ಐಪಿಒ ಬಿಡ್ ಮಾಡಿ ಷೇರುಪೇಟೆಯಲ್ಲಿ ಅಲ್ಪಾವಧಿ ಅಥವಾ ದೀರ್ಘಾವಧಿ ಲಾಭ ಮಾಡಲು ಹಲವು ಐಪಿಒಗಳು ಸರತಿಯಲ್ಲಿವೆ. ಜುಲೈ 23ರಿಂದ ಐಪಿಒ ಆಸಕ್ತರು ಗಮನಿಸಬಹುದಾದ ಐಪಿಒ- ಜಿಎನ್‌ಜಿ ಎಲೆಕ್ಟ್ರಾನಿಕ್ಸ್. ಇದಕ್ಕೆ ಅಪ್ಲೈ ಮಾಡಬಹುದೇ? ಎಂದು ತಿಳಿಯೋಣ ಬನ್ನಿ. ರಿಫರ್ಬಿಶ್ಡ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತನ್ನ ₹460.43 ಕೋಟಿ ಮೌಲ್ಯದ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಇಂದಿನಿಂದ (ಜುಲೈ 23) ಸಾರ್ವಜನಿಕ ಚಂದಾದಾರಿಕೆಗೆ ತೆರೆದಿದೆ. ಜುಲೈ 25ರ ವರೆಗೆ ಬಿಡ್ ಸಲ್ಲಿಸಲು ಅವಕಾಶವಿದ್ದು, ಗ್ರೇ ಮಾರ್ಕೆಟ್‌ನಲ್ಲಿ ಉತ್ತಮ ಪ್ರೀಮಿಯಂ (ಜಿಎಂಪಿ) ವರದಿಯಾಗಿರುವುದು ಹೂಡಿಕೆದಾರರಲ್ಲಿ ಕುತೂಹಲ ಮೂಡಿಸಿದೆ.
ಇದು 460.43 ಕೋಟಿ ರೂಪಾಯಿ ಬುಕ್‌ಬಿಲ್ಡಿಂಗ್ ಮಾಡುವ ಐಪಿಒ. ಇದರಲ್ಲಿ 400.00 ಕೋಟಿ ರೂಪಾಯಿ 1.69 ಕ್ರೋಡೀಕರಿಸುವ 1.69 ಕೋಟಿ ಷೇರುಗಳ ಫ್ರೆಷ್ ಇಶ್ಯೂ ಮತ್ತು 60.44 ಕೋಟಿ ರೂಪಾಯಿ ಕ್ರೋಡೀಕರಿಸುವ 0.26 ಕೋಟಿ ಷೇರುಗಳ ಆಫರ್ ಫಾರ್ ಸೇಲ್ ಒಳಗೊಂಡಿದೆ.
ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಐಪಿಒ: ಪ್ರಮುಖ ದಿನಾಂಕಗಳು
ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಐಪಿಒಗೆ ಜುಲೈ 23 2025ರಿಂದ ಬಿಡ್ ಮಾಡಬಹುದು. ಜುಲೈ 25, 2025ರ ತನಕ ಚಂದಾದಾರಿಕೆಗೆ ತೆರೆದಿರುತ್ತದೆ. ಮುಂದಿನ ಸೋಮವಾರ ಅಂದರೆ ಜುಲೈ 28ರಂದು ಇದರ ಹಂಚಿಕೆ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಜುಲೈ 30ರಂದು ಬಿಎಸ್‌ಇ, ಎನ್‌ಎಸ್‌ಇನಲ್ಲಿ ಲಿಸ್ಟ್ ಆಗುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ನಿಮ್ಮ ಹಣ ಲಾಕ್ ಆಗಿರುತ್ತದೆ.
ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಐಪಿಒ ದರ
ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಐಪಿಒ ದರ ಪ್ರತಿಷೇರಿಗೆ ₹225 ರಿಂದ ₹237ರವರೆಗಿದೆ. ಒಂದು ಲಾಟ್‌ನಲ್ಲಿ 63 ಷೇರುಗಳು ಇರುತ್ತವೆ. ಒಂದು ಲಾಟ್‌ಗೆ ಅರ್ಜಿ ಸಲ್ಲಿಸಲು ₹14,175 ಹಣ ನಿಮ್ಮಲ್ಲಿ ಇರಬೇಕಾಗುತ್ತದೆ. ಎಸ್‌ಎನ್‌ಐಐಗೆ 14 ಲಾಟ್‌ಗಳು ಬೇಕಿರುತ್ತದೆ. ದರ ₹2,09,034. ಬಿಎನ್‌ಐಐಗೆ 67 ಲಾಟ್‌ಗಳು ಇರುತ್ತವೆ. ಮೋತಿಲಾಲ್ ಓಸ್ವಾಲ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಲಿಮಿಟೆಡ್ GNG ಎಲೆಕ್ಟ್ರಾನಿಕ್ಸ್ IPO ನ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್ ಆಗಿದ್ದರೆ, ಬಿಗ್‌ಶೇರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಈ ಇಶ್ಯೂಗೆ ರಿಜಿಸ್ಟ್ರಾರ್ ಆಗಿದೆ.
ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಐಪಿಒದ ಸಂಪೂರ್ಣ ಮಾಹಿತಿ
- ಐಪಿಒ ತೆರೆಯುವ ದಿನಾಂಕ: ಬುಧವಾರ, ಜುಲೈ 23, 2025
- ಐಪಿಒ ಬಿಡ್ ಕೊನೆಗೊಳ್ಳುವ ದಿನಾಂಕ: ಶುಕ್ರವಾರ, ಜುಲೈ 25, 2025
- ಯುಪಿಐ ಮ್ಯಾಂಡೇಟ್ ದೃಢೀಕರಣದ ಅಂತಿಮ ಸಮಯ: ಜುಲೈ 25, 2025 ಸಂಜೆ 5 ಗಂಟೆಗೆ
- ಹಂಚಿಕೆ ದಿನಾಂಕ (ಅಂದಾಜು): ಸೋಮವಾರ, ಜುಲೈ 28, 2025
- ರಿಫಂಡ್ ಆರಂಭ: ಮಂಗಳವಾರ, ಜುಲೈ 29, 2025
- ಡಿಮ್ಯಾಟ್ ಖಾತೆಗೆ ಷೇರು ಕ್ರೆಡಿಟ್ ಆಗುವ ದಿನ: ಮಂಗಳವಾರ, ಜುಲೈ 29, 2025
- ಫೇಸ್ ವ್ಯಾಲ್ಯೂ (ಮುಖಬೆಲೆ): ಪ್ರತಿ ಷೇರು ₹2
- ಇಶ್ಯೂ ಬೆಲೆ ಶ್ರೇಣಿ: ₹225 ರಿಂದ ₹237 ಪ್ರತಿ ಷೇರು
- ಲಾಟ್ ಗಾತ್ರ: 63 ಷೇರುಗಳು (ಒಂದು ಲಾಟ್)
- ಮಾರಾಟ ಪ್ರಕಾರ: ತಾಜಾ ಬಂಡವಾಳ ಸಹಿತ ಮಾರಾಟದ ಆಫರ್ (Fresh Issue-cum-OFS)
- ಒಟ್ಟು ಇಶ್ಯೂ ಗಾತ್ರ: 1,94,27,637 ಷೇರುಗಳು (ಒಟ್ಟು ₹460.43 ಕೋಟಿ ಮೌಲ್ಯ)
- ತಾಜಾ ಇಶ್ಯೂ (Fresh Issue): 1,68,77,637 ಷೇರುಗಳು (₹400.00 ಕೋಟಿ ಮೌಲ್ಯ)
- ಆಫರ್ ಫಾರ್ ಸೇಲ್ (OFS): 25,50,000 ಷೇರುಗಳು (₹60.44 ಕೋಟಿ ಮೌಲ್ಯ)
- ಇಶ್ಯೂ ಪ್ರಕಾರ: ಬುಕ್ ಬಿಲ್ಡಿಂಗ್ ಐಪಿಒ (Bookbuilding IPO)
- ಲಿಸ್ಟ್ ಆಗುವ ಸ್ಥಳ: BSE ಮತ್ತು NSE
- ಐಪಿಒಗೆ ಮೊದಲು ಷೇರುಗಳ ಸಂಖ್ಯೆ: 9,71,33,880 ಷೇರುಗಳು
- ಐಪಿಒ ಬಳಿಕ ಷೇರುಗಳ ಸಂಖ್ಯೆ: 11,40,11,517 ಷೇರುಗಳು
ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜಿಎಂಪಿ ಎಷ್ಟಿದೆ?
