ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ : 347 ವಿವಿಧ ಹುದ್ದೆ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ( ಯುಬಿಐ)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಅರ್ಜಿ‌ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 03, 2021

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ( ಯುಬಿಐ) 2021 ರ ಸಾಲಿಗೆ 347 ಹಿರಿಯ ವ್ಯವಸ್ಥಾಪಕರು, ವ್ಯವಸ್ಥಸಪಕರು ಮತ್ತು ಸಹಾಯಕ ವ್ಯವಸ್ಥಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

ಹಿರಿಯ ಮ್ಯಾನೇಜರ್ ( ರಿಸ್ಕ್) – 60 ಹುದ್ದೆಗಳು
ಮ್ಯಾನೇಜರ್ ( ರಿಸ್ಕ್) 60 ಹುದ್ದೆಗಳು
ಮ್ಯಾನೇಜರ್ ( ಸಿವಿಲ್ ಇಂಜಿನಿಯರ್ ) 07 ಹುದ್ದೆಗಳು
ಮ್ಯಾನೇಜರ್ ( ಆರ್ಕಿಟೆಕ್ಟ್) 07 ಹುದ್ದೆಗಳು
ಮ್ಯಾನೇಜರ್ ( ಎಲೆಕ್ಟ್ರಿಕಲ್ ಇಂಜಿನಿಯರ್) – 2 ಹುದ್ದೆಗಳು
ಮ್ಯಾನೇಜರ್ ( ಪ್ರಿಂಟಿಂಗ್ ಟೆಕ್ನಾಲಜಿಸ್ಟ್) – 01 ಹುದ್ದೆಗಳು
ಮ್ಯಾನೇಜರ್ ( ವಿದೇಶೀ ವಿನಿಮಯ)- 50 ಹುದ್ದೆಗಳು
ಮ್ಯಾನೇಜರ್ ( ಚಾರ್ಟರ್ಡ್ ಅಕೌಂಟೆಂಟ್) – 14 ಹುದ್ದೆಗಳು
ಅಸಿಸ್ಟೆಂಟ್ ಮ್ಯಾನೇಜರ್ ( ತಾಂತ್ರಿಕ ಅಧಿಕಾರಿ) – 26 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು ( ವಿದೇಶೀ ವಿನಿಮಯ )- 120 ಹುದ್ದೆಗಳು

ಒಟ್ಟು 347 ಹುದ್ದೆಗಳು

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಹಣಕಾಸಿನ ಅಪಾಯ ನಿರ್ವಹಣೆ/ಸಿಎ/ಸಿಎಂಎ/ಸಿಎಸ್ ಅಥವಾ ಗಣಿತ / ಅಂಕಿಅಂಶ/ಅರ್ಥಶಾಸ್ತ್ರ ಅಥವಾ ಬಿಇ/ಬಿಟೆಕ್ ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ : ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಕನಿಷ್ಠ 20 ವರ್ಷದಿಂದ ಗರಿಷ್ಠ 30 ವರ್ಷಗಳು, ವ್ಯವಸ್ಥಾಪಕ ಹುದ್ದೆಗಳಿಗೆ ಕನಿಷ್ಠ 25 ರಿಂದ ಗರಿಷ್ಠ 35 ವರ್ಷಗಳು‌ ಮತ್ತು ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ಕನಿಷ್ಠ 30 ರಿಂದ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ನೋಟಿಫಿಕೇಶನ್

error: Content is protected !!