ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ ತಿಳಿಯಿರಿ

ದೇಶದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಐಎಂಎ) ನೀಡುವ ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಸಿಎಂಎ) ಸರ್ಟಿಫಿಕೇಷನ್ ಕೋರ್ಸ್‍ಗೆ ಜಾಗತಿಕವಾಗಿ ಮನ್ನಣೆಯಿದೆ. ಸಿಎಂಎ ಸರ್ಟಿಫಿಕೇಷನ್ ಕೋರ್ಸ್ ಕುರಿತು ಹೆಚ್ಚಿನ 
ಮಾಹಿತಿ ಇಲ್ಲಿದೆ.

 

  • ಪ್ರವೀಣ್ ಚಂದ್ರ ಪುತ್ತೂರು

 

ಕಾಮರ್ಸ್ ಓದಿ ಅಕೌಂಟೆಂಟ್ ಆದವರಿಗೆ ವೃತ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲು ವಿವಿಧ ಸರ್ಟಿಫಿಕೇಷನ್ ಕೋರ್ಸ್‍ಗಳು ಸಾಥ್ ನೀಡುತ್ತವೆ. ಅವುಗಳಲ್ಲಿ ಎಸ್‍ಎಂಎ ಸರ್ಟಿಫಿಕೇಷನ್ ಸಹ ಪ್ರಮುಖವಾದದ್ದು. ಅಮೆರಿಕದ ಐಎಂಎ ಜೊತೆ ದೇಶದ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಸಿಎಂಎಯು ಎಂಒಯು ಒಪ್ಪಂದ ಮಾಡಿಕೊಂಡು ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ ಸರ್ಟಿಫಿಕೇಷನ್ ನೀಡುತ್ತಿದೆ. ಕಂಪನಿಯೊಳಗಿನ ಹಣಕಾಸು ಕಾರ್ಯಗಳನ್ನು ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂ ನೆರವಾಗುತ್ತದೆ. ಈಗಿನ ಸಂಕೀರ್ಣ ವಾಣಿಜ್ಯ ವ್ಯವಹಾರಗಳನ್ನು ಸುಲಲಿತವಾಗಿ ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂನಿಂದ ಸಾಧ್ಯವಾಗುತ್ತದೆ.

[su_quote]Quote[/su_quote]ವಿಜಯ ಕರ್ನಾಟಕ ಕಾಂಪಿಟೇಷನ್ ವಿಕೆಯ ಪ್ರೊ ಲರ್ನಿಂಗ್ ಅಂಕಣದಲ್ಲಿ ಪ್ರಕಟಿ

ಯಾಕೆ ಸಿಎಂಎ ಕಲಿಯಬೇಕು?
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಮತ್ತು ಫೈನಾನ್ಸಿಯಲ್ ಅಕೌಂಟೆಂಟ್ ಕುರಿತು ಉತ್ತಮ ಜ್ಞಾನ ಲಭಿಸುತ್ತದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂ ತೂಕ ಹೆಚ್ಚಾಗುತ್ತದೆ. ಉದ್ಯೋಗಾವಕಾಶವೂ ಹೆಚ್ಚುತ್ತದೆ. ಹೆಚ್ಚು ವೇತನದ ಆಫರ್ ಸಹ ದೊರಕುತ್ತದೆ. ನಾಯಕತ್ವ ಕೌಶಲ, ವ್ಯವಹಾರದ ಅಂತಾರಾಷ್ಟ್ರೀಯ ಮಜಲುಗಳ ಬಗ್ಗೆಯೂ ತಿಳಿದುಕೊಳ್ಳಬಹುದು.

