ಇಂದು ಇಮೇಲ್ ತೆರೆದವನಿಗೆ ಶಾಕ್ ಕಾದಿತ್ತು. ಯಾವುದೇ ಇಮೇಲ್ ತೆರಯುವ ಮುನ್ನ ಕೆಂಪು ಅಕ್ಷರಗಳಲ್ಲಿ ಎಚ್ಚರಿಕೆ ಎಂಬ ಅಲರ್ಟ್ ಕಾಣಿಸತೊಡಗಿತ್ತು. ನೀವು ಕೊನೆಯಬಾರಿ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಲಾಗ್‌ಇನ್ ಆಗಿದ್ದಿರಿ ಎಂಬ ಸೂಚನೆಯಿತ್ತು. ಎಲ್ಲಿಯ ಅಮೆರಿಕ? ಎಲ್ಲಿಯ ಬೆಂಗಳೂರು?. ಆ ಅಲರ್ಟ್ ತೆರೆದು ನೋಡಿದವನಿಗೆ ಆಶ್ಚರ್ಯವಾಯಿತು. ಕಳೆದ ಎರಡು ದಿನಗಳಲ್ಲಿ ಎರಡು ಬಾರಿ ಯುಎಸ್‌ಎ ಮತ್ತು ಇಂಗ್ಲೆಂಡ್‌ನಿಂದ ನನ್ನ ಇಮೇಲ್ ಖಾತೆಗೆ ಯಾರೋ ಪ್ರವೇಶಿಸಿದ್ದರು. ಸದ್ಯ ನಾನು ಕನಸಿನಲ್ಲೂ ಅಮೆರಿಕ ಮತ್ತು ಇಂಗ್ಲೆಂಡ್‌ಗೆ ಹೋಗಿ ಬಂದ ನೆನಪಾಗಲಿಲ್ಲ.ಹ್ಯಾಕಿಂಗ್ ವಿಷಯ ನನಗೆ ಹೊಸದೇನಲ್ಲ. ಅದರ ವಿರಾಟ್ ವಿರೂಪದ ಬಗ್ಗೆ ಅಲ್ಲಲ್ಲಿ ಸುದ್ದಿ ಕೇಳಿದ್ದೆ. ಆದರೆ ಅದು ನನ್ನ ಇಮೇಲ್ ಖಾತೆಗೆ ಪ್ರವೇಶಿಸಬಹುದೆಂಬ ಕಲ್ಪನೆ ನನಗಿರಲಿಲ್ಲ.
ಮೊದಲು ನನ್ನ ಸ್ನೇಹಿತರನ್ನು ಸಂಪರ್ಕಿಸಿ ನನ್ನ ಇಮೇಲ್‌ನಿಂದ ಯಾವುದಾದರೂ ಸಂಶಯಸ್ಪಾದ ಸಂದೇಶಗಳು ರವಾನೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ. ಹ್ಯಾಕರ್‌ಗಳು ಪಾಸ್‌ವರ್ಡ್ ಕದ್ದು ಮೊದಲು ಮಾಡುವ ಕೆಲಸವೇ ಅದು. ನನ್ನ ಕಾಂಟ್ಯಾಕ್ಟ್‌ನಲ್ಲಿರುವ ಎಲ್ಲರಿಗೂ ಮೇಲ್ ಮಾಡಿ. ಕಷ್ಟದಲ್ಲಿದ್ದೇನೆ. ಈ ಅಕೌಂಟ್‌ಗೆ ಹಣ ಕಳುಹಿಸಿ ಇತ್ಯಾದಿ ಸಂದೇಶಗಳ ಮೂಲಕ ವಂಚನೆ ಮಾಡುತ್ತಾರೆ.
