how to start a business in Karnataka? ಕರ್ನಾಟಕದಲ್ಲಿ ಬಿಸ್ನೆಸ್ ಆರಂಭಿಸುವುದು ಹೇಗೆ? ಈ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ಕಂಪನಿಯೊಂದರಲ್ಲಿ ಕೆಲಸ ಮಾಡಿದರೆ ಪ್ರತಿತಿಂಗಳು ತಪ್ಪದೇ ವೇತನ ದೊರಕುತ್ತದೆ. ಆ ವೇತನ ತುಸುತುಸುವೇ ಹೆಚ್ಚುತ್ತಾ ಹೋಗುತ್ತದೆ. ಇದೇ ಸಮಯದಲ್ಲಿ ಸ್ವಂತ ವ್ಯವಹಾರ ಆರಂಭಿಸಿ ಸಾಕಷ್ಟು ಜನರು ಯಶಸ್ವಿ ಪಡೆಯುತ್ತಾರೆ. ಉದ್ಯೋಗಿಯ ವೇತನ ವರ್ಷಕ್ಕೆ ಕೆಲವು ಸಾವಿರ ಹೆಚ್ಚಾದರೆ, ಬಿಸ್ನೆಸ್ ಲಾಭವು ಸಾವಿರ, ಲಕ್ಷ, ಕೋಟಿ ಎಂದು ಏರುತ್ತಾ ಹೋಗುತ್ತದೆ. ಬಿಸ್ನೆಸ್ ಎಂದು ಕೈಸುಟ್ಟುಕೊಂಡವರೂ ಇದ್ದಾರೆ. ಆದರೆ, ಸರಿಯಾಗಿ ಬುದ್ಧಿ ಉಪಯೋಗಿಸಿ ವ್ಯವಹಾರ ನಡೆಸಿ ಯಶಸ್ಸು ಪಡೆದವರು ಸಾಕಷ್ಟು ಜನರು ನಮ್ಮ ಸುತ್ತಮುತ್ತಾ ಇದ್ದಾರೆ.
ಯಾವ ಬಿಸ್ನೆಸ್ ಆರಂಭಿಸುವಿರಿ?
ಇದಕ್ಕೆ ನೀವೇ ಉತ್ತರ ಕಂಡುಕೊಳ್ಳಬೇಕು. ಫ್ಯಾಕ್ಟರಿ ಮಾಡುವಿರಾ, ಅಂಗಡಿ ತೆರೆಯುವಿರಾ ಅದು ನಿಮಗೆ ಬಿಟ್ಟದ್ದು. ಆದರೆ, ಯಾವುದೇ ಬಿಸ್ನೆಸ್ ಆರಂಭಿಸುವ ಮುನ್ನ ಆ ವಿಭಾಗದಲ್ಲಿ ಒಂದಿಷ್ಟು ಅನುಭವ ಇರುವುದು ಒಳ್ಳೆಯದು. ಜತೆಗೆ, ಮಾರುಕಟ್ಟೆಯ ಬಗ್ಗೆ ಸರಿಯಾದ ಮಾಹಿತಿಯೂ ಬೇಕು. ತುಂಬಾ ದೊಡ್ಡಮಟ್ಟದಲ್ಲಿ ಸಾಲಗೀಲ ಮಾಡಿ ಬಿಸ್ನೆಸ್ ಆರಂಭಿಸಿ. ಸಣ್ಣದಾಗಿ ಆರಂಭಿಸಿ.
ಕರ್ನಾಟಕದಲ್ಲಿ ಬಿಸ್ನೆಸ್ ಆರಂಭಿಸುವ ಸಮಯದಲ್ಲಿ ನೀವು ಬಿಸ್ನೆಸ್ ಸ್ಟ್ರಕ್ಚರ್, ಬಿಸ್ನೆಸ್ ನೋಂದಣಿ ಮಾಡುವುದು, ಸಂಬಂಧಪಟ್ಟ ಲೈಸನ್ಸ್, ಪರ್ಮಿಟ್‌ಗಳನ್ನು ಪಡೆಯುವುದು ಮುಖ್ಯವಾಗುತ್ತದೆ.
ಯಾವ ರೀತಿಯ ಬಿಸ್ನೆಸ್ ಮಾಡುವಿರಿ?
- ಏಕಮಾಲೀಕತ್ವ (Sole Proprietorship): ಈ ಸ್ನೇಹಿತರನ್ನು ನಂಬಿ ಹಣ ಹಾಕಿದರೆ ಕಥೆ ಗೋವಿಂದ, ಏನು ಮಾಡುವುದಿದ್ದರೂ ನಾನೊಬ್ಬನ್ನೇ ಮಾಡುವೆ, ಲಾಭ ಅಥವಾ ನಷ್ಟ ನಾನೇ ಅನುಭವಿಸುವೆ ಎಂದು ಬಿಸ್ನೆಸ್ ಮಾಡಲು ಬಯಸುವವರು ಏಕಮಾಲೀಕತ್ವ ಆಯ್ಕೆ ಮಾಡಿಕೊಳ್ಳಬಹುದು. ಇದು ತನ್ನ ಹೆಸರಿನಂತೆ ಒಬ್ಬರೇ ಮಾಲೀಕರನ್ನು ಹೊಂದಿರುತ್ತದೆ.
