ಚುರುಕಾಗಿದೆ ಐಟಿ ನೇಮಕಾತಿ, ಟೆಕ್ ಸ್ಕಿಲ್ ಕಲಿತವರಿಗೆ ಕೈ ತುಂಬಾ ವೇತನ, ನೀವೂ ರೆಡಿನಾ?

By | 19/09/2021

ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್‌, ಟಿಸಿಎಸ್‌, ವಿಪ್ರೊದಲ್ಲಿ ನೇಮಕಾತಿ ಚುರುಕಾಗಿದೆ. ಐಟಿ ದಿಗ್ಗಜ ಕಂಪನಿಗಳು ಮಾತ್ರವಲ್ಲದೆ ಐಟಿ ಮತ್ತು ಐಟಿಯೇತರ ಕಂಪನಿಗಳೂ ಈಗ ಉದ್ಯೋಗ ನೇಮಕಾತಿ ಚುರುಕುಗೊಳಿಸಿದ್ದು, ಕಳೆದ ವರ್ಷದಿಂದ ಮಂಕಾಗಿದ್ದ ಉದ್ಯೋಗ ಕ್ಷೇತ್ರ ಮೈಕೊಡವಿಕೊಂಡಿದೆ.

“ಇತ್ತೀಚಿನ ಅಧ್ಯಯನದ ಪ್ರಕಾರ ಸಾಫ್ಟ್‌ವೇರ್‌ ತಂತ್ರಜ್ಞರಿಗೆ ಬೇಡಿಕೆ ಶೇಕಡ ೪೦೦ರಷ್ಟು  ವೃದ್ಧಿಯಾಗಿದೆ. ಕಾರ್ಪೋರೇಟ್‌ ಕಂಪನಿಗಳಲ್ಲಿ ಡಿಜಟಲೀಕರಣ ಹೆಚ್ಚಿರುವುದರಿಂದ ಡಿಜಿಸ್ಕಿಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕ್ಯಾಡ್‌ ಮತ್ತು ಕಂಪ್ಯೂಟರ್‌ ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಸ್ಕಿಲ್‌ಗಳನ್ನು ಕಲಿತವರಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ’’ ಎಂದು ಕರ್ನಾಟಕದ ಪ್ರಮುಖ ಉದ್ಯೋಗ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್‌ ಗೌಡ ಎಚ್‌.ಎಂ. ಹೇಳಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಇತ್ತೀಚೆಗೆ ಮಹಿಳಾ ವೃತ್ತಿಪರರಿಗೆ ತನ್ನ ಅತಿದೊಡ್ಡ ನೇಮಕಾತಿ ಅಭಿಯಾನವನ್ನು ಘೋಷಿಸಿತ್ತು. ಕರಿಯರ್‌ ಗ್ಯಾಪ್‌ನ ನಂತರ ಉದ್ಯೋಗ ಪಡೆಯಲು ಕಷ್ಟಪಡುತ್ತಿದ್ದ ಮಹಿಳೆಯರಿಗೆ ಉದ್ಯೊಗ ಪಡೆಯಲು ವಿಶೇಷ ಅಭಿಯಾನ ನಡೆಸಿತ್ತು. ಇನ್ಫೋಸಿಸ್‌ ಮತ್ತು ವಿಪ್ರೊದಲ್ಲಿಯೂ ನೇಮಕಾತಿ ಚುರುಕಾಗಿದೆ. ಬಿಗ್‌ಡೇಟಾ ಅನಾಲಿಟಿಕ್ಸ್‌, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಮೆಷಿನ್‌ ಲರ್ನಿಂಗ್‌, ಕ್ಲೌಡ್ ಕಂಪ್ಯೂಟಿಂಗ್‌, ಸೈಬರ್‌ ಸೆಕ್ಯುರಿಟಿ, ಇಂಟರ್ನೆಟ್‌ ಆಫ್‌ ಥಿಂಗ್ಸ್‌, ರೊಬಾಟಿಕ್ಸ್‌ ವಿಭಾಗದಲ್ಲಿ ಕೌಶಲ್ಯ ಇರುವವರಿಗೆ ಬೇಡಿಕೆ ವೃದ್ಧಿಯಾಗಿದೆ. 2025ರವರೆಗೆ ಇಂತಹ ಡಿಜಿಟಲ್‌ ಕೌಶಲ್ಯ ಇರುವವರಿಗೆ ಬೇಡಿಕೆ ಏಳುಪಟ್ಟು ವೃದ್ಧಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ.

