ವೆಬ್‌ಸೈಟ್‌ಗಳ ಮೂಲಕ ಬಿಸ್ನೆಸ್‌ನ ಯಶಸ್ಸು ಬಯಸುವವರು ತಮ್ಮ ವೆಬ್ ಪುಟಗಳ ಆನ್‌ಪೇಜ್ ಮತ್ತು ಆಫ್ ಪೇಜ್ ಎಸ್‌ಇಒ ಉತ್ತಮಪಡಿಸಲು ಪ್ರಯತ್ನಿಸಬೇಕು. ಈ ಲೇಖನದಲ್ಲಿ ಆನ್‌ಪೇಜ್- ಆಫ್‌ಪೇಜ್ ಎಸ್‌ಇಒ ಕುರಿತು ವಿವರ ನೀಡಲಾಗಿದೆ.
ಎಸ್‌ಇಒ ಎಂದರೆ ವೆಬ್ ಸೈಟ್‌ಗೆ ಕೇವಲ ಕೀವರ್ಡ್ ತುರುಕೋದು ಎಂಬ ಭಾವನೆ ಸಾಕಷ್ಟು ಜನರಲ್ಲಿ ಇರಬಹುದು. ಗೂಗಲ್ ಆಗಾಗ ಕೋರ್ ಅಪ್‌ಡೇಟ್ ಮಾಡುತ್ತ ಈ ರೀತಿ ಯದ್ವಾತದ್ವಾ ಕೀವರ್ಡ್ ತುರುಕುವವರಿಗೆ ಗೊತ್ತಿಲ್ಲದೆ ಪೆಟ್ಟು ನೀಡುತ್ತಾ ಇರುತ್ತದೆ. ಇದರ ಪರಿಣಾಮವಾಗಿ ಸೈಲೆಂಟ್ ಆಗಿ ಗೂಗಲ್ rankingನಲ್ಲಿ ವೆಬ್‌ಸೈಟ್ ತಳಸೇರುತ್ತಾ ಇರುತ್ತದೆ. ಇರಲಿ, ಇಂದಿನ ಕರ್ನಾಟಕ ಬೆಸ್ಟ್ ಲೇಖನಗಳದಲ್ಲಿ ಆನ್ ಪೇಜ್ ಮತ್ತು ಆಫ್ ಪೇಜ್ ಎಸ್‌ಇಒ ಬಗ್ಗೆ ತಿಳಿದುಕೊಳ್ಳೋಣ. ಎಸ್‌ಇಒ ಕೋರ್ಸ್ ಕಲಿತವರಿಗೆ ಈ ಕುರಿತು ಸಾಕಷ್ಟು ಮಾಹಿತಿ ಇರಬಹುದು. ಆ ಕೋರ್ಸ್‌ಗಳಲ್ಲಿ ಕಲಿತದ್ದೇ ವೇದವಾಕ್ಯ ಎಂದು ತಿಳಿದುಕೊಳ್ಳುವಂತೆ ಇಲ್ಲ. ಆ ಕೋರ್ಸ್‌ಗಳನ್ನು ಬರೆಯುವ ಸಮಯದ ಎಸ್‌ಇಒಗೂ ಅದನ್ನು ಕಲಿತ ಸಮಯದ ಎಸ್‌ಇಒಗೂ, ಕ್ಲಯೆಂಟ್ ವೆಬ್‌ಸೈಟ್‌ಗೆ ಆ ಎಸ್‌ಇಒ ಅಳವಡಿಸುವ ಸಮಯದ ಎಸ್‌ಇಒಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಗೂಗಲ್, ಬಿಂಗ್‌ನ ಕೋರ್ ಅಪ್‌ಡೇಟ್‌ಗೆ ತಕ್ಕಂತೆ ಎಸ್‌ಇಒ ತಜ್ಞರು ಅಪ್‌ಡೇಟ್ ಆಗಬೇಕಾಗಿರುವುದು ಇಂದಿನ ಅನಿವಾರ್ಯತೆ.
