ರೈಲ್ವೆ ವ್ಹೀಲ್ ಫ್ಯಾಕ್ಟರಿಯಿಂದ ಉದ್ಯೋಗವಕಾಶ

By | 17/08/2021

ರೈಲ್ವೆ ಸಚಿವಾಲಯ ಅಧೀನದ ರೈಲ್ವೆ ವ್ಹೀಲ್ ಫ್ಯಾಕ್ಟರಿಯಲ್ಲಿ ಅಗತ್ಯ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆಯ ದಿನಾಂಕ, ಅರ್ಜಿ ಶುಲ್ಕ, ವಯೋಮಿತಿ, ‌ಅರ್ಹತೆಗಳ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ : ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ : ಎಸ್ಸಿ/ಎಸ್ಸಿ, ಪಿಹೆಚ್‌ಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಇಂಡಿಯನ್ ಪೊಸ್ಟಲ್ ಆರ್ಡರ್ ಮೂಲಕ ಅಥವಾ ಡಿಡಿ ತೆಗೆಯುವ ಮೂಲಕ ಪಾವತಿಸಬಹುದು.

ಹುದ್ದೆಗಳ ವಿವರ : ಫಿಟ್ಟರ್ : 85
ಮೆಷನಿಸ್ಟ್ – 31
ಮೆಕ್ಯಾನಿಕ್ ( ಮೋಟಾರು ವೆಹಿಕಲ್) – 08
ಟರ್ನರ್ – 05
ಸಿಎನ್ ಸಿ ಪ್ರೋಗ್ರಾಮಿಂಗ್ ಕಮ್ ಅಪರೇಟರ್ ( ಸಿಒಇ ಗ್ರೂಪ್)- 23
ಇಲೆಕ್ಟ್ರೀಷಿಯನ್ – 18
ಇಲೆಕ್ಟ್ರಾನಿಕ್ ಮೆಕ್ಯಾನಿಕ್ – 22

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-09-2021

ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ : ಅಪ್ಲಿಕೇಶನ್ ಸ್ವೀಕರಿಸಿದ 45 ದಿನದೊಳಗೆ
ತರಬೇತಿ ಆರಂಭದ ಅವಧಿ : ಮೆರಿಟ್ ಲಿಸ್ಟ್ ಬಿಡುಗಡೆ ಆದ 15 ದಿನದೊಳಗೆ

ವಯೋಮಿತಿ : ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವಿದ್ಯಾರ್ಹತೆ : ಅಭ್ಯರ್ಥಿಗಳು 10ನೇ ತರಗತಿ ತೇರ್ಗಡೆ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ನೋಡಿ

Leave a Reply

Your email address will not be published. Required fields are marked *