CRIZAC ಐಪಿಒ 2.75 ಪಟ್ಟು ಚಂದಾದಾರಿಕೆ, ಬಿಡ್‌ ಸಲ್ಲಿಸಲು ಇಂದು ಜುಲೈ 4 ಕೊನೆಯ ದಿನಾಂಕ

ಕ್ರಿಜಾಕ್‌ ಲಿಮಿಟೆಡ್‌ನ ಸಾರ್ವಜನಿಕ ಷೇರು ವಿತರಣೆ(ಐಪಿಒ)ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2,58,36,909 ಷೇರುಗಳಿಗೆ 7,09,51,174 ಷೇರುಗಳ ಬಿಡ್‌ ಸಲ್ಲಿಸಲಾಗಿದೆ. ಅಂದರೆ, ಈ ಕಂಪನಿಯ ಪ್ರತಿಯೊಂದು ಷೇರಿಗೂ 2.75 ಪಟ್ಟು ಬಿಡ್‌ ಸಲ್ಲಿಸಲಾಗಿದೆ. ಈ ಚಂದಾದಾರಿಕೆ ನೋಡಿದರೆ ಅಂದಾಜು ಮೂರು ಜನರಲ್ಲಿ ಒಬ್ಬರಿಗೆ ಈ ಐಪಿಒ ದೊರಕುವ ನಿರೀಕ್ಷೆಯಿದೆ. ಇಂದು ಸಾಕಷ್ಟು ಜನರು ಈ ಐಪಿಒಗೆ ಬಿಡ್‌ ಸಲ್ಲಿಸುವ ಸೂಚನೆಯಿದೆ.

ಕ್ರಿಜಾಕ್‌ ಐಪಿಒಗೆ ಬಿಡ್‌ ಸಲ್ಲಿಸಲು ಕೊನೆಯ ದಿನಾಂಕ

ಈ ಐಪಿಒಗೆ ಜುಲೈ 2 ದಿನಾಂಕದಿಂದ ಬಿಡ್‌ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಐಪಿಒ ಪ್ರೈಸ್‌ ಬಾಂಡ್‌ ಪ್ರತಿಷೇರಿಗೆ 233 ಮತ್ತು 245 ರೂ ನಿಗದಿಪಡಿಸಲಾಗಿತ್ತು. ಕನಿಷ್ಠ ಒಂದು ಲಾಟ್‌ನಲ್ಲಿ 61 ಷೇರುಗಳನ್ನು ಖರೀದಿಸಬಹುದಿತ್ತು. ಇದು ಸಂಪೂರ್ಣವಾಗಿ ಆಫರ್‌ ಫಾರ್‌ ಸೇಲ್‌ ಐಪಿಒ ಆಗಿದೆ. ಅಂದರೆ, ಕಂಪನಿಯು ಹೊಸ ಷೇರುಗಳನ್ನು ವಿತರಣೆ ಮಾಡುತ್ತಿಲ್ಲ. ಈಗಾಗಲೇ ಕಂಪನಿಯಲ್ಲಿರುವ 3,51,02,041 ಈಕ್ವಿಟಿ ಷೇರುಗಳನ್ನು ಐಪಿಒಗೆ ಬಿಡುಗಡೆ ಮಾಡಲಾಗಿದೆ. ಈ ಕಂಪನಿಯ ಪ್ರಮೋಟರ್‌ ಪಿಂಕಿ ಅಗರ್‌ವಾಲ್‌ ಅವರು 723 ಕೋಟಿ ರೂಪಾಯಿ ಮೌಲ್ಯದ ತನ್ನ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಮನೀಶ್‌ ಅಗರ್‌ ವಾಲ್‌ ಅವರು 137 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಷೇರುಗಳನ್ನು ಐಪಿಒ ಮೂಲಕ ವಿತರಣೆ ಮಾಡಲಾಗುತ್ತದೆ. ಈ ಐಪಿಒದಿಂದ ಕಂಪನಿಗೆ ಯಾವುದೇ ಹಣ ದೊರಕುತ್ತಿಲ್ಲ. ಈ ಐಪಿಒ ಹಣವು ಷೇರುಗಳನ್ನು ಮಾರಾಟ ಮಾಡುತ್ತಿರುವ ಪಾಲುದಾರರಿಗೆ ಹೋಗಲಿದೆ.

ಇದನ್ನೂ ಓದಿ: ಕ್ರಿಜಾಕ್ ಐಪಿಒ ಜಿಎಂಪಿ ಜಿಗಿತ, ಚಂದಾದಾರಿಕೆಯೂ ಉತ್ತಮ, ಜುಲೈ 4ರವರೆಗೆ ಬಿಡ್‌ ಸಲ್ಲಿಸಲು ಅವಕಾಶ

ಇಂದು ಕ್ರಿಜಾಕ್‌ ಐಪಿಒ ಜಿಎಂಪಿ ಎಷ್ಟಿದೆ?

Updated: ಜುಲೈ 4ರಂದು ಕ್ರಿಜಾಕ್‌ ಐಪಿಒದ ಜಿಎಂಪಿ ಶೇಕಡ 14ಕ್ಕೆ ತಲುಪಿದೆ. ಚಂದಾದಾರಿಕೆ 60 ಪಟ್ಟು ಹೆಚ್ಚಾಗಿದೆ.

ಕ್ರಿಜಾಕ್‌ ಐಪಿಒದ ಜಿಎಂಪಿ ನಿನ್ನೆ ಬೆಳಗ್ಗೆ ಶೇಕಡ 15 ಇತ್ತು. ಆದರೆ, ಬಳಿಕ ಇದು ಶೇಕಡ 8.98ಕ್ಕೆ ಇಳಿಕೆ ಕಂಡಿದೆ. ಎಲ್ಲಾದರೂ ಜಿಎಂಪಿಗೆ ತಕ್ಕಂತೆ ಕ್ರಿಜಾಕ್‌ ಐಪಿಒ ಲಿಸ್ಟ್‌ ಆದರೆ ಒಂದು ಲಾಟ್‌ ದೊರಕಿರುವ ಚಂದಾದಾರರಿಗೆ ಪ್ರತಿಷೇರಿಗೆ 22 ರೂನಂತೆ 1342 ರೂನಂತೆ ಲಾಭವಾಗಲಿದೆ.

ಇದನ್ನೂ ಓದಿ:

error: Content is protected !!