ವೆಬ್‌ ವಿನ್ಯಾಸದಿಂದ ವೆಬ್‌ಸೈಟ್‌ ಸುರಕ್ಷತೆಯವರೆಗೆ: ಕರ್ನಾಟಕ ಬೆಸ್ಟ್‌ ಮೂಲಕ ಸಮಗ್ರ ವರ್ಡ್‌ಪ್ರೆಸ್‌ ಸೇವೆಗಳನ್ನು ಪಡೆಯಿರಿ

ಜಗತ್ತಿನಲ್ಲಿ ಶೇಕಡ 40ರ ಆಸುಪಾಸಿನಲ್ಲಿ ವೆಬ್‌ಸೈಟ್‌ಗಳು ವರ್ಡ್‌ಪ್ರೆಸ್‌ ಮೂಲಕ ವೆಬ್‌ಸೈಟ್‌ಗಳು ನಿರ್ಮಾಣವಾಗುತ್ತಿವೆ. ವರ್ಡ್‌ಪ್ರೆಸ್‌ ವೆಬ್‌ ವಿನ್ಯಾಸವೆಂದರೆ ಕೇವಲ ಥೀಮ್‌, ಪ್ಲಗಿನ್‌ಗಳ ಆಟವಲ್ಲ. ಆರಂಭದಲ್ಲಿ ನಾನೂ ಕೂಡ ಅದೇ ರೀತಿ ಅಂದುಕೊಂಡಿದ್ದೆ. ಕಳೆದ ಹತ್ತು ವರ್ಷಗಳ ವರ್ಡ್‌ಪ್ರೆಸ್‌ ಅನುಭವ ಮತ್ತು ಬದಲಾಗುತ್ತಿರುವ ಡಿಜಿಟಲ್‌ ಜಗತ್ತು ಸಾಕಷ್ಟು ಪಾಠ ಕಲಿಸಿದೆ. ಒಂದು ಥೀಮ್‌ ಹಾಕಿಬಿಟ್ರೆ ವೆಬ್‌ಸೈಟ್‌ ರೆಡಿಯಾಗುತ್ತದೆ ಎಂದುಕೊಳ್ಳುವಂತೆ ಇಲ್ಲ. ಮದುವೆಯಾಗುವಾಗ ಕೇವಲ ಬಾಹ್ಯ ಸೌಂದರ್ಯ ನೋಡಿದರೆ ಸಾಲದು. ಗುಣ, ವ್ಯಕ್ತಿತ್ವ ಇತ್ಯಾದಿ ಆಂತರಿಕ ಸೌಂದರ್ಯಗಳಿಗೂ ಗಮನ ನೀಡಬೇಕು ಎನ್ನುತ್ತಾರಲ್ವ? ಇದೇ ರೀತಿ ವರ್ಡ್‌ಪ್ರೆಸ್‌ ವೆಬ್‌ ವಿನ್ಯಾಸದಲ್ಲಿಯೂ ಸಾಕಷ್ಟು ವಿಷಯಗಳು ಇವೆ. ಸಣ್ಣ ಬಿಸ್ನೆಸ್‌ಗಳಿಂದ ಹಿಡಿದು ದೊಡ್ಡ ಉದ್ಯಮಗಳ ತನಕವೂ ಈಗ ವೆಬ್‌ಸೈಟ್‌ ನಿರ್ಮಾಣಕ್ಕೆ ವರ್ಡ್‌ಪ್ರೆಸ್‌ ಬಳಸಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ವೆಬ್‌ ಸೈಟ್‌ ನಿರ್ಮಾಣ ಮಾಡಲು ಸಾಧ್ಯವಾಗುವುದರ ಜೊತೆಗೆ ಬಳಕೆಗೂ ಸುಲಭವಾಗಿರುತ್ತದೆ. ಎಚ್‌ಟಿಎಂಎಲ್‌, ಸಿಎಸ್‌ಎಸ್‌ ಮತ್ತು ಕೆಲವೊಂದು ಪ್ರೋಗ್ರಾಮಿಂಗ್‌ ಭಾಷೆಗಳ ಅನುಭವದ ಜತೆಗೆ ಕರ್ನಾಟಕ ಬೆಸ್ಟ್‌ ನಿರ್ಮಿಸಿಕೊಡುವ ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಸೇವೆಗಳಲ್ಲಿ ಸಾಕಷ್ಟು ಅಂಶಗಳು ಇವೆ. ಬೇಸಿಕ್‌ಗಿಂತ ತುಸು ಹೆಚ್ಚು ಸೇವೆ ಬಯಸುವವರಿಗೆ ಇಲ್ಲಿ ವೈವಿಧ್ಯಮಯ ಸೇವೆಗಳು ಲಭ್ಯ ಇವೆ.