ಈ ಲೇಖನದಲ್ಲಿ ಎಸ್‌ಇಒದ ಹೊಸ ಅಪ್‌ಡೇಟ್ ಕುರಿತು ಮಾಹಿತಿ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕ ಬೆಸ್ಟ್‌ನ ಎಸ್‌ಇಒ ಸರಣಿ ಲೇಖನಗಳಲ್ಲಿ ಇಂತಹ ಹೊಸ ವಿಚಾರಗಳ ಕುರಿತು ಮಾಹಿತಿ ಪಡೆಯಬಹುದು. ಕರ್ನಾಟಕ ಬೆಸ್ಟ್ ಮೂಲಕ ಡಿಜಿಟಲ್ ಜಗತ್ತಿನ ಕುರಿತು ತಿಳಿಯುವ ಆಸಕ್ತಿ ಇರುವವರಿಗಾಗಿ ಇಲ್ಲಿ ಆನ್‌ಪೇಜ್ ಮತ್ತು ಆಫ್‌ಪೇಜ್ ಎಸ್‌ಇಒ ಎಂದರೇನು? ಇದರ ನಡುವೆ ಇರುವ ವ್ಯತ್ಯಾಸ ಏನು? ಇತ್ಯಾದಿ ವಿವರವನ್ನು ನೀಡಲಾಗಿದೆ.
ಎಸ್‌ಇಒ ಎಂದರೇನು?
ಸರ್ಚ್ ಎಂಜಿನ್ ರಿಸಲ್ಟ್ ಪೇಜ್ (ಎಸ್‌ಇಆರ್‌ಪಿ)ನಲ್ಲಿ ಅಂದರೆ ಗೂಗಲ್, ಬಿಂಗ್ ಇತ್ಯಾದಿ ಹುಡುಕಾಟ ಪುಟಗಳಲ್ಲಿ ನಮ್ಮ ನಿಮ್ಮೆಲ್ಲರ ವೆಬ್‌ಸೈಟ್‌ನ ಗೋಚರತ ಉತ್ತಮಪಡಿಸುವ ಅಭ್ಯಾಸವನ್ನು ಎಸ್‌ಇಒ ಅಥವಾ ಸರ್ಚ್ ಎಂಜಿನ್ ಆಪ್ಟಿಮೈಜೇಷನ್ ಎಂದು ಕರೆಯುತ್ತಾರೆ. ಗೂಗಲ್ ಸರ್ಚ್‌ನಲ್ಲಿ ವೆಬ್‌ಸೈಟ್‌ನ ಗೋಚರತೆ ಉತ್ತಮವಾಗಿದ್ದರೆ ಬಿಸ್ನೆಸ್‌ಗಳಿಗೆ ಲಾಭ. ಎಸ್‌ಇಒನಲ್ಲಿ ಆನ್ ಪೇಜ್ ಮತ್ತು ಆಫ್ ಪೇಜ್ ಎಸ್‌ಇಒ ಅಂತ ಎರಡು ವಿಧಾನ ಇದೆ.
ಆನ್ ಪೇಜ್ ಮತ್ತು ಆಫ್ ಪೇಜ್ ಎಸ್‌ಇಒ
ನಿರ್ದಿಷ್ಟ ವೆಬ್‌ಸೈಟ್‌ವೊಂದರ ಎಸ್‌ಇಒ ಆಪ್ಟಿಮೈಜೇಷನ್ ಮಾಡುವ ಸಮಯದಲ್ಲಿ ಆನ್ ಪೇಜ್ ಮತ್ತು ಆಫ್ ಪೇಜ್ ಎಂಬ ಎರಡು ಎಸ್‌ಇಒಗಳು ಅಗತ್ಯ. ಇವೆರಡೂ ಆನ್‌ಲೈನ್ ಪ್ರೆಸೆನ್ಸ್‌ಗೆ ಅತ್ಯಂತ ಅಗತ್ಯ. ಆನ್‌ಲೈನ್ ಪ್ರೆಸೆನ್ಸ್ ಅಥವಾ ವೆಬ್ ಅಸ್ತಿತ್ವದ ಕುರಿತು ಇತ್ತೀಚೆಗಷ್ಟೇ ಕರ್ನಾಟಕಬೆಸ್ಟ್.ಕಾಂನಲ್ಲಿ ವಿವರವಾದ ಲೇಖನ ಬರೆಯಲಾಗಿದೆ.
