್ಷಗಳ ಕಾಲ, ಬೆಂಗಳೂರು ವಿಮಾನ ನಿಲ್ದಾಣ 5 ವರ್ಷಗಳ ಕಾಲ ಮತ್ತು ಚೆನ್ನೈ ವಿಮಾನ ನಿಲ್ದಾಣ 11 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿತ್ತು ಎಂದು ಟ್ರಾವೆಲ್ ಫುಡ್ ಸರ್ವೀಸಸ್ ಲಿಮಿಟೆಡ್ ಕುರಿತು ಮಾಹಿತಿ ಲಭ್ಯವಿದೆ.


ಡಿಸ್ಕ್ಲೈಮರ್‌: ಷೇರುಪೇಟೆಯು ಹಣಕಾಸು ಅಪಾಯಗಳನ್ನು, ಮಾರುಕಟ್ಟೆಯ ಏರಿಳಿತದ ತೊಂದರೆಗಳನ್ನು ಹೊಂದಿರುತ್ತದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆಯ ಬಗ್ಗೆ ಸಾಕಷ್ಟು ಅಧ್ಯಯನ ಅಗತ್ಯವಾಗಿರುತ್ತದೆ. ಕರ್ನಾಟಕಬೆಸ್ಟ್‌.ಕಾಂ ಯಾವುದೇ ಷೇರುಗಳನ್ನು ಖರೀದಿಸುವಂತೆ ಓದುಗರಿಗೆ ಶಿಫಾರಸು ಮಾಡುವುದಿಲ್ಲ. ಓದುಗರಿಗೆ ಷೇರುಪೇಟೆಯ ಮತ್ತು ಐಪಿಒಗಳ ಮಾಹಿತಿ ನೀಡುವ ಉದ್ದೇಶದಿಂದ ಈ ಲೇಖನವನ್ನು ಪ್ರಕಟಿಸಿರುತ್ತದೆ. ಹೂಡಿಕೆದಾರರು ಸ್ವಂತ ವಿವೇಚನೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು. ಸ್ವಂತ ಅಧ್ಯಯನ ಹಾಗೂ ಹಣಕಾಸು ಸಲಹೆಗಾರರೊಂದಿಗೆ ಸಂವಹನದ ನಂತರ ಮಾತ್ರ ಹೂಡಿಕೆ ನಿರ್ಧಾರ ತೆಗೆದುಕೊಳ್ಳಿ.

error: Content is protected !!