ಟ್ರಾವೆಲ್‌ ಫುಡ್‌ ಸರ್ವೀಸಸ್‌ ಲಿಮಿಟೆಡ್‌ ಐಪಿಒ (Travel Food Services IPO) ಯಾವಾಗ? ಬಿಡ್‌ ಮೊತ್ತ ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ

ಜುಲೈ ತಿಂಗಳ ಮತ್ತೊಂದು ಮೇನ್‌ಬೋರ್ಡ್‌ ಐಪಿಒ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ. ಇದೇ ಜುಲೈ 7ರಿಂದ ಈ ಟ್ರಾವೆಲ್‌ ಐಪಿಒಗೆ ಬಿಡ್‌ ಸಲ್ಲಿಸಬಹುದು. ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒ 2,000.00 ಕೋಟಿ ರೂಪಾಯಿಗಳ ಬುಕ್‌ಬಿಲ್ಡಿಂಗ್ ಆಗಿದ್ದು, ಇದು ಸಂಪೂರ್ಣವಾಗಿ 1.82 ಕೋಟಿ ಷೇರುಗಳ ಮಾರಾಟದ ಕೊಡುಗೆಯಾಗಿದೆ. ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್ ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒ ನ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್. ಎಂಯುಎಫ್‌ಜಿ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಲಿಂಕ್ ಇಂಟೈಮ್) ಈ ಇಶ್ಯೂಗೆ ರಿಜಿಸ್ಟ್ರಾರ್ ಆಗಿದೆ.
ಈ ಐಪಿಒಗೆ ಬಿಡ್‌ ಮಾಡಬಹುದೇ? ಬೇಡವೇ? ಎಂದು ಆಲೋಚಿಸುವವರು ಕರ್ನಾಟಕ ಬೆಸ್ಟ್‌.ಕಾಂನ ಐಪಿಒ ವಿಭಾಗ ನೋಡುತ್ತಿರಿ.

ಐಪಿಒ ದಿನಾಂಕಗಳುವಿವರಗಳು
ಐಪಿಒ ತೆರೆಯುವ ದಿನಾಂಕಸೋಮವಾರ, ಜುಲೈ 7, 2025
ಐಪಿಒ ಮುಚ್ಚುವ ದಿನಾಂಕಬುಧವಾರ, ಜುಲೈ 9, 2025
ತಾತ್ಕಾಲಿಕ ಹಂಚಿಕೆ ದಿನಾಂಕಗುರುವಾರ, ಜುಲೈ 10, 2025
ರಿಫಂಡ್ ಪ್ರಾರಂಭ ದಿನಾಂಕಶುಕ್ರವಾರ, ಜುಲೈ 11, 2025
ಡಿಮ್ಯಾಟ್ ಖಾತೆಗೆ ಷೇರು ಜಮಾ ದಿನಾಂಕಶುಕ್ರವಾರ, ಜುಲೈ 11, 2025
ಲಿಸ್ಟಿಂಗ್ ತಾತ್ಕಾಲಿಕ ದಿನಾಂಕಸೋಮವಾರ, ಜುಲೈ 14, 2025
ಯುಪಿಐ ಮ್ಯಾಂಡೇಟ್ ದೃಢೀಕರಣ ಅಂತಿಮ ಸಮಯ

ಟ್ರಾವೆಲ್‌ ಫುಡ್‌ ಸರ್ವೀಸಸ್‌ ಲಿಮಿಟೆಡ್‌ ಐಪಿಒ ಯಾವಾಗ?

ಜುಲೈ 7, 2025 ರಂದು ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒ ಚಂದಾದಾರಿಕೆಗಾಗಿ ತೆರೆಯುತ್ತದೆ. ಜುಲೈ 9, 2025 ರವರೆಗೆ ಬಿಡ್‌ ಸಲ್ಲಿಸಲು ಅವಕಾಶ ಿರುತ್ಗತದೆ. ಟ್ರಾವೆಲ್ ಫುಡ್ ಸರ್ವೀಸಸ್ ಐಪಿಒ ಹಂಚಿಕೆ ಗುರುವಾರ, ಜುಲೈ 10, 2025 ರಂದು ಅಂತಿಮಗೊಳ್ಳುವ ಸೂಚನೆ ಇದೆ. ಇದು ಬಿಎಸ್‌ಇ, ಎನಸ್‌ಎಸ್‌ಇಯಲ್ಲಿ ಲಿಸ್ಟ್‌ ಮಾಡಲಿರುವ ಐಪಿಒ ಇದರ ಬೆಲೆಯನ್ನು ಪ್ರತಿ ಷೇರಿಗೆ 1045 ರಿಂದ 1100 ರೂಗೆ ಎಂದು ನಿಗದಿಪಡಿಸಲಾಗಿದೆ. ಅರ್ಜಿಯ ಲಾಟ್ ಗಾತ್ರ 13. ಚಿಲ್ಲರೆ ವ್ಯಾಪಾರಿಗೆ ಅಗತ್ಯವಿರುವ ಕನಿಷ್ಠ ಹೂಡಿಕೆ ಮೊತ್ತ 13,585 (13 ಷೇರುಗಳು) ರೂಪಾಯಿ. sNIIಗೆ 14 ಲಾಟ್‌ಗಳು (182 ಷೇರುಗಳು) ಲಾಟ್ ಗಾತ್ರದ ಹೂಡಿಕೆಯಾಗಿದ್ದು, ಇದರ ಮೊತ್ತ 2,00,200 ರೂಪಾಯಿ. bNII ಗೆ ಇದು 70 ಲಾಟ್‌ಗಳು (910 ಷೇರುಗಳು) ಇವೆ. ಇದರ ಮೊತ್ತ 10,01,000 ರೂಪಾಯಿ ಆಗಿದೆ.

ವಿವರಗಳು31 ಮಾರ್ಚ್ 202531 ಮಾರ್ಚ್ 202431 ಮಾರ್ಚ್ 2023
ಆಸ್ತಿಗಳು (Assets)ರೂ 1,902.73ರೂ 1,696.44ರೂ 1,332.32
ಆದಾಯ (Revenue)ರೂ 1,762.71ರೂ 1,462.40ರೂ 1,103.58
ನಿಕರ ಲಾಭ (PAT)ರೂ 379.66ರೂ 298.12ರೂ 251.30
ಇಬಿಟ್ಡಾ (EBITDA)ರೂ 676.35ರೂ 549.99ರೂ 458.05
ಶುದ್ಧ ಮೌಲ್ಯ (Net Worth)ರೂ 1,048.45ರೂ 869.05ರೂ 651.12
ಉಳಿಕೆ ಮತ್ತು ಹೆಚ್ಚುವರಿ ಮೊತ್ತರೂ 1,040.24ರೂ 869.74ರೂ 651.60
ಒಟ್ಟು ಸಾಲ (Borrowing)ರೂ 63.78ರೂ 31.05

ಪೂರಕ ಮಾಹಿತಿ: ಚಿತೋಗರ್‌

error: Content is protected !!