| GMP ದಿನಾಂಕ | IPO ಬೆಲೆ | GMP | Sub2 ಸೌದಾ ದರ | ಅಂದಾಜು ಪಟ್ಟಿ ಬೆಲೆ | ಅಂದಾಜು ಲಾಭ* |
|---|
| 23-07-2025 | ₹237.00 | ₹105 | 5000/70000 | ₹342 (44.30%) | ₹6615 |
| 22-07-2025 | ₹237.00 | ₹105 | 5000/70000 | ₹342 (44.30%) | ₹6615 |
| 21-07-2025 | ₹237.00 | ₹85 | 4100/57400 | ₹322 (35.86%) | ₹5355 |
| 20-07-2025 | ₹237.00 | ₹77 | 3700/51800 | ₹314 (32.49%) | ₹4851 |
| 19-07-2025 | ₹237.00 | ₹72 | 3400/47600 | ₹309 (30.38%) | ₹4536 |
| 18-07-2025 | ₹237.00 | ₹71 | 3400/47600 | ₹308 (29.96%) | ₹4473 |
ಗಮನಿಸಿ: ಜಿಎಂಪಿ ಎನ್ನುವುದು ಐಪಿಒ- ಷೇರು ಲಿಸ್ಟ್ ಆಗುವ ಪ್ರೀಮಿಯಂ ಮೊತ್ತದ ಅಧಿಕೃತ ಸೂಚಕವಲ್ಲ. ಹೀಗಿದ್ದರೂ, ಹೆಚ್ಚಾಗಿ ಜಿಎಂಪಿ ಏರಿಕೆ ಮತ್ತು ಇಳಿಕೆಯಂತೆಯೇ ಐಪಿಒ ಲಿಸ್ಟ್ ಆಗುವುದನ್ನು ಗಮನಿಸಬಹುದು.
ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯ ಬಗ್ಗೆ
2006ರಲ್ಲಿ ಸ್ಥಾಪಿತವಾದ ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು ಮತ್ತು ಐಸಿಟಿ ಉಪಕರಣಗಳ ರಿಫರ್ಬಿಶಿಂಗ್ ಸೇವೆಗಳನ್ನು ಭಾರತ ಮತ್ತು ವಿಶ್ವಾದ್ಯಂತ ಒದಗಿಸುವ ಪ್ರಮುಖ ಕಂಪನಿಯಾಗಿದೆ. ಭಾರತ, ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ಈ ಕಂಪನಿಯು ತನ್ನ ಸದೃಢ ಉಪಸ್ಥಿತಿ ಹೊಂದಿದೆ.