- ಪಾಟ್ನರ್‌ಶಿಪ್: ಒಬ್ಬರ ಬದಲಾಗಿ ಇಬ್ಬರು ಅಥವಾ ಹೆಚ್ಚು ಪಾಲುದಾರರು ಒಟ್ಟಾಗಿ ಆರಂಭಿಸುವ ಬಿಸ್ನೆಸ್ ಇದಾಗಿದೆ.
- ಲಿಮಿಟೆಡ್ ಲಿಯಾಬಿಲಿಟಿ ಪಾಟ್ನರ್‌ಶಿಪ್: ಪಾಟ್ನರ್‌ಶಿಪ್‌ನಲ್ಲಿ ವ್ಯವಹಾರ ಮಾಡುವುದಾದರೆ ಲಿಯಾಬಿಲಿಟಿ ಪ್ರೊಟೆಕ್ಷನ್ ಅನ್ನು ಪಾಲುದಾರರಿಗೆ ನೀಡಬಹುದು.
- ಪ್ರೈವೇಟ್ ಲಿಮಿಟೆಡ್ ಕಂಪನಿ: ಈ ರೀತಿ ಒಂದು ಕಂಪನಿ ಆರಂಭಿಸಬಹುದು. ಬಂಡವಾಳ ಕ್ರೋಡೀಕರಿಸಲು ಕೂಡ ಈ ರೀತಿಯ ವ್ಯವಹಾರ ನಡರವಾಗುತ್ತದೆ.
- ಏಕ ವ್ಯಕ್ತಿ ಕಂಪನಿ (ಒಪಿಸಿ): ಒಬ್ಬನೇ ವ್ಯಕ್ತಿಯು ಲಿಮಿಟೆಡ್ ಲಿಯಾಬಿಲಿಟಿ ಜತೆ ಬಿಸ್ನೆಸ್ ಮಾಡಬಹುದು.
- ಪಬ್ಲಿಕ್ ಲಿಮಿಟೆಡ್ ಕಂಪನಿ: ದೊಡ್ಡ ಮಟ್ಟದ ವ್ಯವಹಾರ ನಡೆಸಲು ಬಯಸುವವರಿಗೆ ಸೂಕ್ತವಾಗಿದೆ.
ವ್ಯವಹಾರದ ಹೆಸರು ಮತ್ತು ನೋಂದಣಿ
ನಿಮ್ಮ ಬಿಸ್ನೆಸ್‌ಗೆ ಒಂದು ಚಂದದ ಹೆಸರು ಇರಬೇಕು. ಮುಂದೊಂದು ದಿನ ಹೆಮ್ಮೆಯಿಂದ ನಿಮ್ಮ ಉದ್ಯೋಗಿಗಳು ಹೇಳುವಂತಹ ಚಂದದ ಹೆಸರನ್ನು ಕಂಪನಿಗೆ ಇಡಿ. ಈ ರೀತಿ ಹೆಸರು ಇಡುವ ಸಂದರ್ಭದಲ್ಲಿ ಈ ಹೆಸರು ಲಭ್ಯವಿದೆಯೇ ಎಂದು ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬೇಕು. ministry of corporate affairs business name check ಮಾಡಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಕಂಪನಿಯನ್ನು ನೊಂದಣಿ ಮಾಡಿ. ನೀವು ಸ್ಟಾರ್ಟಪ್ ಆರಂಭಿಸುವುದಾದರೆ ಸ್ಟಾರ್ಪಟ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದು. ಸ್ಟಾರ್ಟಪ್ ಇಂಡಿಯಾ ರಿಜಿಸ್ಟ್ರೇಷನ್ ಮಾಹಿತಿ ಪಡೆಯಲು Startup India Scheme ಎಂಬ ಈ ಲಿಂಕ್‌ಗೆ ಭೇಟಿ ನೀಡಿ.
ಲೈಸನ್ಸ್‌ಗಳ ವಿಷಯ
ನೀವು ಬೆಂಗಳೂರಿನಲ್ಲಿ ಬಿಸ್ನೆಸ್ ಆರಂಭಿಸುವುದಾದರೆ ಬಿಬಿಎಂಪಿ (ಈಗ ಹೆಸರು ಬದಲಾಗಿದೆ, Greater Bengaluru Authority ಎಂದಾಗಿದೆ)ಯಿಂದ ಅನಮತಿ ಪಡೆಯಬಹುದು.
ಎಂಎಸ್‌ಎಂಇ ನೋಂದಣಿ ಮಾಡುವುದಾದರೆ ಉದ್ಯಮ್ ನೋಂದಣಿ ಮಾಡಬಹುದು. ಸರಕಾರದ ಸ್ಕೀಮ್ ಮತ್ತು ಪ್ರಯೋಜನಗಳನ್ನು ಪಡೆಯಲು ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಅನುಕೂಲಕರವಾಗಿದೆ.