ಕಳೆದ ನಾಲ್ಕು ವರ್ಷಗಳಿಂದ ಪಾಸ್‌ವರ್ಡ್ ಬದಲಾಯಿಸದಿದ್ದದ್ದು ನಾನು ಮಾಡಿದ ಮೊದಲ ತಪ್ಪು. ಇನ್ನು ಮುಂದೆ ಪ್ರತಿ ತಿಂಗಳಿಗೊಮ್ಮೆಯಾದರೂ ಪಾಸ್‌ವರ್ಡ್ ಬದಲಾಯಿಸಬೇಕೆಂದು ದೃಢ ನಿರ್ಧಾರ ಮಾಡಿದೆ.
ನಿಮ್ಮ ಪಾಸ್‌ವರ್ಡ್ ಎಷ್ಟು ಸೇಫ್
ಕಂಪ್ಯೂಟರ್, ಇಂಟರ್‌ನೆಟ್‌ನಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಬಚ್ಚಿಡಲು ಪಾಸ್‌ವರ್ಡ್ ಅತ್ಯಂತ ಅಗತ್ಯ. ಇದೇ ಕಾರಣಕ್ಕಾಗಿ ಪಾಸ್‌ವರ್ಡ್ ಎಂಬುದು ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ. ಕೆಲವು ಹ್ಯಾಕರ್ಸ್ ಗುಂಪಿನವರು ಇಂತಹ ಹ್ಯಾಕಿಂಗ್ ಕೆಲಸಕ್ಕೆ ಕೈಹಾಕುತ್ತಾರೆ ಎಂಬುದು ನನ್ನ ಸ್ನೇಹಿತನೊಬ್ಬನ ಅನಿಸಿಕೆ. ಇಂತಹ ಹ್ಯಾಕರ್ಸ್ ಗ್ರೂಪ್ಸ್, ಹ್ಯಾಕರ್ಸ್ ವೆಬ್‌ಸೈಟ್, ಹ್ಯಾಕರ್ಸ್ ಸಾಫ್ಟ್‌ವೇರ್‌ಗಳಿಂದ ಪ್ರತಿಮನೆಯೂ ವೆಬ್ ಅಪರಾಧಗಳ ತಾಣವಾಗುತ್ತಿರುವುದಂತು ಸತ್ಯ.
ಪಾಸ್‌ವರ್ಡ್ ಕದಿಯೋದು ಹೇಗೆ?
ಹೀಗಂತ ಹೆಡ್‌ಲೈನ್ ಕೊಟ್ಟರೂ ಮಾಹಿತಿ ಕೊಡಲು ನನಗೆ ಮನಸ್ಸು ಬರುತ್ತಿಲ್ಲ. ಹ್ಯಾಕರ್‌ಗಳಿಗೆ ಇಂಟರ್‌ನೆಟ್ಟೇ ಮೊದಲ ಪಾಠಶಾಲೆಯಾಗಿರುವುದರಿಂದ ಈ ಕುರಿತಾದ ಸಂಪೂರ್ಣ ಮಾಹಿತಿಗಳು, ಟ್ರಿಕ್‌ಗಳು ಅಲ್ಲಿ ದೊರಕುತ್ತವೆ. ಪಾಸ್‌ವರ್ಡ್ ಕದಿಯಲು ಬೇಕಾದಷ್ಟು ಸಾಫ್ಟ್‌ವೇರ್‌ಗಳು ಕೂಡ ಇವೆ. ಸ್ನಿಪರ್‌ಸ್ಪೈನಂತಹ ಹಲವು ಸ್ಪೈವೇರ್ ಸಾಫ್ಟ್‌ವೇರ್‌ಗಳ ಮೂಲಕ ಇಮೇಲ್ ಪಾಸ್‌ವರ್ಡ್ ಕದಿಯಬಹುದಾಗಿದೆ.
