Crizac IPO: ಕ್ರಿಜಾಕ್ನ ಐಪಿಒಗೆ ಇಂದಿನಿಂದ ಬಿಡ್ ಮಾಡಬಹುದು. ಈ ಬಿಸ್ನೆಟ್ ಟು ಬಿಸ್ನೆಸ್ ಕಂಪನಿಯು ಈ ಆಫರ್ ಫಾರ್ ಸೇಲ್ ಐಪಿಒ ಮೂಲಕ 860 ಕೋಟಿ ರೂಪಾಯಿ ಬಂಡವಾಳ ಕ್ರೋಡೀಕರಿಸಲು ಉದ್ದೇಶಿಸಿದೆ. ಆಂಕರ್ ಇನ್ವೆಸ್ಟರ್‌ಮೂಲಕ ಕಂಪನಿಯು 258 ಕೋಟಿ ರೂ. ಕ್ರೋಡೀಕರಿಸಿದೆ. ಕಂಪನಿಯು ಪ್ರತಿಷೇರಿಗೆ 245 ರೂಪಾಯಿಯಂತೆ 10.53 ದಶಲಕ್ಷ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಿದೆ. ಸೊಸೈಟಿ ಜನರಲ್, ಪೈನ್‌ಬ್ರಿಡ್ಜ್ ಗ್ಲೋಬಲ್ ಫಂಡ್ಸ್, ಶಮ್ಯಾಕ್ ಇನ್ವೆಸ್ಟ್‌ಮೆಂಟ್ (ಎನಾಮ್ ಗ್ರೂಪ್), ಆರ್ಯಭಟ ಇಂಡಿಯಾ ಫಂಡ್ (ಅಬಾಕಸ್ ಗ್ರೂಪ್), ಐಸಿಐಸಿಐ ಪ್ರುಡೆನ್ಶಿಯಲ್ ಎಂಎಫ್, ಅಲಿಯಾನ್ಸ್ ಗ್ಲೋಬಲ್ ಇನ್ವೆಸ್ಟರ್ಸ್ ಫಂಡ್, ಕಾರ್ನೆಲಿಯನ್ ಭಾರತ್ ಅಮೃತ್‌ಕಾಲ್ ಫಂಡ್, 360 ಒನ್ ಈಕ್ವಿಟಿ ಆಪರ್ಚುನಿಟಿ ಫಂಡ್, ಮೋತಿಲಾಲ್ ಓಸ್ವಾಲ್ ಎಂಎಫ್, ಬಂಧನ್ ಎಂಎಫ್, ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಮತ್ತು ಕೋಟಕ್ ಮಹೀಂದ್ರಾ ಲೈಫ್ ಇನ್ಶುರೆನ್ಸ್ ಆಂಕರ್‌ನಲ್ಲಿ ಭಾಗವಹಿಸಿದ ಸಂಸ್ಥೆಗಳಾಗಿವೆ.
Crizac IPO ಮಾಹಿತಿ
| ವಿವರ | ಮಾಹಿತಿ |
|---|---|
| ಐಪಿಒ ದಿನಾಂಕ | ಜುಲೈ 2 ರಿಂದ ಜುಲೈ 4, 2025 |
| ಫೇಸ್ ವ್ಯಾಲ್ಯೂ | ಪ್ರತಿ ಷೇರಿಗೆ ₹2 |
| ಇಶ್ಯೂ ದರ | ₹233 – ₹245 ಪ್ರತಿ ಷೇರು |
| ಲಾಟ್ ಗಾತ್ರ | 61 ಷೇರುಗಳು |
| ಷೇರಿನ ಬಗೆ | ಆಫರ್ ಫಾರ್ ಸೇಲ್ (OFS) |
| ಒಟ್ಟು ಇಶ್ಯೂ ಗಾತ್ರ | 3,51,02,040 ಷೇರುಗಳು |
| ಇಶ್ಯೂ ಟೈಪ್ | ಬುಕ್ಬಿಲ್ಡಿಂಗ್ ಐಪಿಒ |
| ಲಿಸ್ಟಿಂಗ್ ಎಲ್ಲಿ? | ಬಿಎಸ್‌ಇ, ಎನ್‌ಎಸ್‌ಇ |
ಈ ಇಶ್ಯೂ ಸಂಪೂರ್ಣವಾಗಿ ಆಫಾರ್ ಫಾರ್ ಸೇಲ್ ಆಗಿದ್ದು, 860 ಕೋಟಿ ರೂ ಮೌಲ್ಯದ 3.51 ಕೋಟಿ ಷೇರುಗಳನ್ನು ಮಾರಾಟ ಮಾಡಲು ನಿಗದಿಪಡಿಸಲಾಗಿದೆ. ಐಪಿಒ ವಿತರಣೆಗಾಗಿ ಹರಾಜು (ಬಿಡ್) ಮಾಡುವ ಅವಕಾಶ ಜುಲೈ 4ರ ವರೆಗೆ ಲಭ್ಯವಿದೆ. ಹಂಚಿಕೆಯ ಅಂತಿಮ ದಿನಾಂಕ ಜುಲೈ 7 ಎಂದು ನಿರೀಕ್ಷಿಸಲಾಗಿದೆ ಮತ್ತು ಲಿಸ್ಟಿಂಗ್ ಬಿಎಸ್‌ಇ ಹಾಗೂ ಎನ್‌ಎಸ್‌ಇಯಲ್ಲಿ ಜುಲೈ 9ರಂದು ನಡೆಯಲಿದೆ.
