ಕ್ರಾಫ್ಟ್ ಕಾರ್ನರ್: ಮೊಟ್ಟೆಯಾಕಾರದ ಕ್ಯಾಂಡಲ್

-ಶ್ರೀಲಕ್ಷ್ಮಿ ಹೊಸ್ಕೊಪ್ಪ.

ಮೊಟ್ಟೆಯನ್ನು ನಮ್ಮ ಉಪಯೋಗಕ್ಕಾಗಿ ಒಡೆದಾಗ ಮರು ಯೋಚಿಸಿದೇ ಅದರ ಚಿಪ್ಪನ್ನು ಎಸೆಯುತ್ತೇವೆ. ಆದರೆ ಅದೇ ಚಿಪ್ಪಿನ್ನು ಬಳಸಿ ಮೊಟ್ಟೆಯಾಕಾರದ ಬಣ್ಣ ಬಣ್ಣದ ಮೇಣದ ಬತ್ತಿಯನ್ನು ತಯಾರಿಸಬಹುದು. ಅದಕ್ಕಾಗಿ ಮೇಣವನ್ನು ಅಂಗಡಿಯಿಂದ ತರಬೇಕೆಂದೇನಿಲ್ಲ. ಮನೆಯಲ್ಲಿ ಅ`ರ್À`ರ್À ಬಳಸಿ ಮೂಲೆಗೆಸೆದ, ಆಗಲೇ ಕರಗಿ ಗಟ್ಟಿಯಾದ ಮೇಣದ ಬತ್ತಿಯ ಬತ್ತಿಯನ್ನು ತೆಗೆದು ಮರುಬಳಕೆ ಮಾಡಬಹುದು. ಅಂದದ ಮೇಣದ ಬತ್ತಿಯನ್ನು ಸಿದ್ಧಪಡಿಸಬಹುದು.

ಬೇಕಾಗುವ ಸಾಮಗ್ರಿ: ಮೊಟ್ಟೆ ಚಿಪ್ಪು, ಕ್ರಯಾನ್ಸ್, ಕ್ಯಾಂಡಲ್ ವ್ಯಾಕ್ಸ್ (ಮೇಣ), ಬತ್ತಿ.

ಮಾಡುವ ವಿ`Áನ

*ಮೊದಲಿಗೆ ಮೊಟ್ಟೆಯ ಮೇಲ್ಭಾಗದಲ್ಲಿ ಚಿಕ್ಕ ತೂತು ಮಾಡಿ ಅದರೊಳಗಿರುವ ಬಿಳಿ ಹಾಗೂ ಹಳದಿ `Áಗವನ್ನು ನಿಮ್ಮ ಬಳಕೆಗೆ ತೆಗೆದಿಟ್ಟುಕೊಳ್ಳಿ.

*ನಂತರ ಮೊಟ್ಟೆಯ ಚಿಪ್ಪನ್ನು ನಾಜೂಕಾಗಿ ತೊಳೆದು, ಒಣಗಿಸಿಕೊಳ್ಳಿ.

*ಚಿಪ್ಪಿನೊಳಗೆ ಒಂದು ಬತ್ತಿಯನ್ನು ಇಡಿ.

*ಇನ್ನೊಂದೆಡೆ ಒಂದು ಪಾತ್ರೆಗೆ ಮೇಣವನ್ನು ಜೊತೆಗೆ ನಿಮಗಿಷ್ಟವಾಗುವ ಬಣ್ಣದ ಕ್ರಯಾನ್ಸ್‍ನ್ನು ಚಿಕ್ಕ ತುಂಡು ಮಾಡಿ ಹಾಕಿ ಅದನ್ನು ಸಣ್ಣಗಿನ ಉರಿಯಲ್ಲಿ ಕರಗಿಸಿ. ಈಗ ಬಣ್ಣದ ಮೇಣ ಸಿದ್ಧವಾಗುತ್ತದೆ.

*ಆನಂತರ ಕರಗಿದ ಮೇಣವನ್ನು ಉಗುರು ಬೆಚ್ಚಗಿರುವಾಗ ಮೊಟ್ಟೆಯ ಚಿಪ್ಪಿನೊಳಗೆ ಸುರಿಯಿರಿ.

*ಅದನ್ನು ಗಟ್ಟಿಯಾಗಲು ಬಿಡಿ.

*ಗಟ್ಟಿಯಾದ ಮೇಲೆ ನಿ`Áನವಾಗಿ ಮೊಟ್ಟೆ ಚಿಪ್ಪನ್ನು ಬಿಡಿಸಿ.

ಈಗ ಚೆಂದದ ಮೊಟ್ಟೆಯಾಕಾರದ ಮೇಣದ ಬತ್ತಿ ರೆಡಿಯಾಗುತ್ತದೆ. ಅದನ್ನು ಕ್ಯಾಂಡಲ್ ಲೈಟ್ ಡಿನ್ನರ್‍ಗೆ, ಡೈನಿಂಗ್ ಟೇಬಲ್, ಶೋಕೇಸ್ ಅಲಂಕಾರಕ್ಕೆ ಬಳಸಬಹುದು. ಇದೇ ರೀತಿ ಮೊಟ್ಟೆ ಚಿಪ್ಪನ್ನು ಸ್ವಚ್ಛ ಮಾಡಿಕೊಂಡು, ಅದಕ್ಕೆ ಬಣ್ಣ ಹಚ್ಚಿ, ಬೇಕಾದ ಡಿಸೈನ್ ಮಾಡಿ ಮನೆಯಲಂಕಾರಕ್ಕೆ ಉಪಯೋಗಿಸಬಹುದು.

 

ಇದನ್ನೂ ಓದಿ  ವೈದ್ಯರಾಗುವುದು ಹೇಗೆ?: ಡಾಕ್ಟರ್ ಆಗಲು ಏನೆಲ್ಲ ಓದಬೇಕು?