BBMP ಯಿಂದ 420 ಕ್ಕೂ ಅಧಿಕ‌ ಹುದ್ದೆಗೆ ನೇರ ಸಂದರ್ಶನಕ್ಕೆ ಆಹ್ವಾನ

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಅಡಿಯಲ್ಲಿ, ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ, ಕಲ್ಯಾಣ ಸಂಘ( ರಿ) ದ ವ್ಯಾಪ್ತಿಯಲ್ಲಿ ಹಾಗೂ ಆರ್ ಸಿ ಹೆಚ್ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು ಹಾಗೂ ಹುದ್ದೆಗಳ ಸಂಖ್ಯೆ :
ಪುರುಷ ಆರೋಗ್ಯ ಕಾರ್ಯಕರ್ತರು 217
ಪಿಸೀಷಿಯನ್ 5
ರೇಡಿಯೋಲಾಜಿಸ್ಟ್ 5
ಒಟಿ ಟೆಕ್ನಿಶಿಯನ್ 1
ಸ್ಟಾಫ್ ನರ್ಸ್ 18
ಫಾರ್ಮಾಸಿಸ್ಟ್ 18
ಲ್ಯಾಬ್ ಟೆಕ್ನಿಶಿಯನ್ 1
ANM 122

RCH ಪ್ರೋಗಾಮ್ ಅಡಿಯಲ್ಲಿನ ಉದ್ಯೋಗಗಳು

ಲಸಿಕಾ ಮೇಲ್ವಿಚಾರಕರು 1
ಸ್ಪೆಷಿಯಲಿಸ್ಟ್ 1
ಮೆಡಿಕಲ್ ಆಫೀಸರ್ 3
ಸ್ಟಾಫ್ ನರ್ಸ್ 22
ಆಫ್ ಥಲ್ಮಿಕ್ ಅಸಿಸ್ಟೆಂಟ್ 2
ಆಫ್ ಥಲ್ಮಿಕ್ ಸರ್ಜನ್ 1
ಕಮ್ಯುನಿಟಿ ನರ್ಸ್ 1
ಸೋಶಿಯಲ್ ವರ್ಕರ್ 1
ಕೌನ್ಸಿಲರ್ 1

ನೇರ ಸಂದರ್ಶನ ದಿನಾಂಕ : ಈ ಮೇಲಿನ ಹುದ್ದೆಗಳಿಗೆ 13-09-2021 ರಿಂದ 21-09-2021 ರವರೆಗೆ ನೇರ ಸಂದರ್ಶನವನ್ನು ನಡೆಸಲಾಗುತ್ತದೆ.

ಸಂದರ್ಶನ ವಿಳಾಸ : ನೌಕರರ ಭವನ, ಬಿಬಿಎಂಪಿ ಕೇಂದ್ರ ಕಚೇರಿ, ಬೆಂಗಳೂರು

ಸಂದರ್ಶನ ಸಮಯ: ಬೆಳಿಗ್ಗೆ 10:00 ಗಂಟೆಯಿಂದ 4:00 ಗಂಟೆಯವರೆಗೆ

ವಯೋಮಿತಿ : ಕನಿಷ್ಠ 18 ವರ್ಷ. ಸಾಮಾನ್ಯ ವರ್ಗದವರಿಗೆ 35 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಪ‌.ಜಾತಿ, ಪ.ಪಂಗಡ, ವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ. ವಿವಿಧ ಹುದ್ದೆಗಳಿಗೆ ಬೇರೆ ವೇಳಾಪಟ್ಟಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಸ್ಥಳ ಹಾಗೂ ದಿನಾಂಕದಂದು ವಾಕ್ ಇನ್ ಇಂಟರ್ವ್ಯೂ ಗೆ ಹಾಜರಾಗಲು ಸೂಚಿಸಲಾಗಿದೆ.

error: Content is protected !!