AI Website Design: ಎಐ ಈಗ ಎಲ್ಲರಿಗೂ ಜಾದುಗಾರನಂತೆ ಕಾಣಿಸುತ್ತಿದೆ. ಕೆಲವರಿಗೆ ಕೇಳಿದ್ದನ್ನು ಕೊಡುವ ಕಾಮಧೇನುವಿನಂತೆಯೂ ಕಾಣಿಸಬಹುದು. ಉದಾಹರಣೆಗೆ ಎಐ ಈಗ ವೆಬ್ ವಿನ್ಯಾಸ, ಸಾಫ್ಟ್‌ವೇರ್ ಅಭಿವೃದ್ಧಿ ಇತ್ಯಾದಿ ಕಾರ್ಯಗಳನ್ನು ಮಾಡುತ್ತದೆ. ಸಾಂಪ್ರದಾಯಿಕ ವೆಬ್ ವಿನ್ಯಾಸ ಮತ್ತು ಎಐ ವೆಬ್ ವಿನ್ಯಾಸದ ನಡುವೆ ಕೆಲವರು ಎಐ ಮೂಲಕ ಡಿಸೈನ್ ಮಾಡಿಕೊಳ್ಳೋಣ ಎಂದುಕೊಳ್ಳುತ್ತಾರೆ. ಉಚಿತ ಎಐ ವೆಬ್ ವಿನ್ಯಾಸವೆಂದು ಕ್ಲಿಕ್ ಮಾಡಿದ ಬಳಿಕ ಕೊನೆಗೆ ಪಾವತಿಸುವ ಅನಿವಾರ್ಯತೆಯನ್ನು ಕಂಡು ಸಾಕಷ್ಟು ಜನರು ಹಿಂಜರಿಯುತ್ತಾರೆ. ಇಲ್ಲಿ ನೀವು ಎಐ ಮೂಲಕ ವೆಬ್ ವಿನ್ಯಾಸ ಮಾಡಿಕೊಂಡರೆ ನೀವು ಸಂಪೂರ್ಣವಾಗಿ ಆ ಎಐ ವೆಬ್‌ಸೈಟ್ ಅನ್ನು ಅವಲಂಬಿಸಬೇಕಾಗುತ್ತದೆ. ಮೊದಲು ಉಚಿತದಂತೆ ಕಂಡರೂ ಬಳಿಕ ಹೋಸ್ಟಿಂಗ್, ನಿರ್ವಹಣೆ, ವಿವಿಧ ಟೂಲ್‌ಗಳ ದರವೆಂದು ಭರ್ಜರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ದಿನಕಳೆದಂತೆ ವರ್ಷಗಳು ಕಳೆದಂತೆ ಅದು ದೊಡ್ಡ ಹೊರೆಯಾಗಿ ಪರಿಣಮಿಸಬಹುದು. ಅಲ್ಲಿಂದ ಇತರೆ (ವರ್ಡ್‌ಪ್ರೆಸ್ ಇತ್ಯಾದಿ) ಪ್ಲಾಟ್‌ಫಾರ್ಮ್‌ಗಳಿಗೆ ಮೂವ್ ಮಾಡಲು ಸಾಧ್ಯವಾಗದೆ ಇರಬಹುದು. ಬನ್ನಿ ಎಐ ಮೂಲಕ ವೆಬ್ ವಿನ್ಯಾಸ ಮಾಡಿಕೊಳ್ಳುವುದರಿಂದ ಇರುವ ಪ್ರಯೋಜನಗಳು ಮತ್ತು ತೊಂದರೆಗಳನ್ನು ತಿಳಿದುಕೊಳ್ಳೋಣ.