ವೆಬ್‌ಸೈಟ್‌ನ ನಿರ್ದಿಷ್ಟ ವೆಬ್ ಪುಟಗಳ ಕಂಟೆಂಟ್ ಮತ್ತು ಸ್ಟ್ರಕ್ಚರ್ ಆಪ್ಟಿಮೈಜೇಷನ್ ಮಾಡಲು ಗಮನ ನೀಡುವುದನ್ನು ಆನ್ ಪೇಜ್ ಎಸ್‌ಇಒ ಎನ್ನುತ್ತಾರೆ. ಆಫ್ ಪೇಜ್ ಎಸ್‌ಇಒ ಮಾಡುವ ಸಂದರ್ಭದಲ್ಲಿ ವೆಬ್‌ಸೈಟ್‌ನ ಅಥಾರಿಟಿ, ಕ್ರೆಡಿಬಿಲಿಟಿ, ಬಾಹ್ಯ ಕಂಪನಿಗಳು/ಸಂಸ್ಥೆಗಳು ಇತ್ಯಾದಿಗಳ ಜತೆ ಸಂಬಂಧ, ಒಟ್ಟಾರೆ ಆನ್‌ಲೈನ್ ಪ್ರೆಸೆನ್ಸ್ ಹೆಚ್ಚಿಸುವುದು ಇತ್ಯಾದಿಗಳನ್ನು ಒಳಗೊಂಡಿದೆ. ಸರ್ಚ್ ಎಂಜಿನ್‌ಗಳಲ್ಲಿ ವೆಬ್‌ಸೈಟ್‌ನ ರಾಕಿಂಗ್ ಉತ್ತಮ ಪಡಿಸಲು ಆಫ್‌ಪೇಜ್ ಎಸ್‌ಇಒ ನೆರವಾಗುತ್ತದೆ.
ಆನ್ ಪೇಜ್ ಎಸ್‌ಇಒ ಎಂದರೇನು?
ಈಗಾಗಲೇ ಹೇಳಿದಂತೆ ವೆಬ್‌ಸೈಟ್‌ನ ಪ್ರತಿಯೊಂದು ಪುಟಗಳನ್ನು ಆಪ್ಟಿಮೈಜ್ ಮಾಡುವಂತಹ ಪ್ರಕ್ರಿಯೆ ಇದಾಗಿದೆ. ಈ ಮೂಲಕ ಗೂಗಲ್, ಯಾಹೂ, ಬಿಂಗ್‌ನಿಂದ ಹೆಚ್ಚು ಟ್ರಾಫಿಕ್ ನಿಮ್ಮ ವೆಬ್‌ಸೈಟ್‌ಗೆ ಬರುವಂತೆ ಮಾಡುವ ಕೆಲಸ ಇಲ್ಲಿ ಮಾಡಲಾಗುತ್ತದೆ. ಎಸ್‌ಇಒ ಅಂದರೆ ಕೇವಲ ಗೂಗಲ್ ಎಸ್‌ಇಒ ಅಲ್ಲ. ಯಾಹೂ, ಬಿಂಗ್ ಇತ್ಯಾದಿಗಳನ್ನೂ ಗಮನದಲ್ಲಿಟ್ಟುಕೊಂಡು ಎಸ್‌ಇಒ ಮಾಡಬೇಕು.
ಆನ್ ಪೇಜ್ ಎಸ್‌ಇಒ (on-page SEO) ಮಾಡುವ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಕಂಟೆಂಟ್‌ಗೆ ಗಮನ ನೀಡಬೇಕು. ಕೀವರ್ಡ್‌ಗಳನ್ನು ಬಲವಂತವಾಗಿ ತುರುಕಬಾರದು. ಸಹಜವಾಗಿ ಕೀವರ್ಡ್‌ಗಳು ಇರುವಂತೆ ಮಾಡಬೇಕು. ಪ್ರಮುಖ ಕೀವರ್ಡ್‌ಗಳು ಕಂಟೆಂಟ್, ಹೆಡರ್, ಮೆಟಾ ಟ್ಯಾಗ್‌ಗಳಲ್ಲಿ ಇರಬೇಕು. ಮೆಟಾ ಟ್ಯಾಗ್ ಬರೆಯುವ ಸಮಯದಲ್ಲಿ ಕೀವರ್ಡ್ ಅತ್ಯುತ್ತಮವಾಗಿರುವ ಟೈಟಲ್ ಮತ್ತು ವಿವರಣೆ ಬರೆಯಬೇಕು. ಯುಆರ್‌ಎಲ್ ಬರೆಯುವಾಗಲೂ ಎಚ್ಚರಕೆ ವಹಿಸಬೇಕು. ಇಂಟರ್ನಲ್ ಲಿಂಕ್, ಯೂಸರ್ ಎಕ್ಸ್‌ಪಿಯರೆನ್ಸ್‌ಗೂ ಗಮನ ನೀಡಬೇಕು. ಸರ್ಚ್ ಎಂಜಿನ್ ಕ್ರೌಲ್ಲಿಂಗ್, ಇಂಡೆಕ್ಸಿಂಗ್, ಕಾನೊನಿಯಲ್ ಟ್ಯಾಗ್, ಸ್ಕೀಮಾ ಮಾರ್ಕಪ್ ಮುಂತಾದ ಟೆಕ್ನಿಕಲ್ ಎಸ್‌ಇಒವನ್ನೂ ಬಳಸಬೇಕು.