‘ಎಲೆಕ್ಟ್ರಾನಿಕ್ಸ್ ಬಜಾರ್’ ಬ್ರಾಂಡ್‌ನಡಿ ಸೇವೆ: ‘ಎಲೆಕ್ಟ್ರಾನಿಕ್ಸ್ ಬಜಾರ್’ ಎಂಬ ಬ್ರಾಂಡ್‌ನಡಿ ಕಾರ್ಯನಿರ್ವಹಿಸುವ ಜಿಎನ್‌ಜಿ ಎಲೆಕ್ಟ್ರಾನಿಕ್ಸ್, ಉಪಕರಣಗಳ ಸೋರ್ಸಿಂಗ್‌ನಿಂದ ರಿಫರ್ಬಿಶಿಮೆಂಟ್, ಮಾರಾಟ, ಮಾರಾಟದ ನಂತರದ ಸೇವೆಗಳು ಮತ್ತು ವಾರಂಟಿಗಳವರೆಗೆ ಸಮಗ್ರ ಸೇವೆಗಳನ್ನು ನೀಡುತ್ತದೆ. ಇದರ ಜೊತೆಗೆ, ಐಟಿಎಡಿ (ಐಟಿ ಆಸ್ತಿ ವಿಲೇವಾರಿ) ಮತ್ತು ಇ-ವೇಸ್ಟ್ ನಿರ್ವಹಣೆ, ಡೋರ್‌ಸ್ಟೆಪ್ ಸೇವೆ, ಆನ್-ಸೈಟ್ ಇನ್‌ಸ್ಟಾಲೇಶನ್, ಸುಲಭ ಕಂತು ಪಾವತಿ ಆಯ್ಕೆಗಳು, ಸುಲಭ ಅಪ್‌ಗ್ರೇಡ್‌ಗಳು, ಖಾತರಿಯಾದ ಬೈಬ್ಯಾಕ್ ಕಾರ್ಯಕ್ರಮಗಳು ಮತ್ತು ರಿಫರ್ಬಿಷ್ಡ್ ಐಸಿಟಿ ಉಪಕರಣಗಳಿಗೆ ವಿಶೇಷ ಬೈಬ್ಯಾಕ್ ಯೋಜನೆಗಳಂತಹ ಮೌಲ್ಯವರ್ಧಿತ ಸೇವೆಗಳನ್ನು ಕಂಪನಿಯು ಒದಗಿಸುತ್ತದೆ.
ವಿಜಯ್ ಸೇಲ್ಸ್, ಎಚ್‌ಪಿ ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್, ಲೆನೊವೊ ಗ್ಲೋಬಲ್ ಟೆಕ್ನಾಲಜಿ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನಂತಹ ದೊಡ್ಡ ರಿಟೇಲ್ ಮತ್ತು ಒಇಎಂ ಬ್ರಾಂಡ್ ಸ್ಟೋರ್‌ಗಳಿಗೆ ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಕಸ್ಟಮೈಸ್ಡ್ ಬೈಬ್ಯಾಕ್ ಪರಿಹಾರಗಳನ್ನು ಒದಗಿಸುತ್ತದೆ. ಇದರಿಂದಾಗಿ ಗ್ರಾಹಕ ಸ್ನೇಹಿಯಾದ ಬೈಬ್ಯಾಕ್ ಕಾರ್ಯಕ್ರಮಗಳ ಮೂಲಕ ಹೊಸ ಉಪಕರಣಗಳ ಮಾರಾಟವನ್ನು ಸುಗಮಗೊಳಿಸಲಾಗುತ್ತದೆ.
ಬೈಬ್ಯಾಕ್ (Buyback) ಎಂದರೆ ಒಂದು ಕಂಪನಿ ಅಥವಾ ರಿಟೇಲ್ ಸ್ಟೋರ್ ತನ್ನ ಗ್ರಾಹಕರಿಂದ ಬಳಸಿದ ಉತ್ಪನ್ನಗಳನ್ನು (ಉದಾಹರಣೆಗೆ: ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು ಅಥವಾ ಇತರ ಐಸಿಟಿ ಉಪಕರಣಗಳು) ಮರಳಿ ಖರೀದಿಸುವ ಪ್ರಕ್ರಿಯೆಯಾಗಿದೆ. ಈ ಕಾರ್ಯಕ್ರಮದ ಉದ್ದೇಶವು ಗ್ರಾಹಕರಿಗೆ ಹಳೆಯ ಉಪಕರಣಗಳನ್ನು ವಿಲೇವಾರಿ ಮಾಡಲು ಅನುಕೂಲ ಕಲ್ಪಿಸುವುದು ಮತ್ತು ಹೊಸ ಉತ್ಪನ್ನಗಳ ಖರೀದಿಯನ್ನು ಉತ್ತೇಜಿಸುವುದಾಗಿದೆ.
