2020-21 ನೇ ಸಾಲಿನಲ್ಲಿ ದಾಖಲಾಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಾವು ಗಳಿಸಿರುವ 10 ನೇ ತರಗತಿ/ಎಸ್.ಎಸ್.ಎಲ್.ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳನ್ನು ವೀಕ್ಷಣೆಗೆ ಇಲಾಖೆಯು ಅವಕಾಶ ಕಲ್ಪಿಸಿದೆ.
ವಿದ್ಯಾರ್ಥಿಗಳು ತಮ್ಮ SATS ನಂಬರ್ ಅಥವಾ ವಿದ್ಯಾರ್ಥಿ ಸಂಖ್ಯೆ ಅಥವಾ Enrollment No. ಈ ಮೂರರಲ್ಲಿ ಯಾವುದಾದರೂ ಒಂದನ್ನು ನಮೂದಿಸುವ ಮುಖಾಂತರ 10 ನೇ ತರಗತಿ/ಎಸ್.ಎಸ್.ಎಲ್.ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳನ್ನು ಪ್ರತ್ಯೇಕವಾಗಿ ವೀಕ್ಷಿಸಬಹುದಾಗಿದೆ.
ವಿದ್ಯಾರ್ಥಿಗಳು SATS ನಂಬರನ್ನು ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ಅಥವಾ ವರ್ಗಾವಣೆ ಪ್ರಮಾಣ ಪತ್ರದಲ್ಲಿ ಲಭ್ಯವಿರುತ್ತದೆ. ಹೀಗೆ ತಮ್ಮ ಅಂಕಗಳ ಪರಿಶೀಲನಾ ಸಂದರ್ಭದಲ್ಲಿ ಒಂದು ವೇಳೆ ಏನಾದರೂ ಅಂಕಗಳಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಮ್ಮ ಕಾಲೇಜಿನ ಪ್ರಾಚಾರ್ಯರನ್ನು ದಿನಾಂಕ 12-07-2021 ರ ಒಳಗಾಗಿ ಸಂಪರ್ಕಿಸಿ. ಸರಿಪಡಿಸಿಕೊಳ್ಳಲು ಸೂಚಿಸಿದೆ.
ನಿಗದಿತ ದಿನಾಂಕ 10-07-2021 ರಂದು ಮೇಲ್ಕಂಡ ಲಿಂಕನ್ನು ನಿಷ್ಕ್ರಿಯಗೊಳಿಸಲಾಗುವುದು. ಪ್ರಾಚಾರ್ಯರು ದಾಖಲಿಸಿರುವ ಅಂಕಗಳು ಅಂತಿಮ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













Got a Questions?
Find us on Socials or Contact Us and we’ll get back to you as soon as possible.