ಯಾರು ಕಲಿಯಬಹುದು?
ಈ ಕೋರ್ಸ್ ಅನ್ನು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಈಗಾಗಲೇ ವೃತ್ತಿಯಲ್ಲಿ ಇರುವವರೂ ಮಾಡಬಹುದಾಗಿದೆ. ಅಂಗೀಕೃತ ವಿವಿ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಅರ್ಥಶಾಸ್ತ್ರ, ಬೇಸಿಕ್ ಸ್ಟಟಿಸ್ಟಿಕ್ಸ್ ಮತ್ತು ಫೈನಾನ್ಸಿಯಲ್ ಅಕೌಂಟಿಂಗ್‍ನ ಮೂಲಭೂತ ಜ್ಞಾನ ಇರಬೇಕು. ಎರಡು ವರ್ಷದ ವೃತ್ತಿಪರ ಅನುಭವ ಜೊತೆಗಿರಬೇಕು.
ಬಿಕಾಂ, ಬಿಬಿಎ, ಎಂಬಿಎ ಇತ್ಯಾದಿ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು, ಚಾರ್ಟೆಡ್ ಅಕೌಂಟೆಂಟ್ಸ್ ಮತ್ತು ಕಾಸ್ಟ್ ಅಕೌಂಟೆಂಟ್ಸ್ ಪಡೆದವರು ಸಿಎಂಎ ಸರ್ಟಿಫಿಕೇಷನ್ ಪಡೆಯಬಹುದು. ಮ್ಯಾನೇಜ್‍ಮೆಂಟ್ ಹಂತದಲ್ಲಿ ವೃತ್ತಿಗೆ ಪ್ರವೇಶಿಸಬಯಸುವವರು ಸಹ ಈ ಕೋರ್ಸ್ ಪಡೆಯಬಹುದು. ಕೇವಲ ಆರೆಂಟು ತಿಂಗಳಲ್ಲಿ ಈ ಎಗ್ಸಾಂ ಅನ್ನು ಪಾಸ್ ಮಾಡಬಹುದಾಗಿದೆ. ಕೇವಲ 2 ಪೇಪರ್‍ಗಳಿದ್ದು, 6 ತಿಂಗಳಲ್ಲಿ ಈ ಕೋರ್ಸ್ ಅನ್ನು ಪೂರ್ಣಗೊಳಿಸಬಹುದಾಗಿದೆ. 12 ತಿಂಗಳು ಅಥವಾ 3 ವರ್ಷದ ಅವಧಿಯ ಕೋರ್ಸ್‍ಗಳನ್ನೂ ಮಾಡಬಹುದಾಗಿದೆ.

ಪರೀಕ್ಷೆಗೆ ಏನು ಓದಬೇಕು?
ಸಿಎಂಎ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿವೆ. ಭಾಗ 1 ಪ್ರಶ್ನೆಪತ್ರಿಕೆಯಲ್ಲಿ ಹಣಕಾಸು ಯೋಜನೆ, ಕಾರ್ಯಕ್ಷಮತೆ ಮತ್ತು ನಿಯಂತ್ರಣ- ಪ್ಲಾನಿಂಗ್ ಬಜೆಟಿಂಗ್ ಫಾರ್‍ಕಾಸ್ಟಿಂಗ್, ಫರ್ಫಾಮೆನ್ಸ್ ಮ್ಯಾನೇಜ್‍ಮೆಂಟ್, ಕಾಸ್ಟ್ ಮ್ಯಾನೇಜ್‍ಮೆಂಟ್, ಇಂಟರ್ನಲ್ ಕಂಟ್ರೋಲ್ಸ್ ಮತ್ತು ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಪಾರ್ಟ್ 2 ಪ್ರಶ್ನೆಪತ್ರಿಕೆಯಲ್ಲಿ ಫೈನಾನ್ಶಿಯಲ್ ಡಿಸಿಷನ್ ಮೇಕಿಂಗ್- ಫೈನಾನ್ಶಿಯಲ್ ಸ್ಟೇಟ್‍ಮೆಂಟ್ ಅನಾಲಿಸಿಸ್, ಕಾಪೆರ್Çರೇಟ್ ಫೈನಾನ್ಸ್, ಡಿಸಿಷನ್ ಅನಾಲಿಸಿಸ್ ಮತ್ತು ರಿಸ್ಕ್ ಮ್ಯಾನೇಜ್‍ಮೆಂಟ್, ಇನ್ವೆಸ್ಟ್‍ಮೆಂಟ್ ಡಿಸಿಷನ್, ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಕುರಿತು ಪ್ರಶ್ನೆಗಳಿರುತ್ತವೆ. ಒಟ್ಟು 4 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತದೆ. ಶೇಕಡ 75ರಷ್ಟು ಬಹುಆಯ್ಕೆ ಪ್ರಶ್ನೆಗಳು ಮತ್ತು ಶೇಕಡ 25ರಷ್ಟು ಪ್ರಬಂಧ ಬರೆಯುವ ಪ್ರಶ್ನೆಗಳಿರುತ್ತವೆ. ಜನವರಿ/ಫೆಬ್ರವರಿ, ಮೇ/ಜೂನ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‍ನಲ್ಲಿ ಕಂಪ್ಯೂಟರೀಕೃತ ಆನ್‍ಲೈನ್ ಪರೀಕ್ಷೆ ನಡೆಯುತ್ತದೆ. ಪಾಸ್ ಆಗಲು ಶೇಕಡ 72ರಷ್ಟು ಅಂಕ ಪಡೆಯಬೇಕು.

