ಮೌಸ್ ಇಲ್ಲದೆ ಕಂಪ್ಯೂಟರ್ ಬಳಕೆ ಮಾಡುವುದು ಹೇಗೆ ಗೊತ್ತೆ?

ಕಂಪ್ಯೂಟರ್ ಅನ್ನು ಮೌಸ್ ಇಲ್ಲದೆಯೂ ಬಳಕೆ ಮಾಡಲು ಬಯಸುವವರಿಗೆ ಇಲ್ಲೊಂದಿಷ್ಟು ಟಿಪ್ಸ್ಗಳಿವೆ

#1. ಮೊದಲಿಗೆ ಸ್ಟಾರ್ಟ್‍ಗೆ ಹೋಗಿ. ಕಂಟ್ರೋಲ್ ಪ್ಯಾನೆಲ್ ತೆರೆಯಿರಿ. ಅಲ್ಲಿ `ಈಸಿ ಆಫ್ ಆ್ಯಕ್ಸೆಸ್’ ಎಂಬ ಆಯ್ಕೆಯನ್ನು ಆ್ಯಕ್ಟಿವೇಟ್ ಮಾಡಿರಿ.

#2, ಎಫ್1 ಅನ್ನು ಹೆಲ್ಪ್ ಗೆ ಬಳಸಿ.

#3. ಸ್ಟಾರ್ಟ್ ಮೆನು ತೆರೆಯಲು ವಿಂಡೋ ಬಟನ್ ಬಳಸಿ.

#4. ತೆರೆದಿರುವ ಪ್ರೋಗ್ರಾಂಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲು ಆಲ್ಟ್ ಮತ್ತು ಟ್ಯಾಬ್‍ಗಳನ್ನು ಬಳಸಿ.

#5. ಯಾವುದಾದರೂ ಪ್ರೋಗ್ರಾಂನಿಂದ ಹೊರಹೋಗಲು ಆಲ್ಟ್ ಮತ್ತು ಎಫ್4 ಬಳಕೆ ಮಾಡಿರಿ.

#6. ಡಿಲೀಟ್ ಮಾಡಲು ಶಿಫ್ಟ್ ಮತ್ತು ಡಿಲೀಟ್ ಜೊತೆಯಾಗಿ ಬಳಕೆ ಮಾಡಿ.

#7. ವಿಂಡೋಸ್ ಕೀ ಮತ್ತು ಎಲ್ ಅನ್ನು ಪ್ರೆಸ್ ಮಾಡಿದರೆ ಕಂಪ್ಯೂಟರ್ ಲಾಕ್ ಆಗುತ್ತದೆ.

#8. ಟೈಪ್ ಮಾಡುವಾಗ ಕಾಪಿ ಮಾಡಲು ಕಂಟ್ರೋಲ್ ಸಿ, ಕಟ್ ಮಾಡಲು ಕಂಟ್ರೋಲ್ ಸಿ, ಪೇಸ್ಟ್ ಮಾಡಲು ಕಂಟ್ರೋಲ್ ವಿ, ಅಂಡೂ ಮಾಡಲು ಕಂಟ್ರೋಲ್ ಝಡ್ ಬಳಸಿ.

#9. ಬೋಲ್ಡ್ ಮಾಡಲು ಕಂಟ್ರೋಲ್ ಬಿ, ಅಂಡರ್‍ಲೈನ್ ಹಾಕಲು ಕಂಟ್ರೋಲ್ ಯು, ಇಟಾಲಿಕ್ ಫಾಂಟ್ ಬಳಸಲು ಕಂಟ್ರೋಲ್ ಐ, ಕೆಲವು ವರ್ಡ್‍ಗಳನ್ನು ಸ್ಕಿಪ್ ಮಾಡಲು ಅಥವಾ ಮುಂದಕ್ಕೆ ಹೋಗಲು ಬಾಣದ ಗುರುತುಗಳನ್ನು ಬಳಸಿರಿ.

#10. ಹೆಸರು ಬದಲಾಯಿಸಲು(ರಿನೇಮ್) ಎಫ್2, ಎಲ್ಲಾ ಫೈಲ್‍ಗಳನ್ನು ಹುಡುಕಲು ಎಫ್3 ಬಳಸಿರಿ.

#11. ಆಯ್ಕೆ ಮಾಡಿರುವ ಆಬ್ಜೆಕ್ಟ್ ಅನ್ನು ತೆರೆಯಲು ಆಲ್ಟ್ ಹಿಡಿದು ಎಂಟರ್ ಪ್ರೆಸ್ ಮಾಡಿರಿ.

