ಶಿಕ್ಷಣ ಪ್ರಸಾರಕ ಮಂಡಳ, ರಾಯಬಾಗ : ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಶಿಕ್ಷಣ ಪ್ರಸಾರಕ ಮಂಡಳ, ರಾಯಬಾಗ ಬೆಳಗಾವಿ ಈ ಸಂಸ್ಥೆಯಿಂದ ನಡೆಯುತ್ತಿರುವ ವಿವಿಧ ಅನುದಾನಿತ ಪ್ರೌಢಶಾಲೆ/ ಸಂ.ಪ.ಪೂ‌ ಮಹಾವಿದ್ಯಾಲಯಗಳಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ :ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು

ಆಸಕ್ತ ಅಭ್ಯರ್ಥಿಗಳು ಈ ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗಾಗಿ ತಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳ ಝೆರಾಕ್ಸ್ ಪ್ರತಿಗಳೊಂದಿಗೆ ಸಾಮಾನ್ಯ ಅಭ್ಯರ್ಥಿಗಳು ರೂ.500/-, ಪ್ರವರ್ಗ 2 ಎ, 2 ಬಿ, 2 ಬಿ ಅಭ್ಯರ್ಥಿಗಳು ರೂ.250/- ಹಾಗೂ ಪ.ಜಾ, ಪ.ಪಂ.ಅಭ್ಯರ್ಥಿಗಳು ರೂ.150/- ರೂಪಾಯಿಗಳ ಬ್ಯಾಂಕ್ ಹುಂಡಿಯೊಂದಿಗೆ ” ಕಾರ್ಯದರ್ಶಿಗಳು, ಶಿಕ್ಷಣ ಪ್ರಸಾರ ಮಂಡಳ, ರಾಯಬಾಗ”
ಇವರ ಹೆಸರಿನಲ್ಲಿ ಪಡೆದ ಅರ್ಜಿಯ ಒಂದು ಪ್ರತಿಯನ್ನು ” ಕಾರ್ಯದರ್ಶಿಗಳು, ಶಿಕ್ಷಣ ಪ್ರಸಾರ ಮಂಡಳ, ರಾಯಬಾಗ ತಾ. ರಾಯಬಾಗ ಜಿ.ಬೆಳಗಾವಿ ವಿಳಾಸಕ್ಕೆ ಹಾಗೂ ಇನ್ನೊಂದು ಪ್ರತಿಯನ್ನು ” ಮಾನ್ಯ ಉಪನಿರ್ದೇಶಕರು, ಸಾ.ಶಿ.ಇ‌.ಚಿಕ್ಕೋಡಿ ಇವರಿಗೆ ಸಲ್ಲಿಸಬೇಕು. ಈಗಾಗಲೇ ನಿಗದಿತ ‌ದಿನಾಂಕದಂದು‌ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲಾಖಾ ನಿಯಮಾನುಸಾರವಾಗಿ ಪ್ರತ್ಯೇಕವಾಗಿ ಸಂಸರ್ಶನ ಸ್ಥಳ, ದಿನಾಂಕ ಮತ್ತು ವೇಳೆಯನ್ನು ತಿಳಿಸಲಾಗುವುದು.

error: Content is protected !!