ಜಿಎನ್‌ಜಿ ಎಲೆಕ್ಟ್ರಾನಿಕ್ಸ್‌ನಂತಹ ಕಂಪನಿಗಳು ತಮ್ಮ ‘ಎಲೆಕ್ಟ್ರಾನಿಕ್ಸ್ ಬಜಾರ್’ ಬ್ರಾಂಡ್‌ನಡಿ ಬೈಬ್ಯಾಕ್ ಯೋಜನೆಗಳನ್ನು ನೀಡುತ್ತವೆ. ಇದರಲ್ಲಿ ಗ್ರಾಹಕರು ತಮ್ಮ ಹಳೆಯ ಉಪಕರಣಗಳನ್ನು ಕಂಪನಿಗೆ ಮಾರಾಟ ಮಾಡಿ, ಅದಕ್ಕೆ ಬದಲಾಗಿ ರಿಯಾಯಿತಿ ದರದಲ್ಲಿ ಹೊಸ ಉಪಕರಣಗಳನ್ನು ಖರೀದಿಸಬಹುದು. ಈ ಪ್ರಕ್ರಿಯೆಯು ಗ್ರಾಹಕರಿಗೆ ಆರ್ಥಿಕ ಲಾಭವನ್ನು ಒದಗಿಸುವುದರ ಜೊತೆಗೆ, ಇ-ವೇಸ್ಟ್ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ ಮತ್ತು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ.
ಮಾರ್ಚ್ 31, 2025ರ ವೇಳೆಗೆ, ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ತನ್ನ ರಿಫರ್ಬಿಷ್ಡ್ ಐಸಿಟಿ ಉಪಕರಣಗಳನ್ನು 38 ದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಭಾರತ ಮತ್ತು ವಿಶ್ವಾದ್ಯಂತ ಒಟ್ಟು 4,154 ಟಚ್‌ಪಾಯಿಂಟ್‌ಗಳನ್ನು ಹೊಂದಿರುವ ಈ ಕಂಪನಿಯ ಮಾರಾಟ ಜಾಲವು ಅತ್ಯಂತ ವಿಶಾಲವಾಗಿದೆ.ಮಾರ್ಚ್ 31, 2025ರ ವೇಳೆಗೆ, ಕಂಪನಿಯಲ್ಲಿ ಒಟ್ಟು 1,194 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಎನ್‌ಜಿ ಎಲೆಕ್ಟ್ರಾನಿಕ್ಸ್ ಐಪಿಒಗೆ ಬಿಡ್ ಮಾಡಬಹುದೇ?
ಐಪಿಒಗೆ ಬಿಡ್ ಮಾಡುವ ಮುನ್ನ ಷೇರುಪೇಟೆಯ ತಜ್ಞರು, ಬ್ರೋಕರ್‌ಗಳು ತಮ್ಮ ಅಭಿಪ್ರಾಯ ನೀಡುತ್ತಾರೆ. ಎಲ್ಲಾದರೂ ತಜ್ಞರು ಅಪ್ಲೈ ಎಂದರೆ, ಅರ್ಜಿ ಸಲ್ಲಿಸಬಹುದು, ಮೇ ಅಪ್ಲೈ ಎಂದರೆ, ಅರ್ಜಿ ಸಲ್ಲಿಸಬಹುದು, ಆದರೆ, ರಿಸ್ಕ್‌ಗಳು ಇವೆ ಎಂದು ಗಮನಿಸಿ ಎಂದರ್ಥ. ಅವಾಯ್ಡ್ ಎಂದರೆ, ಬೇಡ, ಇದು ಅಪಾಯಕಾರಿ ಎಂಬ ಎಚ್ಚರಿಕೆಯಾಗಿದೆ. ಷೇರುಪೇಟೆಯ ವಿವಿಧ ತಜ್ಞರು ಜಿಎನ್‌ಜಿ ಎಲೆಕ್ಟ್ರಾನಿಕ್ಸ್‌ಗೆ ಅಪ್ಲೈ ಮಾಡಬಹುದು ಎಂದಿದ್ದಾರೆ.
ಡಿಸ್ಕ್ಲೈಮರ್: ಈ ಐಪಿಒ ಮಾಹಿತಿ ಸಾರ್ವಜನಿಕ ಮೂಲಗಳ ಆಧಾರಿತವಾಗಿದೆ. ಷೇರುಪೇಟೆ ಅಪಾಯಗಳನ್ನು ಹೊಂದಿರುತ್ತದೆ. ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ವಂತ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಿ.














Got a Questions?
Find us on Socials or Contact Us and we’ll get back to you as soon as possible.