ಇದನ್ನೂ ಓದಿ: ಐಪಿಒ ಅಲರ್ಟ್: ಈ ವಾರ 7 ಐಪಿಒಗಳಿಗೆ ಬಿಡ್ ಮಾಡಬಹುದು; 2 ಮೇನ್‌ಬೋರ್ಡ್, 5 ಎಸ್‌ಎಂಇ ಸಾರ್ವಜನಿಕ ಷೇರು ಬಿಡುಗಡೆ
ಕ್ರಿಜಾಕ್ ಐಪಿಒ ಪ್ರತಿ ಷೇರಿಗೆ 233 ರೂನಿಂದ 245 ರೂನಷ್ಟು ಪ್ರೈಸ್ ಬ್ಯಾಂಡ್ ನಿಗದಿ ಪಡಿಸಿದೆ. ಕನಿಷ್ಠ ಲಾಟ್ ಗಾತ್ರ 61 ಷೇರುಗಳು. ಈ ಲಾಟ್‌ಗೆ ಅಗತ್ಯವಿರುವ ಹೂಡಿಕೆ ಮೊತ್ತ 14,213 ರೂಪಾಯಿ. ಹೂಡಿಕೆದಾರರು ಶೇರ್‌ಗಳ ಹಂಚಿಕೆ ಸಿಗಬೇಕೆಂದು ನೋಡುತ್ತಿದ್ದರೆ, ಕಟ್‌ಆಫ್ ಬೆಲೆಯಲ್ಲಿ ಬಿಡ್ ಮಾಡುವುದು ಸೂಕ್ತ. ಈ IPO ನ್ನು ಕಂಪನಿಯ ಇತ್ತೀಚಿನ ಷೇರುದಾರರು ಮಾತ್ರ ಮಾರಾಟ ಮಾಡುತ್ತಿದ್ದಾರೆ. ಕಂಪನಿ ಯಾವುದೇ ಹೊಸ ಷೇರುಗಳನ್ನು ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ, ಐಪಿಒ ಮೂಲಕ ಸಂಗ್ರಹವಾಗುವ ಹಣ ನೇರವಾಗಿ ಕಂಪನಿಗೆ ಹೋಗದು ಎಂಬುದು ಗಮನಿಸಬೇಕಾದ ಅಂಶ.
ಜಿಎಂಪಿ ಎಷ್ಟಿದೆ? (Crizac IPO GMP)
ಕ್ರಿಜಾಕ್ ಐಪಿಒನ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಶೇಕಡ 8.5 ಇದೆ. ಕ್ರೈಜಾಕ್‌ನ ಪಟ್ಟಿ ಮಾಡದ ಷೇರುಗಳು ಗ್ರೇ ಮಾರುಕಟ್ಟೆಯಲ್ಲಿ 266 ರೂಪಾಯಿಗೆ ವಹಿವಾಟು ನಡೆಸುತ್ತಿದ್ದವು. ಇದು ಐಪಿಒದಲ್ಲಿ ನಿಗದಿಪಡಿಸಿದ ದರಕ್ಕಿಂತ 21 ರೂಪಾಯಿ ಅಥವಾ ಶೇಕಡಾ 8.5 ರಷ್ಟು ಹೆಚ್ಚಾಗಿದೆ ಎಂದು ಅನಧಿಕೃತ ಮಾರುಕಟ್ಟೆ ಚಟುವಟಿಕೆಗಳನ್ನು ಪತ್ತೆಹಚ್ಚುವ ಮೂಲಗಳು ತಿಳಿಸಿವೆ.
ಕ್ರಿಜಾಕ್ ಐಪಿಒಗೆ ಬಿಡ್ ಮಾಡಬಹುದೇ?
ಕ್ರಿಜಾಕ್ ಐಪಿಒಗೆ ಅರ್ಜಿ ಸಲ್ಲಿಸಬಹುದೇ ಅಥವಾ ಬೇಡವೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ಚಿತೊರ್‌ಗರ್ ತಜ್ಞರ ಪ್ರಕಾರ ಈ ಐಪಿಒಗೆ “May Apply” ಅಂದರೆ “ಅರ್ಜಿ ಸಲ್ಲಿಸಬಹುದೇನೋ”. ತಜ್ಞರು ಪ್ರತಿ ಐಪಿಒಗಳ ವಿಮರ್ಶೆಯ ಬಳಿಕ “ಅರ್ಜಿ ಸಲ್ಲಿಸಬಹುದು (Apply)” “ಅರ್ಜಿ ಸಲ್ಲಿಸಬಹುದೇನೋ” “ಅವಾಯ್ಡ್” ಎಂದೆಲ್ಲ ಸೂಚನೆ ನೀಡುತ್ತಾರೆ. ಅಪ್ಲೈ ಎಂದರೆ ಧೈರ್ಯವಾಗಿ ಅರ್ಜಿ ಸಲ್ಲಿಸಬಹುದು. ಮೇ ಅಪ್ಲೈ ಅಂದರೆ, ಕೆಲವೊಂದು ವಿಷಯಗಳು ಇವೆ, ಇವುಗಳನ್ನು ನೋಡಿಕೊಂಡು ಅರ್ಜಿ ಸಲ್ಲಿಸಬಹುದು ಎಂದುಕೊಳ್ಳಬಹುದು.














Got a Questions?
Find us on Socials or Contact Us and we’ll get back to you as soon as possible.