ಕರ್ನಾಟಕ ಬೆಸ್ಟ್‌ ವೆಬ್‌ ವಿನ್ಯಾಸ ಮತ್ತು ಅಭಿವೃದ್ಧಿ

ವೆಬ್‌ಸೈಟ್‌ ವಿನ್ಯಾಸ

ನಿಮ್ಮ ಬಿಸ್ನೆಸ್‌ಗೆ ಸೂಕ್ತವಾದ ವೆಬ್‌ಸೈಟ್‌ ವಿನ್ಯಾಸ ಮತ್ತು ಅಭಿವೃದ್ಧಿ ಮಾಡಿಕೊಡಲಾಗುವುದು. ನಿಮ್ಮ ಕಲ್ಪನೆಯ ವೆಬ್‌ಸೈಟ್‌ ನಿಜರೂಪಕ್ಕೆ ಬಂದಾಗ ಖಂಡಿತಾ ಖುಷಿಪಡುವಿರಿ.

ವೆಬ್‌ಸೈಟ್‌ ಮರುವಿನ್ಯಾಸ

ಈಗಾಗಲೇ ನೀವು ವರ್ಡ್‌ಪ್ರೆಸ್‌ ವೆಬ್‌ಸೈಟ್‌ ನಿರ್ಮಿಸಿಕೊಂಡಿರುವಿರಿ. ಕೆಲವೊಮ್ಮೆ ನಮ್ಮ ಮನೆಗಿಂತ ಪಕ್ಕದ ಮನೆ ಅಥವಾ ಇತರರ ಮನೆ (ಇದನ್ನು ಬೇರೆ ವಿಷಯಗಳಿಗೂ ಅನ್ವಯಿಸಬಹುದು) ಚಂದ ಕಾಣಿಸುತ್ತದೆ. ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ನಲ್ಲಿ ಸಾಕಷ್ಟು ತೊಂದರೆ ಇರಬಹುದು. ಒಟ್ಟಾರೆ ನೀವು ನಿರ್ಮಿಸಿಕೊಂಡಿರುವ ವೆಬ್‌ಸೈಟ್‌ ನಿಮಗೆ ತೃಪ್ತಿಕೊಡದೆ ಇರಬಹುದು.
ವರ್ಡ್‌ಪ್ರೆಸ್‌ ಪಲ್ಟಿ ಹೊಡೆಯಿತಾ? ಕ್ರ್ಯಾಶ್‌ ಆಯ್ತಾ, ಚಿಂತಿಸಬೇಡಿ. ನೀವು ನಿರ್ಮಿಸಿಕೊಂಡಿರುವ ವೆಬ್‌ಸೈಟ್‌ ಚಂದ ಕಾಣಿಸ್ತಾ ಇಲ್ಲ, ಅದನ್ನು ಮರು ವಿನ್ಯಾಸ ಮಾಡಿಕೊಳ್ಳಬೇಕು ಎಂದೆನಿಸಿದರೂ ಕರ್ನಾಟಕಬೆಸ್ಟ್‌.ಕಾಂ ಅನ್ನು ಸಂಪರ್ಕಿಸಿ. (Mobile Number: 9844000643 / 8073950293 Email: Contact@karnatakabest.com)

ಸಿಡಿಎನ್‌, ಕ್ಲೌಡ್‌ಫ್ಲೇರ್‌ ಇತ್ಯಾದಿ

ಈಗಾಗಲೇ ಹೇಳಿದಂತೆ ವರ್ಡ್‌ಪ್ರೆಸ್‌ ಎಂದರೆ ಕೇವಲ ಪ್ಲಗಿನ್‌ ಮತ್ತು ಥೀಮ್‌ ಅಲ್ಲ. ಸಿಡಿಎನ್‌, ಕ್ಲೌಡ್‌ಫ್ಲೇರ್‌… ಹೀಗೆ ಸಾಕಷ್ಟು ಸಂಗತಿಗಳು ಇವೆ. ಈ ಸೇವೆಗಳನ್ನೂ ಇಲ್ಲಿ ಪಡೆಯಬಹುದು.