#13. ನೀವು ಯಾವುದಾದರೂ ವರ್ಡ್ ಫೈಲ್‍ಗಳನ್ನು ತೆರೆದಿದ್ದರೆ ಅದರ ಮೇಲ್ಬಾಗದಲ್ಲಿರುವ ಫೈಲ್ ಆಯ್ಕೆಗೆ ಮೌಸ್ ಇಲ್ಲದೆ ಹೋಗುವುದು ಹೇಗೆ ಎಂಬ ಸಂದೇಹ ನಿಮ್ಮಲ್ಲಿರಬಹುದು. ಎಫ್10 ಬಳಸಿದರೆ ಫೈಲ್ ಕ್ಲಿಕ್ ಆಗುತ್ತದೆ. ನಂತರ ಏರೋ ಮಾರ್ಕ್ ಬಳಸಿ ನಿಮಗೆ ಬೇಕಾದ ಆಯ್ಕೆಯನ್ನು ಕ್ಲಿಕ್ ಮಾಡಬಹುದಾಗಿದೆ.

#14. ಶಿಫ್ಟ್ ಮತ್ತು ಎಫ್10 ಕ್ಲಿಕ್ ಮಾಡಿದರೆ ಶಾರ್ಟ್‍ಕಟ್ ಮೆನು ತೆರೆದುಕೊಳ್ಳುತ್ತದೆ. ಮೌಸ್‍ನಲ್ಲಿಯಾದರೆ ರೈಟ್ ಕ್ಲಿಕ್ ಮಾಡಬೇಕು.

ವಿಂಡೋಸ್ ಟಾಸ್ಕ್ ಮ್ಯಾನೇಜರ್ ತೆರೆದುಕೊಳ್ಳುತ್ತದೆ.

#15.  ಆಲ್ಟ್ ಮತ್ತು ಎಫ್4 ಕ್ಲಿಕ್ ಮಾಡಿದರೆ ಈಗ ತೆರೆದಿರುವ ವಿಂಡೋ ಕ್ಲೋಸ್ ಆಗುತ್ತದೆ.

#16. ಕಂಟ್ರೋಲ್ ಮತ್ತು ಎಫ್4 ಕ್ಲಿಕ್ ಮಾಡಿದರೆ ಹಲವು ಡಾಕ್ಯುಮೆಂಟ್ ವಿಂಡೋಗಳು ಒಮ್ಮೆಲೇ ಕ್ಲೋಸ್ ಆಗುತ್ತದೆ.

#17. ವಿಂಡೋಸ್ ಬಟನ್ ಕ್ಲಿಕ್ ಮಾಡಿದರೆ ಸ್ಟಾರ್ಟ್ ಮೆನು ತೆರೆದುಕೊಳ್ಳುತ್ತದೆ.

#18. ವಿಂಡೋಸ್ ಮತ್ತು ಆರ್: ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.

#19. ವಿಂಡೋಸ್ ಮತ್ತು ಎಂ: ಎಲ್ಲವು ಮಿನಿಮೈಝ್ ಆಗುತ್ತದೆ.

#20. ಶಿಫ್ಟ್ ಮತ್ತು ವಿಂಡೋಸ್ ಮತ್ತು ಎಂ: ಮಿನಿಮೈಸ್ ಮಾಡಿರುವುದೆಲ್ಲ ಅಂಡೂ ಆಗುತ್ತದೆ.

#21. ವಿಂಡೋಸ್ ಮತ್ತು ಎಲ್: ವಿಂಡೋಸ್ ಲಾಗ್ ಆಫ್ ಆಗುತ್ತದೆ.

ಇದನ್ನೂ ಓದಿ  ವರ್ಡ್ ಪ್ರೆಸ್ ವೆಬ್ ಸೈಟಿನಲ್ಲಿ ಇನ್ಮುಂದೆ ಗುಟೆನ್ ಬರ್ಗ್ ಎಡಿಟರ್ ಹವಾ

#22. ವಿಂಡೋಸ್ ಮತ್ತು ಪಿ: ಪ್ರಿಂಟ್ ಮ್ಯಾನೇಜರ್ ತೆರೆದುಕೊಳ್ಳುತ್ತದೆ.

#23. ವಿಂಡೋಸ್ ಮತ್ತು ಸಿ: ಕಂಟ್ರೋಲ್ ಪ್ಯಾನೇಲ್ ತೆರೆದುಕೊಳ್ಳುತ್ತದೆ.

#24. ವಿಂಡೋಸ್ ಮತ್ತು ಎಸ್: ಕ್ಯಾಪ್ಸ್ ಲಾಕ್ ಅನ್ನು ಆನ್ ಅಥವಾ ಆಫ್ ಮಾಡಲು ಬಳಕೆ ಮಾಡಬಹುದು.