ಉದ್ಯೋಗಾವಕಾಶ ಹೇಗಿದೆ?
ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಎಂಎ ಸರ್ಟಿಫಿಕೇಷನ್ ಇದ್ದವರಿಗೆ ಬಹುಬೇಡಿಕೆಯಿದೆ. ಫೈನಾನ್ಶಿಯಲ್ ಅನಾಲಿಸ್ಟ್, ಇಂಟರ್ನಲ್ ಅಡಿಟರ್, ಸೀನಿಯರ್ ಎಕ್ಸಿಕ್ಯುಟಿವ್, ಫೈನಾನ್ಸ್ ಮ್ಯಾನೇಜರ್, ಬಿಸಿನೆಸ್ ಅನಾಲಿಸ್ಟ್, ಪ್ರೈಸಿಂಗ್ ಅನಾಲಿಸ್ಟ್, ಡೈರೆಕ್ಟರ್-ಫೈನಾನ್ಸ್, ಚೀಫ್ ಫೈನಾನ್ಸಿಯಲ್ ಆಫೀಸರ್ ಇತ್ಯಾದಿ ಹುದ್ದೆಗಳನ್ನು ಪಡೆಯಲು ಸಿಎಂಎ ಸರ್ಟಿಫಿಕೇಷನ್ ನೆರವಾಗುತ್ತದೆ. ಈ ಕೋರ್ಸ್ ಕಲಿಯಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ದಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ವೆಬ್ ಸೈಟ್‍ಗೆ ಭೇಟಿ ನೀಡಬಹುದು.

ಜನಪ್ರಿಯ ಫೈನಾನ್ಸ್ ಕೋರ್ಸ್‍ಗಳು
ಎಂಬಿಎ: ಎಂಬಿಎ ಇನ್ ಫೈನಾನ್ಸ್ ಓದಿದವರಿಗೆ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ. ಅಕೌಂಟಿಂಗ್, ಕಾಸ್ಟ್ ಅಕೌಂಟಿಂಗ್, ಫೈನಾನ್ಶಿಯಲ್ ಮಾಡೆಲಿಂಗ್, ಸ್ಟಟಿಸ್ಟಿಕ್ಸ್ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡಬಹುದಾಗಿದೆ. ದೇಶದಲ್ಲಿ ಎಂಬಿಎ ಪದವೀಧರರು ಹೆಚ್ಚಾಗುತ್ತಿದ್ದು, ಹೆಚ್ಚು ಕೌಶಲ ಇರುವವರಿಗೆ ಬೇಡಿಕೆ ಇದ್ದೇ ಇದೆ.

 

ಚಾರ್ಟೆಡ್ ಅಕೌಂಟೆಂಟ್: 1949ರ ಚಾರ್ಟೆಡ್ ಅಕೌಂಟೆಂಟ್ ಕಾಯಿದೆ ಅನ್ವಯ ಸ್ಥಾಪನೆಯಾದ ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್‍ಗೆ ದೇಶದಲ್ಲಿಂದು ಹೆಚ್ಚು ಬೇಡಿಕೆಯಿದೆ. ಕನ್ಸಲ್ಟೆನ್ಸಿ, ಅಡಿಟ್ ಪ್ರಾಕ್ಟೀಸ್, ಇನ್ವೆಸ್ಟ್‍ಮೆಂಟ್ ಬ್ಯಾಂಕಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಇದು ನಿಮಗೆ ಉತ್ತಮ ಉದ್ಯೋಗವಕಾಶ ದೊರಕಿಸಿಕೊಡುತ್ತದೆ. ಭಾರತದಲ್ಲಿ ಚಾರ್ಟೆಡ್ ಅಕೌಂಟೆಂಟ್ ಓದಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉದ್ಯೋಗ ಪಡೆಯಬಹುದು. ಅಂದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಉದ್ಯೋಗ ಪಡೆಯಲು ದೇಶದ ಸಿಎ ಕೋರ್ಸ್ ನೆರವಾಗುತ್ತದೆ.

 

ಕಾಸ್ಟ್ ಅಕೌಂಟೆಂಟ್: ಕಾಸ್ಟ್ ಆ್ಯಂಡ್ ವಕ್ರ್ಸ್ ಅಕೌಂಟೆಂಟ್ಸ್ ಕಾಯಿದೆ, 1959ತ ಅನ್ವಯ ಸ್ಥಾಪನೆಯಾದ ಕಾಸ್ಟ್ ಅಕೌಂಟೆಂಟ್ ಕೋರ್ಸ್ ಸಹ ಉತ್ತಮ ಉದ್ಯೋಗಾವಕಾಶ ದೊರಕಿಸಿಕೊಡುತ್ತದೆ.

 

ಕಂಪನಿ ಸೆಕ್ರೆಟರಿ: ಕಂಪನಿ ಸೆಕ್ರೆಟರಿ ಕಾಯಿದೆ, 1980ರ ಅನ್ವಯ ಸ್ಥಾಪನೆಯಾದ ಈ ಕೋರ್ಸ್ ಅನ್ನು ಕಲಿತವರು ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಗ್ ಕಂಪನಿಗಳಲ್ಲಿ, ಬ್ಯಾಂಕ್‍ಗಳಲ್ಲಿ, ಕಾಪೆರ್Çರೇಟ್ ಆಫೀಸ್‍ಗಳಲ್ಲಿ ಉದ್ಯೋಗ ಪಡೆಯಬಹುದು.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.