ಎಐ ವೆಬ್ ವಿನ್ಯಾಸ ಪ್ರಯೋಜನಗಳು
ವೇಗ ಮತ್ತು ದಕ್ಷತೆ
ಸಾಂಪ್ರದಾಯಿಕ ವೆಬ್ ವಿನ್ಯಾಸಕರು (ಉದಾಹರಣೆಗೆ ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸಸ್) ಜಾದುಗಾರರಂತೆ ಕಾಣಿಸುವುದಿಲ್ಲ. ಅಂದರೆ, ನೀವು ವೆಬ್ ವಿನ್ಯಾಸಕ್ಕೆ ಆರ್ಡರ್ ಮಾಡಿದ ಕೆಲವೇ ಸೆಕೆಂಡ್, ನಿಮಿಷಗಳಲ್ಲಿ ನಿಮ್ಮ ಕೈಗೆ ವೆಬ್‌ಸೈಟ್ ನೀಡುವುದಿಲ್ಲ (ದುಡ್ಡು ಕೊಟ್ಟ ತಕ್ಷಣ ಐಸ್‌ಕ್ಯಾಂಡಿ ನೀಡಿದಂತೆ ;-)). ನಿಮ್ಮ ಬಿಸ್ನೆಸ್‌ನ ಉದ್ದೇಶ, ಸಂಭಾವ್ಯ ಗ್ರಾಹಕರು, ನಿಮ್ಮ ಗುರಿ ಇತ್ಯಾದಿಗಳನ್ನು ಅವಲೋಕಿಸಿ ಸುಂದರವಾದ ವೆಬ್ ಸೈಟ್ ನಿರ್ಮಿಸಿಕೊಡಲು ಹಲವು ದಿನಗಳು ಬೇಕಾಗುತ್ತದೆ. ಆದರೆ, ಎಐ ವೆಬ್ ವಿನ್ಯಾಸ ಹಾಗಲ್ಲ. ಪಟಪಟನೆ ಎಲ್ಲಾ ಪುಟಗಳನ್ನು ನಿರ್ಮಿಸಿ ನಿಮ್ಮ ಮುಂದಿಡುತ್ತದೆ. ನೀವು ಪ್ರಾಂಪ್ಟ್ ನೀಡುತ್ತ ಹೋದರೆ ಸಾಕು. ವಿಕ್ಸ್ ಎಡಿಐ, 10ವೆಬ್, ಡ್ಯೂರೆಬಲ್, ಫ್ರೇಮರ್ ಎಐ ಮುಂತಾದ ತಾಣಗಳು ಕೆಲವೇ ನಿಮಿಷಗಳಲ್ಲಿ ಬಳಕೆ ಮಾಡಬಹುದಾದ ವೆಬ್ ಸೈಟ್ ನಿರ್ಮಿಸಿಕೊಡುತ್ತವೆ. ಆದರೆ, ಸಾಂಪ್ರದಾಯಿಕ ವೆಬ್ ವಿನ್ಯಾಸಕರಿಂದ ಈ ಮ್ಯಾಜಿಕ್ ಸಾಧ್ಯವಿಲ್ಲ.
ಕಡಿಮೆ ವೆಚ್ಚ (ಮೊದಲ ಬಾರಿಗೆ)
ಎಐ ಮೂಲಕ ಮೊದಲ ಹಂತದಲ್ಲಿ ವೆಬ್ ವಿನ್ಯಾಸ ಮಾಡಿಕೊಳ್ಳುವುದು ಕಡಿಮೆ ವೆಚ್ಚದಾಯಕ. ನಾಲ್ಕೈದು ಪುಟಗಳನ್ನು ಕೆಲವು ಸೆಕೆಂಡಿನಲ್ಲಿ ಕಡಿಮೆ ದರದಲ್ಲಿ ಎಐ ನಿರ್ಮಿಸಿಕೊಡಬಲ್ಲದು. ಅದರಲ್ಲಿ ಕೆಲವೊಂದು ಸಿದ್ಧ ಸೂತ್ರಗಳು, ಟೆಂಪ್ಲೆಟ್‌ಗಳು ಇರುತ್ತವೆ.
ಸ್ವಯಂಚಾಲಿತವಾಗಿ ರಚನೆ
ನೀವು ನೀಡಿರುವ ಕೆಲವು ಪ್ರಾಂಪ್ಟ್‌ಗಳಿಗೆ ತಕ್ಕಂತೆ ಎಐ ಸ್ವಯಂಚಾಲಿತವಾಗಿ ವೆಬ್‌ಸೈಟ್ ನಿರ್ಮಿಸಿಕೊಡುತ್ತದೆ.
ಕಂಟೆಂಟ್ ರಚನೆ
ಎಐಯು ಆ ವೆಬ್‌ಸೈಟ್‌ನೊಳಗೆ ಕಂಟೆಂಟ್‌ಗಳನ್ನು (ಹೆಡ್ಡಿಂಗ್,ಸಮ್ಮರಿ, ಪೋಸ್ಟ್‌ಗಳು, ಇಮೇಜ್‌ಗಳು) ರಚಿಸಿಕೊಡುತ್ತದೆ. ಕೆಲವೊಂದು ಎಐ ಟೂಲ್‌ಗಳು ನಿಮಗೆ ಬೇಕಾದಂತೆ ಪರ್ಸನಲೈಜೇಷನ್ ಮಾಡಿಕೊಡುತ್ತದೆ.
