ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೆಗ್ಯುಲರ್ ಮತ್ತು ಗುತ್ತಿಗೆ ಆಧಾರಿತ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗೆ ಅಪ್ಲಿಕೇಶನ್ ಸ್ವೀಕಾರ ಆರಂಭಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಎಸ್ ಬಿಐ ಅಫೀಶಿಯಲ್ ವೆಬ್ಸೈಟ್ sbi.co.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು :
ಅಪ್ಲಿಕೇಶನ್ ಸಲ್ಲಿಸುವ ಆರಂಭಿಕ ದಿನಾಂಕ : 13-08-2021
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 02-09-2021
ವಿದ್ಯಾರ್ಹತೆ ಮತ್ತು ಇತರೆ ಮಾನದಂಡಗಳ ಮೇಲೆ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಆದರೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಎಸ್ ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಪೈಕಿ ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡೈಸರ್, ಅಸಿಸ್ಟೆಂಟ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಇಂಜಿನಿಯರ್ ( ಸಿವಿಲ್), ಅಸಿಸ್ಟೆಂಟ್ ಮ್ಯಾನೇಜರ್ ಇಂಜಿನಿಯರ್ ( ಎಲೆಕ್ಟ್ರಿಕಲ್), ಡೆಪ್ಯುಟಿ ಮ್ಯಾನೇಜರ್ ( ಅಗ್ರಿ ಸ್ಪೆಷಲ್), ರಿಲೇಶನ್ ಶಿಪ್ ಮ್ಯಾನೇಜರ್ ( ಓಎಂಪಿ), ಪ್ರಾಡಕ್ಟ್ ಮ್ಯಾನೇಜರ್ (ಓಎಂಪಿ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಒಟ್ಟು ಹುದ್ದೆ : 69
ವಿದ್ಯಾರ್ಹತೆ :ಹುದ್ದೆಗಳಿಗೆ ಅನುಗುಣವಾಗಿ ಬಿಎ/ಎಂಎ/ಎಂಬಿಎ/ಬಿಇ/ಬಿ.ಟೆಕ್ ಮತ್ತು ಇತರೆ ಉತ್ತೀರ್ಣರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ sbi.co.in/career ಪೇಜ್ ಗೆ ಭೇಟಿ ನೀಡಿ










Got a Questions?
Find us on Socials or Contact Us and we’ll get back to you as soon as possible.