ಮಗುವಿನ ತ್ವಚೆಯ ಕುರಿತು ಅಮ್ಮಂದಿರು ಹೆಚ್ಚಿನ ಕಾಳಜಿ ವಹಿಸುತ್ತಾರೆ. ನಿಮ್ಮ ಮಗುವಿನ ತ್ವಚೆ ಉತ್ತಮಗೊಳ್ಳಲು ಈ ಮುಂದಿನ ಸಲಹೆಗಳನ್ನು ಪಾಲಿಸಿ.
ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತವಾದ ಕ್ರೀಂ, ಲೋಷನ್ ಗಳನ್ನು ಬಳಸುವುದರಿಂದ ಮಕ್ಕಳ ತ್ವಚೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಮಕ್ಕಳ ತ್ವಚೆ ಆರೈಕೆ ಮಾಡಿದರೆ ಆರೋಗ್ಯಕರ ಹಾಗೂ ಕೋಮಲವಾಗಿರಿಸಬಹುದು.
ಮಗುವಿನ ಪ್ರತಿದಿನ ಸ್ನಾನ ಮಾಡಿಸು ಮೊದಲು ದೇಹವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತಾರೆ. ಆ ವೇಳೆ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಶುದ್ಧ ಅರಶಿನ ಪುಡಿಯನ್ನು ಮಿಕ್ಸ್ ಮಾಡಿ ಅದರಿಂದ ಮಸಾಜ್ ಮಾಡಿ ಸ್ನಾನ ಮಾಡಿದರೆ ಮಗುವಿನ ಸ್ಕೀನ್ ಯಾವಾಗಲೂ ಆರೋಗ್ಯವಾಗಿರುತ್ತದೆ. ಯಾವುದೇ ಅಲರ್ಜಿ ಸಮಸ್ಯೆ ಕಾಡುವುದಿಲ್ಲ.
ಶ್ರೀಗಂಧ, ಅರಿಶಿನದ ಪ್ಯಾಕ್ ಹಚ್ಚಿ 10 ನಿಮಿಷ ಬಿಟ್ಟು ಮಕ್ಕಳನ್ನು ಸ್ನಾನ ಮಾಡಿಸುವುದರಿಂದ ಕೂಡ ಅವರ ತ್ವಚೆ ನಳನಳಿಸುತ್ತದೆ.
ಹಾಗೇ ಸೋಪ್ ಉಪಯೋಗಿಸುವ ಬದಲು ಕಡಲೆ ಹಿಟ್ಟು, ಇಲ್ಲ ಹೆಸರುಕಾಳಿನ ಪುಡಿಯನ್ನು ಬಳಸಿ. ಇದರಿಂದ ಮಗುವಿನ ತ್ವಚೆ ನಳನಳಿಸುತ್ತದೆ.
ಸ್ನಾನ ಬಳಿಕ ಕ್ರೀಂ ಅನ್ನು ಬಳಸುವ ಬದಲು ಬಾದಾಮಿ ಎಣ್ಣೆಯನ್ನು ಸ್ವಲ್ಪ ಮಗುವಿನ ಮೈಗೆ ಹಚ್ಚಿಬಿಡಿ. ಇದರಿಂದ ಮಗುವಿನ ತ್ವಚೆ ಕೋಮಲವಾಗುತ್ತದೆ.
ಸಂಜೆ ಹಾಗೂ ಮುಂಜಾನೆ ಹೊತ್ತು ಸೂರ್ಯನ ಬೆಳಕಿಗೆ ಮಗುವಿನ ಮೈವೊಡ್ಡುವುದರಿಂದ ಕೂಡ ವಿಟಮಿನ್ ಡಿ ಸಿಗುತ್ತದೆ. ಇದರಿಂದ ಮಗುವಿನ ತ್ವಚೆ ಕಾಂತಿಯುತವಾಗುತ್ತದೆ.
ನಿಧಾನಕ್ಕೆ ಮಕ್ಕಳ ಮೈಯಲ್ಲಿರುವ ನೀರಿನ ಪಸೆಯನ್ನು ಒರೆಸಿ ತೆಗೆಯಿರಿ. ಜೋರಾಗಿ ಉಜ್ಜಬೇಡಿ.
ಮಕ್ಕಳ ಮೈ ಒರಸಲು ಮೃದುವಾದ ಟವಲ್ ಗಳನ್ನು ಉಪಯೋಗಿಸಿ. ಸಾಧ್ಯವಾದಷ್ಟು ಹತ್ತಿಯ ಬಟ್ಟೆ ಉಪಯೋಗಿಸಿ.
ಖತುವಿಗೆ ಅನುಗುಣವಾಗಿ ಮಕ್ಕಳ ತ್ವಚೆಯ ಆರೈಕೆ ಮಾಡಿ.
ಬೇಸಿಗೆ, ಚಳಿಗಾಲ, ಮಳೆಗಾಲದಲ್ಲಿ ಚರ್ಮ ಒಂದೊಂದು ರೀತಿ ಇರುತ್ತದೆ.
ತುಂಬಾ ಬಿಸಿ ನೀರಿನ ಸ್ನಾನ ಮಾಡಿಸಬೇಡಿ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ.
ಕ್ರೀಂ, ಲೋಷನ್ ಗಳಿಂದ ಅಲರ್ಜಿಯಾಗುವ ಸಾಧ್ಯತೆ ಇರುವುದರಿಂದ ಾದಷ್ಟು ಉಳಸದೇ ಇರುವುದು ಒಳ್ಳೆಯದು. ಇದರಿಂದ ಮಕ್ಕಳಿಗೆ ಕಿರಿಕಿರಿಯಾಗುವುದು ತಪ್ಪುತ್ತದೆ. ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಮಕ್ಕಳ ತವಚೆಯ ಕಾಂತಿಯನ್ನು ಹೆಚ್ಚಿಸಿ.









Got a Questions?
Find us on Socials or Contact Us and we’ll get back to you as soon as possible.