ವಿನ್ಯಾಸದಲ್ಲಿ ನಿಯಮಗಳ ಪಾಲನೆ
ಟೈಪೊಗ್ರಫಿ, ಸ್ಪೇಸಿಂಗ್, ಕಲರ್ ಇತ್ಯಾದಿಗಳ ವಿಷಯದಲ್ಲಿ ಎಐ ವೆಬ್ ವಿನ್ಯಾಸವು ಸ್ಪಷ್ಟತೆ ಹೊಂದಿರುತ್ತದೆ. ಯಾಂತ್ರಿಕವಾಗಿ ರಚನೆಯಾಗುವುದರಿಂದ ಎಲ್ಲವೂ ಪರ್ಫೆಕ್ಟ್ ಆಗಿರುತ್ತದೆ. ಆದರೆ, ಸಾಂಪ್ರದಾಯಿಕ ವೆಬ್‌ವಿನ್ಯಾಸಕರು ತಮ್ಮ ಅನುಭವ, ಪರಿಣತಿಗೆ ತಕ್ಕಂತೆ ಈ ರೀತಿ ಟೈಪೊಗ್ರಫಿ, ಬಣ್ಣಗಳನ್ನು ಆಯ್ಕೆ ಮಾಡುತ್ತಾರೆ.
ಇದನ್ನೂ ಓದಿ: ಎಐ ಸಪೋರ್ಟ್ ವಿಫಲ: ಮನುಷ್ಯರ ಬೆಂಬಲ ಇಲ್ಲದಿದ್ದರೆ ಗ್ರಾಹಕರ ನಷ್ಟ, ಜಿಯೋ ಹೋಮ್ ಜತೆ ಕೆಟ್ಟ ಅನುಭವ
ಹೀಗೆ ಮೊದಲ ನೋಟಕ್ಕೆ ಎಐ ಮೂಲಕ ವೆಬ್ ವಿನ್ಯಾಸವು ಸುಲಭವೆನಿಸಬಹುದು. ಭವಿಷ್ಯದಲ್ಲಿ ಎಐ ಮೂಲಕ ವೆಬ್ ವಿನ್ಯಾಸ ಇನ್ನಷ್ಟು ಉತ್ತಮಗೊಳ್ಳಬಹುದು. ಆದರೆ, ಸದ್ಯದ ಮಟ್ಟಿಗೆ ಎಐ ಮೂಲಕ ವೆಬ್ ವಿನ್ಯಾಸ ಮಾಡಿಕೊಳ್ಳುವಾಗ “ಕಾಣಿಸದ ಅಪಾಯಗಳ ಕುರಿತು ಎಚ್ಚರಿಕೆ ವಹಿಸುವುದು ಉತ್ತಮ”. ಎಐ ಮೂಲಕ ವೆಬ್ ವಿನ್ಯಾಸ ಮಾಡಿಕೊಂಡರೆ ಉಂಟಾಗಬಹುದಾದ ತೊಂದರೆಗಳು, ಅವಗುಣಗಳು ಇತ್ಯಾದಿಗಳನ್ನು ತಿಳಿದುಕೊಳ್ಳೋಣ.
ಎಐ ವೆಬ್ ವಿನ್ಯಾಸ: ಅವಗುಣಗಳು
ಕ್ರಿಯೆಟಿವಿಟಿಗೆ ಅವಕಾಶವಿಲ್ಲ
ವೃತ್ತಿಪರ ವೆಬ್ ವಿನ್ಯಾಸಕರು ತಮ್ಮ ಕ್ರಿಯೆಟಿವಿಟಿಗೆ ತಕ್ಕಂತೆ ವೆಬ್‌ಸೈಟ್ ವಿನ್ಯಾಸ ಮಾಡುತ್ತಾರೆ. ಆದರೆ, ಎಐಯು ಟೆಂಪ್ಲೆಟ್‌ಗಳು ಮತ್ತು ಪ್ಯಾಟರ್ನ್‌ಗಳನ್ನು ಅನುಸರಿಸುತ್ತವೆ.
