ಮಂಗಳೂರು : ಬೆಂಗಳೂರಿನ ನಿಮ್ಹಾನ್ಸ್ ನ ಎಪಿಡೀಮಿಯಾಲಜಿ ವಿಭಾಗದಲ್ಲಿ ಖಾಲಿ ಇರುವ ಯುವ ಪರಿವರ್ತಕರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ಬಾನಿಸಿದೆ.
ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ ಹಾಗೂ ಮೇಲ್ಪಟ್ಟು ಪದವೀಧರ ಯುವಜನತೆ ಅವಶ್ಯವಿರುವ ಕೌಶಲ್ಯ, ಸ್ಥಳೀಯ ಭಾಷೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಉತ್ತಮ ಅಂತರ್ವ್ಯಕೀಯ ಸಂವಹನ ಕೌಶಲ್ಯ ಜೊತೆಗೆ ಸಂವಾದ ಕೌಶಲಗಳನ್ನು ಹೊಂದಿರಬೇಕು. ಸಮಯದಲ್ಲಿ ಯುವಜನರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ನಡೆಸಬೇಕು.
21 ರಿಂದ 35 ವರ್ಷ ವಯೋಮಿತಿಯ ಆಸ್ತಕ್ತಿಯುಳ್ಳವರು ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು ಇಲ್ಲಿಗೆ ಇದೇ ನ.12 ರೊಳಯ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ ತಾಲೂಕಿನವರಿಗೆ ಆದ್ಯತೆ ಇದೆ.
ಹೆಚ್ಚಿನ ಮಾಹಿತಿಗಾಗಿ ಯುವಸ್ಪಂದನ ಕಚೇರಿ ದೂ.ಸಂ.08242452264, ಯುವಸ್ಪಂದನದ ಕ್ಷೇತ್ರ ಸಂಪರ್ಕಾಧಿಕಾರಿ ಸುನಿಲ್ ಕುಮಾರ್ ಎನ್ ಮೊ.ಸಂ.7259188435 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









Got a Questions?
Find us on Socials or Contact Us and we’ll get back to you as soon as possible.