“ಕೋವಿಡ್‌-೧೯ ಬಳಿಕ ಟೆಕ್‌ ಸ್ಕಿಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಯಾವುದೇ ರೀತಿಯ ಟೆಕ್ ಸ್ಕಿಲ್‌ ಹೊಂದಿರುವವರು ಉತ್ತಮ ಅವಕಾಶ ಪಡೆದಿದ್ದಾರೆ. ಟೆಕ್ ಸ್ಕಿಲ್‌ ಬಳಿಕ ಅಕೌಂಟಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ ಇರುವುದನ್ನು ನೋಡಬಹುದು. ಈಗಿನ ಜಿಎಸ್‌ಟಿ ಕಾಲದಲ್ಲಿ ಟ್ಯಾಲಿ ಪ್ರೈಮ್‌ ಕೋರ್ಸ್‌ ಕಲಿತವರಿಗೆ ಉತ್ತಮ ಅವಕಾಶ ದೊರಕುತ್ತಿದೆ’’ ಎಂದು ಕ್ಯಾಡ್‌ನೆಸ್ಟ್‌.ಆರ್ಗ್‌ನ ಮುಖ್ಯಸ್ಥರಾದ ಪ್ರಕಾಶ್‌ ಗೌಡ ಹೇಳಿದ್ದಾರೆ.

“ಕೋವಿಡ್‌-೧೯ ಇರಲಿ, ಇಲ್ಲದೆ ಇರಲಿ, ಯಾರಲ್ಲಿ ಸ್ಕಿಲ್‌ ಇದೆಯೋ ಅವರಿಗೆ ಸದಾ ಬೇಡಿಕೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯನ್ನು ವ್ಯರ್ಥ ಮಾಡದೆ ಯಾವುದಾದರೂ ಉದ್ಯೋಗಾಧರಿತ ಕೌಶಲ್ಯಗಳನ್ನು ಕಲಿತು ನಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಬೇಕು’’ ಎಂದು ಅವರು ಸಲಹೆ ನೀಡಿದ್ದಾರೆ.

ಕರ್ನಾಟಕದ ವಿಶ್ವಾಸನೀಯ ಕೌಶಲ್ಯ ಅಭಿವೃದ್ಧಿ ಕೇಂದ್ರ ಕ್ಯಾಡ್‌ನೆಸ್ಟ್‌ ವಿಳಾಸ:

CADD Nest Rajajinagar# 1760, 1st floor, ABOVE BSNL CUSTOMER CARE CENTRE, Dr Rajkumar Road, opp. Navarang theatre, Rajajinagar, Bengaluru, Karnataka 560010. 9740444363 / 080-41608308

CADD Nest Basavanagudi# 16, 1st Floor, Siddaiah Complex, Mount Joy Road near Basavanagudi,, Basavanagudi, Bull Temple Road, Bengaluru, Karnataka 560019.9972177744 / 080-26608883

CADD Nest Sheshadripuram# 187, 2nd Floor, SC Road, ABC Arcade, near Nataraja Theater, Seshadripuram, Bengaluru, Karnataka 560020.9535666300 / 080-41514154

CADD Nest Malleshwaram# 64,1st Floor, 18th Cross, Margosa Road, Malleshwaram, Bengaluru, Karnataka 560055.9606666480 / 080-29604444

CADD Nest RR Nagar# 1135, 1st Floor, Nehru Road, 3rd stage BEML Layout,RajarajeshwarinagarBangalore, Karnataka 560098.96069 68139 / 96069 68140

CADD Nest RT Nagar#9/A, 2nd floor, Vasanthappa Block, CBI Main Road,Bilappa Garden, Ganganagar, RT Nagar, Bengaluru-560032.(Diagonally Opp to Kanthi Sweets )9972544344 / 9606666470

Leave a Reply

Your email address will not be published. Required fields are marked *