ವರ್ಡ್‌ಪ್ರೆಸ್‌ ನಿರ್ವಹಣೆ ಮತ್ತು ಬೆಂಬಲ

ನಮ್ಮಲ್ಲಿ ಸಾಕಷ್ಟು ಸ್ಪೆಷಲೈಜ್ಡ್‌ ಸೇವೆಗಳು ಲಭ್ಯ ಇವೆ. ಒಮ್ಮೆ ವರ್ಡ್‌ಪ್ರೆಸ್‌ ಲೈವ್‌ ಆದ ಬಳಿಕ ಸಾಕಷ್ಟು ಮೇಂಟೆನ್ಸ್‌ ಕೆಲಸ ಇರುತ್ತದೆ. ನಿಯಮಿತವಾಗಿ ಬ್ಯಾಕಪ್‌ ತೆಗೆದುಕೊಳ್ಳಬೇಕು. ಸೆಕ್ಯುರಿಟಿ ಚೆಕಪ್‌ ಮಾಡುತ್ತ ಇರಬೇಕು. ಬಗ್‌ ಫಿಕ್ಸ್‌ ಮಾಡುತ್ತ ಇರಬೇಕು. ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ಗಳಿಗೆ ಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಮೇಂಟೆನ್ಸ್‌ ಮತ್ತು ಸಪೋರ್ಟ್‌ ಅನ್ನು ಕೂಡ ಕರ್ನಾಟಕಬೆಸ್ಟ್‌.ಕಾಂ ಮೂಲಕ ಪಡೆಯಬಹುದು.

ಸ್ಪೀಡ್‌ ಆಪ್ಟಿಮೈಜೇಷನ್‌

ಗೂಗಲ್‌ ಕೋರ್‌ ಅಪ್‌ಡೇಟ್‌ನಲ್ಲಿ ಹೊಸ ಅಂಶಗಳು ಸೇರಿಕೊಳ್ಳುತ್ತಿವೆ. ಹಳೆಕಾಲದ ಅಂಬಾಸಡರ್‌ ಕಾರು ಗಟ್ಟಿಯಿದೆ ನಿಜ. ಆದರೆ, ಈ ಕಾಲದಲ್ಲಿ ಅಂಬಾಸಡರ್‌ ಸುರಕ್ಷಿತವಲ್ಲ ಎಂದು ಹೇಳುವವರು ಇದ್ದಾರೆ. ನಿಮ್ಮ ವೆಬ್‌ಸೈಟ್‌ನ ಸ್ಪೀಡ್‌ ತುಂಬಾ ಕ್ರೂಷಿಯಲ್‌ ಅಂಶ. ಯೂಸರ್‌ ಎಕ್ಸ್‌ಪೀರಿಯನ್ಸ್‌ ಮತ್ತು ಎಸ್‌ಇಒಗೂ ಇದು ಅತ್ಯಂತ ಮಹತ್ವದ ಅಂಶವಾಗಿದೆ. ಸಾಕಷ್ಟು ವರ್ಡ್‌ಪ್ರೆಸ್‌ ವೆಬ್‌ಸೈಟ್‌ಗಳ ಮೊದಲ ಶತ್ರು “ನಿಧಾನವಾಗಿ ಲೋಡ್‌ ಆಗುವುದು”. ಮಾರುತಿ ಕಾರಿನಲ್ಲಿ ಬಸ್‌ನಲ್ಲಿ ಹೋಗುವಷ್ಟು ಜನ ಹೋದ್ರೆ ಹೇಗಾಗುತ್ತದೆ? ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಸ್ಪೀಡ್‌ ಹೆಚ್ಚಿಸಲು ಏನೆಲ್ಲ ಅವಕಾಶಗಳು ಇವೆ ಎಂದು ನೋಡೋಣ್ವ? ಕ್ಯಾಶಿಂಗ್‌, ಇಮೇಜ್‌ ಆಪ್ಟಿಮೈಜೇಷನ್‌, ಕೋಡ್‌ ಆಪ್ಟಿಮೈಜೇಷನ್‌, ಸಿಡಿಎನ್‌ ಇಂಟಿಗ್ರೇಷನ್‌ ಸೇರಿದಂತೆ ಸಾಕಷ್ಟು ವಿಷಯಗಳು ವರ್ಡ್‌ಪ್ರೆಸ್‌ ವೆಬ್‌ಸೈಟ್‌ಗೆ ಅವಶ್ಯಕತೆ ಇದೆ. ಕರ್ನಾಟಕ ಬೆಸ್ಟ್‌.ಕಾಂ ಸಂಪರ್ಕಿಸಿ ಎಂದು ಪದೇಪದೇ ಹೇಳಬೇಕಿಲ್ಲ ತಾನೇ.