ನೋಡಲು ಒಂದೇ ರೀತಿ ಕಾಣಿಸಬಹುದು
ಎಐ ವೆಬ್‌ಸೈಟ್‌ಗಳು ನೋಡಲು ಒಂದೇ ರೀತಿಯ ವಿನ್ಯಾಸ ಹೊಂದಿರಬಹುದು. ಎಐ ಟೂಲ್‌ನಲ್ಲಿ ಲಭ್ಯವಿರುವ ಕೆಲವು ಮಾದರಿಗಳನ್ನೇ ವಿವಿಧ ಗ್ರಾಹಕರಿಗೆ ಅಳವಡಿಸಬಹುದು. ಆದರೆ, ವೃತ್ತಿಪರ ವೆಬ್ ವಿನ್ಯಾಸಕರು ಪ್ರತಿಯೊಂದು ಗ್ರಾಹಕರಿಗೂ ಬೇರೆಬೇರೆ ರೀತಿಯ ವೈವಿಧ್ಯಮಯ ವಿನ್ಯಾಸಗಳನ್ನು ರಚಿಸುತ್ತಾರೆ.
ಕಸ್ಟಮೈಜ್ ಮಾಡಲು ತೊಂದರೆ
ಎಐ ಟೂಲ್‌ಗಳಿಂದ ಕೆಲವೇ ನಿಮಿಷಗಳಲ್ಲಿ ವೆಬ್ ವಿನ್ಯಾಸ ಮಾಡಿಕೊಳ್ಳುವುದು ಸುಲಭ. ಆದರೆ, ಮುಂದೆ ನಿಮಗೆ ಯಾವುದೇ ರೀತಿಯ ಬದಲಾವಣೆ ಮಾಡಬೇಕಾದರೆ ಅದರಲ್ಲಿ ಸಾಕಷ್ಟು ಮಿತಿ ಇರಬಹುದು. ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ಒಬ್ಬರು ಈ ರೀತಿಯ ತೊಂದರೆಯ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಅವರು ಹತ್ತು ನಿಮಿಷದಲ್ಲಿ ಎಐ ಮೂಲಕ ವೆಬ್‌ಸೈಟ್ ರಚಿಸಿ ಸರ್ವರ್‌ಗೆ ಅಪ್ಲೋಡ್ ಮಾಡಿದ್ದರಂತೆ. ಬಳಿಕ ಅದರಲ್ಲಿ ಕಾಣಿಸಿದ ಒಂದು ಸಣ್ಣ ತೊಂದರೆಯನ್ನು ಮ್ಯಾನುವಲ್ ಆಗಿ ಸರಿಪಡಿಸಲು ಹತ್ತಿಪ್ಪತ್ತು ದಿನ ಬೇಕಾಯಿತಂತೆ. ಎಐ ಮೂಲಕ ತಯಾರಿಸಿದ ವೆಬ್‌ಸೈಟ್ ಸರಿಪಡಿಸಲು ಎಐ ಟೂಲ್‌ಗಳೇ ಬೇಕಾಗಬಹುದು.
ಇದನ್ನೂ ಓದಿ: ಬಾಯಿ ತೆರೆದಿದೆ ಎಐ ತಿಮಿಂಗಿಲ, ಒಳ ಪ್ರವೇಶಿಸದೆ ಇರಲಾರಿರಿ; ರಿಲಯೆನ್ಸ್ ಜಿಯೋ ಆ ದಿನಗಳು ನೆನಪಿದೆಯೇ?
ಎಸ್‌ಇಒ ಮಿತಿಗಳು
ಎಐ ಎಸ್‌ಇಒ ಕೆಲಸವನ್ನೂ ಮಾಡುತ್ತದೆ. ಆದರೆ, ಅದು ಎಸ್‌ಇಒ ಬೆಸ್ಟ್ ಪ್ರ್ಯಾಕ್ಟೀಸ್ ಅನುಸರಿಸುತ್ತದೆ ಎಂದು ಖಾತ್ರಿ ಇಲ್ಲ. ಗೂಗಲ್ ಆಗಾಗ ಕೋರ್ ಅಪ್‌ಡೇಟ್ ಮಾಡುತ್ತಿರುತ್ತದೆ. ಕರ್ನಾಟಕ ಬೆಸ್ಟ್ ಎಸ್‌ಇಒ ಸೇವೆಗಳ ಮೂಲಕ ನೀವು ನಿಮ್ಮ ವೆಬ್‌ಸೈಟ್‌ನ ರಾಕಿಂಗ್ ಉತ್ತಮಪಡಿಸಿಕೊಳ್ಳಬಹುದು.