ಆಫ್ ಪೇಜ್ ಎಸ್‌ಇಒ ಎಂದರೇನು?
ಸರ್ಚ್ ಎಂಜಿನ್ ರಿಸಲ್ಟ್ ಪೇಜುಗಳು (ಎಸ್‌ಇಆರ್‌ಪಿಎಸ್)ನಲ್ಲಿ ವೆಬ್‌ಸೈಟ್‌ನ ಸ್ಥಿತಿ ಉತ್ತಮಪಡಿಸುವಂತಹ ಟೆಕ್ನಿಕ್ ಇದಾಗಿದೆ. ಲಿಂಕ್ ಬಿಲ್ಡಿಂಗ್ ಮಾತ್ರ ಆಫ್ ಪೇಜ್ ಎಸ್‌ಇಒ (Off-page SEO) ಎಂದು ಸಾಕಷ್ಟು ಜನರು ಅಂದುಕೊಂಡಿದ್ದಾರೆ. ಬ್ಲಾಗಿಂಗ್, ವೆಬ್‌ಸೈಟ್‌ನ ವಿನ್ಯಾಸ, ಸೋಷಿಯಲ್ ಬುಕ್ ಮಾರ್ಕಿಂಗ್ ಇತ್ಯಾದಿಗಳೂ ಆಫ್ ಪೇಜ್ ಎಸ್‌ಇಒನ ಪ್ರಮುಖ ಅಂಶಗಳಾಗಿವೆ. ಕರ್ನಾಟಕ ಬೆಸ್ಟ್ ಡಾಟ್ ಕಾಮ್‌ನಲ್ಲಿ ಎಸ್‌ಇಒ ಸೇವೆಗಳ ಜತೆಗೆ ಎಸ್‌ಇಒ ಉತ್ತಮ ಪಡಿಸುವ ಕನ್ನಡ ಬ್ಲಾಗಿಂಗ್ ಸೇವೆಗಳೂ ಲಭ್ಯ ಇವೆ.
ಆಫ್ ಪೆಜ್ ಎಸ್‌ಇಒ ಮಾಡುವ ಸಮಯದಲ್ಲಿ ವೆಬ್‌ಸೈಟ್‌ನ ಅಥಾರಿಟಿ ಮತ್ತು ರಾಕಿಂಗ್ ಹೆಚ್ಚಿಸಲು ಅತ್ಯುತ್ತಮ ಗುಣಮಟ್ಟದ ಲಿಂಕ್‌ಗಳನ್ನು (Backlinks) ಬಳಸಬೇಕು. ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್‌ಗೂ ಗಮನ ನೀಡಬೇಕು. ನಿಮ್ಮ ಬ್ರ್ಯಾಂಡ್‌ನ ಕುರಿತು ಟ್ರಸ್ಟ್ ಅಥವಾ ನಂಬಿಕೆ ಉತ್ತಮಪಡಿಸುವ ಕಾರ್ಯಗಳು ನಡೆಯಬೇಕು. ಬ್ಲಾಗಿಂಗ್‌ಗೂ ಗಮನ ನೀಡಬೇಕು.
ಈಗ ಪ್ರತಿಯೊಬ್ಬರು ವೆಬ್‌ಸೈಟ್ ಹೊಂದಲು ಬಯಸುತ್ತಾರೆ. ಅದು ಇಂದಿನ ಅವಶ್ಯಕತೆ. ಒಳ್ಳೆಯ ವೆಬ್‌ಸೈಟ್ ಎಂದರೆ ಅತ್ಯುತ್ತಮವಾಗಿ ಆನ್‌ಪೇಜ್ ಮತ್ತು ಆಫ್ ಪೇಜ್ ಎಸ್‌ಇಒಗಳನ್ನು ಅಳವಡಿಸಿಕೊಂಡಿರಬೇಕು. ಡಿಜಿಟಲ್ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಎಸ್‌ಇಒ ಕಲಿಯುತ್ತಿರುವವರು, ಈಗಾಗಲೇ ಎಸ್‌ಇಒ ಸೇವೆ ನೀಡುತ್ತಿರುವವರು ವಿಶೇಷವಾಗಿ ಎಸ್‌ಇಒ ಕುರಿತು ನಿರಂತರವಾಗಿ ಅಪ್‌ಡೇಟ್ ಆಗುತ್ತ ಇರಬೇಕು.















Got a Questions?
Find us on Socials or Contact Us and we’ll get back to you as soon as possible.