ಜಿಎಸ್‌ಟಿ ನೋಂದಣಿ: ಸಾಕಷ್ಟು ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುವವರು ತಪ್ಪದೇ ಜಿಎಸ್‌ಟಿ ನೋಂದಣಿ ಮಾಡಬೇಕು. ನೀವು ಸೇವಾ ವಿಭಾಗದಲ್ಲಿ ಬಿಸ್ನೆಸ್ ಮಾಡುವುದಾದರೆ ವರ್ಷಕ್ಕೆ ಬಿಸ್ನೆಸ್ ಲಿಮಿಟ್ 20 ಲಕ್ಷ ರೂಪಾಯಿ. ಸರಕು ವಿಭಾಗಕ್ಕೆ 40 ಲಕ್ಷ ರೂ. ಇದೆ. ಅಂದರೆ, ಇದಕ್ಕಿಂತ ಹೆಚ್ಚು ವ್ಯವಹಾರ ಇದ್ದರೆ ಕಡ್ಡಾಯವಾಗಿ ನಿಮ್ಮ ಬಿಸ್ನೆಸ್‌ಗೆ ಜಿಎಸ್‌ಟಿ ನೋಂದಣಿ ಮಾಡಬೇಕು).
ವೃತ್ತಿಪರ ತೆರಿಗೆ ನೋಂದಣಿ
ಕರ್ನಾಟಕದಂತಹ ರಾಜ್ಯಗಳಲ್ಲಿ ಇದು ಉದ್ಯೋಗಿಗಳಿಗೆ ಮತ್ತು ಬಿಸ್ನೆಸ್‌ಗಳಿಗೆ ಕಡ್ಡಾಯ.
ಶಾಪ್‌ಗಳ ನೋಂದಣಿ
ನೀವು ಏನಾದರೂ ಸ್ಟೇಷನರಿ ಇತ್ಯಾದಿ ಅಂಗಡಿ ಇಡಲು ಬಯಸಿದರೆ Shops and Establishments Act Registration ಮಾಡಬೇಕು. ಅಂದರೆ, ಫಿಸಿಕಲ್ ಲೊಕೆಷನ್ ಹೊಂದಿರುವ ಬಿಸ್ನೆಸ್‌ಗಳಿಗೆ ಇದು ಅಗತ್ಯ.
ಫ್ಯಾಕ್ಟರಿ ಲೈಸನ್ಸ್
ತಯಾರಿಕೆ ಮತ್ತು ಮೆಷಿನರಿ ಹೊಂದಿರುವ, ಹೊಂದಿರದ ಫ್ಯಾಕ್ಟರಿಗಳು ಲೈಸನ್ಸ್ ಪಡೆಯಬೇಕು.
ಇನ್ನು ಯಾವ ಅಂಶ ಗಮನಿಸಬೇಕು?
- ಬಿಸ್ನೆಸ್ ಉದ್ದೇಶಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಿರಿ.
- ಪ್ಯಾನ್ ಮತ್ತು ಟ್ಯಾನ್ ಬೇಕು. ಅಂದರೆ, ಪರ್ಮನೆಂಟ್ ಅಕೌಂಟ್‌ನಂಬರ್‌ಮತ್ತು ಟ್ಯಾಕ್ಸ್ ಡಿಡಕ್ಷನ್ ಆಂಡ್ ಕಲೆಕ್ಷನ್ ಅಕೌಂಟ್ ನಂಬರ್ (ಟ್ಯಾನ್) ಬೇಕು.
ಬಿಸ್ನೆಸ್ ಆರಂಭಿಸಬೇಕು ಎಂದು ಬಹುತೇಕ ಎಲ್ಲರೂ ಕನಸು ಕಾಣುತ್ತಾರೆ. ಆದರೆ, ಕೆಲವರು ಮಾತ್ರ ಈ ಕನಸನ್ನು ಈಡೇರಿಸಿಕೊಳ್ಳುತ್ತಾರೆ. ನಿಮ್ಮಲ್ಲಿ ಬಿಸ್ನೆಸ್ ಆರಂಭಿಸುವ ಕುರಿತು ಯೋಚನೆಯಿದ್ದರೆ ಹಿಂಜರಿಯುವುದು ಏಕೆ.
ನಿಮ್ಮ ಬಿಸ್ನೆಸ್‌ಗೆ ಸೂಕ್ತವಾದ, ಸಮರ್ಪಕ ಎಸ್‌ಇಒ ಬೆಂಬಲವಿರುವ ಬಿಸ್ನೆಸ್ ವೆಬ್‌ಸೈಟ್ ಪಡೆಯಲು ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸ್ ಅನ್ನು ಸಂಪರ್ಕಿಸಿ.


















Got a Questions?
Find us on Socials or Contact Us and we’ll get back to you as soon as possible.