ಸ್ಕೇಲೆಬಿಲಿಟಿ ತೊಂದರೆಗಳು
ಕೆಲವು ಪುಟಗಳ ಸಣ್ಣ ವೆಬ್‌ಸೈಟ್‌ಗಳನ್ನು ಎಐ ಮೂಲಕ ನಿರ್ಮಿಸಿದರೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗದು. ಆದರೆ, ಮುಂದೆ ದೊಡ್ಡಮಟ್ಟದಲ್ಲಿ ವಿಸ್ತರಿಸಬೇಕಾದ ವೆಬ್‌ಸೈಟ್‌ಗಳಿಗೆ ಇದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ನಿಮ್ಮ ವೆಬ್‌ಸೈಟ್‌ಗೆ ಹೆಚ್ಚು ಸಂಪನ್ಮೂಲಗಳನ್ನು ತುಂಬಿಸಬೇಕಾದ ಸಮಯದಲ್ಲಿ ಎಐ ಡಿಸೈನ್ ಟೂಲ್‌ಗಳು ಕಷ್ಟಪಡಬಹುದು.
ನಿರ್ದಿಷ್ಟ ಎಐ ಟೂಲ್‌ನ ಅವಲಂಬನೆ
ಎಐ ಆಧರಿತ ವೆಬ್‌ಸೈಟ್ ಬಿಲ್ಡರ್‌ನ ಅವಲಂಬನೆಯಲ್ಲಿ ಇರಬೇಕಾಗುತ್ತದೆ. ಸಾಂಪ್ರದಾಯಿಕ ವೆಬ್ ವಿನ್ಯಾಸವನ್ನು ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದಕ್ಕೆ ಮೂವ್ ಮಾಡಬಹುದು. ಒಬ್ಬರು ವೆಬ್ ವಿನ್ಯಾಸಕರ ಸೇವೆ ಇಷ್ಟವಾಗದೆ ಇದ್ದರೆ ಮತ್ತೊಬ್ಬರ ಬಳಿಗೆ ಮೂವ್ ಮಾಡುವ ಅವಕಾಶ ಅಲ್ಲಿ ಇಲ್ಲ.
ಮರೆಮಾಚಿದ ವೆಚ್ಚಗಳು
ಎಐ ಟೂಲ್‌ಗಳಲ್ಲಿ ಇರುವ ಹಿಡನ್ ವೆಚ್ಚಗಳನ್ನು ನೋಡಿದರೆ ನೀವು ಬೆಚ್ಚಿ ಬೀಳಬಹುದು. ಉಚಿತವಾಗಿ ಆರಂಭವಾಗುವ ಎಐ ಸೇವೆಗಳು ಬಳಿಕ ನೂರಾರು ಡಾಲರ್ ಲೆಕ್ಕದಲ್ಲಿ ನಿಮ್ಮಲ್ಲಿ ಹಣ ಕೇಳುತ್ತಾ ಹೋಗಬಹುದು.
ಭದ್ರತೆಯ ಅಪಾಯಗಳು
ಎಐ ವೆಬ್‌ಸೈಟ್‌ಗಳು ಎಷ್ಟು ಸೆಕ್ಯುರ್ಡ್ ಎಂಬ ಪ್ರಶ್ನೆಯೂ ಸದ್ಯ ಮೂಡುತ್ತದೆ. ಎಐ ಟೂಲ್‌ಗಳನ್ನು ಎಷ್ಟು ದಿನ ಎಂದು ಅವಲಂಬಿಸಬಹುದು? ನಿಮ್ಮ ವೆಬ್‌ಸೈಟ್‌ನ ಭದ್ರತೆ ನಿಮ್ಮ ಕೈಯಲ್ಲಿ ಇಲ್ಲದೆ ಇದ್ದರೆ ಹೇಗೆ?