ಪಾಸ್‌ವರ್ಡ್ ಕದಿಯೋದು ಹೇಗೆ ಎನ್ನುವುದಕ್ಕಿಂತ ನಮ್ಮ ಪಾಸ್‌ವರ್ಡ್‌ಗಳನ್ನು ಸೇಫ್ ಆಗಿ ಉಳಿಸೋದು ಹೇಗೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
* ಸ್ಟ್ರಾಂಗ್ ಪಾಸ್‌ವರ್ಡ್: ಅಂಕೆ, ಅಕ್ಷರ, ಸಿಂಬಲ್ ಮಿಶ್ರಿತ ಸ್ಟಾಂಗ್‌ಪಾಸ್‌ವರ್ಡ್ ರಚನೆ,
* ವೈಯಕ್ತಿಕ ಮಾಹಿತಿಯ ಪಾಸ್‌ವರ್ಡ್ ಬೇಡ: ಹುಟ್ಟಿದ ದಿನಾಂಕ, ಮಕ್ಕಳ ಹೆಸರು, ಮೊದಲ ಅಥವಾ ಕೊನೆಯ ಹೆಸರು ಬಳಕೆ ಬೇಡ. ಡಿಕ್ಶನರಿಯಲ್ಲಿ ಇಲ್ಲದ ಪದಗಳ ಬಳಕೆ ಉತ್ತಮ.
* ಯಾರಲ್ಲೂ ನಿಮ್ಮ ಪಾಸ್‌ವರ್ಡ್ ಹಂಚಿಕೊಳ್ಳಬೇಡಿ. ಗಂಡ/ಹೆಂಡತಿಯಾದರೂ ಸರಿ ಯಾರಿಗೂ ಪಾಸ್‌ವರ್ಡ್ ತಿಳಿಸಬೇಡಿ.
* ಇಮೇಲ್ ಪಾಸ್‌ವರ್ಡ್‌ನ್ನು ಬೇರೆ ವೆಬ್‌ಸೈಟ್‌ಗಳಿಗೆ ನೀಡಬೇಡಿ. ಅಂದರೆ ಕೆಲವು ಸೋಷಿಯಲ್ ನೆಟ್‌ವರ್ಕಿಂಗ್ ಇತ್ಯಾದಿಗಳಲ್ಲಿ ಖಾತೆ ತೆರೆಯಬೇಕಾದರೆ ಹೊಸ ಪಾಸ್‌ವರ್ಡ್ ಬಳಸಿರಿ.
* ಕೆಲವೊಂದು ವೆಬ್‌ಸೈಟ್‌ಗಳು ನಿಮ್ಮ ಇಮೇಲ್ ಪಾಸ್‌ವರ್ಡ್ ಕೇಳುತ್ತವೆ. ತಪ್ಪಿಯೂ ಕೊಡಬೇಡಿ.
* ಗೇಮ್, ಸಾಂಗ್ಸ್, ವಿಡಿಯೋ ಡೌನ್‌ಲೋಡ್ ಸಂದರ್ಭಗಳಲ್ಲೂ ಇಮೇಲ್ ಪಾಸ್‌ವರ್ಡ್ ನೀಡಬೇಡಿ
ಇನ್ನು ಮುಂದೆ ಪಾಸ್‌ವರ್ಡ್ ಜೋಪಾನವಾಗಿಸಲು ಇಂತಹ ಟಿಪ್ಸ್‌ಗಳನ್ನು ಪಾಲಿಸಬೇಕೆಂದಿದ್ದೇನೆ. ನಿಮಗೂ ಇಷ್ಟವಾದರೆ ಪಾಲಿಸಬಹುದು. ಇನ್ನಷ್ಟು ಟಿಪ್ಸ್ ಇದ್ದರೆ ತಿಳಿಸಬಹುದು.
ಥ್ಯಾಂಕ್ಸ್
ಪ್ರವೀಣ ಚಂದ್ರ ಪುತ್ತೂರು
NOTE: ನನ್ನ ಇಮೇಲ್‌ಗೆ ಬಂದ ಎಚ್ಚರಿಕೆಯಲ್ಲಿದ್ದ ಟೆಕ್ಸ್ಟ್‌ಗಳು ಈ ರೀತಿಯಾಗಿತ್ತು.
|
||||||||||||||||||||||||||||||||||||||||||||||||||||||||||||||||




















Got a Questions?
Find us on Socials or Contact Us and we’ll get back to you as soon as possible.