ಕರ್ನಾಟಕಬೆಸ್ಟ್‌.ಕಾಂ ವರ್ಡ್‌ಪ್ರೆಸ್‌ ಸೆಕ್ಯುರಿಟಿ ಸರ್ವೀಸಸ್‌

ವರ್ಡ್‌ಪ್ರೆಸ್‌ ತುಂಬಾ ಜನಪ್ರಿಯ. ಇದೇ ಕಾರಣಕ್ಕೆ ಇದಕ್ಕೆ ಭದ್ರತೆಯ ಆತಂಕಗಳೂ ಹೆಚ್ಚು. ನಮ್ಮ ಹಿಸ್ಟರಿಯಲ್ಲಿ ಭದ್ರತೆಗೆ ತೊಂದರೆಯಾಗಿಲ್ಲ. ಏಕೆಂದರೆ, ನಮ್ಮ ಸೆಕ್ಯುರಿಟಿ ತುಂಬಾ ಟೈಟ್‌. ನಿಮ್ಮ ವೆಬ್‌ಸೈಟ್‌ನ ಸೆಕ್ಯುರಿಟಿ ಅಡಿಟ್‌, ಮಾಲ್‌ವೇರ್‌ ರಿಮೂವಲ್‌, ಫೈರ್‌ಫಾಲ್‌ ಸೆಟಪ್‌ ಮತ್ತು ನಿಯಮಿತವಾಗಿ ಸೆಕ್ಯುರಿಟಿ ಮಾನಿಟರಿಂಗ್‌ ಮಾಡುವ ಸೇವೆಗಳು ನಮ್ಮಲ್ಲಿ ಲಭ್ಯ.

ವರ್ಡ್‌ಪ್ರೆಸ್‌ ಎಸ್‌ಇಒ ಸೇವೆಗಳು

ಕರ್ನಾಟಕ ಬೆಸ್ಟ್‌ನಲ್ಲಿ ಎಸ್‌ಇಒ ಕುರಿತು ವಿಶೇಷ ಕಾಳಜಿ ವಹಿಸಲಾಗುತ್ತದೆ. ಆನ್‌ಪೇಜ್‌ ಎಸ್‌ಇಒ, ಟೆಕ್ನಿಕಲ್‌ ಎಸ್‌ಇಒ, ಕಂಟೆಂಟ್‌ ಆಪ್ಟಿಮೈಜೇಷನ್‌, ಲಿಂಕ್‌ಬಿಲ್ಡಿಂಗ್‌, ಗೂಗಲ್‌ನಲ್ಲಿ ರಾಕಿಂಗ್‌ ಹೆಚ್ಚಿಸುವುದು ಇತ್ಯಾದಿ ಅವಶ್ಯಕತೆ. ಬಿಸ್ನೆಸ್‌ ವೆಬ್‌ಸೈಟ್‌ಗಳಿಗೆ ಈ ರೀತಿಯ ಎಸ್‌ಇಒ ಸೇವೆ ನಮ್ಮಲ್ಲಿ ಲಭ್ಯ. ಬ್ಲಾಗ್‌ ಮತ್ತು ನ್ಯೂಸ್‌ ವೆಬ್‌ಸೈಟ್‌ಗಳಿಗೆ ವಿಶೇಷ ಎಸ್‌ಇಒ ಸೇವೆ ನಮ್ಮಲ್ಲಿ ಲಭ್ಯ. ಮುದ್ರಣ ಮತ್ತು ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿ ಪರಿಣತಿ ಹೊಂದಿರುವವರು ನೀಡುವ ಎಸ್‌ಇಒ ಪರಿಣತರು ನೀಡುವ ಎಸ್‌ಇಒ ಸೇವೆ ಅತ್ಯದ್ಭುತವಾಗಿರುತ್ತದೆ ಅಲ್ಲವೇ?