ಕಂಟೆಂಟ್ ಕ್ವಾಲಿಟಿ
ಎಐ ಎಲ್ಲಾ ಗ್ರಾಹಕರಿಗೆ ಒಂದೇ ಬಗೆಯ ಕಂಟೆಂಟ್ (ಸ್ವಲ್ಪ ಹಿಂದೆ ಮುಂದೆ, ತಿರುಗು ಮುರುಗು ಮಾಡಿ) ನೀಡುತ್ತದೆ. ಆರಂಭದಲ್ಲಿ ಎಐ ಕಂಟೆಂಟ್, ವಿನ್ಯಾಸಗಳು ಆಕರ್ಷಕವಾಗಿ ಕಂಡರೂ ಬಳಿಕ ಅದು ನಿಮ್ಮ ಬ್ರಾಂಡ್ ವ್ಯಾಲ್ಯೂಗೆ, ನಿಮ್ಮ ಕಂಪನಿಯ ಕಲ್ಚರ್ ವ್ಯಾಲ್ಯೂಗೆ ಹೊಂದಾಣಿಕೆಯಾಗುತ್ತಿಲ್ಲ ಎಂದೆನಿಸಬಹುದು.
ಸಮರ್ಪಕ ಬೆಂಬಲ ಇಲ್ಲದೆ ಇರುವುದು
ಕನ್ನಡ ಅಥವಾ ಇತರೆ ಭಾರತೀಯ ಭಾಷೆಗಳ ಗ್ರಾಹಕರಿಗೆ ಎಐ ವೆಬ್‌ಸೈಟ್‌ಗಳು ಇಷ್ಟವಾಗದೆ ಹೋಗಬಹುದು. ಹೊರಗಿನ ಬಣ್ಣ, ಭಿನ್ನಾಣ ನೋಡಿ ಗ್ರಾಹಕರು ಮೋಸ ಹೋಗುವುದಿಲ್ಲ. ವೆಬ್ ವಿನ್ಯಾಸ ಮಾಡಿಕೊಂಡವರಿಗೂ ಎಐ ವೆಬ್ ಟೂಲ್ ನಿರ್ಮಿಸಿದ ಕಂಪನಿಯು ಸರಿಯಾದ ಬೆಂಬಲ ನೀಡದೆ ಇದ್ದರೆ (ಆರಂಭದ ಕೆಲವು ತಿಂಗಳು ಸಪೋರ್ಟ್ ಇರಬಹುದು) ತೊಂದರೆಯಾಗಬಹುದು. ಎಐ ಟೂಲ್‌ಗಳು ಸ್ವಯಂಚಾಲಿತ ಉತ್ತರಗಳನ್ನು ನೀಡುತ್ತಾ ಇದ್ದರೆ, ಅಂದರೆ, ಮಾನವ ಬೆಂಬಲ ದೊರಕದೆ ಇದ್ದರೆ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ.
ಸದ್ಯ ಜಗತ್ತು ಎಐಯತ್ತ ದಾಪುಗಾಲಿಡುತ್ತಿದೆ. ಇಂತಹ ಸಮಯದಲ್ಲಿ ಎಐಯನ್ನು ಅನುಮಾನದಿಂದ ನೋಡುವುದು ತಪ್ಪೇನಿಲ್ಲ. ಎಐ ಸರಿಯಾಗಿ ವಿಕಸಿತಗೊಳ್ಳಲು ಇನ್ನಷ್ಟು ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೆ ಟ್ರಯಲ್ ಆಂಡ್ ಎರರ್ ಇರುತ್ತದೆ.
ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸಸ್ ಮೂಲಕ ವೃತ್ತಿಪರವಾಗಿ ಬಿಸ್ನೆಸ್ ವೆಬ್‌ಸೈಟ್, ನ್ಯೂಸ್ ವೆಬ್‌ಸೈಟ್ ಅಥವಾ ಇತರೆ ವೆಬ್ ಸೈಟ್‌ಗಳನ್ನು ನಿರ್ಮಿಸಿಕೊಳ್ಳಬಹುದು. ಇದರೊಂದಿಗೆ ವರ್ಡ್‌ಪ್ರೆಸ್ ವೆಬ್‌ಸೈಟ್ ನಿರ್ವಹಣೆ, ಎಸ್‌ಇಒ ಆಪ್ಟಿಮೈಜೇಷನ್, ಹೋಸ್ಟಿಂಗ್ ಸೇವೆಗಳನ್ನೂ ಪಡೆದುಕೊಳ್ಳಬಹುದು.


















Got a Questions?
Find us on Socials or Contact Us and we’ll get back to you as soon as possible.