ಜೇನುತುಪ್ಪದ ಬಾಟಲಿಯನ್ನು ನಿಧಾನವಾಗಿ ಅಡ್ಡಕ್ಕೆ ತಿರುಗಿಸಿ ಸ್ವಲ್ಪ ಜೇನುತುಪ್ಪ ಕೆಳಗೆ ಬೀಳುವಂತೆ ಮಾಡಿ. ಹರಿಯುವ ಜೇನುತುಪ್ಪವನ್ನು ಬಾಟಲಿಯ ಬಾಯಿಯ ಹತ್ತಿರ ಚಾಕುವಿನಿಂದ ಕತ್ತರಿಸಿ. ಆಗ ಚಾಕುವಿನ ಮೇಲಿರುವ ಜೇನುತುಪ್ಪದ ಹನಿಯು ಮತ್ತೆ ಬಾಟಲಿಯೊಳಗೆ ಹೋಗುತ್ತದೆ. ಇದಕ್ಕೆ ಕಾರಣವೇನು?
ಬಾಟಲಿಯಿಂದ ಹರಿಯುವ ಜೇನುತುಪ್ಪದಲ್ಲಿ ಎರಡು ಬಲಗಳು ಕೆಲಸ ಮಾಡುತ್ತವೆ. ಅವು ಯಾವುವೆಂದರೆ, ಮೇಲ್ಮೆ ಒತ್ತಡ ಮತ್ತು ಗುರುತ್ವಾಕರ್ಷಣೆ ಬಲ. ಕೆಳಗೆ ಚೆಲ್ಲುವ ಜೇನುತುಪ್ಪದ ದಪ್ಪ ದ್ರವವನ್ನು ಗುರುತ್ವಾಕರ್ಷಣೆ ಬಲವು ಕೆಳಗೆ ಎಳೆಯುತ್ತದೆ. ಇದನ್ನು ಚಾಕುವಿನಿಂದ ಕತ್ತರಿಸಿದಾಗ ಚಾಕುವಿನ ಮೇಲಿರುವ ಸಣ್ಣ ಪ್ರಮಾಣದ ಜೇನುತುಪ್ಪವು ಎಷ್ಟು ಹಗುರವಾಗಿರುತ್ತದೆಂದರೆ ಅದನ್ನು ಮೇಲ್ಮೆ ಒತ್ತಡದ ಸ್ಥಿತಿಸ್ಥಾಪಕತ್ವ ಕ್ರಿಯೆಯು ಬಾಟಲಿಯೊಳಗೆ ಮತ್ತೆ ಎಳೆದುಕೊಳ್ಳುತ್ತದೆ.
ವಿಜ್ಞಾನ ಮಾಹಿತಿ: ಬಾಟಲಿಯಿಂದ ಹರಿಯುವ ಜೇನುತುಪ್ಪದಲ್ಲಿ ಎರಡು ಬಲಗಳು ಕೆಲಸ ಮಾಡುತ್ತವೆ, ಅವು ಯಾವುವು?


















Got a Questions?
Find us on Socials or Contact Us and we’ll get back to you as soon as possible.