ಹೋಸ್ಟಿಂಗ್‌ ಸೇವೆಗಳು

ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ಗೆ ಸರಿಯಾದ ಹೋಸ್ಟಿಂಗ್‌ ಅತ್ಯಂತ ಅಗತ್ಯ. ಕೆಲವರು ದೊಡ್ಡ ಕನಸುಗಳನ್ನು ಇಟ್ಟುಕೊಂಡು ಬರುತ್ತಾರೆ. ಅವರಿಗೆ ದೊಡ್ಡ ಅಥವಾ ದುಬಾರಿ ಹೋಸ್ಟಿಂಗ್‌ ಆರಂಭದಲ್ಲಿ ಅಗತ್ಯ ಇರುವುದಿಲ್ಲ. ಕೆಲವೊಂದು ವೆಬ್‌ಸೈಟ್‌ಗಳ ಯೂಸರ್‌ಬೇಸ್‌ ಹೆಚ್ಚಾದಂತೆ ಹೋಸ್ಟಿಂಗ್‌ ಅಪ್‌ಗ್ರೇಡ್‌ ಆಗಬೇಕಾಗುತ್ತದೆ. ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ಗೆ ಅತ್ಯುತ್ತಮ ಹೋಸ್ಟಿಂಗ್‌ ಅಥವಾ ಸರ್ವರ್‌ ಸೇವೆಗಳು ನಮ್ಮಲ್ಲಿ ಲಭ್ಯ. ಸರ್ವರ್‌ ನಿರ್ವಹಣೆ ಕೆಲಸವನ್ನೂ ನಾವು ಮಾಡ್ತೀವಿ.

ಹೀಗೆ ಬರೆಯುತ್ತ ಹೋದರೆ ಸಾಕಷ್ಟು ವಿಷಯಗಳು ಇವೆ. ಒಟ್ಟಾರೆ, ನಿಮಗೆ ವರ್ಡ್‌ಪ್ರೆಸ್‌ ವಿಷಯದಲ್ಲಿ ಸಮಗ್ರ ಸೇವೆಗಳನ್ನು ಕರ್ನಾಟಕ ಬೆಸ್ಟ್‌ನಲ್ಲಿ ನೀಡಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ವೀಸ್‌ ವಿಷಯದಲ್ಲಿ ಕರ್ನಾಟಕ ಬೆಸ್ಟ್‌ ನಿಮ್ಮ ಮುಖದಲ್ಲಿ ಹ್ಯಾಪಿನೆಸ್‌ ಮೂಡಿಸುತ್ತದೆ.

ನಮ್ಮನ್ನು ಫೋನ್‌ ಅಥವಾ ವಾಟ್ಸಪ್‌ ಮೂಲಕ ಸಂಪರ್ಕಿಸಲು ಬಯಸುವವರು ತಮ್ಮ ಮೊಬೈಲ್‌ನಲ್ಲಿ ಸೇವ್‌ ಮಾಡಬೇಕಾದ ಮೊಬೈಲ್‌ ಸಂಖ್ಯೆಗಳು: 9844000643 ಅಥವಾ 8073950293

Karatakabest Digital Service

  • WordPress Website Development & Design Services
  • WordPress Maintenance and Support
  • Website Redesign and Migration
  • WordPress Security Services
  • WordPress Speed Optimization
  • WordPress SEO Services

error: Content is protected !!